ಬೆಂಗಳೂರು, ಸೆ.21 www.bengaluruwire.com: ವಿಜಯನಗರದಲ್ಲಿರುವ ಬಂಟರ ಸಂಘದ ಆವರಣದಲ್ಲಿ 2026-29ನೇ ಸಾಲಿನ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಯಶಸ್ವಿಯಾಗಿ ಜರುಗಿತು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಹಾಗೂ ಮಹಿಳಾ ಮೀಸಲು ಉಪಾಧ್ಯಕ್ಷೆಯಾಗಿ ಸೌಮ್ಯ ಶ್ರೀ ಹೆಗಡೆ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.
ಸಮುದಾಯ ಹಾಗೂ ಸಮಾಜದ ಅಭಿವೃದ್ಧಿಗೆ ಕಟಿಬದ್ಧ: ದೀಪಕ್ ಶೆಟ್ಟಿ:
ಗೆಲುವಿನ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ದೀಪಕ್ ಶೆಟ್ಟಿ, “ಬಂಟರ ಸಂಘವು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ನೀಡಿದೆ. ಸಮುದಾಯದ ನಿರೀಕ್ಷೆಗಳನ್ನು ಹುಸಿಗೊಳಿಸದೆ ಕಾಯಾ, ವಾಚಾ, ಮನಸಾ ಸಮಾಜ ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ,” ಎಂದು ಭರವಸೆ ನೀಡಿದರು.

ಇದೇ ವೇಳೆ, ತುಳು ಭಾಷೆಗೆ ರಾಜ್ಯದ ಎರಡನೇ ಆಡುಭಾಷೆಯ ಅಧಿಕೃತ ಸ್ಥಾನಮಾನ ನೀಡಿದ ರಾಜ್ಯ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಬಂಟರ ಸಮುದಾಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಐದು ಅಂಶಗಳ ಮಹತ್ವಾಕಾಂಕ್ಷಿ ಯೋಜನೆ:
ಸಂಘದ ಮುಂದಿನ ನಡೆಗಳ ಕುರಿತು ಮಾಹಿತಿ ಹಂಚಿಕೊಂಡ ದೀಪಕ್ ಶೆಟ್ಟಿ, ಸಮುದಾಯದ ಸಬಲೀಕರಣಕ್ಕಾಗಿ ‘ಐದು ಅಂಶಗಳ ವಿಶೇಷ ಯೋಜನೆ’ಯನ್ನು ಜಾರಿಗೆ ತರಲಾಗುವುದು ಎಂದರು. ಸಂಘದ ಅಧೀನದಲ್ಲಿರುವ ಎರಡು ಪ್ರಮುಖ ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಆರೋಗ್ಯ ಸೇವೆಗಳಿಗೆ ಗರಿಷ್ಠ ಆದ್ಯತೆ ನೀಡುವುದು ನಮ್ಮ ಪ್ರಮುಖ ಗುರಿ. ಇದಕ್ಕಾಗಿ ಈಗಾಗಲೇ ಸಾವಿರಾರು ಸಮುದಾಯ ಬಾಂಧವರನ್ನು ಖುದ್ದಾಗಿ ಭೇಟಿ ಮಾಡಿ, ಅವರ ಸಲಹೆ-ಮಾರ್ಗದರ್ಶನಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ನೂತನ ಪದಾಧಿಕಾರಿಗಳ ಪಟ್ಟಿ:
ಅಧ್ಯಕ್ಷರು: ದೀಪಕ್ ಶೆಟ್ಟಿ
ಉಪಾಧ್ಯಕ್ಷರು: ಮಧುಕರ್ ಶೆಟ್ಟಿ
ಮಹಿಳಾ ಮೀಸಲು ಉಪಾಧ್ಯಕ್ಷೆ: ಸೌಮ್ಯ ಶ್ರೀ ಹೆಗಡೆ
ಕಾರ್ಯದರ್ಶಿ: ಅಮರನಾಥ್ ಶೆಟ್ಟಿ
ಜಂಟಿ ಕಾರ್ಯದರ್ಶಿ: ಸುರೇಶ್ ಶೆಟ್ಟಿ
ಖಜಾಂಚಿ: ರಮೀತ್ ಬಿ. ಶೆಟ್ಟಿ
ಕಾರ್ಯಕಾರಿ ಸಮಿತಿ ಸದಸ್ಯರು:
ಅನಿತಾ ಚಂದ್ರಶೇಖರ್ ಶೆಟ್ಟಿ, ಶಕುಂತಲಾ ಶೆಟ್ಟಿ, ಮಾಲತಿ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕಿಶೋರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಕೀರ್ತನ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಡಿ.ಬಿ. ಪ್ರತಾಪ್ ಶೆಟ್ಟಿ, ರಾಮದಾಸ್ ಶೆಟ್ಟಿ, ಹೀರಾ ಅನೂಪ್ ಹೆಗಡೆ, ಉಮೇಶ್, ನಿತ್ಯಾರಂಜನ್ ಶೆಟ್ಟಿ.





















