Tuesday, November 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಎಥನಾಲ್ ಪೆಟ್ರೋಲ್ ವಿವಾದ: ಕರ್ನಾಟಕ ಕಾಂಗ್ರೆಸ್ ಆರೋಪಕ್ಕೆ ಚೆಕ್ ಮೇಟ್ ಇಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    BIG News | ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದ ಬಂಪರ್ ಕೊಡುಗೆ: 1,364 ಔಷಧಗಳ ಬೆಲೆ ಇಂದಿನಿಂದ ಭಾರಿ ಇಳಿಕೆ; ಜಾಸ್ತಿ ಹಣ ಕೇಳಿದ್ರೆ ಹೀಗೆ ಮಾಡಿ

    ಕೋಯಮತ್ತೂರು: 4 ಜ್ಯುವೆಲ್ಲರಿ ಮಳಿಗೆಗಳ ಮೇಲೆ ಬಿಐಎಸ್ ದಾಳಿ, ₹3 ಕೋಟಿ ಮೌಲ್ಯದ ಚಿನ್ನ ಜಪ್ತಿ

    ಎಥೆನಾಲ್ ಗೊಂದಲಕ್ಕೆ ಕೇಂದ್ರವೇ ಹೊಣೆ: ಸಚಿವ ಎಂ.ಬಿ. ಪಾಟೀಲ ಕಿಡಿ

    Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

    ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

  • Bengaluru Focus

    ರಾಜ್ಯೋತ್ಸವ ಆಚರಣೆ ನಿಲ್ಲಿಸಿ ಕನ್ನಡಿಗರನ್ನು ಕೆಲಸದಿಂದ ತೆಗೆದಿದ್ದ ಆರೋಪ: ಕರವೇ ಪ್ರತಿಭಟನೆಗೆ ಮಣಿದ ನ್ಯಾಕ್ ನಿರ್ದೇಶಕರಿಂದ ಕ್ಷಮೆಯಾಚನೆ

    ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಮೇಖ್ರವೃತ್ತದ ಸಮೀಪ ನೂತನವಾಗಿ ಪ್ರಾರಂಭವಾಗಿರುವ ಸುರಂಗಮಾರ್ಗ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಸೋಮವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ  ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಆಯುಕ್ತರಾದ ಮೇಜರ್ ಮಣಿವಣ್ಣನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಬಿಡಿಎ ಮಹತ್ವದ ಹೆಜ್ಜೆ: ಅಕ್ರಮ-ಸಕ್ರಮ ಶುಲ್ಕ ಇಳಿಕೆ, ಪ್ರೋತ್ಸಾಹದಾಯಕ ನಿವೇಶನ ಘೋಷಣೆ

    BDA News | ಹೆಬ್ಬಾಳ ಫ್ಲೈಓವರ್ 18 ತಿಂಗಳು ಬಂದ್ ಇಲ್ಲ: ಬಿಡಿಎ ಸ್ಪಷ್ಟನೆ

    ಕೊಲೆಯಾದ ಬಾಲಕ (ಎಡಭಾಗ), ಕೊಲೆ ಆರೋಪಿ ಇಂದುಶೇಖರ್ (ಮಧ್ಯದಲ್ಲಿ), ಕೊಲೆಯಾದವರು (ಬಲಭಾಗದ ಚಿತ್ರ)

    ಬೆಂಗಳೂರಿನಲ್ಲಿ ನರಮೇಧ: 20 ದಿನ, 7 ಕೊಲೆ; ಕ್ಯಾಬ್ ಚಾಲಕನ ಭೀಕರ ಕೃತ್ಯ: ಇಲ್ಲಿದೆ ಫುಲ್ ಡಿಟೇಲ್ಸ್

    ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

    ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

    Viral Video | ಕನಕಪುರ ರಸ್ತೆ ಫೋರಂ ಮಾಲ್‌ನಲ್ಲಿ ಆಘಾತಕಾರಿ ಘಟನೆ: ಬಳಸಿ ಬಿಸಾಕಿದ ಪೇಪರ್ ಕಪ್‌ನಲ್ಲಿ ಜ್ಯೂಸ್ ಮಾರಾಟ, ಸಿಬ್ಬಂದಿಗೆ ತರಾಟೆ

  • Public interest
  • BW Special
  • Life Style
  • Photo Gallery
  • Video
No Result
View All Result

ನ್ಯಾಕ್ ಕಚೇರಿಗೆ ಕರವೇ ಮುತ್ತಿಗೆ: ನವೆಂಬರ್ 15ರಂದು ಸ್ವತಃ ತಾವೇ ರಾಜ್ಯೋತ್ಸವ ಆಚರಿಸುವುದಾಗಿ ಹೇಳಿದ ನಿರ್ದೇಶಕ ಗಣೇಶನ್ ಕನ್ನಬಿರನ್

by Bengaluru Wire Desk
November 10, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ನ.10 www.bengaluruwire.com: ಕಳೆದ ಎರಡು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆಗೆ ತಡೆ ಒಡ್ಡಿ, ಪ್ರಶ್ನಿಸಿದ ಕನ್ನಡಿಗ ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (NAAC) ಸಂಸ್ಥೆಗೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಸೋಮವಾರ ದಿಢೀರ್ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿತು. 

ಕರವೇ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ನ್ಯಾಕ್ ನಿರ್ದೇಶಕರು ಬಹಿರಂಗವಾಗಿ ಕ್ಷಮೆಯಾಚಿಸಿದ್ದು, ನವೆಂಬರ್ 15ರಂದು ಸ್ವತಃ ತಾವೇ ರಾಜ್ಯೋತ್ಸವ ಆಚರಿಸುವುದಾಗಿ ಭರವಸೆ ನೀಡಿದ್ದಾರೆ.

ಕನ್ನಡಿಗರ ವಜಾ ಮತ್ತು ತಾರತಮ್ಯದ ಆರೋಪ:

ತಮಿಳುನಾಡು ಮೂಲದ ಪ್ರೊ. ಗಣೇಶನ್ ಕನ್ನಬಿರನ್ ಅವರು ನ್ಯಾಕ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಸ್ಥೆಯಲ್ಲಿ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆಯನ್ನು ತಡೆಹಿಡಿದಿದ್ದನ್ನು ಪ್ರಶ್ನಿಸಿದ 15ಕ್ಕೂ ಹೆಚ್ಚು ಸ್ಥಳೀಯ ಗುತ್ತಿಗೆ ಸಿಬ್ಬಂದಿಯನ್ನು ಸಬೂಬು ಹೇಳಿ ರಾತ್ರೋರಾತ್ರಿ ಕೆಲಸದಿಂದ ವಜಾಗೊಳಿಸಲಾಗಿತ್ತು.

ಜೊತೆಗೆ ಸ್ಥಳೀಯ ಸೆಕ್ಯೂರಿಟಿ ಏಜೆನ್ಸಿಯನ್ನು ಬದಲಿಸಿ, ಹೊರರಾಜ್ಯದ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ ಕನ್ನಡಿಗ ಅಧಿಕಾರಿಗಳ ಮೇಲೂ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ನೊಂದ ಸಿಬ್ಬಂದಿ ಮುಖ್ಯಮಂತ್ರಿಗಳಿಗೆ ಹಾಗೂ ಕರವೇಗೆ ದೂರು ಸಲ್ಲಿಸಿದ್ದರು.

ಕರವೇ ಗಡಸು ಎಚ್ಚರಿಕೆ:

ಸಿಬ್ಬಂದಿಯ ದೂರಿನ ಮೇರೆಗೆ ಕರವೇ ಶಿವರಾಮೇಗೌಡರ ಬಣದ ಡಾ. ಜಯನ್ ಎಸ್. ನೇತೃತ್ವದ ನಿಯೋಗವು ಬೆಂಗಳೂರಿನ ನಾಗರಭಾವಿಯಲ್ಲಿರುವ ನ್ಯಾಕ್ ಕಚೇರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿತು. “ಕರ್ನಾಟಕದಲ್ಲಿದ್ದುಕೊಂಡು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಇಲ್ಲಿನ ನೆಲದ ಜನರಿಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ” ಎಂದು ಸಂಘಟನೆ ಖಡಕ್ ಎಚ್ಚರಿಕೆ ನೀಡಿತು.

ಕರವೇ ಹೋರಾಟದ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ನಿರ್ದೇಶಕ ಗಣೇಶನ್ ಕನ್ನಬಿರನ್, ದೂರವಾಣಿ ಮೂಲಕ ಸಂಘಟನೆಯ ಮುಖಂಡರ ಕ್ಷಮೆಯಾಚಿಸಿದರು. ಅಲ್ಲದೆ, ನವೆಂಬರ್ 15ರಂದು ಕಚೇರಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದಾಗಿ ಒಪ್ಪಿಕೊಂಡರು. ಅಕ್ರಮವಾಗಿ ವಜಾಗೊಳಿಸಲಾಗಿರುವ ಸ್ಥಳೀಯ ಕನ್ನಡಿಗ ಸಿಬ್ಬಂದಿಯನ್ನು ಕೂಡಲೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಕರವೇ ಡೆಡ್‌ಲೈನ್ ನೀಡಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಎಥನಾಲ್ ಪೆಟ್ರೋಲ್ ವಿವಾದ: ಕರ್ನಾಟಕ ಕಾಂಗ್ರೆಸ್ ಆರೋಪಕ್ಕೆ ಚೆಕ್ ಮೇಟ್ ಇಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Please login to join discussion

Like Us on Facebook

Follow Us on Twitter

Recent News

ರಾಜ್ಯೋತ್ಸವ ಆಚರಣೆ ನಿಲ್ಲಿಸಿ ಕನ್ನಡಿಗರನ್ನು ಕೆಲಸದಿಂದ ತೆಗೆದಿದ್ದ ಆರೋಪ: ಕರವೇ ಪ್ರತಿಭಟನೆಗೆ ಮಣಿದ ನ್ಯಾಕ್ ನಿರ್ದೇಶಕರಿಂದ ಕ್ಷಮೆಯಾಚನೆ

November 10, 2026

ಎಥನಾಲ್ ಪೆಟ್ರೋಲ್ ವಿವಾದ: ಕರ್ನಾಟಕ ಕಾಂಗ್ರೆಸ್ ಆರೋಪಕ್ಕೆ ಚೆಕ್ ಮೇಟ್ ಇಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

November 10, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಜ್ಯೋತ್ಸವ ಆಚರಣೆ ನಿಲ್ಲಿಸಿ ಕನ್ನಡಿಗರನ್ನು ಕೆಲಸದಿಂದ ತೆಗೆದಿದ್ದ ಆರೋಪ: ಕರವೇ ಪ್ರತಿಭಟನೆಗೆ ಮಣಿದ ನ್ಯಾಕ್ ನಿರ್ದೇಶಕರಿಂದ ಕ್ಷಮೆಯಾಚನೆ

November 10, 2026

ಎಥನಾಲ್ ಪೆಟ್ರೋಲ್ ವಿವಾದ: ಕರ್ನಾಟಕ ಕಾಂಗ್ರೆಸ್ ಆರೋಪಕ್ಕೆ ಚೆಕ್ ಮೇಟ್ ಇಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

November 10, 2026
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಮೇಖ್ರವೃತ್ತದ ಸಮೀಪ ನೂತನವಾಗಿ ಪ್ರಾರಂಭವಾಗಿರುವ ಸುರಂಗಮಾರ್ಗ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಸೋಮವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ  ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಆಯುಕ್ತರಾದ ಮೇಜರ್ ಮಣಿವಣ್ಣನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡಿಎ ಮಹತ್ವದ ಹೆಜ್ಜೆ: ಅಕ್ರಮ-ಸಕ್ರಮ ಶುಲ್ಕ ಇಳಿಕೆ, ಪ್ರೋತ್ಸಾಹದಾಯಕ ನಿವೇಶನ ಘೋಷಣೆ

November 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d