Saturday, November 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

    ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ನೈಋತ್ಯ ರೈಲ್ವೆ ಐತಿಹಾಸಿಕ ಸಾಧನೆ: ಅಕ್ಟೋಬರ್‌ನಲ್ಲಿ ₹928 ಕೋಟಿ ಆದಾಯ, ಸರಕು ಸಾಗಣೆಯಲ್ಲಿ ಸಾರ್ವಕಾಲಿಕ ದಾಖಲೆ

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

  • Bengaluru Focus
    ಕೊಲೆಯಾದ ಬಾಲಕ (ಎಡಭಾಗ), ಕೊಲೆ ಆರೋಪಿ ಇಂದುಶೇಖರ್ (ಮಧ್ಯದಲ್ಲಿ), ಕೊಲೆಯಾದವರು (ಬಲಭಾಗದ ಚಿತ್ರ)

    ಬೆಂಗಳೂರಿನಲ್ಲಿ ನರಮೇಧ: 20 ದಿನ, 7 ಕೊಲೆ; ಕ್ಯಾಬ್ ಚಾಲಕನ ಭೀಕರ ಕೃತ್ಯ: ಇಲ್ಲಿದೆ ಫುಲ್ ಡಿಟೇಲ್ಸ್

    ಸೂರ್ಯನ ರಹಸ್ಯ ಭೇದಿಸಿದ ಆದಿತ್ಯ-L1: ಸೌರ ಸ್ಫೋಟದ ಅಸಲಿ 3D ರೂಪ ಬಯಲು

    ಬೆಂಗಳೂರು ವರ್ತುಲ ರಸ್ತೆಗೆ ₹1,118 ಕೋಟಿ ಹೆಚ್ಚುವರಿ ಅನುದಾನ

    BIG NEWS | ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್: ಆಸ್ಪತ್ರೆಯಲ್ಲಿರುವ ಅಣ್ಣ ಸತ್ಯನಾರಾಯಣ ರಾವ್ ಆರೋಗ್ಯ ವಿಚಾರಣೆ

    Viral Video | ಕನಕಪುರ ರಸ್ತೆ ಫೋರಂ ಮಾಲ್‌ನಲ್ಲಿ ಆಘಾತಕಾರಿ ಘಟನೆ: ಬಳಸಿ ಬಿಸಾಕಿದ ಪೇಪರ್ ಕಪ್‌ನಲ್ಲಿ ಜ್ಯೂಸ್ ಮಾರಾಟ, ಸಿಬ್ಬಂದಿಗೆ ತರಾಟೆ

    ಡೀಸೆಲ್ ನೆಪ, ಜನರ ಜೇಬಿಗೆ ಕತ್ತರಿ: ಬಸ್ ದರ ಏರಿಕೆಯ ಹಿಂದಿನ ಕಹಿ ಸತ್ಯವೇನು?

    BW SPECIAL | ಅಕ್ಕಿ ದರ ಭಾರಿ ಏರಿಕೆ: ಗ್ರಾಹಕರಿಗೆ ಬರೆ: ಕೆಜಿ ದರ ಸರಾಸರಿ ಜೂನ್ ನಿಂದ ನವೆಂಬರ್ ಗೆ ₹22 ಹೆಚ್ಚಳ

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

  • Public interest
  • BW Special
  • Life Style
  • Photo Gallery
  • Video
No Result
View All Result

ಮಾನವ-ವನ್ಯಜೀವಿ ಸಂಘರ್ಷ ತಡೆ, ಡ್ರೋನ್ ಕೈಪಿಡಿ ಬಿಡುಗಡೆ ಹಾಗೂ ಸಿಬ್ಬಂದಿ ಕಲ್ಯಾಣಕ್ಕೆ ಅರಣ್ಯ ಇಲಾಖೆ ಆದ್ಯತೆ.

by Bengaluru Wire Desk
November 7, 2026
in News Wire, Public interest
Reading Time: 1 min read
0

ಚಾಮರಾಜನಗರ, ನ.07 www.bengaluruwire.com: ಕರ್ನಾಟಕದ ಪ್ರಮುಖ ವನ್ಯಜೀವಿ ತಾಣವಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 155ರ ಗಡಿ ದಾಟಿದ್ದು, ಅರಣ್ಯ ಪರಿಸರ ವ್ಯವಸ್ಥೆ ಅತ್ಯಂತ ಸಮತೋಲನದಲ್ಲಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಚಿವರು, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ, ಮುಂಚೂಣಿ ಸಿಬ್ಬಂದಿಯ ಕಲ್ಯಾಣ ಹಾಗೂ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿದರು.

ಸಮೃದ್ಧ ಪರಿಸರ ವ್ಯವಸ್ಥೆ & ಹುಲಿ ಸಂತತಿ ವೃದ್ಧಿ:

ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಿಂಕೆ, ಕಾಡೆಮ್ಮೆ ಹಾಗೂ ಕಡವೆಗಳಂತಹ ಬೇಟೆ ಪ್ರಾಣಿಗಳು ಹೇರಳವಾಗಿರುವುದು ಬಂಡೀಪುರದ ಅರಣ್ಯ ಆರೋಗ್ಯಕರವಾಗಿರುವುದಕ್ಕೆ ಸಾಕ್ಷಿ ಎಂದು ಸಚಿವರು ವಿಶ್ಲೇಷಿಸಿದರು. ಹುಲಿ ಸಂತತಿ 155ಕ್ಕೂ ಹೆಚ್ಚು ಏರಿಕೆಯಾಗಿದ್ದು, ಇಡೀ ಆವಾಸಸ್ಥಾನವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಇಲಾಖೆ ಕಾರ್ಯೋನ್ಮುಖವಾಗಿದೆ.

ತಂತ್ರಜ್ಞಾನ ಬಲವರ್ಧನೆ: ಡ್ರೋನ್ ಕ್ಷೇತ್ರ ಕೈಪಿಡಿ ಬಿಡುಗಡೆ

ಅರಣ್ಯ ಕಣ್ಗಾವಲು ಹಾಗೂ ವನ್ಯಜೀವಿ ರಕ್ಷಣೆಯಲ್ಲಿ ತಂತ್ರಜ್ಞಾನದ ಬಳಕೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಪರಿಶೀಲನಾ ಸಭೆಯಲ್ಲಿ ಪ್ರಮುಖ ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಯಿತು:

ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ: ಬಂಡೀಪುರ ಅರಣ್ಯ ವಿಭಾಗ ಸಿದ್ಧಪಡಿಸಿದ “Drone Pilot Field Manual” ಅಧಿಕೃತವಾಗಿ ಬಿಡುಗಡೆ.

ಇಕೋ-ಟೂರಿಸಮ್ ಪ್ಲಾಟ್‌ಫಾರ್ಮ್: ಪ್ರವಾಸಿಗರಿಗೆ ಪಾರದರ್ಶಕ ಸೇವೆ ಒದಗಿಸಲು “ಇಕೋ-ಟೂರಿಸಮ್ ಕ್ವಾಲಿಟಿ ಅಶ್ಯುರೆನ್ಸ್ & ವಿಸಿಟರ್ ರಿಡ್ರೆಸಲ್ ಪ್ಲಾಟ್‌ಫಾರ್ಮ್”ಗೆ ಚಾಲನೆ.

ಅಧುನಿಕ ಪರಿಕರಗಳ ವೀಕ್ಷಣೆ: ಥರ್ಮಲ್ ಡ್ರೋನ್‌ಗಳು, ಜಿಪಿಎಸ್ ರೇಡಿಯೋ ಕಾಲರ್‌ಗಳು, ವನ್ಯಜೀವಿ ಟೆಲಿಮೆಟ್ರಿ ಹಾಗೂ ಸುಧಾರಿತ ಗಸ್ತು ಉಪಕರಣಗಳ ಕಾರ್ಯಕ್ಷಮತೆಯನ್ನು ಸಚಿವರು ಖುದ್ದು ವೀಕ್ಷಿಸಿದರು. ಅಲ್ಲದೆ, ಜಿಲ್ಲಾ ಸಂಘರ್ಷ ನಿಯಂತ್ರಣ ಕೇಂದ್ರ ಮತ್ತು ಶ್ವಾನ ದಳದ (Dog Squad) ಸನ್ನದ್ಧತೆಯನ್ನು ಪರಿಶೀಲಿಸಲಾಯಿತು.

ಸಿಬ್ಬಂದಿ ಕಲ್ಯಾಣ ಹಾಗೂ ರಕ್ಷಣಾ ಕಾರ್ಯಪಡೆಗಳು:

ಕಾಡಿನ ರಕ್ಷಣೆಗೆ ಹಗಲಿರುಳು ದುಡಿಯುವ ಮುಂಚೂಣಿ ಅರಣ್ಯ ಸಿಬ್ಬಂದಿಗೆ ಪೌಷ್ಟಿಕ ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು. ಗಸ್ತು ಮತ್ತು ತನಿಖಾ ಚಟುವಟಿಕೆಗಳನ್ನು ಚುರುಕುಗೊಳಿಸಲು ಹೊಸ ಇಲಾಖಾ ವಾಹನಗಳನ್ನು ಹಸ್ತಾಂತರಿಸಲಾಯಿತು. ಸಾರ್ವಜನಿಕ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ನಿಯೋಜಿಸಲಾಗಿರುವ ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಚಿರತೆ ಕಾರ್ಯಪಡೆ (Leopard Task Force) ಸಿಬ್ಬಂದಿಯೊಂದಿಗೆ ಸಚಿವರು ಸಂವಾದ ನಡೆಸಿ ಭದ್ರತಾ ಕ್ರಮಗಳನ್ನು ಅವಲೋಕಿಸಿದರು.

ಮಾನವ-ವನ್ಯಜೀವಿ ಸಂಘರ್ಷ ತಡೆ & ಒತ್ತುವರಿ ತೆರವು:

ಸ್ಥಳೀಯ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ರಾಮಲಿಂಗಾರೆಡ್ಡಿ ಅವರು, ರೈಲ್ವೆ ಬ್ಯಾರಿಕೇಡ್‌ಗಳು, ಸೋಲಾರ್ ಫೆನ್ಸಿಂಗ್ ಹಾಗೂ ಆನೆ ಕಂದಕಗಳ ಸಮರ್ಪಕ ನಿರ್ವಹಣೆಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಒತ್ತುವರಿ ತೆರವು: ಬಂಡೀಪುರ ವ್ಯಾಪ್ತಿಯಲ್ಲಿ ಗುರುತಿಸಲಾದ ಅರಣ್ಯ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದು.

ಎಪಿಸಿ ಕ್ಯಾಂಪ್ ದುರಸ್ತಿ: ಕಳ್ಳಬೇಟೆ ತಡೆ ಶಿಬಿರಗಳ (Anti-Poaching Camps) ಮೂಲಸೌಕರ್ಯ ತಕ್ಷಣ ದುರಸ್ತಿಗೊಳಿಸುವುದು.

ಕೇರಳ ಗಡಿ ಚೆಕ್‌ಪೋಸ್ಟ್ ನಿಗಾ: ಮೂಲೇಹೊಳೆ ಚೆಕ್‌ಪೋಸ್ಟ್ ಪರಿಶೀಲಿಸಿದ ಸಚಿವರು, ಹೊರರಾಜ್ಯಗಳಿಂದ ತಂದು ಸುರಿಯಲಾಗುವ ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಬ್ರೇಕ್ ಹಾಕಲು ಕಠಿಣ ಕ್ರಮಕ್ಕೆ ಸೂಚಿಸಿದರು.

ಬೆಳೆ ನಷ್ಟ ಪರಿಹಾರ: ವನ್ಯಜೀವಿಗಳ ದಾಳಿಯಿಂದ ಉಂಟಾಗುವ ಬೆಳೆ ಹಾನಿಗೆ ಶೀಘ್ರ ಪರಿಹಾರ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಆಕ್ರಮಣಕಾರಿ ಕಳೆ ನಿಯಂತ್ರಣ & ಕಾಳ್ಗಿಚ್ಚು ಮುನ್ನೆಚ್ಚರಿಕೆ:

ಅರಣ್ಯದ ಸಹಜ ಸಸ್ಯವರ್ಗಕ್ಕೆ ಮಾರಕವಾಗಿರುವ ಲ್ಯಾಂಟಾನಾ (Lantana) ಹಾಗೂ ಸೆನ್ನಾ ಸ್ಪೆಕ್ಟಾಬಿಲಿಸ್ (Senna spectabilis) ಆಕ್ರಮಣಕಾರಿ ಸಸ್ಯಗಳನ್ನು ವೈಜ್ಞಾನಿಕ ವಿಧಾನದ ಮೂಲಕ ತೆರವುಗೊಳಿಸಲು ಸೂಚಿಸಲಾಯಿತು. ಮುಂದಿನ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಳ್ಗಿಚ್ಚು ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಗುಂಡ್ಲುಪೇಟೆ ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್, ಪಿಸಿಸಿಎಫ್ (ವನ್ಯಜೀವಿ) ಕುಮಾರ್ ಪುಷ್ಕರ್, ಎಪಿಸಿಸಿಎಫ್ ಮನೋಜ್ ರಾಜನ್, ಸಿಸಿಎಫ್‌ಗಳಾದ ರವಿಶಂಕರ್ ಆರ್., ಡಾ. ಎಂ. ಮಾಲತಿ ಪ್ರಿಯಾ, ಡಿಸಿಎಫ್‌ಗಳಾದ ನಂದೀಶ್ ಎಲ್., ಡಾ. ಪ್ರಭು ಗೌಡ್ ಹಾಗೂ ಆರ್‌ಎಫ್‌ಒಗಳಾದ ಸತೀಶ್ ಮತ್ತು ಮೋಹನ್ ಸೇರಿದಂತೆ ಹಲವು ಹಿರಿಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

Please login to join discussion

Like Us on Facebook

Follow Us on Twitter

Recent News

Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

November 7, 2026

ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

November 7, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Forest News | ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೆ ಏರಿಕೆ: ಸಚಿವ ರಾಮಲಿಂಗಾರೆಡ್ಡಿ ಅರಣ್ಯ ಅಧಿಕಾರಿಗಳ ಜೊತೆ ಸಭೆ

November 7, 2026

ದಕ್ಷಿಣ ರಾಜ್ಯಗಳಿಗೆ ಹೆಚ್ಚುವರಿ ‘ಭಾರತ್ ರೈಸ್’ ಹಂಚಿಕೆ: ಅಕ್ಕಿ, ಭತ್ತಕ್ಕೆ ದಾಸ್ತಾನು ಮಿತಿ

November 7, 2026
ಕೊಲೆಯಾದ ಬಾಲಕ (ಎಡಭಾಗ), ಕೊಲೆ ಆರೋಪಿ ಇಂದುಶೇಖರ್ (ಮಧ್ಯದಲ್ಲಿ), ಕೊಲೆಯಾದವರು (ಬಲಭಾಗದ ಚಿತ್ರ)

ಬೆಂಗಳೂರಿನಲ್ಲಿ ನರಮೇಧ: 20 ದಿನ, 7 ಕೊಲೆ; ಕ್ಯಾಬ್ ಚಾಲಕನ ಭೀಕರ ಕೃತ್ಯ: ಇಲ್ಲಿದೆ ಫುಲ್ ಡಿಟೇಲ್ಸ್

November 6, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d