Friday, September 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

  • Bengaluru Focus

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

    GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

by Bengaluru Wire Desk
September 23, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಸೆ.23 www.bengaluruwire.com: ಐಟಿ ಹಬ್ ಬೆಂಗಳೂರಿನ ಪೂರ್ವ ಭಾಗದ ಮೂಲಸೌಕರ್ಯದ ಅಸಲಿ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ. 

ವೈಟ್‌ಫೀಲ್ಡ್, ವರ್ತೂರು, ಗುಂಜೂರು ಮತ್ತು ಸರ್ಜಾಪುರ ಸಂಪರ್ಕಿಸುವ ಎಸ್‌ಎಚ್-35 (SH-35) ಹೆದ್ದಾರಿಯ ಅವ್ಯವಸ್ಥೆ ಹಾಗೂ ಸಂಚಾರ ದಟ್ಟಣೆಯು ಶಾಲಾ ಮಕ್ಕಳ ಬಾಲ್ಯ, ಆರೋಗ್ಯ ಮತ್ತು ಕಲಿಕೆಯನ್ನೇ ಬಲಿಪಡೆಯುತ್ತಿದೆ. ಇನ್ವೆಂಚರ್ ಅಕಾಡೆಮಿ (Inventure Academy) ಬಿಡುಗಡೆ ಮಾಡಿರುವ ನೂತನ ‘ಅವರ್ ಮೊಬಿಲಿಟಿ ಅವರ್ ವಾಯ್ಸ್’ (Our Mobility Our Voice) ಅಧ್ಯಯನ ವರದಿಯು, ನಗರದ ಆಡಳಿತ ವ್ಯವಸ್ಥೆ ಮತ್ತು ಯೋಜನಾ ವೈಫಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ಕೇವಲ ಎರಡು ವರ್ಷಗಳಲ್ಲಿ ಶಾಲಾ ಮಕ್ಕಳ ಪ್ರಯಾಣ ಸಮಯದಲ್ಲಿ ಬರೋಬ್ಬರಿ ಶೇ.22ರಷ್ಟು ಏರಿಕೆಯಾಗಿದ್ದು, ಚಿಕ್ಕ ಮಕ್ಕಳು ದಿನಕ್ಕೆ ಸುಮಾರು ಎರಡು ಗಂಟೆ ರಸ್ತೆಯಲ್ಲೇ ಕಾಲ ಕಳೆಯುವ ಅಮಾನವೀಯ ಸ್ಥಿತಿ ನಿರ್ಮಾಣವಾಗಿದೆ.

ಅಂಕಿಸಂಖ್ಯೆಗಳ ವಿಶ್ಲೇಷಣೆ: ವರ್ಷಕ್ಕೆ 53 ಪೂರ್ಣ ಶಾಲಾ ದಿನಗಳು ಟ್ರಾಫಿಕ್ ಪಾಲು!

ಇನ್ವೆಂಚರ್ ಅಕಾಡೆಮಿಯ 61 ಶಾಲಾ ಬಸ್‌ಗಳ ಜಿಪಿಎಸ್ (GPS) ದತ್ತಾಂಶ ಆಧರಿಸಿ ನಡೆಸಿರುವ ಈ ವಿಶ್ಲೇಷಣೆಯು ನಗರ ಯೋಜಕರ ಕಣ್ಣು ತೆರೆಸುವಂತಿದೆ:

ಅವರ್‌ಮೊಬಿಲಿಟಿ, ಅವರ್ ವಾಯ್ಸ್ ಅಧ್ಯಯನ ವರದಿ ಮುಖ್ಯಾಂಶ.

ಪ್ರಯಾಣದ ಅವಧಿ ಏರಿಕೆ: 2024–25ರಲ್ಲಿ ದಿನಕ್ಕೆ ಸರಾಸರಿ 92 ನಿಮಿಷ (1 ಗಂಟೆ 32 ನಿಮಿಷ) ಇದ್ದ ಪ್ರಯಾಣದ ಅವಧಿ, 2025–26ರಲ್ಲಿ 102 ನಿಮಿಷಕ್ಕೆ ಹಾಗೂ 2026–27ರ ವೇಳೆಗೆ 112.3 ನಿಮಿಷಕ್ಕೆ (ಸುಮಾರು 1 ಗಂಟೆ 52 ನಿಮಿಷ) ಜಿಗಿದಿದೆ.

ಬೆಳಗ್ಗೆ ಮತ್ತು ಸಂಜೆಯ ನರಕ: ಬೆಳಗಿನ ಸರಾಸರಿ ಪ್ರಯಾಣ 39ರಿಂದ 47 ನಿಮಿಷಕ್ಕೆ ಹೆಚ್ಚಾಗಿದ್ದರೆ, ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳುವ ಪ್ರಯಾಣ 53ರಿಂದ 65 ನಿಮಿಷಕ್ಕೆ ವಿಸ್ತರಿಸಿದೆ.

ವಿದ್ಯಾರ್ಥಿಗಳ ಸಮಯ ಲೂಟಿ: ವರ್ಷದ ಸರಾಸರಿ 200 ಶಾಲಾ ದಿನಗಳಲ್ಲಿ ಮಕ್ಕಳು ಬರೋಬ್ಬರಿ 374 ಗಂಟೆಗಳನ್ನು ಕೇವಲ ಬಸ್‌ನಲ್ಲೇ ಕಳೆಯುತ್ತಿದ್ದಾರೆ. ಅಂದರೆ, ತಲಾ 7 ಗಂಟೆಗಳ 53 ಪೂರ್ಣ ಶಾಲಾ ದಿನಗಳು ಟ್ರಾಫಿಕ್‌ನಲ್ಲೇ ವ್ಯರ್ಥವಾಗುತ್ತಿವೆ. ಎರಡು ಶೈಕ್ಷಣಿಕ ವರ್ಷಗಳಲ್ಲಿ 106 ದಿನಗಳು (ಒಂದು ಪೂರ್ಣಾವಧಿ ಟರ್ಮ್‌ಗಿಂತ ಹೆಚ್ಚು) ರಸ್ತೆಯಲ್ಲೇ ಮುಗಿದುಹೋಗುತ್ತಿವೆ!

40,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಕಷ್ಟ: ಎಸ್‌ಎಚ್-35 ಕಾರಿಡಾರ್‌ನಲ್ಲಿ 42 ಪ್ರಮುಖ ಶಾಲೆಗಳಿದ್ದು, 1,000ಕ್ಕೂ ಹೆಚ್ಚು ಬಸ್‌ಗಳು ಹಾಗೂ 40,000ಕ್ಕೂ ಹೆಚ್ಚು ಬಸ್ ಬಳಕೆದಾರರು ಇದೇ ದುಸ್ಥಿತಿಯ ಕಿರಿದಾದ ರಸ್ತೆ ಜಾಲವನ್ನು ಅವಲಂಬಿಸಿದ್ದಾರೆ.

ವೇಗ ಕೇವಲ 9.2 ಕಿ.ಮೀ: ನಡೆಯುವುದಕ್ಕಿಂತ ತುಸು ಹೆಚ್ಚು!

ವರದಿಯ ಪ್ರಕಾರ, ಮಧ್ಯಾಹ್ನದ ವೇಳೆಗೆ ಒಂಬತ್ತೂ ಮಾರ್ಗಗಳಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 12 ಕಿ.ಮೀಗಿಂತ ಕಡಿಮೆಯಾಗಿದೆ. ಒಟ್ಟಾರೆ ಕಾರಿಡಾರ್‌ನ ಸರಾಸರಿ ವೇಗ ಗಂಟೆಗೆ ಕೇವಲ 9.2 ಕಿ.ಮೀ. ಅತ್ಯಂತ ಮಂದಗತಿಯ ಮಾರ್ಗಗಳಲ್ಲಿ (ಉದಾಹರಣೆಗೆ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟಾಟ್ ಹಾಗೂ ಪಾಮ್ ಮೆಡೋಸ್) ಬಸ್ ವೇಗ ಗಂಟೆಗೆ ಕೇವಲ 6.4 ಕಿ.ಮೀಗೆ ಕುಸಿಯುತ್ತದೆ. ಆರೋಗ್ಯವಂತ ಮನುಷ್ಯನ ನಡಿಗೆಯ ವೇಗ ಗಂಟೆಗೆ 5 ಕಿ.ಮೀ ಆಗಿದ್ದು, ವಾಕಿಂಗ್ ಮಾಡುವುದಕ್ಕಿಂತ ತುಸು ಹೆಚ್ಚಿರುವ ಈ ವೇಗ ವ್ಯವಸ್ಥೆಯ ಅಣಕವಾಗಿದೆ. ಪಾದಚಾರಿ ಮಾರ್ಗಗಳಿಲ್ಲದೆ, ದೂಳು-ಹೊಗೆ ತುಂಬಿದ ರಸ್ತೆಗಳಲ್ಲಿ ಮಕ್ಕಳು ನಡೆದು ಹೋಗುವುದೂ ಅಸಾಧ್ಯವಾಗಿದೆ.

ವಾರದ ದಿನಗಳಲ್ಲಿ ಗುರುವಾರ ಅತ್ಯಂತ ಕೆಟ್ಟ ದಿನವಾಗಿದ್ದು, ಅಂದು ಮಧ್ಯಾಹ್ನದ ಪ್ರಯಾಣ ಸರಾಸರಿ 76 ನಿಮಿಷ ತೆಗೆದುಕೊಳ್ಳುತ್ತಿದೆ ಹಾಗೂ ವೇಗ ಗಂಟೆಗೆ 8.4 ಕಿ.ಮೀಗೆ ಇಳಿಯುತ್ತದೆ. ನೈಜ ದಟ್ಟಣೆಯ ಪ್ರಕಾರ ವರ್ತೂರು-ಸರ್ಜಾಪುರ ರಸ್ತೆಯಿಂದ ಶಾಲೆವರೆಗಿನ ಕೇವಲ 4.1 ಕಿ.ಮೀ. ಕ್ರಮಿಸಲು 36 ನಿಮಿಷ ಹಾಗೂ ಸರ್ಜಾಪುರದಿಂದ ಗುಂಜೂರು ಗ್ರಾಮದ 8.4 ಕಿ.ಮೀ. ಕ್ರಮಿಸಲು 63 ನಿಮಿಷ ತಗಲುತ್ತಿದೆ. ಶೇ.60ರಷ್ಟು ಟ್ರಿಪ್‌ಗಳು ನಿಗದಿತ ಸಮಯಕ್ಕಿಂತ ತಡವಾಗಿ ತಲುಪುತ್ತಿದ್ದು, ಶೇ.15ರಷ್ಟು ಬಸ್‌ಗಳು 30 ನಿಮಿಷ ಹಾಗೂ ಶೇ.4ರಷ್ಟು ಬಸ್‌ಗಳು 1 ಗಂಟೆಗೂ ಹೆಚ್ಚು ತಡವಾಗಿ ತಲುಪುತ್ತಿವೆ.

ಬಾಲ್ಯದ ಮೇಲೆ ಕ್ರೂರ ಹೊಡೆತ:

ಕಿರಿಯ ತರಗತಿಯ ಪುಟಾಣಿ ಮಕ್ಕಳು ತಲೆನೋವು, ಸುಸ್ತು, ಅಪೌಷ್ಟಿಕತೆ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಶಾಲೆಯಿಂದ ಮನೆಗೆ ತಲುಪುವಷ್ಟರಲ್ಲಿ ಸಂಜೆಯಾಗುತ್ತಿದ್ದು, ಆಟದ ಮೈದಾನ, ಕೌಟುಂಬಿಕ ಸಮಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಬರೆದ ಪತ್ರಗಳು ಮತ್ತು ಬಿಡಿಸಿದ ಚಿತ್ರಗಳಲ್ಲಿ ಟ್ರಾಫಿಕ್ ಹಾರ್ನ್ ಶಬ್ದ, ಗುಂಡಿಬಿದ್ದ ರಸ್ತೆಗಳು, ಅನಾರೋಗ್ಯದ ಸಂಕಟ ಎದ್ದು ಕಾಣುತ್ತಿದೆ.

ಐದು ಪ್ರಮುಖ ಬಾಟಲ್‌ನೆಕ್‌ಗಳು ಮತ್ತು ತುರ್ತು ಬೇಡಿಕೆಗಳು:

ದೊಮ್ಮಸಂದ್ರ ಸರ್ಕಲ್ (ಅಪೂರ್ಣ ಮೇಲ್ಸೇತುವೆ ಕಾಮಗಾರಿ), ಗುಂಜೂರು (ಕಿರಿದಾದ ರಸ್ತೆ, ಕ್ಲಬ್ ರೋಡ್ ಬಂದ್), ವರ್ತೂರು ಕೋಡಿ, ವಿಬ್‌ಗಯೋರ್ ರಸ್ತೆ–ಕುಂದಲಹಳ್ಳಿ (ನೀರು ನಿಲ್ಲುವ ಸಮಸ್ಯೆ) ಹಾಗೂ ಗ್ರ್ಯಾನ್ ಕಾರ್ಮೆನ್ (ಯು-ಟರ್ನ್ ಹಾಗೂ ಸಿಗ್ನಲ್ ಲೋಪ) ಪ್ರಮುಖ ಸಂಚಾರ ಅಡೆತಡೆಗಳಾಗಿವೆ.

ಸರ್ಕಾರವು ತಕ್ಷಣವೇ ಮುಂದಿನ 30 ದಿನಗಳೊಳಗೆ ಶಾಲಾ ಅವಧಿಯಲ್ಲಿ ಹೆದ್ದಾರಿಯಲ್ಲಿ ಭಾರಿ ಸರಕು ವಾಹನಗಳ ಸಂಚಾರ ನಿಷೇಧಿಸಬೇಕು, ಪ್ರಮುಖ ಜಂಕ್ಷನ್‌ಗಳಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು, ರಸ್ತೆ ಗುಂಡಿಗಳನ್ನು ಮುಚ್ಚಬೇಕು ಮತ್ತು ಅಪೂರ್ಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಾಗರಿಕರು ಹಾಗೂ ಶಾಲಾ ಆಡಳಿತ ಮಂಡಳಿ ಆಗ್ರಹಿಸಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

Next Post

GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

Next Post

GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

Please login to join discussion

Like Us on Facebook

Follow Us on Twitter

Recent News

ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

September 24, 2026

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

September 24, 2026

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

September 24, 2026

GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

September 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d