Tuesday, September 22, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

  • Bengaluru Focus

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

    GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

    BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

    Bunts Sangha | ಬೆಂಗಳೂರು ಬಂಟರ ಸಂಘ ಚುನಾವಣೆ: ಅಧ್ಯಕ್ಷರಾಗಿ ದೀಪಕ್ ಶೆಟ್ಟಿ, ​ಉಪಾಧ್ಯಕ್ಷರಾಗಿ ಮಧುಕರ್ ಶೆಟ್ಟಿ ಆಯ್ಕೆ

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

by Bengaluru Wire Desk
September 22, 2026
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ಸೆ.22 www.bengaluruwire.com: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳ ಬತ್ತಿ ಹೋಗಿರುವ 500 ಕೆರೆಗಳ ಸಮಗ್ರ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ಯೋಜನೆಗೆ ಚಾಲನೆ ದೊರೆತಿದೆ. 

ವಿಶ್ವಬ್ಯಾಂಕ್ ನೆರವಿನೊಂದಿಗೆ ಸಿದ್ಧಪಡಿಸಲಾಗಿರುವ ಈ ಯೋಜನೆಯಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಟ್ಟು 135 ಕೆರೆಗಳಿಗೆ ಕಾಯಕಲ್ಪ ನೀಡಲು ಆದ್ಯತೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

​ವಿಕಾಸಸೌಧದ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ (CEO) ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯುದ್ಧೋಪಾದಿಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

​ಬೆಂಗಳೂರಿನ ಕೆರೆಗಳಿಗೆ ಸಿಗಲಿದೆ ಕಾಯಕಲ್ಪ:

​ಅಂತರ್ಜಲ ಮಟ್ಟ ಕುಸಿದು ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಯೋಜನೆಯಡಿ:

​ಬೆಂಗಳೂರು ಗ್ರಾಮಾಂತರ: 68 ಕೆರೆಗಳು

​ಬೆಂಗಳೂರು ನಗರ: 67 ಕೆರೆಗಳು

​ಈ ಕೆರೆಗಳಲ್ಲಿ ಹೂಳು ತೆಗೆಯುವುದು, ಏರಿ ದುರಸ್ತಿ ಹಾಗೂ ಎತ್ತರಿಸುವುದು, ಒತ್ತುವರಿ ತೆರವು, ರಾಜಕಾಲುವೆ ಮತ್ತು ನಾಲೆಗಳ ದುರಸ್ತಿ ಹಾಗೂ ಕೆರೆ ಅಂಗಳದ ಸೌಂದರ್ಯೀಕರಣ ಕಾಮಗಾರಿಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.

​ಹಿಂಗಾರು ಮಳೆಗೂ ಮುನ್ನವೇ ಕಾಮಗಾರಿ ಮುಕ್ತಾಯಕ್ಕೆ ಗಡುವು:

​ಪ್ರಸ್ತುತ ಮಳೆಯ ಕೊರತೆಯಿಂದಾಗಿ ಕೆರೆಗಳು ಬತ್ತಿ ಹೋಗಿದ್ದು, ಹೂಳೆತ್ತಲು ಹಾಗೂ ಕಾಲುವೆ ದುರಸ್ತಿಗೆ ಇದು ಸಕಾಲವಾಗಿದೆ. ಹಿಂಗಾರು ಮಳೆ ಆರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಮಳೆ ನೀರು ಸಂಗ್ರಹವಾಗಿ, ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ಭೀಕರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿಯ ತೇವಾಂಶ ಮತ್ತು ಅಂತರ್ಜಲ ಮಟ್ಟ ಗಣನೀಯವಾಗಿ ವೃದ್ಧಿಯಾಗಲಿದೆ ಎಂದು ಸಚಿವರು ವಿವರಿಸಿದರು.

​ಇತರ 5 ಜಿಲ್ಲೆಗಳ ಕೆರೆಗಳ ವಿವರ:

​ವಿಶ್ವಬ್ಯಾಂಕ್ ಮತ್ತು ವಿಬಿಜಿ ರಾಮ್‌ಜಿ ಸಹಯೋಗದೊಂದಿಗೆ ಒಟ್ಟು 500 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಉಳಿದ ಜಿಲ್ಲೆಗಳ ಅಂಕಿ-ಅಂಶಗಳು ಹೀಗಿವೆ:

​ತುಮಕೂರು: 96 ಕೆರೆಗಳು

​ಚಿಕ್ಕಬಳ್ಳಾಪುರ: 90 ಕೆರೆಗಳು

​ಕೋಲಾರ: 86 ಕೆರೆಗಳು

​ಕಲ್ಬುರ್ಗಿ: 49 ಕೆರೆಗಳು

​ಬೀದರ್: 44 ಕೆರೆಗಳು

​ಕಲುಷಿತ ನೀರು ಸರಬರಾಜು ಮಾಡಿದರೆ ಕಠಿಣ ಕ್ರಮ:

​ಗ್ರಾಮೀಣ ಹಾಗೂ ನಗರ ಭಾಗಗಳಿಗೆ ಸರಬರಾಜಾಗುವ ಕುಡಿಯುವ ನೀರಿನ ಶುದ್ಧತೆಯನ್ನು ಸಿಇಒ ಮತ್ತು ಪಿಡಿಒಗಳು ಖಾತರಿಪಡಿಸಿಕೊಳ್ಳಬೇಕು. ನಿಯಮಿತವಾಗಿ ಲ್ಯಾಬ್ ಪರೀಕ್ಷೆಗಳನ್ನು ನಡೆಸಬೇಕು. ಎಲ್ಲಾದರೂ ಕಲುಷಿತ ನೀರಿನ ದೂರು ಬಂದರೆ, ಜಲಮೂಲದಿಂದ ಮನೆಗಳ ನಲ್ಲಿಯವರೆಗೂ ಪೈಪ್‌ಲೈನ್‌ಗಳನ್ನು ಪರಿಶೀಲಿಸಿ, ಒಳಚರಂಡಿ ತ್ಯಾಜ್ಯ ನೀರು ಸೇರದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

​15 ದಿನಗಳಲ್ಲಿ ಕೂಲಿ ಪಾವತಿಗೆ ಸೂಚನೆ:

​ಬೆಂಗಳೂರು, ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಉದ್ಯೋಗ ಖಾತರಿ ಮಾನವ ದಿನಗಳ ಸೃಜನೆ ಕಡಿಮೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ನಗರ-ಪಟ್ಟಣ ಭಾಗಗಳಲ್ಲೂ ಜನರಿಗೆ ಸ್ಥಳೀಯವಾಗಿ ಕೆಲಸ ನೀಡಿ ಗುಳೆ ಹೋಗುವುದನ್ನು ತಡೆಯಬೇಕು ಎಂದರು. ಕಾರ್ಮಿಕರಿಗೆ ಕೆಲಸ ಮುಗಿದ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಕೂಲಿ ಹಣ ಪಾವತಿಸಲು ಕ್ರಮ ಕೈಗೊಳ್ಳುವಂತೆ ಖಜಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

September 22, 2026

GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

September 22, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

September 22, 2026

GBA News | ​ಬೆಂಗಳೂರಿಗರಿಗೆ ‘ಇ-ಆಸ್ತಿ 2.0’ ಡಿಜಿಟಲ್ ಕೊಡುಗೆ; ಅಕ್ರಮ ಕಟ್ಟಡಗಳಿಗೆ ಆಯುಕ್ತರ ಚಾಟಿ

September 22, 2026

BW SPECIAL | ಖಜಾನೆ ಖಾಲಿ: ಬೆಂಗಳೂರಿನಲ್ಲಿ ಆಸ್ತಿ ಖಾತಾ, ತೆರಿಗೆಗೆ ‘ಸಾಫ್ಟ್‌ವೇರ್ ಶುಲ್ಕ’ ಬಾಸುಂಡೆ; ಕನ್ನಡಿಗರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ

September 21, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d