ಬೆಂಗಳೂರು, ಸೆ.15 www.bengaluruwire.com: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ 20 ಪಟ್ಟಣಗಳಲ್ಲಿ ಸಾಫ್ಟ್‌ವೇರ್ ಉನ್ನತೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಿನ 48 ಗಂಟೆಗಳ ಕಾಲ ಎಲ್ಲಾ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.
ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (IPDS) ಹಂತ-2ರ ಅಡಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಟಿಆರ್‌ಎಂ (Total Revenue Management) ವ್ಯವಸ್ಥೆಯನ್ನು ಹೊಸ ಐಟಿ ಅಪ್ಲಿಕೇಶನ್‌ಗೆ ಅಪ್‌ಗ್ರೇಡ್ ಮಾಡಲಾಗುತ್ತಿದೆ. ಈ ತಾಂತ್ರಿಕ ಬದಲಾವಣೆ ಮತ್ತು ದತ್ತಾಂಶ ವರ್ಗಾವಣೆ ಸಲುವಾಗಿ ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್‌ಲೈನ್ ಪೋರ್ಟಲ್ ಕಾರ್ಯನಿರ್ವಹಿಸುವುದಿಲ್ಲ ಎಂದು ಬೆಸ್ಕಾಂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ?:
ವಿದ್ಯುತ್ ಬಿಲ್ ಪಾವತಿ (Online Bill Payment)

ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ (New Connection)
ಹೆಸರು ವರ್ಗಾವಣೆ ಪ್ರಕ್ರಿಯೆ (Name Transfer)
ಲೋಡ್ ಹೆಚ್ಚಳಕ್ಕೆ ಮನವಿ (Load Enhancement)
ಸೇವೆ ಸ್ಥಗಿತಗೊಳ್ಳಲಿರುವ 20 ಪಟ್ಟಣಗಳು:
ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ.
ಹೊಸ ಐಟಿ ಅಪ್ಲಿಕೇಶನ್ ಅಳವಡಿಕೆ ಕಾರ್ಯವು ವ್ಯವಸ್ಥೆಯನ್ನು ಸುಧಾರಿಸಲು ಅನಿವಾರ್ಯವಾಗಿದ್ದು, ನಿಗದಿತ 20 ಪಟ್ಟಣಗಳ ಸಾರ್ವಜನಿಕರು ಈ ವ್ಯತ್ಯಯವನ್ನು ಗಮನಿಸಿ ಬೆಸ್ಕಾಂ ಜೊತೆ ಸಹಕರಿಸುವಂತೆ ಅಧಿಕಾರಿಗಳು ಕೋರಿದ್ದಾರೆ.




















