Saturday, October 3, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Revenue News | ಕರ್ನಾಟಕದಲ್ಲಿ ಜಮೀನು ಸರ್ವೆ ಶುಲ್ಕ ದಿಢೀರ್ ಹೆಚ್ಚಳ: ಇಲ್ಲಿದೆ ಹೊಸ ದರಗಳ ಮಾಹಿತಿ

    BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

    LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

    ಅರಬ್ಬೀ ಸಮುದ್ರದಲ್ಲಿ ಭರ್ಜರಿ ಬೇಟೆ: ₹3,000 ಕೋಟಿ ಮೌಲ್ಯದ ಡ್ರಗ್ಸ್ ವಶ, 5 ಪಾಕಿಸ್ತಾನಿ ಪ್ರಜೆಗಳ ಬಂಧನ

    ​ತುಂಗಭದ್ರಾ ಹಿನ್ನೀರಿನಿಂದ ಅಕ್ರಮವಾಗಿ ನೀರು ಕದಿಯುತ್ತಿರುವ ಉಕ್ಕು ಕಾರ್ಖಾನೆ ವೈರಲ್ ವಿಡಿಯೋ: ಅನ್ನದಾತರ ಆಕ್ರೋಶ!

    ಚೀನಾ ಬಾಹ್ಯಾಕಾಶ ನಿಲ್ದಾಣಕ್ಕೆ ಪಾಕ್ ಗಗನಯಾತ್ರಿ

    Video News | ಚಲಿಸುವ ಕಾರಿನ ಮೇಲೇರಿ 40 ಕಿ.ಮೀ ಸಾಹಸ: ತಮಿಳುನಾಡಿನಲ್ಲಿ ಗುಟ್ಕಾ ಕಳ್ಳಸಾಗಣೆದಾರರನ್ನು ಹಿಡಿದ ರಿಯಲ್ ‘ಸಿಂಗಂ’ ಕಾಪ್

    ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್‌ಗೆ ‘ಸಿಡಿಎಸ್ ಪ್ರಶಂಸನಾ ಪತ್ರ’ ಗೌರವ: ಭಾರತೀಯ ಸೇನೆಯಿಂದ ಎರಡನೇ ಸೇನಾ ಗೌರವ

  • Bengaluru Focus

    ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

    BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

    BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

    ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

by Bengaluru Wire Desk
August 17, 2026
in News Wire, Public interest
Reading Time: 1 min read
0

ಬೆಂಗಳೂರು, ಆ.17 www.bengaluruwire.com: ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜ್ಯಾದ್ಯಂತ ನಡೆಸುತ್ತಿರುವ ಆಹಾರ ಸುರಕ್ಷತಾ ತಪಾಸಣೆ ಮತ್ತು ಅವರ ಕಾರ್ಯವೈಖರಿಯನ್ನು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಶ್ಲಾಘಿಸಿದ್ದಾರೆ.

ಆರೋಗ್ಯ ಸೌಧದಲ್ಲಿ  ಸೋಮವಾರ ಅಧಿಕಾರಿಗಳ ಕಾರ್ಯವೈಖರಿ ಕುರಿತು ಉತ್ತೇಜನಾ ಕಾರ್ಯಕ್ರಮ ನಡೆಸಿ, ಬಳಿಕ ನಡೆದ ಪತ್ರಿಕಾಘೋಷ್ಠಿಯಲ್ಲಿ ಅವರು ಮಾತನಾಡಿ, ಈ ವಿಶೇಷ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.

ಸಾರ್ವಜನಿಕರು ಆಹಾರ ಹಾಗೂ ಔಷಧ ಸಂಬಂಧಿತ ದೂರುಗಳನ್ನು ಸುಲಭವಾಗಿ ದಾಖಲಿಸಲು ಅನುಕೂಲವಾಗುವಂತೆ ನೂತನ QR ಕೋಡ್ ಆಧಾರಿತ ದೂರು ನಿರ್ವಹಣಾ ವ್ಯವಸ್ಥೆಗೆ (IPGRS) ಇದೇ ವೇಳೆ ಸಚಿವರು ಚಾಲನೆ ನೀಡಿದರು.

​ವಿಶೇಷ ತಪಾಸಣೆ ಮತ್ತು ಮುಟ್ಟುಗೋಲು ಹಾಕಿಕೊಂಡ ಪ್ರಮುಖ ಸಾಮಾಗ್ರಿಗಳು

​ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಸರಣಿ ದಾಳಿಗಳು ಮತ್ತು ತಪಾಸಣೆಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:

​ಹಾಸ್ಟೆಲ್ ಹಾಗೂ ಅಂಗನವಾಡಿಗಳ ತಪಾಸಣೆ: ಹಿಂದುಳಿದ ವರ್ಗಗಳ 629 ಹಾಸ್ಟೆಲ್‌ಗಳಿಗೆ ಭೇಟಿ ನೀಡಿ 1,860 ಆಹಾರ ಮಾದರಿಗಳನ್ನು, ಹಾಗೂ ಸಮಾಜ ಕಲ್ಯಾಣ ಇಲಾಖೆಯ 331 ಹಾಸ್ಟೆಲ್‌ಗಳಿಂದ 556 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಲ್ಲದೆ, 603 ಅಂಗನವಾಡಿ ಕೇಂದ್ರಗಳಲ್ಲಿ ತಪಾಸಣೆ ನಡೆಸಿ 549 ಮಾದರಿಗಳನ್ನು ಸಂಗ್ರಹಿಸಲಾಗಿದೆ.

​ಬಸ್ ನಿಲ್ದಾಣ ಹಾಗೂ ಡಾಬಾ ದಾಳಿಗಳು: ರಾಜ್ಯದ 186 ಬಸ್ ನಿಲ್ದಾಣಗಳ 889 ಮಳಿಗೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅನೈರ್ಮಲ್ಯ ಕಂಡುಬಂದ 206 ಘಟಕಗಳಿಗೆ ನೋಟಿಸ್ ನೀಡಿ ಒಟ್ಟು ₹55,000 ದಂಡ ವಿಧಿಸಲಾಗಿದೆ. ಹಾಗೆಯೇ ಹೆದ್ದಾರಿಗಳ ಪಕ್ಕದ 99 ಡಾಬಾಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆಗಾಗಿ ₹3,67,500 ದಂಡ ವಸೂಲಿ ಮಾಡಲಾಗಿದೆ.

​ಅಸುರಕ್ಷಿತ ಶಾವರ್ಮಾ ಮತ್ತು ಕಬಾಬ್: ಶಾವರ್ಮಾ ಹಾಗೂ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮತ್ತು ಅನೈರ್ಮಲ್ಯದ ದೂರುಗಳ ಹಿನ್ನೆಲೆಯಲ್ಲಿ ಶಾವರ್ಮಾದ 41 ಹಾಗೂ ಕಬಾಬ್‌ನ 21 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯದ ವರದಿಯಂತೆ 9 ಶಾವರ್ಮಾ ಮತ್ತು 1 ಕಬಾಬ್ ಮಾದರಿಗಳು ಅಸುರಕ್ಷಿತ ಎಂದು ದೃಢಪಟ್ಟು ಕಾನೂನು ಕ್ರಮ ಜರುಗಿಸಲಾಗುತ್ತಿದೆ.

​ಪ್ರಮುಖ ಹೋಟೆಲ್‌ಗಳು ಹಾಗೂ ವಶಪಡಿಸಿಕೊಂಡ ಆಹಾರ ವಸ್ತುಗಳು: ಬೆಂಗಳೂರು ನಗರ ಸೇರಿದಂತೆ ವಿವಿಧೆಡೆಯ 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳು ಹಾಗೂ ಗೋದಾಮುಗಳಲ್ಲಿ ತಪಾಸಣೆ ನಡೆಸಿ, ಅವಧಿ ಮೀರಿದ ಮತ್ತು ಲೇಬಲ್ ಇಲ್ಲದ ಟನ್ ಗಟ್ಟಲೆ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

​378 ಕೆ.ಜಿ ಮಟನ್/ಚಿಕನ್ (ಲೇಬಲ್ ಇಲ್ಲದ ಮತ್ತು ಅವಧಿ ದಿನಾಂಕವಿಲ್ಲದ)

​203 ಕೆ.ಜಿ ಮೀನು

​200 ಕೆ.ಜಿ ಸಸ್ಯಾಹಾರಿ ಆಹಾರ (ಅತಿ ದೀರ್ಘಾವಧಿ ಮುಕ್ತಾಯ ದಿನಾಂಕ ಹಾಗೂ ಮಾಂಸಹಾರದೊಂದಿಗೆ ಸಂಗ್ರಹಿಸಿದ್ದು)

​45 ಲೀಟರ್ ಹಾಲು ಮತ್ತು ಮೊಸರು (ಅವಧಿ ಮೀರಿದವು)

​49 ಲೀಟರ್ ಬಳಸಿದ ಅಡುಗೆ ಎಣ್ಣೆ

​ಸಾರ್ವಜನಿಕರಿಗಾಗಿ ಕ್ಯೂಆರ್ ಕೋಡ್ (QR Code) ವ್ಯವಸ್ಥೆ:

​ಆಹಾರ ಮತ್ತು ಔಷಧಗಳಿಗೆ ಸಂಬಂಧಿಸಿದ ದೂರುಗಳನ್ನು ಗ್ರಾಹಕರು ನೇರವಾಗಿ ಮತ್ತು ಸುಲಭವಾಗಿ ಇಲಾಖೆಯ ಗಮನಕ್ಕೆ ತರಲು ಸೆಂಟರ್ ಫಾರ್ ಇ-ಗವರ್ನೆನ್ಸ್ (CeG) ಸಹಯೋಗದೊಂದಿಗೆ ನೂತನ QR ಕೋಡ್ ಆಧಾರಿತ ದೂರು ನಿರ್ವಹಣಾ ವ್ಯವಸ್ಥೆಯನ್ನು (IPGRS) ಜಾರಿಗೆ ತರಲಾಗಿದೆ.

​ಆಹಾರ ಸುರಕ್ಷತೆಗೆ ಸಂಬಂಧಿಸಿದ ದೂರುಗಳು: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೀದಿಬದಿ ಆಹಾರ ವ್ಯಾಪಾರಿಗಳಲ್ಲಿನ ಕಳಪೆ ನೈರ್ಮಲ್ಯ, ಆಹಾರದಲ್ಲಿ ಕೃತಕ ಬಣ್ಣಗಳ ಬಳಕೆ ಹಾಗೂ ಸೇವಾ ನ್ಯೂನತೆಗಳ ಕುರಿತು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ದಾಖಲಿಸಬಹುದು.

​ಔಷಧ ಸಂಬಂಧಿಸಿದ ದೂರುಗಳು: ಅಡ್ಡಪರಿಣಾಮಗಳು (ADR), ಔಷಧಿಗಳ ಅಧಿಕ ಬೆಲೆ ವಸೂಲಿ, ಅವಧಿ ಮೀರಿದ ಔಷಧಿಗಳ ಮಾರಾಟ ಹಾಗೂ ಫಾರ್ಮಸಿ ಸೇವಾ ದೂರುಗಳನ್ನು ಇದರ ಮೂಲಕ ತಿಳಿಸಬಹುದು.

​ಈ ವ್ಯವಸ್ಥೆಯು ಗ್ರಾಹಕರ ಸಕ್ರಿಯ ಭಾಗಿತ್ವವನ್ನು ಹೆಚ್ಚಿಸುವುದಲ್ಲದೆ, ನಿಯಂತ್ರಣ ಪ್ರಾಧಿಕಾರಗಳೊಂದಿಗೆ ಪಾರದರ್ಶಕತೆಯನ್ನು ತರಲಿದೆ ಎಂದು ಇಲಾಖೆ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಆಯುಕ್ತರಾದ ಶ್ರೀನಿವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

Next Post

Viral News | ಕಾಲುವೆ ಕೆಲಸದ ನಡುವೆ ಸಿಕ್ಕಿತು ಬರೋಬ್ಬರಿ 98 ಕೋಟಿ ರೂ. ಚಿನ್ನದ ನಿಧಿ: ಮುಂದೆ ನಡೆದಿದ್ದೇನು?

Next Post

Viral News | ಕಾಲುವೆ ಕೆಲಸದ ನಡುವೆ ಸಿಕ್ಕಿತು ಬರೋಬ್ಬರಿ 98 ಕೋಟಿ ರೂ. ಚಿನ್ನದ ನಿಧಿ: ಮುಂದೆ ನಡೆದಿದ್ದೇನು?

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

Please login to join discussion

Like Us on Facebook

Follow Us on Twitter

Recent News

ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

October 2, 2026

Revenue News | ಕರ್ನಾಟಕದಲ್ಲಿ ಜಮೀನು ಸರ್ವೆ ಶುಲ್ಕ ದಿಢೀರ್ ಹೆಚ್ಚಳ: ಇಲ್ಲಿದೆ ಹೊಸ ದರಗಳ ಮಾಹಿತಿ

October 2, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

October 2, 2026

Revenue News | ಕರ್ನಾಟಕದಲ್ಲಿ ಜಮೀನು ಸರ್ವೆ ಶುಲ್ಕ ದಿಢೀರ್ ಹೆಚ್ಚಳ: ಇಲ್ಲಿದೆ ಹೊಸ ದರಗಳ ಮಾಹಿತಿ

October 2, 2026

BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

October 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d