Tuesday, September 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ​ತುಂಗಭದ್ರಾ ಹಿನ್ನೀರಿನಿಂದ ಅಕ್ರಮವಾಗಿ ನೀರು ಕದಿಯುತ್ತಿರುವ ಉಕ್ಕು ಕಾರ್ಖಾನೆ ವೈರಲ್ ವಿಡಿಯೋ: ಅನ್ನದಾತರ ಆಕ್ರೋಶ!

    ಚೀನಾ ಬಾಹ್ಯಾಕಾಶ ನಿಲ್ದಾಣಕ್ಕೆ ಪಾಕ್ ಗಗನಯಾತ್ರಿ

    Video News | ಚಲಿಸುವ ಕಾರಿನ ಮೇಲೇರಿ 40 ಕಿ.ಮೀ ಸಾಹಸ: ತಮಿಳುನಾಡಿನಲ್ಲಿ ಗುಟ್ಕಾ ಕಳ್ಳಸಾಗಣೆದಾರರನ್ನು ಹಿಡಿದ ರಿಯಲ್ ‘ಸಿಂಗಂ’ ಕಾಪ್

    ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್‌ಗೆ ‘ಸಿಡಿಎಸ್ ಪ್ರಶಂಸನಾ ಪತ್ರ’ ಗೌರವ: ಭಾರತೀಯ ಸೇನೆಯಿಂದ ಎರಡನೇ ಸೇನಾ ಗೌರವ

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಸೌಜನ್ಯ ಪ್ರಕರಣ: ಮರುತನಿಖೆಗೆ ರಾಜ್ಯ ಸರ್ಕಾರದಿಂದ ಎಸ್‌ಐಟಿ ರಚನೆ

    ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ರಿಲೀಫ್: ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಇಳಿಸಿದ ಕೇಂದ್ರ ಸರ್ಕಾರ

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಕಸ್ತೂರಿ ರಂಗನ್ ವರದಿ: ಗ್ರಾಮ ಮಟ್ಟದಲ್ಲಿ ಭೌತಿಕ ಸರ್ವೇಗೆ ಕೇಂದ್ರಕ್ಕೆ 1 ವರ್ಷ ಕಾಲಾವಕಾಶ ಕೋರಿಕೆ; ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

  • Bengaluru Focus

    BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

    BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

    ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

    GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

    IAS Transfer | ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಡಿಸಿಎಂ ಕಾರ್ಯದರ್ಶಿಯಾಗಿ ರಾಕೇಶ್ ಕುಮಾರ್ ನಿಯೋಜನೆ

    ಬೆಂಗಳೂರಿನ 135 ಕೆರೆಗಳಿಗೆ ಮರುಜೀವ: 7 ಜಿಲ್ಲೆಗಳ 500 ಕೆರೆ ಅಭಿವೃದ್ಧಿಗೆ ₹150 ಕೋಟಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

ಹೊಸ ಮೀಟರ್ ಅಳವಡಿಕೆ ಹೆಸರಲ್ಲಿ ಗ್ರಾಹಕರ ಜೇಬಿಗೆ ಕನ್ನ; ಪೈಪ್‌ನಲ್ಲಿ ಹರಿಯುವ ಗಾಳಿಗೆ ಗಿರಗಿರ ತಿರುಗುವ ಮೀಟರ್, ದುಪ್ಪಟ್ಟು ಬಿಲ್‌ಗೆ ಬೆಚ್ಚಿಬಿದ್ದ ಬೆಂಗಳೂರಿಗರು.

by Bengaluru Wire Desk
September 29, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಸೆ.29 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾರ್ಯವೈಖರಿ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. 

ಮನೆಯ ಸಂಪಿನಲ್ಲಿ ಹನಿ ನೀರೂ ಬೀಳದಿದ್ದರೂ, ಪೈಪ್‌ಲೈನ್‌ನಲ್ಲಿ ಬರುವ ಗಾಳಿಯ ರಭಸಕ್ಕೆ ವಾಟರ್ ಮೀಟರ್ ಗಿರಗಿರನೆ ತಿರುಗುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್)ನಲ್ಲಿ ವೈರಲ್ ಆಗಿದೆ. ಬರದ ಹೊಡೆತ ಹಾಗೂ ನೀರಿನ ಅಭಾವದಿಂದ ತತ್ತರಿಸಿರುವ ಬೆಂಗಳೂರಿಗರಿಗೆ, ಈಗ ಜಲಮಂಡಳಿ ಪೈಪಿನಲ್ಲಿ ಹರಿಯುವ ‘ಬರೀ ಗಾಳಿಗೂ’ ಮೀಟರ್ ರೀಡಿಂಗ್ ಎತ್ತಿ ಬಿಲ್ ವಸೂಲಿ ಮಾಡುತ್ತಿದೆ ಎಂಬ ಆಕ್ರೋಶದ ಕೂಗು ವ್ಯಾಪಕವಾಗಿದೆ.

ಏನಿದು ಘಟನೆ? ವಿಡಿಯೋದಲ್ಲೇನಿದೆ?:

ಬೆಂಗಳೂರಿನ ಶ್ರೀನಗರದ ಜಲ್ಗೇರಮ್ಮ ದೇವಸ್ಥಾನದ 2ನೇ ಕ್ರಾಸ್ ರಸ್ತೆಯ ನಿವಾಸಿಯೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ, ಜಲಮಂಡಳಿಯ ಎಡವಟ್ಟು ಬಟಾಬಯಲಾಗಿದೆ. ಮನೆಗೆ ಸಂಪರ್ಕ ಕಲ್ಪಿಸಿರುವ ಕಾವೇರಿ ನೀರಿನ ಪೈಪ್‌ನಲ್ಲಿ ನೀರು ಸಂಪೂರ್ಣವಾಗಿ ಶೂನ್ಯವಾಗಿದೆ. ಪೈಪ್‌ನಿಂದ ಕೇವಲ ಗಾಳಿಯ ಸದ್ದು ಬರುತ್ತಿದೆ. ಆದರೆ ಆಶ್ಚರ್ಯವೆಂದರೆ, ಮನೆಯ ಹೊರಗಡೆ ಅಳವಡಿಸಿರುವ ಹೊಸ ಕೊನಾರ್ಕ್ (KONARAK) ವಾಟರ್ ಮೀಟರ್ ಮಾತ್ರ ನೀರಿನ ಹರಿವಿಗಿಂತಲೂ ಅತಿ ವೇಗವಾಗಿ ಗಿರಗಿರನೆ ತಿರುಗುತ್ತಿದೆ! ವಾಲ್ವ್ ಆಫ್ ಮಾಡಿದಾಗ ಮಾತ್ರ ನಿಲ್ಲುವ ಮೀಟರ್, ಆನ್ ಮಾಡಿದ ತಕ್ಷಣವೇ ಗಾಳಿಯ ಒತ್ತಡಕ್ಕೇ ಯದ್ವಾತದ್ವಾ ಓಡುತ್ತಿದೆ.

ಹೊಸ ಮೀಟರ್ ಬದಲಾವಣೆ ಹಿಂದಿನ ಅಸಲಿ ಮರ್ಮವೇನು?:

ಸ್ಥಳೀಯ ನಿವಾಸಿಗಳ ಪ್ರಕಾರ, ಕಳೆದ 6-7 ತಿಂಗಳ ಹಿಂದೆ ಜಲಮಂಡಳಿಯು ಪೈಪ್‌ಲೈನ್ ಅಪ್‌ಗ್ರೇಡ್ ನೆಪದಲ್ಲಿ ರಸ್ತೆ ಅಗೆದು ಹಳೇ ಪೈಪ್ ಹಾಗೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಮೀಟರ್‌ಗಳನ್ನು ಕಿತ್ತುಹಾಕಿ, ಈ ಹೊಸ ಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಿದೆ. ಈ ಹಿಂದೆ ತಿಂಗಳಿಗೆ ಕೇವಲ ₹250 ರಿಂದ ₹300 ಬರುತ್ತಿದ್ದ ನೀರಿನ ಬಿಲ್, ಈ ಹೊಸ ಮೀಟರ್ ಬಂದಾಗಿನಿಂದ ಏಕಾಏಕಿ ₹800 ದಾಟುತ್ತಿದೆ ಎಂದು ಗ್ರಾಹಕರು ಅಲವತ್ತುಕೊಂಡಿದ್ದಾರೆ. 

ಅಂದರೆ, ಪೈಪ್‌ನಲ್ಲಿ ನೀರು ಸರಬರಾಜು ಇಲ್ಲದಿದ್ದಾಗ ಲೈನ್‌ಗಳಲ್ಲಿ ನಿರ್ಮಾಣವಾಗುವ ಹೈ-ಪ್ರೆಶರ್ ಗಾಳಿಯೇ ಮೀಟರ್ ಡಯಲ್‌ಗಳನ್ನು ತಿರುಗಿಸುತ್ತಿದ್ದು, ನೀರೇ ಇಲ್ಲದಿದ್ದರೂ ಸಾವಿರಾರು ರೂಪಾಯಿ ಬಿಲ್ ಸಾರ್ವಜನಿಕರ ತಲೆಮೇಲೆ ಬೀಳುತ್ತಿದೆ.

ನೆಟ್ಟಿಗರ ಹಾಗೂ ಸಾರ್ವಜನಿಕರ ಖಡಕ್ ಆಕ್ರೋಶ:

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS Party) ತನ್ನ ಅಧಿಕೃತ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಜಲಮಂಡಳಿ ಮತ್ತು ಆಡಳಿತ ಯಂತ್ರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ:

ಗಾಳಿಗೂ ಟ್ಯಾಕ್ಸ್: “ಬೆಂಗಳೂರಿನಲ್ಲಿ ಇನ್ಮುಂದೆ ಉಸಿರಾಡುವ ಗಾಳಿಗೂ ಮೀಟರ್ ಹಾಕಿ ಬಿಲ್ ಮಾಡಿದ್ರೂ ಆಶ್ಚರ್ಯವಿಲ್ಲ! ನೀರು ಕೊಡೋ ಯೋಗ್ಯತೆ ಇಲ್ಲ, ಆದ್ರೆ ಗಾಳಿಗೆ ಮೀಟರ್ ಓಡಿಸಿ ಲೂಟಿ ಮಾಡ್ತಿದ್ದಾರೆ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ತಾಂತ್ರಿಕ ವಂಚನೆ (ಏರ್ ರಿಲೀಸ್ ವಾಲ್ವ್ ಕೊರತೆ): ಪೈಪ್‌ಲೈನ್‌ಗಳಲ್ಲಿ ಏರ್ ರಿಲೀಸ್ ವಾಲ್ವ್ (Air Release Valve) ಅಥವಾ ನಾನ್-ರಿಟರ್ನ್ ವಾಲ್ವ್ ಅಳವಡಿಸದೆ ನೇರವಾಗಿ ಕಡಿಮೆ ದರ್ಜೆಯ ಮೀಟರ್‌ಗಳನ್ನು ಜನರಿಗೆ ಗಿಫ್ಟ್ ಕೊಟ್ಟರೆ ಹೀಗೇ ಆಗುವುದು. ತಾಂತ್ರಿಕ ನ್ಯೂನತೆಯನ್ನು ಮುಚ್ಚಿಟ್ಟು ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

ಕಮಿಷನ್ ದಂಧೆ ಶಂಕೆ: ಸುಸ್ಥಿತಿಯಲ್ಲಿದ್ದ ಹಳೇ ಮೀಟರ್‌ಗಳನ್ನು ಏಕಾಏಕಿ ಬದಲಾಯಿಸಿ, ಅವಸರವಸರವಾಗಿ ಇಂತಹ ಹೊಸ ಮೀಟರ್ ಹಾಕಿದ್ದರ ಹಿಂದೆ ಮೀಟರ್ ತಯಾರಕ ಕಂಪನಿ ಮತ್ತು ಅಧಿಕಾರಿಗಳ ಜುಗಲ್‌ಬಂದಿ ಇದೆಯೇ ಎಂಬ ಅನುಮಾನಗಳನ್ನು ಬಳಕೆದಾರರು ಎತ್ತಿದ್ದಾರೆ.

ತಕ್ಷಣವೇ ತನಿಖೆಗೆ ಆಗ್ರಹ:

ಇದು ಕೇವಲ ಶ್ರೀನಗರದ ಒಬ್ಬ ಗ್ರಾಹಕನ ಸಮಸ್ಯೆಯಲ್ಲ, ನಗರದ ಹಲವೆಡೆ ಹೊಸ ಮೀಟರ್ ಅಳವಡಿಸಿಕೊಂಡಿರುವ ಬಹುತೇಕ ಬಡಾವಣೆಗಳಲ್ಲಿ ಇದೇ ಗೋಳು ಕೇಳಿಬರುತ್ತಿದೆ. ಬೆಂಗಳೂರು ಜಲಮಂಡಳಿ (BWSSB) ಉನ್ನತ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಇಂತಹ ತಾಂತ್ರಿಕ ಲೋಪವಿರುವ ಮೀಟರ್‌ಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಗಾಳಿಗೆ ಬಿಲ್ ಹಾಕುವುದನ್ನು ನಿಲ್ಲಿಸಿ, ಹೆಚ್ಚುವರಿಯಾಗಿ ವಸೂಲಿ ಮಾಡಿದ ಮೊತ್ತವನ್ನು ಗ್ರಾಹಕರ ಬಿಲ್‌ನಲ್ಲಿ ಮರುಹೊಂದಾಣಿಕೆ ಮಾಡದಿದ್ದರೆ ಬೀದಿಗಿಳಿದು ಪ್ರತಿಭಟಿಸುವುದು ಅನಿವಾರ್ಯ ಎಂಬ ಎಚ್ಚರಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. Video News: https://www.instagram.com/reel/Dd3ehCAIMDE/?stkn=MW43dmJ3d2txNWtheQ==

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

Please login to join discussion

Like Us on Facebook

Follow Us on Twitter

Recent News

BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

September 29, 2026

BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

September 29, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

September 29, 2026

BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

September 29, 2026

​ತುಂಗಭದ್ರಾ ಹಿನ್ನೀರಿನಿಂದ ಅಕ್ರಮವಾಗಿ ನೀರು ಕದಿಯುತ್ತಿರುವ ಉಕ್ಕು ಕಾರ್ಖಾನೆ ವೈರಲ್ ವಿಡಿಯೋ: ಅನ್ನದಾತರ ಆಕ್ರೋಶ!

September 28, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d