Thursday, October 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

    LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

    ಅರಬ್ಬೀ ಸಮುದ್ರದಲ್ಲಿ ಭರ್ಜರಿ ಬೇಟೆ: ₹3,000 ಕೋಟಿ ಮೌಲ್ಯದ ಡ್ರಗ್ಸ್ ವಶ, 5 ಪಾಕಿಸ್ತಾನಿ ಪ್ರಜೆಗಳ ಬಂಧನ

    ​ತುಂಗಭದ್ರಾ ಹಿನ್ನೀರಿನಿಂದ ಅಕ್ರಮವಾಗಿ ನೀರು ಕದಿಯುತ್ತಿರುವ ಉಕ್ಕು ಕಾರ್ಖಾನೆ ವೈರಲ್ ವಿಡಿಯೋ: ಅನ್ನದಾತರ ಆಕ್ರೋಶ!

    ಚೀನಾ ಬಾಹ್ಯಾಕಾಶ ನಿಲ್ದಾಣಕ್ಕೆ ಪಾಕ್ ಗಗನಯಾತ್ರಿ

    Video News | ಚಲಿಸುವ ಕಾರಿನ ಮೇಲೇರಿ 40 ಕಿ.ಮೀ ಸಾಹಸ: ತಮಿಳುನಾಡಿನಲ್ಲಿ ಗುಟ್ಕಾ ಕಳ್ಳಸಾಗಣೆದಾರರನ್ನು ಹಿಡಿದ ರಿಯಲ್ ‘ಸಿಂಗಂ’ ಕಾಪ್

    ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್‌ಗೆ ‘ಸಿಡಿಎಸ್ ಪ್ರಶಂಸನಾ ಪತ್ರ’ ಗೌರವ: ಭಾರತೀಯ ಸೇನೆಯಿಂದ ಎರಡನೇ ಸೇನಾ ಗೌರವ

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಸೌಜನ್ಯ ಪ್ರಕರಣ: ಮರುತನಿಖೆಗೆ ರಾಜ್ಯ ಸರ್ಕಾರದಿಂದ ಎಸ್‌ಐಟಿ ರಚನೆ

  • Bengaluru Focus

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

    LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

    BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

    BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

    ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    ಶಿಕ್ಷಕರನ್ನು ಎಸ್ಐಆರ್ ಕಾರ್ಯದಿಂದ ಮುಕ್ತಗೊಳಿಸಿ: ಚುನಾವಣಾ ಆಯೋಗದ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿ

    ಕಸದ ಗಾಡಿ ಮನೆ ಬಾಗಿಲಿಗೆ ಬರುವಂತೆ ಮಾಡುವುದು ನನ್ನ ಜವಾಬ್ದಾರಿ: ಕೃಷ್ಣ ಬೈರೇಗೌಡ

    GBA News | ಲಾಲ್‌ಬಾಗ್ ಎದುರು ನಂದಿನಿ ಮಳಿಗೆ ಅಕ್ರಮ: ಕಾನೂನು ಸಮರ ನಡೆಸುವುದಾಗಿ ಎನ್‌ಆರ್‌ ರಮೇಶ್ ಎಚ್ಚರಿಕೆ

    STUDY REPORT | ಬೆಂಗಳೂರು ಸಂಚಾರ ನರಕ: ಶಾಲಾ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ನಗರದ ರಸ್ತೆಗಳು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

​ಗೋಲ್ಡ್ ಸ್ಮಗ್ಲಿಂಗ್ ಜಾಲಕ್ಕೆ ಕಸ್ಟಮ್ಸ್ ಬಿಗ್ ಶಾಕ್; ನಾಲ್ವರು ಆರೋಪಿಗಳಿಗೆ ಬರೋಬ್ಬರಿ ₹244 ಕೋಟಿ ದಂಡ

by Bengaluru Wire Desk
October 1, 2026
in Bengaluru Focus, News Wire
Reading Time: 1 min read
0

​​ಬೆಂಗಳೂರು, ಅ.01 www.bengaluruwire.com: ಅಕ್ರಮ ಚಿನ್ನ ಸಾಗಾಟ (ಗೋಲ್ಡ್ ಸ್ಮಗ್ಲಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ಭಾರೀ ಶಾಕ್ ನೀಡಿದ್ದು, ಬರೋಬ್ಬರಿ ₹89 ಕೋಟಿ  ದಂಡ ವಿಧಿಸಿ ಅಧಿಕೃತ ಆದೇಶ ಹೊರಡಿಸಿದೆ. 

ಕಸ್ಟಮ್ಸ್ ಇಲಾಖೆಯ ಜಂಟಿ ನಿರ್ದೇಶಕ ಸಂದೀಪ್ ಅವರು ಈ ಸಂಬಂಧ 399 ಪುಟಗಳ ವಿಸ್ತೃತ ಆದೇಶ ಹೊರಡಿಸಿದ್ದು, ದಂಡ ಪಾವತಿಸುವಂತೆ ನಟಿಗೆ ನೋಟಿಸ್ ಜಾರಿ ಮಾಡಿದ್ದಾರೆ.

​2024ರ ಮಾರ್ಚ್ 7 ರಿಂದ 2025ರ ಫೆಬ್ರವರಿವರೆಗಿನ ಒಂದು ವರ್ಷದ ಅವಧಿಯಲ್ಲಿ ಸುಮಾರು 113 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಕೃತ್ಯದಲ್ಲಿ ನಟಿಯ ನೇರ ಭಾಗಿಯಾಗುವಿಕೆ ತನಿಖೆಯಿಂದ ಸಾಬೀತಾಗಿದೆ. ಪ್ರಕರಣದಲ್ಲಿ ಭಾಗಿಯಾದ ನಟಿ ರನ್ಯಾ ರಾವ್ ಸೇರಿದಂತೆ ಉಳಿದ ಮೂವರು ಸಹ ಆರೋಪಿಗಳಿಗೆ ಕಸ್ಟಮ್ಸ್ ಅಧಿಕಾರಿಗಳು ಒಟ್ಟಾರೆಯಾಗಿ ₹244 ಕೋಟಿಗೂ ಅಧಿಕ ಮೊತ್ತದ ಭಾರೀ ದಂಡ ವಿಧಿಸಿದ್ದಾರೆ.

​ಆರೋಪಿಗಳಿಗೆ ವಿಧಿಸಲಾದ ದಂಡದ ವಿವರ:

​ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ಪಾತ್ರ ಮತ್ತು ಅಕ್ರಮ ವಹಿವಾಟಿನ ಪ್ರಮಾಣವನ್ನು ಆಧರಿಸಿ ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು ಹೊರಡಿಸಿರುವ ಆದೇಶದಂತೆ ದಂಡದ ವಿವರ ಹೀಗಿದೆ:

​ನಟಿ ರನ್ಯಾ ರಾವ್: ₹89,00,00,000 (89 ಕೋಟಿ ರೂ.)

​ಸಾಹಿಲ್ ಜೈನ್: ₹53,06,60,430 (ಸುಮಾರು 53.06 ಕೋಟಿ ರೂ.)

​ಭರತ್ ಕುಮಾರ್ ಜೈನ್: ₹53,06,60,430 (ಸುಮಾರು 53.06 ಕೋಟಿ ರೂ.)

​ತರುಣ್ ಕೊಂಡಾರು ರಾಜು: ₹49,51,65,230 (ಸುಮಾರು 49.51 ಕೋಟಿ ರೂ.)

​ಪ್ರಕರಣದ ಹಿನ್ನೆಲೆ: ದುಬೈ ನೆಪದಲ್ಲಿ ನಡೆಯುತ್ತಿತ್ತು ದಂಧೆ:

​ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಬಳಿಕ ನಟಿ ರನ್ಯಾ ರಾವ್, ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ದು, ಉದ್ಯಮದ ನೆಪವೊಡ್ಡಿ ನಿರಂತರವಾಗಿ ದುಬೈಗೆ ಓಡಾಡುತ್ತಿದ್ದರು. ಇವರ ಅನುಮಾನಾಸ್ಪದ ಚಲನವಲನಗಳ ಮೇಲೆ ಕಸ್ಟಮ್ಸ್ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರು.

​2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿದ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 14.213 ಕೆಜಿ ಅಕ್ರಮ ಚಿನ್ನ ಪತ್ತೆಯಾಗಿತ್ತು. ಕೂಡಲೇ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

​ಕಾಫಿಪೋಸಾ ಅಡಿ ಜೈಲು ವಾಸ, ₹102 ಕೋಟಿ ಮೌಲ್ಯದ ಚಿನ್ನದ ಜಾಲ:

​ಪ್ರಕರಣದ ತನಿಖೆ ಮುಂದುವರಿದಂತೆ, ನಟಿ ರನ್ಯಾ ರಾವ್ ಒಟ್ಟಾರೆಯಾಗಿ 102 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರಿ ಪ್ರಮಾಣದ ಚಿನ್ನವನ್ನು ಸಹಚರರ ಜೊತೆಗೂಡಿ ಭಾರತಕ್ಕೆ ತಂದಿರುವ ಆಘಾತಕಾರಿ ಸತ್ಯಗಳು ಹೊರಬಂದವು.

​ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ, ಪ್ರಕರಣದ ಗಂಭೀರತೆ ಪರಿಗಣಿಸಿ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (CEIB) ರನ್ಯಾ ರಾವ್ ವಿರುದ್ಧ ಕಾಫಿಪೋಸಾ (COFEPOSA) ಕಾಯ್ದೆ ಸೆಕ್ಷನ್ 3(1) ಅಡಿ ಮುನ್ನೆಚ್ಚರಿಕೆ ಬಂಧನದ ಆದೇಶ ಹೊರಡಿಸಿತು. ಇದರಿಂದಾಗಿ ಅವರು ಬರೋಬ್ಬರಿ ಒಂದು ವರ್ಷ ಜಾಮೀನು ರಹಿತವಾಗಿ ಜೈಲಿನಲ್ಲೇ ಉಳಿಯಬೇಕಾಯಿತು. ನಂತರ 2026ರ ಏಪ್ರಿಲ್ 22ರಂದು ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಕಸ್ಟಮ್ಸ್ ಇಲಾಖೆ ವಿಧಿಸಿರುವ ₹89 ಕೋಟಿ ದಂಡವು ಅಕ್ರಮ ಚಿನ್ನ ಸಾಗಾಟ ಜಾಲಕ್ಕೆ ಬಿದ್ದ ಬೃಹತ್ ಹೊಡೆತವಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

Please login to join discussion

Like Us on Facebook

Follow Us on Twitter

Recent News

ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

October 1, 2026

LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

October 1, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

October 1, 2026

LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

October 1, 2026

ಅರಬ್ಬೀ ಸಮುದ್ರದಲ್ಲಿ ಭರ್ಜರಿ ಬೇಟೆ: ₹3,000 ಕೋಟಿ ಮೌಲ್ಯದ ಡ್ರಗ್ಸ್ ವಶ, 5 ಪಾಕಿಸ್ತಾನಿ ಪ್ರಜೆಗಳ ಬಂಧನ

September 30, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d