Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | ಇಲ್ಲಿ ಮೂಗು ಮುಚ್ಚಿ ತಿಂಡಿ ತಿನ್ನಿ!! ಇದು ವಿವಿ ಪುರಂ Food Street : ಅವ್ಯವಸ್ಥೆಯ ಅಗರವಾಗಿದೆ ನವೀಕರಣವಾದ ತಿಂಡಿ ಬೀದಿ

ಬಿಬಿಎಂಪಿ 6 ಕೋಟಿ ರೂ. ಕರ್ಚು ಮಾಡಿ‌ ನವೀಕರಿಸಿದ ವಿವಿಪುರಂ ತಿಂಡಿ ಬೀದಿ ಪಾದಾಚಾರಿ ಮಾರ್ಗ ಒತ್ತುವರಿ ಸಮಸ್ಯೆ, ಸ್ವಚ್ಛತೆಯ ಕೊರತೆ, ಕಸದ ಸಮಸ್ಯೆಯಿಂದ ನರಳುತ್ತಿದೆ. ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರ ನಿರ್ಲಕ್ಷ್ಯ, ಜನರ ಆರೋಗ್ಯದ ಬಗ್ಗೆ ಇಲ್ಲಿ ಕೇಳುವವರೇ ಇಲ್ಲ ಎಂಬ ಗಂಭೀರ ಆರೋಪವಿದೆ.

by Bengaluru Wire Desk
January 2, 2025
in Bengaluru Focus, BW Special, Public interest
Reading Time: 2 mins read
0
ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿನ ತಿಂಡಿ ಬೀದಿಯ ಪಾದಚಾರಿ ಮಾರ್ಗವನ್ನು ಅಂಗಡಿ, ತಳ್ಳುಗಾಡಿಗಳು ಒತ್ತುವರಿ ಮಾಡಿಕೊಂಡಿರುವ ಚಿತ್ರ ಒಂದು ಕಡೆ. ಮತ್ತೊಂದು ಕಡೆ ಕಸ, ಆಹಾರದ ತಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಚಿತ್ರ.

ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿನ ತಿಂಡಿ ಬೀದಿಯ ಪಾದಚಾರಿ ಮಾರ್ಗವನ್ನು ಅಂಗಡಿ, ತಳ್ಳುಗಾಡಿಗಳು ಒತ್ತುವರಿ ಮಾಡಿಕೊಂಡಿರುವ ಚಿತ್ರ ಒಂದು ಕಡೆ. ಮತ್ತೊಂದು ಕಡೆ ಕಸ, ಆಹಾರದ ತಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದಿರುವ ಚಿತ್ರ.

ಬೆಂಗಳೂರು, ಜ.02 www.bengaluruwire.com : ನಗರದ ಅತಿ ಹಳೆಯ ಪ್ರದೇಶಗಳಲ್ಲೊಂದಾದ ಸಜ್ಜನರಾವ್ ಸರ್ಕಲ್ ಬಳಿಯ ವಿವಿಪುರಂ ತಿಂಡಿ ಬೀದಿ (VV Puram  Food Street)ಯ ಫುಟ್ ಪಾತ್ ಹಾಗೂ ರಸ್ತೆಯನ್ನು ಸ್ಥಳೀಯ ಪ್ರದೇಶಕ್ಕೆ ಹೊಂದಿಕೊಳ್ಳುವಂತೆ ಬಿಬಿಎಂಪಿಯು ಕೋಟ್ಯಾಂತರ ರೂ. ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದೇ ಬಂತು. ಆ ಇಡೀ ರಸ್ತೆ, ಫುಟ್ ಪಾತ್ ಒತ್ತುವರಿ, ಸ್ವಚ್ಛತೆಯ ಕೊರತೆ ಹಾಗೂ ಕಸದ ಕೊಂಪೆಯಿಂದ ನಾರುತ್ತಿದೆ.

ನಗರದ ಫುಡ್‌ ಸ್ಟ್ರೀಟ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ವಿವಿ ಪುರಂ ತಿಂಡಿ ಬೀದಿಯಲ್ಲಿ ಒಟ್ಟು 30ಕ್ಕೂ ಹೆಚ್ಚು ಹೋಟೆಲ್, ಮಳಿಗೆಗಳಿವೆ. ಹಾಗೂ ಹಲವು ತಳ್ಳುಗಾಡಿಗಳಲ್ಲೂ ತಿಂಡಿ ತಿನಿಸು ಮಾರುತ್ತಾರೆ. ಇಲ್ಲಿನ ರಸ್ತೆಯು ಸಂಜೆ 6 ಗಂಟೆಯ ನಂತರ ಜನರಿಂದ ತುಂಬಿ ಹೋಗುತ್ತದೆ. ರಾತ್ರಿ 11 ಗಂಟೆಯ ತನಕವೂ ರಷ್ ಕಮ್ಮಿಯಾಗಲ್ಲ. ಆ ರಸ್ತೆ ಹಾಗೂ ಫುಟ್ ಪಾತ್ ಗಳನ್ನು ಅಲ್ಲಿನ ಆಹಾರ- ತಿಂಡಿ ಮಾಡುವ ಅಂಗಡಿಗಳೇ ಪೂರ್ತಿಯಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

ಗ್ರಾಹಕರಿಗೆ ಸೂಕ್ತ ರೀತಿ ವ್ಯವಸ್ಥೆ ಕಲ್ಪಿಸದ ವ್ಯಾಪಾರಿಗಳು :

ಗ್ರಾಹಕರಿಗೆ ಸೂಕ್ತ ರೀತಿ ಶುದ್ಧ ಕುಡಿಯುವ ನೀರು, ಕೈತೊಳೆಯಲು ಬೇಸಿನ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿಗೆ ಬರುವ ಗ್ರಾಹಕರು ರಸ್ತೆಯ ಬದಿ ನೀರು ಹರಿದು ಹೋಗಲು ಹಾಕಿದ ಮೋರಿ ಜಾಲರಿ ಬಳಿಯೇ ಕೈತೊಳೆಯುವಂತಾಗಿದೆ. ಆಹಾರ ಮಳಿಗೆಗಳು ಮತ್ತು ಮಾರಾಟಗಾರರಿಂದ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೆ ರಸ್ತೆಗಳಲ್ಲೇ ಸುರಿಯುತ್ತಿದ್ದು, ಸೊಳ್ಳೆ, ಜಿರಳೆ ಹಾಗೂ ಇಲಿಗಳ ಕಾಟ ಹೆಚ್ಚಾಗಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.

ಸರ್ಕಸ್ ಮಾಡಿಕೊಂಡು ತಿಂಡಿ ತಿನ್ನುವ ಪರಿಸ್ಥಿತಿ :

ಕಸ ಹಾಕಲು ಸೂಕ್ತ ಡಬ್ಬವಿಡದ ಕಾರಣ ರಸ್ತೆ ಬದಿಯಲ್ಲೇ ತಿಂದುಳಿದ ಆಹಾರ, ತಟ್ಟೆ, ಲೋಟವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ದೋಸೆ, ಇಡ್ಲಿ, ಪಡ್ಡು, ಹೋಳಿಗೆ, ಪಾನಿಪುರಿ, ಪಾವ್‌ಬಾಜಿ ಮೊದಲಾದ ತಿನಿಸುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಫುಟ್ ಪಾತ್ ಒತ್ತುವರಿ ಮಾಡಿರುವ ಕಾರಣ ಇಲ್ಲಿಗೆ ತಿಂಡಿ-ತಿನಿಸು ತಿನ್ನಲು ಬರುವವರು ರಸ್ತೆಯಲ್ಲಿ ನಿಂತೇ ಆಹಾರ ಸವಿಯುವ ದುಸ್ಥಿತಿಯಿದೆ. ಅವರೇಬೇಳೆ ಮೇಳದ ಸಂದರ್ಭದಲ್ಲಂತೂ ಗ್ರಾಹಕರು ಸರ್ಕಸ್ ಮಾಡಿಕೊಂಡು ತಿಂಡಿ ತಿನ್ನುವ ಪರಿಸ್ಥಿತಿಯಿದೆ. ಫುಟ್ ಪಾತ್ ಒತ್ತುವರಿಯಾದ ಕಾರಣ ಜನರು ಜಾಲರಿ ಹಾಕಿದ ಮೋರಿ ಬದಿಯಿಂದ ಬರುವ ಕೊಳಕು ವಾಸನೆ ಮಧ್ಯೆಯೇ ಆಹಾರ ಸೇವಿಸುವಂತಹ ವಾತಾವರಣವಿದೆ. ಇಂತಹ ಕಡೆಗಳಲ್ಲಿ ಮೂಗು ಮುಚ್ಚಿಕೊಂಡು ಗ್ರಾಹಕರು ಆಹಾರ ಸೇವಿಸುತ್ತಾರೆ.

ನೂತನವಾಗಿ ಅಭಿವೃದ್ಧಿಗೊಂಡ ವಿವಿ ಪುರಂ ತಿಂಡಿ ಬೀದಿಯ ರಸ್ತೆಯಲ್ಲಿ ಅಳವಡಿಸಿರುವ ಜಾಲರಿಯಲ್ಲಿ ಕಸ ತುಂಬಿಕೊಂಡಿರುವ ಚಿತ್ರ.

ಎಲ್ಲೆಂದರಲ್ಲಿ ಕಸ ; ಸ್ವಚ್ಛತೆಯ ಕೊರತೆ, ಒತ್ತುವರಿ ಸಮಸ್ಯೆ :

ಎಲ್ಲೆಂದರಲ್ಲಿ ಕಸ ಬೀಳುತ್ತಿರುವುದರಿಂದ ನೀರು ಸರಾಗವಾಗಿ ಹೋಗಲು ರಸ್ತೆಯಲ್ಲಿ ಅಳವಡಿಸಿರುವ ಜಾಲರಿ ಕೂಡ ಕಸ ಸಿಲುಕಿಕೊಂಡು, ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಮಸ್ಯೆಯಾಗಿದೆ. ವಾರಾಂತ್ಯದಲ್ಲಂತೂ ವಿವಿಪುರ ತಿಂಡಿ ಬೀದಿಗೆ ಆಗಮಿಸುವವರು ಹತ್ತಿರದ ಮನೆಗಳ ಮುಂದೆ ತಮ್ಮ ದ್ವಿಚಕ್ರ ವಾಹನ, ಕಾರುಗಳನ್ನು ನಿಲ್ಲಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಸುಲಭವಾಗಿ ಓಡಾಡಲು ಸಮಸ್ಯೆಯಾಗಿದೆ ಎಂದು ನಾಗರೀಕರು ದೂರುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿದೆ ಎಂಬ ಹಲವು ಆರೋಪಗಳಿವೆ.

6 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ ತಿಂಡಿ ಬೀದಿ :

ವಿವಿ‌ಪುರಂನ ಪುಡ್ ಸ್ಟ್ರೀಟ್​ಗೆ ಹೊಸ ಸ್ಪರ್ಶ ಕೊಡಲು ಬಿಬಿಎಂಪಿ 6 ಕೋಟಿ ವೆಚ್ಚದಲ್ಲಿ 2022ರ ಡಿಸೆಂಬರ್​ನಲ್ಲಿ ಕಾಮಗಾರಿ ಶುರು ಮಾಡಿತ್ತು. ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಆಗ ಕಾಮಗಾರಿಗೆ ಚಾಲನೆ ನೀಡಿದ್ದರು. ಇಲ್ಲಿಗೆ ತಿಂಡಿ ತಿನ್ನಲು ಬರುವ ಪಾದಾಚಾರಿಗಳನ್ನೇ ಗಮದಲ್ಲಿಟ್ಟುಕೊಂಡು ಬಿಬಿಎಂಪಿಯು 7 ಮೀಟರ್ ಇದ್ದ ರಸ್ತೆ 5 ಮೀಟರ್‌ಗೆ ಇಳಿಸಿ, ಪಾದಾಚಾರಿ ಮಾರ್ಗವನ್ನೇ ವಿಸ್ತರಿಸಿ ಪಾದಚಾರಿಗಳು ಹಾಗೂ ಆಹಾರ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಹಲವು ಮೂಲ ಸೌಕರ್ಯಗಳನ್ನ ಒದಗಿಸಿ ವಿವಿ ಪುರಂ ಫುಡ್‌ಸ್ಟ್ರೀಟ್‌ಗೆ ಹೈಟೆಕ್ ಸ್ಪರ್ಶ ನೀಡಲಾಗಿತ್ತು. ಆದರೀಗ ಆ ಫುಟ್ ಪಾತ್ ಸಂಪೂರ್ಣವಾಗಿ ಅಂಗಡಿ ವ್ಯಾಪಾರಿಗಳ ಒತ್ತುವರಿಯಿಂದ ತುಂಬಿಹೋಗಿದೆ. ಬಿಬಿಎಂಪಿ ಅಧಿಕಾರಿಗಳು ಸೂಕ್ತ ರೀತಿ ಕ್ರಮ ಕೈಗೊಳ್ಳದ ಕಾರಣ ನೂತನ ರಸ್ತೆಯ ಸೊಬಗಿಗೆ ಮಂಕು ಕವಿದಿದೆ. ರಸ್ತೆಯಲ್ಲಿ ನಡೆಯುವಾಗ ಆಹಾರ, ಜಿಡ್ಡಿನಿಂದ ಹಲವು ಬಾರಿ ಗ್ರಾಹಕರು ಮಳೆಗಾಲದಲ್ಲಿ ಜಾರಿಬಿದ್ದ ಉದಾಹರಣೆಗಳು ಇದೆ.

ಹೋಟೆಲ್, ತಳ್ಳುವ ಗಾಡಿಗಳಲ್ಲಿ ಮಾರುವ ತಿಂಡಿಗಳ ಸಾಂದರ್ಭಿಕ ಚಿತ್ರ.

ಆಹಾರದ ಗುಣಮಟ್ಟದ ಬಗ್ಗೆ ಆಗಾಗ ಪರಿಶೀಲನೆ ಅಗತ್ಯ :

ಕೆಲವು ಗ್ರಾಹಕರು ಇಲ್ಲಿನ ಅಂಗಡಿಗಳು ಬಳಸುವ ಆಹಾರದ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿನ ಮಳಿಗೆಗಳಲ್ಲಿನ ಆಹಾರದ ಗುಣಮಟ್ಟ ಕಾಯ್ದುಕೊಳ್ಳಲು ಆಗಾಗ ಸಂಬಂಧಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಹಠಾತ್ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯಗಳು ಕೇಳಿಬಂದಿದೆ. ಈ ಪ್ರದೇಶವನ್ನು ಸೂಕ್ತ ರೀತಿ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿರುವುದಕ್ಕೆ ನಿವಾಸಿಗಳು ಮತ್ತು ಗ್ರಾಹಕರು ತಮ್ಮ ಆಕ್ರೋಶ ಮತ್ತು ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. 

“ಫುಡ್ ಸ್ಟ್ರೀಟ್ ಒಂದು ಕಾಲದಲ್ಲಿ ಸ್ವಚ್ಛ ಸ್ಥಳವಾಗಿತ್ತು, ಆದರೆ ಈಗ ಅದು ಅವ್ಯವಸ್ಥೆಯಾಗಿದೆ. ಈ ಸಮಸ್ಯೆಗಳ ನಿವಾರಣೆಗೆ ಬಿಬಿಎಂಪಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಇಲ್ಲಿಗೆ ತಿಂಡಿ ತಿನ್ನಲು ಬಂದ ಐಟಿ ಉದ್ಯೋಗಿ ಶೇಖರ್ ಒತ್ತಾಯಿಸಿದ್ದಾರೆ.

ಇದೇ ಶನಿವಾರ ಪಾದಾಚಾರಿ ಒತ್ತುವರಿ ತೆರವಿಗೆ ಕ್ರಮ : ಬಿಬಿಎಂಪಿ ಭರವಸೆ :

ಇನ್ನು ಬಿಬಿಎಂಪಿ ದಕ್ಷಿಣ ವಲಯದ ಚಿಕ್ಕಪೇಟೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಾಲು ರಾಥೋಡ್ ಅವರಿಗೆ ವಿವಿ ಪುರಂ ತಿಂಡಿ ಬೀದಿಯ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದಾಗ, “ತಮ್ಮಿಂದ ಈಗ ಮಾಹಿತಿ ಲಭ್ಯವಾಗಿದೆ. ಇದೇ ಶನಿವಾರ ವಿವಿ ಪುರಂ ತಿಂಡಿ ಬೀದಿಯಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಅದೇ ರೀತಿ ಘನತ್ಯಾಜ್ಯ ವಿಭಾಗ ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿಯನ್ನು ಬಳಸಿಕೊಂಡು ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಒಟ್ಟಾರೆ ಬಿಬಿಎಂಪಿಯು ಈ ಕೂಡಲೇ ಎಚ್ಚೆತ್ತುಕೊಂಡು ಸಜ್ಜನರಾವ್ ಸರ್ಕಲ್ ಬಳಿಯ ವಿವಿಪುರಂ ಫುಡ್ ಸ್ಟ್ರೀಟ್ ನಲ್ಲಿನ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಿ, ಹಿಂದಿನಂತೆಯೇ ಜನರು ಇಲ್ಲಿನ ತಿಂಡಿಬೀದಿಗೆ ಬಂದು‌ ತಮಗಿಷ್ಟವಾದ ತಿಂಡಿ, ಚಾಟ್ಸ್ ಗಳನ್ನು ಸವಿಯಲು ಅನುವಾಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರೀಕರು ಆಗ್ರಹಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು – ಸಂಚಾರ ಪೊಲೀಸರು ಪತ್ತೆಯಿಲ್ಲ!! :

“ಗಾಂಧಿ ಬಜಾರ್ ರೀತಿ ವಿವಿಪುರಂ ಫುಡ್ ಸ್ಟ್ರೀಟ್ ಅನ್ನು ಕೋಟ್ಯಾಂತರ ರೂಪಾಯಿ ಕರ್ಚು ಮಾಡಿ ಬಿಬಿಎಂಪಿ ಅಭಿವೃದ್ಧಿಪಡಿಸಿಯೂ ಪ್ರಯೋಜನವಾಗಿಲ್ಲ. ಜನರು ಆರಾಮವಾಗಿ ಈ ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಓಡಾಡಲಾಗುತ್ತಿಲ್ಲ. ಪಾರ್ಕಿಂಗ್ ಸಮಸ್ಯೆ. ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಸ್ವಚ್ಛತೆಯೇ ಕಾಣದಂತಾಗಿದೆ. ಪಾದಚರಿ ಮಾರ್ಗವೂ ಒತ್ತುವರಿಯಾಗಿದೆ. ಇಲ್ಲಿ ಸಂಚಾರಿ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಈ ಬಗ್ಗೆ ಎರಡು ಇಲಾಖೆಗಳು ಗಮನಹಿಸಬೇಕು.”

– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ ಪಾರ್ಟಿ ಮೂಡ್ ನಲ್ಲಿ ಕುಡಿದು ಗಾಡಿ ಓಡಿಸಿದವರ ವಿರುದ್ಧ 513 ಪ್ರಕರಣ ದಾಖಲು

Next Post

BW SPECIAL | BDA PRR Project | ಬಿಡಿಎ ಪಿಆರ್ ಆರ್ ರಸ್ತೆ ಯೋಜನೆಗೆ ಹುಡ್ಕೋದಿಂದ 27000 ಕೋಟಿ ರೂ. ಸಾಲಕ್ಕೆ ಒಪ್ಪಿಗೆ

Next Post
BDA PRR Road

BW SPECIAL | BDA PRR Project | ಬಿಡಿಎ ಪಿಆರ್ ಆರ್ ರಸ್ತೆ ಯೋಜನೆಗೆ ಹುಡ್ಕೋದಿಂದ 27000 ಕೋಟಿ ರೂ. ಸಾಲಕ್ಕೆ ಒಪ್ಪಿಗೆ

ನಗರದಲ್ಲಿ ಶುಕ್ರವಾರ ನಿಮ್ಹಾನ್ಸ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು. ಕೇಂದ್ರ ಸಚಿವ ಜೆಪಿ ನಡ್ಡಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಪಿ.ಸಿ.ಮೋಹನ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪಾಲ್ಗೊಂಡಿದ್ದರು.

ನಿಮ್ಹಾನ್ಸ್ ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಸಮಗ್ರ ಆರೋಗ್ಯ ವಿಧಾನದ ಕಾರ್ಯವೈಖರಿಗೆ ರಾಷ್ಟ್ರಪತಿ ಮುರ್ಮು ಶ್ಲಾಘನೆ

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d