Saturday, September 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

  • Bengaluru Focus

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | PALIKE BAZAR | ಹೆಸರಿಗೆ ವಿಜಯನಗರದಲ್ಲಿದೆ ಎಸಿ ಪಾಲಿಕೆ ಬಜಾರ್ : ಮೂಲ ಸೌಕರ್ಯವಿಲ್ಲದೆ ಉದ್ಘಾಟನೆಯಾಗುತ್ತಾ ಭೂಗತ ಮಾರ್ಕೆಟ್?

by Bengaluru Wire Desk
August 8, 2024
in Bengaluru Focus, BW Special, Public interest
Reading Time: 3 mins read
0
ವಿಜಯನಗರದಲ್ಲಿರುವ ನೂತನ ಪಾಲಿಕೆ ಬಜಾರ್ ನೋಟ.

ವಿಜಯನಗರದಲ್ಲಿರುವ ನೂತನ ಪಾಲಿಕೆ ಬಜಾರ್ ನೋಟ.

ಬೆಂಗಳೂರು, ಆ.08 www.bengaluruwire.com : ರಾಜಧಾನಿ ಬೆಂಗಳೂರಿನ ಹಳೆಯ ಏರಿಯಾಗಳಲ್ಲಿ ಒಂದಾಗಿರುವ ವಿಜಯನಗರ (Vijayanagar) ಮುಖ್ಯ ರಸ್ತೆಯಲ್ಲಿ 2017ರಲ್ಲಿ ಬೀದಿಬದಿಯ ವ್ಯಾಪಾರಿಗಳಿಗಾಗಿ ಈ ಭೂಗತ ಮಾರುಕಟ್ಟೆ (Underground Market) ಕಾಮಗಾರಿ ಆರಂಭಿಸಿ 2024 ಆಗಸ್ಟ್ ತಿಂಗಳ ತನಕವೂ ಕಾಮಗಾರಿ ಮಾಡುತ್ತಿದ್ದರೂ ಇನ್ನೂ ಮುಗಿದಿಲ್ಲ. ಅಂದರೆ 80 ನೆಲಮಾಳಿಗೆ ಅಂಗಡಿ ಕಟ್ಟಲು ಬರೋಬ್ಬರಿ 8 ವರ್ಷ ಬೇಕಾಯಿತು. ಇದೀಗ ಪಾಲಿಕೆ ಬಜಾರ್ (Palike Bazar) ಮಾರುಕಟ್ಟೆ ಅಂತಿಮ ಹಂತದಲ್ಲಿದೆ.

ಈ ಪಾಲಿಕೆ ಬಜಾರ್ ಹೇಗಿದೆಯೆಂದರೆ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವ ಎನ್ನುವಂತೆ ಈ ಅಂಡರ್ ಗ್ರೌಂಡ್ ಮಾರ್ಕೆಟಿನಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಮಾರುಕಟ್ಟೆ ಆಸುಪಾಸು ಮಾರುಕಟ್ಟೆಗೆ ಬಂದು ಹೋಗುವ ಗ್ರಾಹಕರಿಗೆ ಸೂಕ್ತ ವಾಹನ ನಿಲ್ದಾಣ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಆದರೆ ಅಂಗಡಿಗೆ ಬಂದು ಹೋಗುವ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಪಾಲಿಕೆ ಬಜಾರ್ ಎಂಬ ಅಂಡರ್ ಗ್ರೌಂಡ್ ಎಸಿ ಮಾರುಕಟ್ಟೆಯನ್ನು ಬಿಬಿಎಂಪಿಯ ಯೋಜನಾ ವಿಭಾಗ ಸರ್ಕಸ್ ಮಾಡಿ ಕಟ್ಟಡ ಕಟ್ಟಿದೆ. ಪರಿಚಿತ್ ಕನ್ಸಸ್ಟ್ರಕ್ಷನ್ ಎಂಬ ಗುತ್ತಿಗೆದಾರರಿಗೆ ಈ ಮಾರುಕಟ್ಟೆಯನ್ನು ಕಟ್ಟಲು ಕಾರ್ಯಾದೇಶ ನೀಡಿತ್ತು. ಹೀಗೆ ಕಟ್ಟಿರುವ ಪಾಲಿಕೆ ಬಜಾರ್ ಕಟ್ಟಡದ ಗೋಡೆಗಳು, ಭೂಗತ ಸ್ಥಳದಲ್ಲಿ ಬೆಳಕು ಬರುವಂತೆ ಕಲ್ಪಿಸಿರುವ ಸ್ಕೈಲೈಟ್ ಬಳಿಯಲ್ಲಿನ ಗೋಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಮಳೆ ಬಂದರೆ ಈಗಲೂ ಪಾಲಿಕೆ ಬಜಾರ್ ಭಾಗದಲ್ಲಿ ನೀರು ಹರಿದು ಬರುತ್ತಿದ್ದು, ಮುಂಜಾಗ್ರತೆಯಾಗಿ ನೀರಿನ ಪಂಪ್ ಸೆಟ್ ಇಡಲಾಗಿದೆ. ಹೀಗಾದರೆ ಕಾಮಗಾರಿ ಗುಣಮಟ್ಟ ಎಷ್ಟರ ಮಟ್ಟಿಗೆ ಕಳಪೆಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಪಾಲಿಕೆ ಬಜಾರ್ ಮೂಲಸೌಕರ್ಯ ಕೊರತೆ ಹಾಗೂ ಮಳೆಯಿಂದ ಕಟ್ಟಡ ಸೋರಿಕೆ, ಗೋಡೆಯಲ್ಲಿ ನೀರು ಇಳಿಯುತ್ತಿರುವ ಬಗ್ಗೆ ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗವನ್ನು ಸಂಪರ್ಕ ಮಾಡಲು ಪ್ರಯತ್ನಿಸಿದಾಗ ಹಿಂದೆ ಇದ್ದ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರು ಕಳೆದ ತಿಂಗಳು ನಿವೃತ್ತರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂತು. ಆ ಬಳಿಕ ಈ ಹುದ್ದೆಯಲ್ಲಿ ಪ್ರಭಾರ ಹುದ್ದೆಯಲ್ಲಿರುವ ಎಇಇ ರಂಗರಾಜು ಅವರಿಗೆ ಪಾಲಿಕೆ ಬಜಾರ್ ಕುರಿತು ಮಾಹಿತಿಯಿಲ್ಲ ಎಂದರು. ಬಳಿಕ ಇದೇ ವಿಯಜನಗರ ಉಪ ವಿಭಾಗದ ಎಇಇ ಫರ್ ಜಾನ್ ಅವರನ್ನು ಕೇಳಿದಾಗ ಸೂಕ್ತ ಮಾಹಿತಿ ಲಭ್ಯವಾಗಲಿಲ್ಲ.

ಪಾಲಿಕೆ ಬಜಾರ್ ಕಟ್ಟುವ ಸ್ಥಳದಲ್ಲಿ ಹಿಂದೆ ಬೀದಿ ವ್ಯಾಪಾರಿಗಳನ್ನು ಕಾಲಿ ಮಾಡಿಸುವಾಗ ಆರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂತ ನಿರ್ಮಾಣ ಮಾಡಿದ್ದರೂ ಈಗ ನೋಡಿದರೆ ಟೆಂಡರ್ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡಲು ಬಿಬಿಎಂಪಿಯು ಚಿಂತನೆ ನಡೆಸಿದೆ. ಹಿಂದೆ 10 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳಲ್ಲಿ ಈ ನೆಲಮಾಳಿಗೆ ಮಾರುಕಟ್ಟೆ ಕಟ್ಟಿ ಮುಗಿಸಲು ಪಾಲಿಕೆ ಯೋಜಿಸಿ ಅದರಂತೆ ಕಾರ್ಯಾದೇಶ ನೀಡಿತ್ತು. ಆ ನಂತರ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ವಿಸ್ತರಣೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಸ್ಥಳಾಂತರ, ಕೋವಿಡ್ ಮತ್ತಿತರ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾಯಿತು.

ಬಳಕೆಯಾಗದೆ ಉಳಿದ ಪಾದಚಾರಿ ಸುರಂಗ ಮಾರ್ಗ ಪಾಲಿಕೆ ಬಜಾರ್ ಆಗಿದ್ದು ಹೇಗೆ? :

ಅದೇ ರೀತಿ ಕಾಮಗಾರಿ ಸ್ವರೂಪ ಬದಲಾದಂತೆ ವೆಚ್ಚವೂ 10 ಕೋಟಿ ರೂ.ಗಳಿಂದ 15 ಕೋಟಿ ರೂ.ಗಳಿಗೆ ಹೆಚ್ಚಾಯಿತು. ಅಸಲಿಗೆ ಹವಾನಿಯಂತ್ರಿತ ಪಾಲಿಕೆ ಬಜಾರ್ ಸ್ಥಳದಲ್ಲಿ ಈ ಹಿಂದೆ ಹೈಟೆನ್ಷ್ ವಿದ್ಯುತ್ ಲೈನ್ ಹಾಗೂ ಜಲಮಂಡಳಿಯ ಪೈಪ್ ಗಳಿದ್ದು, ಅದನ್ನು ಸ್ಥಳಾಂತರಿಸುವುದು ಪಾಲಿಕೆಗೆ ವೆಚ್ಚದಾಯಕವಾಗಿತ್ತು. ಕೊನೆಗೆ ಪಾಲಿಕೆಯು ಸುಮಾರು 1.5 ಕೋಟಿ ರೂ. ಕರ್ಚು ಮಾಡಿ ಬೆಸ್ಕಾಂ ವಿದ್ಯುತ್ ವೈರ್ ಹಾಗೂ ಜಲಮಂಡಳಿ ಪೈಪ್ ಗಳನ್ನು ಸ್ಥಳಾಂತರಿಸಿತು. ಆದರೆ ಈ ವೆಚ್ಚವನ್ನು ಎಸಿ ಪಾಲಿಕೆ ಬಜಾರ್ ಕಾಮಗಾರಿ ವೆಚ್ಚದಲ್ಲಿ ಸೇರ್ಪಡೆ ಮಾಡಲಿಲ್ಲ. ಇನ್ನೊಂದೆಡೆ ಈ ಹಿಂದೆ ಪಾದಚಾರಿಗಳಿಗೆ ಇದೇ ಸ್ಥಳದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿತ್ತು. ಆದರೆ ವಿಜಯನಗರದ ಪಾದಚಾರಿಗಳು ಅದನ್ನು ಬಳಸದೆ ನಿರುಪಯೋಗಿಯಾಗಿತ್ತು. ಇದೇ ಸ್ಥಳದ ಆಸುಪಾಸಿನಲ್ಲೇ ಬೀದಿ ವ್ಯಾಪಾರಿಗಳು ದಿನನಿತ್ಯ ಹೂವು-ಹಣ್ಣು, ತರಕಾರಿ, ದೈನಂದಿನ ಅವಶ್ಯಕತೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆನಂತರ ಇದೇ ಪಾದಚಾರಿ ಸುರಂಗ ಮಾರ್ಗವನ್ನು ಮಾರ್ಪಡಿಸಿ ಹಾಗೂ ವಿಸ್ತರಣೆ ಮಾಡಿ ಪಾಲಿಕೆ ಬಜಾರ್ ಮಾಡಲಾಯಿತು ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸಿದ ಸ್ಥಳೀಯ ವ್ಯಾಪಾರಿಯೊಬ್ಬರು.

8 ವರ್ಷಗಳಲ್ಲಿ ಮೆಟ್ರೋ ನಿಲ್ದಾಣಗಳೇ ನಿರ್ಮಾಣವಾಗುತ್ತಿದ್ದವು :

ಇಷ್ಟು ವರ್ಷಗಳ ಕಾಲದಲ್ಲಿ ಬಹುಶ: ಬೆಂಗಳೂರಿನ ಮೆಟ್ರೋ ನಾಲ್ಕೈದು ನಿಲ್ದಾಣಗಳೇ ಮುಗಿದು ಹೋಗುತ್ತಿದ್ದವು, ಮಧ್ಯಮ ಪ್ರಮಾಣದ ಮಾಲ್ ಕಾಮಗಾರಿಯೇ ಮುಗಿಯುತ್ತಿತ್ತು ಎನ್ನಲಾಗುತ್ತಿದೆ. ಬೀದಿ ಇಲ್ಲಿನ 80 ಅಂಗಡಿಗಳು 8 ಅಡಿ ಅಗಲ, 11 ಅಡಿ ಉದ್ದದ 80 ಅಂಗಡಿಗಳಿಗೆ 3.5 ಟನ್ ಲೋಡ್ ತಡೆಯುವ 28 ಹವಾನಿಯಂತ್ರಣ ಯಂತ್ರವನ್ನು ಅಂಗಡಿಗಳ ಮುಂದೆ ಅಳವಡಿಸಲಾಗಿದೆ. ಪಾಲಿಕೆ ಬಜಾರ್ ಒಳಗೆ ಬಂದು ಹೋಗಲು ಒಂದು ಲಿಫ್ಟ್, ಮೂರು ಮೆಟ್ಟಿಲು ಮಾರ್ಗ ಹಾಗೂ ಎರಡು ಸ್ವಯಂಚಾಲಿತ ಎಸ್ಕಲೇಟರ್ ವ್ಯವಸ್ಥೆ, ಸಂಪೂರ್ಣ ವಿದ್ಯುತ್ ದೀಪಗಳನ್ನು ಕಲ್ಪಿಸಲಾಗಿದೆ. ಈತನಕ ಶೇ.90ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣವಾಗಿದೆ ಎಂದು ಬಿಬಿಎಂಪಿ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ. ವಿಜಯನಗರ ಮಾರುಕಟ್ಟೆ ಬೆಂಗಳೂರಿನಲ್ಲಿನ ಅತ್ಯಂತ ಹಳೆಯ ಮಾರುಕಟ್ಟೆಯಾಗಿದ್ದು, ಈ ಮಾರುಕಟ್ಟೆ ಸ್ಥಳವನ್ನು 2014ರ ಬೀದಿ ವ್ಯಾಪಾರಿಗಳ ಕಾಯ್ದೆಯಂತೆ ನೈಸರ್ಗಿಕ ಮಾರುಕಟ್ಟೆ ಎಂದು ಅಧಿಸೂಚನೆ ಹೊರಡಿಸಲು ಬಿಬಿಎಂಪಿಯಿಂದ ಪಟ್ಟಣ ವ್ಯಾಪಾರ ಸಮಿತಿಯನ್ನು ರಚಿಸಲಾಗಿದ್ದರೂ, ಸಮಿತಿ ರಚನೆಯಾಗಿ ಒಂದೂವರೆ ವರ್ಷಗಳು ಕಳೆದರೂ ಒಂದು ಸಭೆ ನಡೆಸಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.

ಕಿಷ್ಕಿಂಧೆಯಂತಹ ಪಾಲಿಕೆ ಬಜಾರ್ ಲೋಪ ಸರಿಪಡಿಸಬೇಕು :

ಈ ಕಿಷ್ಕಿಂಧೆಯಂತಹ ಸ್ಥಳದಲ್ಲಿ ಪಾಲಿಕೆ ಬಜಾರ್ ಕಟ್ಟಿರುವುದರಿಂದ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದಿರುವ ಕಾರಣಕ್ಕೆ ವಿಜಯನಗರ ಹಾಗೂ ಸುತ್ತಮುತ್ತಲ ಸ್ಥಳದ ನಾಗರೀಕರು ಒಂದೊಮ್ಮೆ ಅಂಗಡಿಗಳಿಗೆ ಬಂದರೂ, ಬರುವ ಗ್ರಾಹಕರ ಪ್ರಮಾಣ ಕಡಿಮೆಯಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾಕಷ್ಟು ಮೂಲಭೂತ ಸೌಕರ್ಯದ ಕೊರತೆ, ಕಳಪೆ ಕಾಮಗಾರಿ ಸೇರಿದಂತೆ ಹಲವು ಲೋಪಗಳಿರುವ ಪಾಲಿಕೆ ಬಜಾರ್ ನಲ್ಲಿ ಒಂದೊಮ್ಮೆ ಎಸಿ ಬಳಕೆಯಾದರೆ, ಹೂವು- ಹಣ್ಣು, ತರಕಾರಿಯಂತಹ ಪದಾರ್ಥಗಳನ್ನು ಮಾರಾಟ ಮಾಡುವಾಗ ಅನಿಯಂತ್ರಿತ ದುರ್ವಾಸನೆಗಳು ಬಂದಲ್ಲಿ ಅದನ್ನು ನಿವಾಸಿರುವ ವಿಧಾನಗಳ ಬಗ್ಗೆಯೂ ಬಿಬಿಎಂಪಿ ಅಧಿಕಾರಿಗಳು ಕೂಲಂಕುಷವಾಗಿ ಗಮನಹರಿಸಬೇಕಿದೆ. ಅಲ್ಲದೆ ಈ ಬಗ್ಗೆ ಕೂಡಲೇ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗಹರಿಸಬೇಕು ಎಂದು ಸಾರ್ವಜನಿಕರು, ಬೀದಿ ಬದಿಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಪ್ರಥಮವಾಗಿ ಮೂಲಸೌಕರ್ಯ ಕಲ್ಪಿಸಿ ಇಲ್ಲದಿದ್ದರೆ ಗೋಡೋನ್ ಮಾಡಿ :

“ಮೊದಲಿಗೆ ಈ ಪಾಲಿಕೆ ಬಜಾರ್ ನಲ್ಲಿ ಮೂಲಸೌಕರ್ಯ ಕಲ್ಪಿಸಿದ ನಂತರವಷ್ಟೇ ಮಾರುಕಟ್ಟೆ ಪ್ರಾರಂಭಿಸಬೇಕು. ಈ ಹಿಂದೆ ಈ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದ 33 ಬೀದಿ ವ್ಯಾಪಾರಿಗಳಿಗೆ ಪಾಲಿಕೆಯು ಬೇರೆಡೆ ಸ್ಥಳಾಂತರ ಮಾಡುವಾಗ ಫಲಾನುಭವಿಗಳು ಎಂದು ಹೇಳಿದೆ. ಪಾಲಿಕೆ ಬಜಾರ್ ಗಾಗಿ 15-16 ಕೋಟಿ ರೂ. ಕರ್ಚು ಮಾಡಿರುವ ಬಿಬಿಎಂಪಿ ಆ ಹಣವನ್ನು ವಾಪಸ್ ಪಡೆಯಲು ಈಗ ಟೆಂಡರ್ ಮೂಲಕ ಅಂಗಡಿಗಳನ್ನು ಹಂಚಿಕೆ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಹೀಗಾದರೆ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರ ಕಥೆಯೇನು? ಅಂಗಡಿಗಳ ಬಾಡಿಗೆ ದರ ಹೆಚ್ಚಾದರೆ ಬೀದಿ ವ್ಯಾಪಾರಿಗಳು ಅದನ್ನು ಪಡೆಯುವುದಾದರೂ ಹೇಗೆ? ಬಜಾರ್ ನಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗದಿದ್ದರೆ, ಆ ಅಂಗಡಿಗಳನ್ನು ಮೇಲ್ಭಾಗದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಗೋದಾಮುಗಳಂತೆ ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡಲಿ.”

  • ಎಸ್.ಬಾಬು, ಬೆಂಗಳೂರು ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ISRO SSLV FLIGHT | ಸಣ್ಣ ಉಪಗ್ರಹ ಉಡಾವಣಾ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಈ SSLV ರಾಕೆಟ್ ; ಇದೇ ಆ.15ರಂದು ಮೈಕ್ರೋ ಸ್ಯಾಟಲೈಟ್ ಹೊತ್ತು ನಭಕ್ಕೆ ಹಾರಲಿದೆ

Next Post

Greater Bengaluru Governance Bill 2024 | ಜನಾಗ್ರಹ ಸಂಘಟನೆಯ ತುಲನಾತ್ಮಕ ವಿಶ್ಲೇಷಣಾ ವರದಿ : ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ 10ಕ್ಕೆ ಕೇವಲ 3.5 ಅಂಕ

Next Post
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

Greater Bengaluru Governance Bill 2024 | ಜನಾಗ್ರಹ ಸಂಘಟನೆಯ ತುಲನಾತ್ಮಕ ವಿಶ್ಲೇಷಣಾ ವರದಿ : ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ 10ಕ್ಕೆ ಕೇವಲ 3.5 ಅಂಕ

ಪ್ಯಾರೀಸ್ ಒಲಂಪಿಕ್ಸ್ 2024ರ ಚಿಹ್ನೆಯ ಸಾಂದರ್ಭಿಕ ಚಿತ್ರ.

Paris Olympics 2024 | ಪ್ಯಾರಿಸ್ ಒಲಿಂಪಿಕ್ಸ್ 2024 : ಸ್ವಾತಂತ್ರ್ಯ ಪೂರ್ವದಿಂದ ಈವರೆಗಿನ ಭಾರತೀಯ ಒಲಿಂಪಿಕ್ ಪದಕ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Please login to join discussion

Like Us on Facebook

Follow Us on Twitter

Recent News

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026

ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

September 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d