ಒಂದು ಸುದ್ದಿ ಪತ್ರಿಕೆಗಳು, ಟಿವಿ ಚಾನಲ್ ಗಳನ್ನು ನೆಡಸುವುದು ಎಷ್ಟು ಕಷ್ಟ ಎಂಬುದು ಆ ಮಾಧ್ಯಮ ಸಂಸ್ಥೆಯನ್ನು ಕಟ್ಟಿದವರಿಗೆ ತಿಳಿದಿರುತ್ತದೆ. ಅದೇ ರೀತಿ ಹೊಸ ತಲೆಮಾರಿನ ಕನ್ನಡ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಮಾಧ್ಯಮವು ಕನ್ನಡಕ್ಕೆ ಹೊಸತು. ಹಾಗಾಗಿ ಹೊಸತನ್ನು ಕಲಿಯುತ್ತಲೇ, ಸುದ್ದಿ ಮೌಲ್ಯಗಳನ್ನು ಕಾಯ್ದುಕೊಂಡು ಜನರಿಗೆ ವಾಸ್ತವವಾದ, ನಿಖರವಾದ ಹಾಗೂ ಜನೋಪಯೋಗಿ ಮಾಹಿತಿಗಳನ್ನು ನೀಡುತ್ತಾ ಬರುವುದು ಈಗಿನ ನಕಲಿ ಸುದ್ದಿ ಹಾವಳಿಗಳ ಯುಗದಲ್ಲಿ ಸವಾಲಾಗಿದೆ. ಈ ದಿಶೆಯಲ್ಲಿ ನಾವು ನಿಖರ ಮತ್ತು ಖಚಿತ ಸುದ್ದಿಗಳನ್ನು ಓದುಗರಿಗೆ ನೀಡುತ್ತಾ ಈ ಸವಾಲನ್ನು ಮೆಟ್ಟಿ ನಿಂತಿದ್ದೇವೆ. ಓದುಗರ ಹಿತ ಕಾಯುವುದು ‘ಬೆಂಗಳೂರು ವೈರ್’ ನ ಮೊದಲ ಆದ್ಯತೆಯಾಗಿದೆ.
5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಬೆಂಗಳೂರು ವೈರ್’ ಪ್ರಪಂಚದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾಕುಂಭ ಮೇಳದ ಕಾರ್ಯಕ್ರಮದಲ್ಲಿ ಪಾಲ್ಕೊಂಡು ಪ್ರತ್ಯಕ್ಷ ವರದಿಯನ್ನು ನಾಡಿನ ಜನತೆಗಾಗಿ ನೀಡಿತು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ 66.3 ಕೋಟಿಗಿಂತಲೂ ಹೆಚ್ಚು ಭಕ್ತರು ಭಾಗವಹಿಸಿದ್ದರು. 144 ವರ್ಷಗಳಿಗೆ ಒಮ್ಮೆ ನಡೆಯವ ಈ ವಿಶೇಷ ಗ್ರಹಗಳ ಸಂಯೋಗದ ಸಂದರ್ಭದಲ್ಲಿ ಯೋಗಸ್ನಾನ ಮಾಡುವುದರಿಂದ ವಿಶೇಷ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಹಿನ್ನಲೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅವುಗಳ ಲಿಂಕ್ ಜೊತೆಗೆ ಈ ಅವಧಿಯಲ್ಲಿ ಪ್ರಕಟಗೊಂಡ ಜನರ ಗಮನ ಸೆಳೆದ ಕೆಲವು ಪ್ರಮುಖ ವಿಶೇಷ ವರದಿಗಳು ಈ ಕೆಳಗಿನಂತಿದೆ. ಇವುಗಳನ್ನು ತಪ್ಪದೇ ಓದಿ, ಬೇರೆಯವರಿಗೂ ಈ ಸುದ್ದಿಯ ಲಿಂಕ್ ಅನ್ನು ಕಳುಹಿಸಿ :
- Mahakumbh 2025 | BW-1 | ಮಹಾಕುಂಭ ಮೇಳದಲ್ಲಿ ಪ್ರತ್ಯಕ್ಷ ವರದಿಗೆ ಸಾಕ್ಷಿಯಾಗುತ್ತಿದೆ ಬೆಂಗಳೂರು ವೈರ್ : ಬೆಂಗಳೂರಿಂದ ಆರಂಭವಾದ ಪ್ರಯಾಣ
- 2) Mahakumbh 2025 | BW-2 | ಕುಂಭ ಪರಿಕ್ರಮ ಆರಂಭ : ಬೆಂಗಳೂರು ವೈರ್ ಸಾಕ್ಷಾತ್ ವರದಿ
3) Mahakumbha 2025 |BW -3 | ಸೆಕ್ಟರ್- 20 ನಾಗ… ನಮನ
4) Mahakumbh 2025 | BW – 4 | ಪುಣ್ಯ ನಗರಿ ಪ್ರಯಾಗ್ ನಲ್ಲಿ ಸುಗಮ ತ್ರಿವೇಣಿ ಸಂಗಮ ಸ್ನಾನ

5) Mahakumbh 2025 | BW- 5 ಮಹಾಕುಂಭ ಮೇಳ ಸಂದರ್ಭದಲ್ಲಿ ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ದಿವ್ಯಾನುಭವ!!
7) BW SPECIAL | ಕರ್ನಾಟಕದಲ್ಲಿ ಕಾವೇರಿ-2, ಇ-ಆಸ್ತಿ, ಇ-ಸ್ವತ್ತು ಎಂಬ ಬ್ರಹ್ಮಾಸ್ತ್ರ : ಅಕ್ರಮ ಆಸ್ತಿ ಲಪಾಟಿಸುವಿಕೆಗೆ ಲಗಾಮು ಹಾಕಿದ ಕ್ರಾಂತಿಕಾರಿ ಯೋಜನೆ!!
8) BW SPECIAL | ಬಿಬಿಎಂಪಿ : ನಗರದಲ್ಲಿ ಕಟ್ಟಡ ನಿರ್ಮಾಣ ಉಲ್ಲಂಘನೆ ಮಿತಿ ಶೇ.15ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
9) BW SPECIAL | ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ಹಾವುಗಳ ಸಂತಾನೋತ್ಪತ್ತಿ ಚಕ್ರದಲ್ಲಿ ಬದಲಾವಣೆ, ಆತಂಕದಲ್ಲಿ ಪರಿಸರ ತಜ್ಞರು
10) BW Special | BIG News | ಬಿಡಿಎ ವ್ಯಾಪ್ತಿಯ 1.22 ಲಕ್ಷ ಸ್ವತ್ತುದಾರರಿಗೆ ಬಿಗ್ ಶಾಕ್ : ಯದ್ವಾತದ್ವಾ ಆಸ್ತಿ ತೆರಿಗೆ ಹೆಚ್ಚಳ ; ನಿವಾಸಿಗಳಿಂದ ಆಕ್ರೋಶ
11) BW SPECIAL | ಒಎಫ್‌ಸಿ ಅಳವಡಿಕೆಯಲ್ಲಿ ಬೆಸ್ಕಾಂ ಓವರ್‌ಟೇಕ್ : ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯ ನಷ್ಟದ ಭೀತಿ!!
12) BW SPECIAL | ಚಂದ್ರನಲ್ಲಿ ಕಟ್ಟುವ ಕಟ್ಟಡಗಳಿಗೆ ಬಳಸುವ ಇಟ್ಟಿಗೆಗಳ ದುರಸ್ತಿಗೆ ಬ್ಯಾಕ್ಟೀರಿಯಾ ತಂತ್ರಜ್ಞಾನ: ಐಐಎಸ್‌ಸಿ ವಿಜ್ಞಾನಿಗಳ ಸಂಶೋಧನೆ
13) BW SPECIAL | ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯಲ್ಲಿದೆ ಸ್ಪಾಟ್ ಔಟ್ ಪಾಯಿಂಟ್!! : ಕಣ್ಣೂರು ಡಾಂಬರ್ ಮಿಕ್ಸ್ ಪ್ಲಾಂಟ್ ಕಣ್ಮುಚ್ಚಿ 1 ವಾರ : ನಗರದಲ್ಲಿ ಸಾವಿಗೆ ಕಾದು ಕುಳಿತಿವೆ ಸಾವಿರಾರು ರಸ್ತೆಗುಂಡಿಗಳು
14) BW SPECIAL | ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-2ಕ್ಕೆ ಆರು ಹೊಸ ಬಡಾವಣೆ: 6,217 ಎಕರೆ ಭೂಸ್ವಾಧೀನ ಅಧಿಸೂಚನೆಗೆ ಸರ್ಕಾರ ಅನುಮತಿ
15) BW SPECIAL | GPS VIDEO | “ಜಾಗ ಬಿಡಿ…ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಸ್ತೆ ದುರವಸ್ಥೆ
16) BW Special | ಹಂಗಾರಕಟ್ಟೆ- ಕೋಡಿಬೆಂಗ್ರೆ ಮುರಿದ ಕೊಂಡಿ ; ಉದ್ಘಾಟನೆಯಾದ ದಿನವೇ ಕೆಟ್ಟುಕೂತ ಚೈನಾ ಎಂಜಿನ್ನಿನ ಕಾವೇರಿ ಬಾರ್ಜ್
17) BW SPECIAL | Rare Temple | ಭಾರತದಲ್ಲೇ ವಿಶಿಷ್ಟ: ತಿರುಪತಿಯ 2500 ವರ್ಷಗಳ ಗುಡಿಮಲ್ಲಂ ಪರಶುರಾಮೇಶ್ವರ ದೇವಸ್ಥಾನ : ನಿಗೂಢ ಪ್ರಾಚೀನ ಶಿವನ ಲಿಂಗ
18) BW Special | ಇದು, ಬೆಂಗಳೂರಿನ ಕಡಲೆ ಕಾಯಿ ಪರಿಷೆಯಾ? ಬಾಂಗ್ಲಾ ಬ್ಯಾಂಗಲ್ ಪರಿಷೆಯಾ?
19) BW Special Report | ಕಾಶ್ಮೀರದ ಮೋಡಿ: ಎಬಿಸಿ ಕಣಿವೆಗಳ ಸೌಂದರ್ಯ ಮತ್ತು ಗುಲ್ಮಾರ್ಗ್ ರೋಪ್‌ವೇ ರೋಮಾಂಚನ
20) BW Special | Wakeup Call | ಗೋವಾ ನೈಟ್ ಕ್ಲಬ್ ದುರಂತ: ಸಿಲಿಕಾನ್ ಸಿಟಿ ಹೊಸ ವರ್ಷದ ಪಾರ್ಟಿಗೆ ‘ರೆಡ್ ಅಲರ್ಟ್’!!
ಬೆಂಗಳೂರು ವೈರ್ 5ನೇ ವರ್ಷದಲ್ಲಿ ಕೈಗೊಂಡ ರಿಯಾಲಿಟಿ ಚೆಕ್ ಸ್ಟೋರಿಗಳ ವಿವರ ಹೀಗಿದೆ :

- BW Reality Check | ಅಗ್ನಿ ಅವಘಡವಾದರೆ “ಕಂದಾಯ ಭವನ” ಮೃತ್ಯುಕೂಪ ಎಚ್ಚರ..!! : ಅಗ್ನಿ ಸುರಕ್ಷತೆ ಎಂಬುದು ಇಲ್ಲಿ ಕಾಲು ಕಸ
- BW REALITY CHECK | ಉಲ್ಲಾಳ ವಾರ್ಡ್ ರಾಜಕಾಲುವೆಯಲ್ಲಿ ಬೆಳೆದಿದೆ ಜೊಂಡು : ಉಲ್ಲಾಳ ಕೆರೆಯಲ್ಲಿ ತೇಲುತ್ತಿದೆ ಬೆಂಡು ; ಕೊಳಚೆ ನೀರಿಂದ ಸಮೃದ್ಧ!!
- Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ?






















