Wednesday, August 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Reality Check | ಬೆಂಗಳೂರಿನಲ್ಲಿ ಮತ್ತೆ ರಾರಾಜಿಸುತ್ತಿವೆ ಅಕ್ರಮ ಫ್ಲೆಕ್ಸ್, ಬ್ಯಾನರ್: ಜಿಬಿಎ ನಗರ ಪಾಲಿಕೆಗಳು ಏನು ಮಾಡುತ್ತಿವೆ? 

ಪಾಲಿಕೆಗಳ ಜಾಣ ಮೌನಕ್ಕೆ ನಾಗರಿಕರ ಆಕ್ರೋಶ | ಹೊಸ ವರ್ಷ, ಸಂಕ್ರಾಂತಿ ನೆಪದಲ್ಲಿ ರಾಜಕೀಯ ನಾಯಕರ ಪ್ರಚಾರದ ಗೀಳು | ವಾಹನ ಸವಾರರು, ಪಾದಾಚಾರಿಗಳ ಪ್ರಾಣಕ್ಕೆ ಸಂಚಕಾರ ಜಾಹೀರಾತುಗಳು.

by Bengaluru Wire Desk
January 5, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಜ.05 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಬ್ಬಹರಿದಿನಗಳು ಬಂತೆಂದರೆ ಸಾಕು, ನಗರದ ಸೌಂದರ್ಯಕ್ಕೆ ಗ್ರಹಣ ಹಿಡಿದಂತೆಯೇ ಸರಿ. ಇದೀಗ ಹೊಸ ವರ್ಷದ ಸಂಭ್ರಮ ಕಳೆದು ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ, ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳ ಹಾವಳಿ ಮಿತಿಮೀರಿದೆ.

ರಾಜಕೀಯ ನಾಯಕರಿಗೆ ಶುಭಾಶಯ ಕೋರುವ ನೆಪದಲ್ಲಿ ಹಿಂಬಾಲಕರು ಹಾಕುವ ಫ್ಲೆಕ್ಸ್‌ಗಳು ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿವೆ. ಹೈಕೋರ್ಟ್‌ನ ಚಾಟಿ ಏಟಿನ ಹೊರತಾಗಿಯೂ ರಾಜಧಾನಿಯಲ್ಲಿ ಅಕ್ರಮ ಜಾಹೀರಾತುಗಳ ದರ್ಬಾರ್ ಎಗ್ಗಿಲ್ಲದೆ ಸಾಗಿದೆ.

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಜಾಹೀರಾತು ಆರ್ಭಟ:

ಬಿಬಿಎಂಪಿ ವಿಭಜನೆಯಾಗಿ ಐದು ಹೊಸ ನಗರ ಪಾಲಿಕೆಗಳು ರಚನೆಯಾದ ಬಳಿಕ, ಆಡಳಿತ ಯಂತ್ರ ಚುರುಕಾಗಲಿದೆ ಎಂಬ ನಿರೀಕ್ಷೆಯಿತ್ತು. ಆರಂಭದಲ್ಲಿ ಕೆಲವೊಂದು ಪಾಲಿಕೆಗಳಲ್ಲಿ ಅಕ್ರಮ ಜಾಹೀರಾತು ತೆರವು ಕಾರ್ಯಾಚರಣೆಯನ್ನು ನಾಮಕಾವಸ್ತೆಗೆ ಎಂಬಂತೆ ನಡೆಸಲಾಗಿತ್ತು. ಆದರೆ, ಪ್ರಸ್ತುತ ಈ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಂತಿದೆ.

ಉಲ್ಲಾಳ ವಾರ್ಡಿನ ಮಂಗನಹಳ್ಳಿ ಕ್ರಾಸ್ ಬಳಿ ಅಳವಡಿಸಿರುವ ಅನಧಿಕೃತ ಜಾಹೀರಾತು ಇರುವ ಜಿಪಿಎಸ್ ಆಧಾರಿತ ಚಿತ್ರ.

ವಿಶೇಷವಾಗಿ ವಿಜಯನಗರ, ಗೋವಿಂದರಾಜನಗರ, ಚಾಮರಾಜಪೇಟೆ, ನಾಗರಬಾವಿ, ರಾಜರಾಜೇಶ್ವರಿನಗರ ಮತ್ತು ಉಲ್ಲಾಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅಕ್ರಮ ಜಾಹೀರಾತುಗಳ ಅಳವಡಿಕೆ ಜೋರಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಕೃಪಾಪೋಷಿತ ಬೆಂಬಲಿಗರೇ ಈ ಕೃತ್ಯದಲ್ಲಿ ತೊಡಗಿರುವುದರಿಂದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸವಾರರ ಪಾಲಿಗೆ ಮೃತ್ಯುಕೂಪವಾಗುತ್ತಿರುವ ಡಿವೈಡರ್‌ಗಳು:

ಫ್ಲೆಕ್ಸ್ ಹಾಕುವ ಭರಾಟೆಯಲ್ಲಿ ರಸ್ತೆ ಸುರಕ್ಷತೆಯನ್ನೇ ಗಾಳಿಗೆ ತೂರಲಾಗಿದೆ. ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ (Road Dividers) ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳು ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರ ಸುಗಮ ಚಾಲನೆಗೆ ಅಡ್ಡಿಯುಂಟು ಮಾಡುತ್ತಿವೆ. ಎದುರಿನಿಂದ ಬರುವ ವಾಹನಗಳು ಕಾಣದಂತೆ ಮರೆಮಾಚುವ ಈ ಜಾಹೀರಾತು ಫಲಕಗಳು, ತಿರುವುಗಳಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. “ಗಾಳಿಗೆ ಅಥವಾ ಕೆಲವು ವಾಹನಗಳು ತಾಕಿ ಜಾಹೀರಾತುಗಳು ವಾಲಿಕೊಂಡರೆ, ಟೂವೀಲರ್ ಸವಾರರ ಅಪಘಾತಕ್ಕೂ ಕಾರಣವಾಗುತ್ತದೆ. ಇದಕ್ಕೆ ಯಾರೂ ಹೊಣೆ?” ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಉಲ್ಲಾಳ ವಾರ್ಡಿನ ಅಮ್ಮ ಆಶ್ರಮ ವೃತ್ತದ ಬಳಿ ಅಳವಡಿಸಿರುವ ಅನಧಿಕೃತ ಜಾಹೀರಾತುಗಳ ಜಿಪಿಎಸ್ ಆಧಾರಿತ ಚಿತ್ರ.

ಬಳ್ಳಾರಿ ಘಟನೆ ಪಾಠವಾಗಲಿ:

ಇತ್ತೀಚೆಗೆ ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇಡೀ ಊರು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ರಾಜಧಾನಿ ಬೆಂಗಳೂರಿನಲ್ಲೂ ಫ್ಲೆಕ್ಸ್ ಹಾಕುವ ಮತ್ತು ಕೀಳುವ ವಿಚಾರದಲ್ಲಿ ಆಗಾಗ ಸಣ್ಣಪುಟ್ಟ ರಂಪಾಟಗಳು ನಡೆಯುತ್ತಲೇ ಇವೆ. ಇವು ವಿಕೋಪಕ್ಕೆ ಹೋಗುವ ಮುನ್ನವೇ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.

ನಾಗರಿಕರ ಆಗ್ರಹವೇನು?:

ನಗರದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜಿಬಿಎ ವ್ಯಾಪ್ತಿಯ ಎಲ್ಲ ನಗರ ಪಾಲಿಕೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇವಲ ಫ್ಲೆಕ್ಸ್ ತೆರವುಗೊಳಿಸಿದರೆ ಸಾಲದು, ಅಂತಹ ಅನಧಿಕೃತ ಜಾಹೀರಾತು ಅಳವಡಿಸುವವರ ವಿರುದ್ಧ ಭಾರಿ ದಂಡ ವಿಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

WhatsApp Join our WhatsApp Channel
Previous Post

₹1,464 ಕೋಟಿ ನಕಲಿ ಬಿಲ್ ಜಾಲ ಭೇದಿಸಿದ ವಾಣಿಜ್ಯ ತೆರಿಗೆ ಇಲಾಖೆ: ನಾಲ್ವರ ಬಂಧನ

Next Post

ಕೋಗಿಲು ಅಕ್ರಮ ಶೆಡ್ ತೆರವು: ಕರವೇ ಪ್ರತಿಭಟನೆ ಮುಂದೂಡಿಕೆ ; ಸತ್ಯ ಶೋಧನಾ ವರದಿ ಬಳಿಕ ಚಳುವಳಿ

Next Post

ಕೋಗಿಲು ಅಕ್ರಮ ಶೆಡ್ ತೆರವು: ಕರವೇ ಪ್ರತಿಭಟನೆ ಮುಂದೂಡಿಕೆ ; ಸತ್ಯ ಶೋಧನಾ ವರದಿ ಬಳಿಕ ಚಳುವಳಿ

ದೇವರಾಜ ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ: 'ಜನರ ಆಶೀರ್ವಾದವೇ ಕಾರಣ' ಎಂದು ಭಾವುಕ

Please login to join discussion

Like Us on Facebook

Follow Us on Twitter

Recent News

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026

Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

August 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group