Tuesday, August 4, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

  • Bengaluru Focus

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ 438 ಕೌಟುಂಬಿಕ ದೌರ್ಜನ್ಯ ಪ್ರಕರಣಗಳಷ್ಟೇ ದಾಖಲು – ಹೆಚ್ಚಿನ ಜಾಗೃತಿ ಅಗತ್ಯ: ಜೆ.ಮಂಜುನಾಥ್

by Bengaluru Wire Desk
April 22, 2022
in Bengaluru Focus
Reading Time: 1 min read
0

ಬೆಂಗಳೂರು, (www.bengaluruwire.com) :
ಬೆಂಗಳೂರು ನಗರ ಜಿಲ್ಲೆಯಲ್ಲಿ ಇರುವ 1.5 ಕೋಟಿ ಜನಸಂಖ್ಯೆಯಿದ್ದು ಶೇ. 50 ರಷ್ಟು ಮಹಿಳೆಯರಿದ್ದಾರೆ. ಆದರೂ ಮಹಿಳೆಯರ ನೆರವಿಗಾಗಿ ಸ್ಥಾಪಿಸಲಾಗಿರುವ ‘ಸಖಿ ಒನ್ ಸ್ಟಾಪ್ ಕೇಂದ್ರ’ಗಳಲ್ಲಿ ಒಂದು ವರ್ಷದಲ್ಲಿ ಕೇವಲ 438 ಕೌಟುಂಬಿಕ ದೌರ್ಜನ್ಯ ದೂರುಗಳಷ್ಟೆ ದಾಖಲಾಗಿವೆ ಎಂದು ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ‘ಸಖಿ’ (ಒನ್ ಸ್ಟಾಪ್ ಸೆಂಟರ್) ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ವಲಯದಲ್ಲಿ ಮಹಿಳಾ ಸಹಾಯವಾಣಿ ಮತ್ತು ದೌರ್ಜನ್ಯ ವಿರುದ್ಧ ಪರಿಹಾರ ಪ್ರಕ್ರಯೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿರುವುದನ್ನು ಈ ಅಂಕಿಸಂಖ್ಯೆ ಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ನೊಂದಿರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಮಾತ್ರವಲ್ಲ, ಮೊದಲಿಗೆ ಅವರ ಅಳಲನ್ನು ಕೇಳುವ ಸೂಕ್ಷ್ಮತೆಯನ್ನು ಹೊಂದಿರಬೇಕು. ಇಂತಹ ಪ್ರಕರಣಗಳ ಬಗ್ಗೆ ದೂರು ಸಲ್ಲಿಸಲು ಧೈರ್ಯದಿಂದ ಮುಂದೆ ಬರುವಂತೆ ಸಾರ್ವಜನಿಕ ವಲಯದಲ್ಲಿ ಜಾಗೃತಿ ಹೆಚ್ಚಿಸಬೇಕು ಎಂದು ಸಮಿತಿ ಸದಸ್ಯರಿಗೆ ಸೂಚಿಸಿದರು.

ವರದಕ್ಷಿಣೆ ಕಿರುಕುಳ, ಸಾವು, ಆಸಿಡ್ ದಾಳಿ ಮತ್ತು ಇತರೆ ದೌರ್ಜನ್ಯದಿಂದಾಗಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಮಹಿಳೆಯರ ಪ್ರಕರಣಗಳೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಕಾಲದಲ್ಲಿ ವರದಿಯಾಗಬೇಕು. ಇಲ್ಲವಾದಲ್ಲಿ ಪ್ರಕರಣಗಳ ನೈಜ ಅಂಕಿ- ಅಂಶ ದೊರೆಯುವುದಿಲ್ಲವೆಂದು ಅವರು ತಿಳಿಸಿದರು.

ಸಖಿ ಕೇಂದ್ರ, ಆಸ್ಪತ್ರೆಗಳು, ತಾಲ್ಲೂಕು ಮಟ್ಟದ ಇಲಾಖಾ ಕಚೇರಿಗಳು ಸೇರಿದಂತೆ ಪೊಲೀಸ್ ದೂರುಗಳನ್ನು ಕ್ರೋಢೀಕರಿಸಿ ಮುಂದಿನ ಸಭೆಯಲ್ಲಿ ಈ ಅಂಕಿ- ಅಂಶಗಳನ್ನು ಪ್ರಸ್ತುತ ಪಡಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಈ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಹಾಗೂ ಎಲ್ಲ ಆಸ್ಪತ್ರೆ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಅರಿವು ಮೂಡಿಸಬೇಕು ಎಂದರು.

ಸಖಿ ಕೇಂದ್ರಗಳ ಹೆಚ್ಚಳಕ್ಕೆ ಜಿಲ್ಲಾಧಿಕಾರಿಗಳ ಸಲಹೆ :
ಸಖಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಮಹಿಳೆಯರು ಸುಲಭವಾಗಿ ಅಲ್ಲಿಗೆ ತಲುಪಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು. ಸಖಿ ಕೇಂದ್ರಗಳ ಬಗ್ಗೆ ಜನರಲ್ಲಿರುವ ಅರಿವಿನ ಬಗ್ಗೆ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚುವರಿ ಒಂದು ಸಖಿ ಕೇಂದ್ರ :
ಹೆಚ್ಚುವರಿಯಾಗಿ ಒಂದು ಸಖಿ ಕೇಂದ್ರವನ್ನು ತೆರೆಯಲು ಸರ್ಕಾರದಿಂದ ಸೂಚನೆ ಬಂದಿದ್ದು ಸ್ಥಳದ ಆಯ್ಕೆ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಾ. ನಿಶ್ಚಲ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಎ ಶ್ರೀನಿವಾಸ್ ಅವರು ಆನೇಕಲ್ ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದು, ತಮಿಳುನಾಡಿನ ಗಡಿಯಲ್ಲಿರುವುದರಿಂದ ಅಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರವನ್ನು ಆರಂಭಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ.ಸಯ್ಯದ್ ಮದಿನಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಕಾರ್ಯಪಡೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

RBI Credit Card Issue Direction | ಮನವಿ ಮಾಡದಿದ್ದರೂ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ಗಾಗಿ ನಿಮಗೆ ಸತಾಯಿಸ್ತಿದಿಯಾ? : ಅನಗತ್ಯ ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್ ಬಿಐ ನ ನಿರ್ಬಂಧ ಏನು ಗೊತ್ತಾ? ಈ ಸುದ್ದಿ ಓದಿ

Next Post

Vidhyarthi Bhavan Play | ಸವಿ ಸವಿ ನೆನಪು ಸಾವಿರ ನೆನಪು….! ಮಸಾಲೆದೋಸೆ ಸವಿರುಚಿಯ “ವಿದ್ಯಾರ್ಥಿ ಭವನ” ದ ಕಥೆಯೀಗ ರಂಗಪ್ರಯೋಗಕ್ಕೆ

Next Post

Vidhyarthi Bhavan Play | ಸವಿ ಸವಿ ನೆನಪು ಸಾವಿರ ನೆನಪು....! ಮಸಾಲೆದೋಸೆ ಸವಿರುಚಿಯ “ವಿದ್ಯಾರ್ಥಿ ಭವನ” ದ ಕಥೆಯೀಗ ರಂಗಪ್ರಯೋಗಕ್ಕೆ

ಕೈಚೀಲದಲ್ಲಿ ಚಿನ್ನದ ಗಟ್ಟಿ ಅಡಗಿಸಿಟ್ಟು ಕಳ್ಳಸಾಗಾಣಿಕೆ : ಕಸ್ಟಮ್ಸ್ ಅಧಿಕಾರಿಗಳಿಂದ 192 ಗ್ರಾಂ ಚಿನ್ನ ವಶ

Please login to join discussion

Like Us on Facebook

Follow Us on Twitter

Recent News

ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

August 4, 2026

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

August 4, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

August 4, 2026

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

August 4, 2026

GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

August 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group