Tuesday, August 4, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

  • Bengaluru Focus

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Public interest
  • BW Special
  • Life Style
  • Photo Gallery
  • Video
No Result
View All Result

Home BW Special

BW Special | Non IPS SP Promotion Injustice | ಅರ್ಹತೆಯಿದ್ದರೂ ಕರ್ನಾಟಕದಲ್ಲಿ 109 ಎಸ್ ಪಿ ಹುದ್ದೆಗೆ ಬಡ್ತಿ ಸಿಗದೆ ಅನ್ಯಾಯ : ಎಸ್ ಪಿ ಹುದ್ದೆ ಎಂಬುದು ಇವರಿಗೆ ಗಗನಕುಸುಮ…!

1994ನೇ ಬ್ಯಾಚ್ ಪಿಎಸ್ ಐ ಅಧಿಕಾರಿಗಳು ಬಡ್ತಿ ಹೊಂದಿದರೂ ಡೈವೈಎಸ್ ಪಿ ಅಥವಾ ಎಸಿಪಿಯಾಗಿಯೇ ನಿವೃತ್ತಿ | ಐಪಿಎಸ್ ಯೇತರ 109 SP ಹುದ್ದೆಗಳನ್ನು ಮೀಸಲಿಡಲು ಅಧಿಕಾರಿಗಳ ಆಗ್ರಹ | ಮನವಿ ಮಾಡಿದರೂ ಕ್ಯಾರೇ ಅನ್ನದ ರಾಜ್ಯ ಸರ್ಕಾರ | ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ ಈ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿದ್ದಾರೆ.

by Bengaluru Wire Desk
January 12, 2023
in BW Special, Public interest
Reading Time: 1 min read
0

ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಐಪಿಎಸ್ ಯೇತರ 109 ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (SP) ಮಂಜೂರಾತಿ ಹುದ್ದೆಗಳಿದ್ದರೂ ಅವುಗಳಿಗೆ ಅರ್ಹರಾದ ಡಿವೈಎಸ್‌ಪಿ ಅಥವಾ ಎಸಿಪಿ ದರ್ಜೆಯ ಹಾಗೂ ನೇರವಾಗಿ ಡಿವೈಎಸ್‌ಪಿ ಹುದ್ದೆಗೆ ನೇಮಕಾತಿ ಹೊಂದಿದ ಅಧಿಕಾರಿಗಳಿಗೆ ಮೀಸಲಿಡದ ಕಾರಣ ನೂರಾರು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿದೆ.

ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ವಪೆಕ್ಟರ್ (PSI) ಹುದ್ದೆಗೆ ನೇರವಾಗಿ ನೇಮಕವಾಗುವ ಅಧಿಕಾರಿಗಳು, ಇಲಾಖೆಯಲ್ಲಿ ಸುಮಾರು 30 ರಿಂದ 35 ವರ್ಷ ಸೇವೆ ಸಲ್ಲಿಸಿದ್ದರೂ ಸಹ, ಹೆಚ್ಚಿನ ಅಧಿಕಾರಿಗಳು ಎಸಿಪಿ ಅಥವಾ ಡಿವೈಎಸ್‌ಪಿ ಹುದ್ದೆಯಿಂದಲೇ ನಿವೃತ್ತಿ ಆಗುತ್ತಿದ್ದಾರೆಯೇ ವಿನಃ ಅವರಿಗೆ ಎಸ್ ಪಿ ಹುದ್ದೆ ಎಂಬುದು ಕೇವಲ ಗಗನ ಕುಸುಮವಾಗಿದೆ. ಅಂದರೆ ಅವರು ತಮ್ಮ ಸೇವಾವಧಿಯಲ್ಲಿ ಕೇವಲ ಎರಡು ಬಡ್ತಿಗಳನ್ನು ಮಾತ್ರ ಪಡೆದುಕೊಳ್ಳುವಂತಾಗಿದೆ. ಇನ್ನು ಕೆಲವರು ಪೊಲೀಸ್ ಇನ್ಸ್ ಪೆಕ್ಟರ್ (PI) ಹುದ್ದೆಯಿಂದ ನಿವೃತ್ತಿ ಹೊಂದುತ್ತಾರೆ. ಇವರು ತಮ್ಮ ಸೇವಾವಧಿಯಲ್ಲಿ ಕೇವಲ ಒಂದೇ ಬಡ್ತಿಯನ್ನು ಪಡೆಯುವಂತಾಗಿದೆ.

ವಿಧಾನಸೌಧದ ಸಾಂದರ್ಭಿಕ ಚಿತ್ರ

ಹೆಚ್ಚಿನ ಅಧಿಕಾರಿಗಳು ಎಸ್ ಪಿ (Non-IPS) ಹುದ್ದೆಗೆ ಬಡ್ತಿಯನ್ನು ಪಡೆದರೂ ಅವರ ಸೇವಾವಧಿಯ ಒಂದು ದಿನದಿಂದ ಒಂದು ವರ್ಷದವರೆಗೆ ಮಾತ್ರಇರುತ್ತದೆ. ಇಂತಹ ಹಲವಾರು ನಿದರ್ಶನಗಳು ಇವೆ. ಇದರಿಂದ ಪಿಎಸ್‌ಐ ಹುದ್ದೆಗೆ ನೇಮಕ ಹೊಂದುವ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಒಟ್ಟು 109 ಎಸ್ ಪಿ (ಐಪಿಎಸ್- ಯೇತರ) ಹುದ್ದೆಗಳ ಮಂಜೂರಾತಿ ಇದ್ದರೂ ಐಪಿಎಸ್ ಅಧಿಕಾರಿಗಳೇ ಅದರಲ್ಲಿ ತುಂಬಿ ಹೋಗಿದ್ದಾರೆ. ಇದರಿಂದ 1994 ನೇ ಸಾಲಿನಲ್ಲಿ ಪಿಎಸ್‌ಐ ಹುದ್ದೆಗೆ ನೇಮಕಾತಿ ಹೊಂದಿ, ತದನಂತರ ಎಸಿಪಿ ಅಥವಾ ಡಿವೈಎಸ್‌ಪಿ ಹುದ್ದೆಗೆ ಪದನ್ನೋತಿ ಹೊಂದಿ ಐದೂವರೆ ವರ್ಷಗಳನ್ನು ಪೂರೈಸಿದ್ದರೂ ಸಹ ಅಂತಹವರು ಬಡ್ತಿಯಿಂದ ವಂಚಿತರಾಗುವಂತಾಗಿದೆ.

109 SP(ಐಪಿಎಸ್ ಯೇತರ ) ಹುದ್ದೆಯನ್ನು, ನೇರವಾಗಿ ಪಿಎಸ್‌ಐ ಹುದ್ದೆಗೆ ನೇಮಕಾತಿ ಹೊಂದಿ ಬಡ್ತಿ ಪಡೆದು ಐಪಿಎಸ್ ಯೇತರ ಎಸ್ ಪಿ ಹುದ್ದೆಗೆ ಅರ್ಹರಾಗಿರುವ ಡಿವೈಎಸ್‌ಪಿ ಅಥವಾ ಎಸಿಪಿ ರವರಿಗೆ ಹಾಗೂ ನೇರವಾಗಿ ಡಿವೈಎಸ್‌ಪಿ ಹುದ್ದೆಗೆ ನೇಮಕಾತಿ ಹೊಂದಿದ ಅಧಿಕಾರಿಗಳಿಗೆ ಮೀಸಲಿರಿಸಬೇಕು. ಹಾಗೂ ಈ ಅರ್ಹ ಅಧಿಕಾರಿಗಳಿಗೆ SP(ಐಪಿಎಸ್ ಯೇತರ ) ಹುದ್ದೆಗೆ ಬಡ್ತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು, ಈ ಹಿಂದೆ ಸಂಬಂಧಿಸಿದ ಅಧಿಕಾರಿಗಳು ಬಿಜೆಪಿ ನೇತೃತ್ವದ ಸರ್ಕಾರದಲ್ಲಿನ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದರು. ಆದರೂ ಅದಿಕ್ಕೆ ರಾಜ್ಯ ಸರ್ಕಾರ ಕ್ಯಾರೇ ಎಂದಿಲ್ಲ ಎಂದು ಆ ಅಧಿಕಾರಿಗಳು ಬೆಂಗಳೂರು ವೈರ್ ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಏನಂತಾರೆ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

“ರಾಜ್ಯದಲ್ಲಿ ಐಪಿಎಸ್ ಯೇತರ ಎಸ್ಪಿ ಹುದ್ದೆಗಳಿಗೆ ಬಡ್ತಿ ಹೊಂದಿದ ಅಧಿಕಾರಿಗಳನ್ನು ನೇಮಕ ಮಾಡುವ ಕುರಿತು ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು. ಎಸ್ಪಿ ಹುದ್ದೆಗಳಿಗೆ ನೇಮಕ ಮಾಡುವಾಗ ಬಡ್ತಿ ಹೊಂದಿದ ಅಧಿಕಾರಿಗಳನ್ನು ಪರಿಗಣಿಸಿ ಅವರಿಗೆ ನ್ಯಾಯ ಒದಗಿಸಬೇಕು. ಈ ವಿಚಾರದಲ್ಲಿ ನಾನು ಸಹ ಸರ್ಕಾರದ ಗಮನ ಸೆಳೆಯುತ್ತೇನೆ.”

– ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ದರ್ಜೆಯ 7 ಹುದ್ದೆಗಳು, ಮೈಸೂರು, ಧಾರವಾಡ, ಮಂಗಳೂರು ಹಾಗೂ ಕಲ್ಬುರ್ಗಿ(ಕಾನೂನು ಮತ್ತು ಸುವ್ಯವಸ್ಥೆ ಸೇರಿ), ಬೆಳಗಾವಿ (ಕಾನೂನು ಮತ್ತು ಸುವ್ಯವಸ್ಥೆ ಸೇರಿ) ಅಪರಾಧ ಮತ್ತು ಸಂಚಾರ ವಿಭಾಗದಲ್ಲಿ 7 ಹುದ್ದೆಗಳು, ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಎಸ್ ಪಿ ದರ್ಜೆಯ 2 ಹುದ್ದೆಗಳು, ಬೆಂಗಳೂರಿನಲ್ಲಿ ಎಸ್ ಪಿ ದರ್ಜೆಯ ಎಸ್ ಸಿಆರ್ ಬಿ 1 ಹುದ್ದೆ ಸೇರಿದಂತೆ 109 ಐಪಿಎಸ್ ಯೇತರ ಹುದ್ದೆಗಳು ಮಂಜೂರಾಗಿದೆ.

ಸರ್ಕಾರದಿಂದ ಮಂಜೂರು ಮಾಡಲಾದ 109 ಎಸ್ ಪಿ  (ಐಪಿಎಸ್ ಯೇತರ) ಹುದ್ದೆಗಳಲ್ಲಿ,  ಪ್ರಸ್ತುತ 30 ಐಪಿಎಸ್ ಅಧಿಕಾರಿಗಳು, ಸಶಸ್ತ್ರ ಅಧಿಕಾರಿಗಳು ಮತ್ತು ಎಸ್.ಪಿ.ಡಿಟೆಕ್ಟಿವ್ ದರ್ಜೆಯ ಅಧಿಕಾರಿಗಳು (ಸದರಿ ಎಸ್.ಪಿ. ಡಿಟೆಕ್ಟಿವ್ ಅಧಿಕಾರಿಗಳು ನೇಮಕಾತಿ ಹೊಂದುವಾಗಲೇ ಪಿಎಸ್‌ಐ ಡಿಟೆಕ್ಟಿವ್ ಹುದ್ದೆಗೆ 2001ರಲ್ಲಿ ನೇಮಕಾತಿ ಹೊಂದಿರುತ್ತಾರೆ) ಕಾರ್ಯನಿರ್ವಹಿಸುತ್ತಿದ್ದಾರೆ.

ಸದ್ಯ 1994ರ ಬ್ಯಾಚಿನಲ್ಲಿ ನೇಮಕಗೊಂಡ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ಐಪಿಎಸ್ ಯೇತರ ಎಸ್ ಪಿ ಹುದ್ದೆ ಸಿಗುವಲ್ಲಿ ಅನ್ಯಾಯವಾಗುತ್ತಿದೆ. ಮುಂದೇ ಇದು ಎಲ್ಲರಿಗೂ ವಿಸ್ತರಣೆಯಾಗಲಿದೆ. ಹಾಗಾಗಿ 109 ಎಸ್ ಪಿ  (ಐಪಿಎಸ್ ಯೇತರ) ಹುದ್ದೆಗಳಿಗೆ ಮೀಸಲಾತಿ ಕಲ್ಪಿಸಿದರೆ ಆ ಅನ್ಯಾಯವನ್ನು ತಪ್ಪಿಸಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

WhatsApp Join our WhatsApp Channel
Previous Post

Puneeth Rajkumar Statue | ಬಿಬಿಎಂಪಿ ನೌಕರರ ಕನ್ನಡ ಸಂಘ ಸ್ಥಾಪಿಸಿದ ಡಾ.ಪುನೀತ್ ರಾಜ್ ಕುಮಾರ್ ಪುತ್ಥಳಿ ಲೋಕಾರ್ಪಣೆ

Next Post

Karnataka State Highways Toll | ರಾಜ್ಯದ 617 ಕಿ.ಮೀ ಉದ್ದದ ಹತ್ತು ರಸ್ತೆಗಳಲ್ಲಿ ಸಂಚರಿಸಬೇಕೆಂದರೆ ನೀವು ಟೋಲ್ ಕೊಟ್ಟೇ ಹೋಗಬೇಕು : ಮೇ ತಿಂಗಳಿನಿಂದ ಟೋಲ್ ಸಂಗ್ರಹ ನಿರೀಕ್ಷೆ

Next Post
ಸಾಂದರ್ಭಿಕ ಚಿತ್ರ

Karnataka State Highways Toll | ರಾಜ್ಯದ 617 ಕಿ.ಮೀ ಉದ್ದದ ಹತ್ತು ರಸ್ತೆಗಳಲ್ಲಿ ಸಂಚರಿಸಬೇಕೆಂದರೆ ನೀವು ಟೋಲ್ ಕೊಟ್ಟೇ ಹೋಗಬೇಕು : ಮೇ ತಿಂಗಳಿನಿಂದ ಟೋಲ್ ಸಂಗ್ರಹ ನಿರೀಕ್ಷೆ

ತನ್ನದೇ ಸೃಷ್ಟಿಯ ಮೈದಡವಿ ಸಾಗುತಿರುವ ರವಿತೇಜ

Please login to join discussion

Like Us on Facebook

Follow Us on Twitter

Recent News

ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

August 3, 2026

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

August 3, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

August 3, 2026

ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

August 3, 2026
ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

August 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group