ಬೆಂಗಳೂರು,ಅ.29 www.bengaluruwire.com: ರಾಜ್ಯದಲ್ಲಿ ಗುಣಮಟ್ಟವಿಲ್ಲದ ಹಾಗೂ ಅನಧಿಕೃತ ಪ್ಯಾಕೇಜ್ಡ್ ಕುಡಿಯುವ ನೀರು ಮಾರಾಟಕ್ಕೆ ಕಡಿವಾಣ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದಂತೆ, ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (Packaged Drinking Water) ತಯಾರಿಕಾ ಘಟಕಗಳ ಮೇಲೆ ಅಕ್ಟೋಬರ್ 29 ಮತ್ತು 30ರಂದು ಎರಡು ದಿನಗಳ ಕಾಲ ಸಮಗ್ರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ:
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪರವಾನಗಿ ಮತ್ತು ನೋಂದಣಿ) ನಿಯಮಗಳು 2011ರ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ವಿವಿಧ ಜಿಲ್ಲೆಗಳ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಒಳಗೊಂಡ ಒಟ್ಟು 23 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ.

ಘಟಕಗಳಲ್ಲಿ ನೀರಿನ ಶುದ್ಧತೆ, ಅಗತ್ಯ ಪರವಾನಗಿ, ನೈರ್ಮಲ್ಯ ಹಾಗೂ ಪ್ಯಾಕೇಜಿಂಗ್ ಗುಣಮಟ್ಟವನ್ನು ಈ ತಂಡಗಳು ಪರಿಶೀಲಿಸಲಿವೆ. ನಿಯಮ ಉಲ್ಲಂಘಿಸಿದರೆ ಅಂತಹ ಘಟಕಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ತಪಾಸಣೆಗೆ ಒಳಪಡುತ್ತಿರುವ ಪ್ರಮುಖ ಘಟಕಗಳು ಹಾಗೂ ಬ್ರ್ಯಾಂಡ್ಗಳು:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಮತ್ತು ಬ್ರ್ಯಾಂಡ್ಗಳ ವಿವರ:
ಬೆಂಗಳೂರು ಗ್ರಾಮಾಂತರ: ಬಿಸ್ಲೇರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ (Bisleri), ಅಕ್ವಾಫಿನಾ (Aquafina)
ಬೆಂಗಳೂರು ನಗರ / ಬೆಂಗಳೂರು: ಕಿನ್ಲೆ (Kinley), ಗೂಡ್ಡ್ಯೂ (GOODEW), ನಿರೇಟಾ (NIRETA), ನೀರಮ್ (Neeram)
ದಕ್ಷಿಣ ಕನ್ನಡ (ಬಂಟ್ವಾಳ): ಎಸ್.ಎಲ್.ವಿ. ಆಕ್ವಾ ಕಿಂಗ್ (SLV Aqua King – SLV Enterprises Pvt. Ltd.)
ವಿಜಯಪುರ: ಎಫ್.ಎಂ. ಆಕ್ವಾ (FM Aqua)
ಬಳ್ಳಾರಿ: ಎಸ್.ಎಂ. ಆಕ್ವಾ ಆ್ಯಂಡ್ ಬೆವರೇಜಸ್ (S.M. Aqua and Beverages)
ಬಳ್ಳಾರಿ (ಹೂವಿನ ಹಡಗಲಿ): ನೇಚರಿ ಬೆವರೇಜಸ್ (Naturey Beverages)
ಶಿವಮೊಗ್ಗ ಜಿಲ್ಲೆ: ಸಿಯಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (Siya Packaged Drinking Water)
ದಾವಣಗೆರೆ: ಋಷಭಾದ್ರಿ ಮಿನರಲ್ಸ್ (Rishabhadri Minerals)
ಕಲಬುರಗಿ: ಶಿವಲಿಂಗೇಶ್ವರ ಮಿನರಲ್ಸ್ (Shivalingeshwara Minerals)
ಕನಕಪುರ: ದೀಕ್ಷಾ ಇಂಡಸ್ಟ್ರೀಸ್ (Deeksha Industries)
ತುಮಕೂರು: ಆಕಾಶ್ವಿನ್ ಫುಡ್ಸ್ ಆ್ಯಂಡ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ (Akashwin Foods and Beverages Pvt. Ltd.)
ಮಂಡ್ಯ: ಮೌಂಟೇನ್ ಆಕ್ವಾ (Mountain Aqua)
ಬೆಳಗಾವಿ: ಶಿವಗಂಗಾ ಫುಡ್ಸ್ ಆ್ಯಂಡ್ ಬೆವರೇಜಸ್ (Shivaganga Foods and Beverages)



















