Tuesday, October 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Real Estate News | ಕಚೇರಿ ಸ್ಥಳ ಬಾಡಿಗೆಯಲ್ಲಿ ಹೊಸ ದಾಖಲೆ: 6.1 ಕೋಟಿ ಚದರ ಅಡಿ ಗುತ್ತಿಗೆ

    ಹೊಯ್ಸಳ ಶಿಲ್ಪಕಲೆಯ ಹಿಂದಿನ ಅಚ್ಚರಿಯ ವಿಜ್ಞಾನದ ರಹಸ್ಯವೇನು ಗೊತ್ತಾ?

    ಪತ್ನಿ ರಶ್ಮಿಕಾರನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ರಾ ವಿಜಯ್ ದೇವರಕೊಂಡ? ವೈರಲ್ ವದಂತಿಯ ಅಸಲಿ ಸತ್ಯವೇನು?

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

  • Bengaluru Focus

    BDA News | ₹671 ಕೋಟಿ ರಸ್ತೆಗೆ 4 ತಿಂಗಳಲ್ಲೇ ‘ಗುಂಡಿ ಭಾಗ್ಯ’: ಎಸ್‌ಎಂ ಕೃಷ್ಣ ಮಾರ್ಗ ಬಿಡಿಎ ಕಮಿಷನ್ ದಂಧೆಯ ನರಕಕೂಪವೇ?

    Real Estate News | ಕಚೇರಿ ಸ್ಥಳ ಬಾಡಿಗೆಯಲ್ಲಿ ಹೊಸ ದಾಖಲೆ: 6.1 ಕೋಟಿ ಚದರ ಅಡಿ ಗುತ್ತಿಗೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    ಗೃಹ ಜ್ಯೋತಿ ಸಮೀಕ್ಷೆಗೆ ಅಕ್ಟೋಬರ್ 31 ಕೊನೆ ದಿನ: ಗಡುವು ವಿಸ್ತರಣೆ ಇಲ್ಲ ಎಂದ ಬೆಸ್ಕಾಂ

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

    ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BDA News | ₹671 ಕೋಟಿ ರಸ್ತೆಗೆ 4 ತಿಂಗಳಲ್ಲೇ ‘ಗುಂಡಿ ಭಾಗ್ಯ’: ಎಸ್‌ಎಂ ಕೃಷ್ಣ ಮಾರ್ಗ ಬಿಡಿಎ ಕಮಿಷನ್ ದಂಧೆಯ ನರಕಕೂಪವೇ?

ಉದ್ಘಾಟನೆ ಕಂಡ ನಾಲ್ಕೇ ತಿಂಗಳಲ್ಲಿ ಹಲವು ಕಡೆಗಳಲ್ಲಿ ಹಳ್ಳ; ನಾದಪ್ರಭು ಕೆಂಪೇಗೌಡ ಬಡಾವಣೆಯ 10 ಪಥಗಳ ರಸ್ತೆ ಯಮಲೋಕದ ಹೆದ್ದಾರಿಯಾಯಿತೇ?

by Bengaluru Wire Desk
October 27, 2026
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ಅ.27 www.bengaluruwire.com: ಜನರ ರಕ್ತ-ಬೆವರ ಹನಿಗಳಿಂದ ಹರಿದುಬಂದ ತೆರಿಗೆ ಹಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊಡುವ ‘ಅಭಿವೃದ್ಧಿ ಬೆಲೆ’ ಇದೇನಾ? 

ಬರೋಬ್ಬರಿ ₹671 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ (NPKL) ವ್ಯಾಪ್ತಿಯಲ್ಲಿ ನಿರ್ಮಾಣವಾದ 10.7 ಕಿ.ಮೀ ಉದ್ದದ, 10 ಪಥಗಳ ‘ಎಸ್.ಎಂ. ಕೃಷ್ಣ ಪ್ರಮುಖ ಅಪಧಮನಿ ರಸ್ತೆ’ (Major Arterial Road) ಕೇವಲ ನಾಲ್ಕು ತಿಂಗಳಲ್ಲಿ ಜಲ್ಲಿ-ಡಾಂಬರು ಕಿತ್ತುಬಂದು ಅಕ್ಷರಶಃ ‘ಡೆತ್ ಟ್ರ್ಯಾಪ್’ ಆಗಿ ಮಾರ್ಪಟ್ಟಿದೆ.

‘ವಿಶ್ವದರ್ಜೆಯ ರಸ್ತೆ’ ಎಂದು ಬಿಂಬಿಸಿ, ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಉದ್ಘಾಟನೆಗೊಂಡ ಈ ಹೆದ್ದಾರಿ, ಇಂದು ನಗರದ ಅತ್ಯಂತ ದುಬಾರಿ ಕಳಪೆ ಕಾಮಗಾರಿಯ ಜ್ವಲಂತ ನಿದರ್ಶನವಾಗಿ ಜನರ ಜೀವಕ್ಕೆ ಎರವಾಗುತ್ತಿದೆ.

ಜಲ್ಲಿ ಎದ್ದ ರಸ್ತೆ, ಉರುಳಿಬಿದ್ದ ವಾಹನ: 4 ತಿಂಗಳಿಗೆ ಕಿತ್ತುಹೋದ ಬಿಡಿಎ ಮಾನ!

ಅಕ್ಟೋಬರ್ 23ರಂದು ಈ 300 ಅಡಿ ಅಗಲದ ರಸ್ತೆಯಲ್ಲಿ ಬಿದ್ದಿದ್ದ ಬೃಹತ್ ಕಂದಕದಂತ ರಸ್ತೆಗುಂಡಿಗೆ ಸಿಲುಕಿ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದನ್ನು ಸ್ಥಳೀಯ ನಿವಾಸಿಗಳು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅ.25ರಂದು ಎತ್ತಿ ತೋರಿಸಿ, “ಹೊಸ ರಸ್ತೆ ಸಾವಿನ ಬಲೆಯಾಗಿದೆ” ಎಂದು ಆಕ್ರೋಶ ಹೊರಹಾಕಿದ ಮೇಲಷ್ಟೇ ಕುಂಭಕರ್ಣ ನಿದ್ದೆಯಲ್ಲಿದ್ದ ಬಿಡಿಎ ಕಣ್ಣು ತೆರೆದಿದೆ.

ಅ.27ರ ಬೆಳಗ್ಗೆಯೇ ಬಿಡಿಎ ಅಧಿಕಾರಿಗಳು ರೋಡ್ ಪ್ಯಾಚಿಂಗ್ ಯಂತ್ರಗಳು ಮತ್ತು ಡಾಂಬರು ಮಿಕ್ಸರ್ ಜೊತೆಗೆ ಸ್ಥಳಕ್ಕೆ ಧಾವಿಸಿ ಗುಂಡಿ ಮುಚ್ಚುವ ‘ತೇಪೆ ಹಚ್ಚುವ’ ಕಸರತ್ತು ಆರಂಭಿಸಿದ್ದಾರೆ. ಆದರೆ ನಾಗರಿಕರ ನೇರ ಪ್ರಶ್ನೆ: ₹671 ಕೋಟಿ ಖರ್ಚು ಮಾಡಿದ ಹೆದ್ದಾರಿಗೆ ನಾಲ್ಕೇ ತಿಂಗಳಲ್ಲಿ ತೇಪೆ ಹಚ್ಚುವ ದೌರ್ಭಾಗ್ಯ ಏಕೆ ಬಂತು? ಇದು ತಾಂತ್ರಿಕ ದೋಷವೋ ಅಥವಾ ಬಿಡಿಎ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ಜೇಬು ಸೇರಿದ ‘ಕಮಿಷನ್’ ಫಲಿತಾಂಶವೋ?

ಕಳಪೆ ಕಾಮಗಾರಿ: ಬಿಡಿಎ ಗುತ್ತಿಗೆದಾರರ ರಹಸ್ಯ ಒಪ್ಪಂದ?:

ಒಂದು ದಶಪಥ ಹೆದ್ದಾರಿಯ ಮೂಲಭೂತ ಗುಣಮಟ್ಟ ಪರೀಕ್ಷೆ, ಸಾಯಿಲ್ ಕಾಂಪ್ಯಾಕ್ಷನ್ ಮತ್ತು ಬಿಟುಮಿನ್ ಸಾಂದ್ರತೆಯ ಮಾನದಂಡಗಳನ್ನು ಗಾಳಿಗೆ ತೂರದೇ ಹೋಗಿದ್ದರೆ ಇಷ್ಟು ಬೇಗ ರಸ್ತೆ ಕರಗಿಹೋಗಲು ಸಾಧ್ಯವೇ ಇಲ್ಲ. ಮಳೆಗಾಲದ ನೆಪ ಹೇಳಿ ಜಾರಿಕೊಳ್ಳುವ ಬಿಡಿಎ ಅಧಿಕಾರಿಗಳ ಸಬೂಬು ಇಲ್ಲಿ ನಡೆಯುವುದಿಲ್ಲ. ಏಕೆಂದರೆ, ಸಾಮಾನ್ಯ ಮಳೆಗೇ ಜಲ್ಲಿ ಕಿತ್ತು ಧೂಳು ಹಾರುವ ಮಟ್ಟಕ್ಕೆ ರಸ್ತೆ ಹದಗೆಟ್ಟಿದೆ ಎಂದರೆ, ಡಾಂಬರೀಕರಣದ ನೆಪದಲ್ಲಿ ಕೇವಲ ತೆಳು ಪದರವನ್ನು ಸುರಿದು ಕೋಟಿ ಕೋಟಿ ಹಣ ಗುಳುಂ ಮಾಡಲಾಗಿದೆ ಎಂಬುದು ಸ್ಪಷ್ಟ.

ಸಾರ್ವಜನಿಕ ಆಕ್ರೋಶ: ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಲಿ!:

“ನಮ್ಮ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಂಬಿ ಹೋದರೆ ಆಸ್ಪತ್ರೆ ಸೇರುವುದು ಗ್ಯಾರಂಟಿ. ಗುತ್ತಿಗೆದಾರರಿಗೆ ಕಪ್ಪುಪಟ್ಟಿ ಹಾಕಿ, ಕಾಮಗಾರಿಗೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು” ಎಂದು ಕೆಂಪೇಗೌಡ ಬಡಾವಣೆಯ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಕೇವಲ ಗುಂಡಿ ಮುಚ್ಚುವ ತಾತ್ಕಾಲಿಕ ನಾಟಕದಿಂದ ಈ ಹಗರಣ ಮುಚ್ಚಿಹೋಗಲು ಸಾಧ್ಯವಿಲ್ಲ. ₹671 ಕೋಟಿ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಗುಣಮಟ್ಟ ಪರಿಶೀಲನೆ (Third-Party Audit) ನಡೆಯಬೇಕು ಮತ್ತು ದುರಸ್ತಿ ವೆಚ್ಚವನ್ನು ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಭ್ರಷ್ಟ ಅಧಿಕಾರಿಗಳ ವೇತನದಿಂದಲೇ ವಸೂಲಿ ಮಾಡಬೇಕೆಂಬ ಕೂಗು ಈಗ ಬೆಂಗಳೂರಿನಾದ್ಯಂತ ತೀವ್ರಗೊಂಡಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Real Estate News | ಕಚೇರಿ ಸ್ಥಳ ಬಾಡಿಗೆಯಲ್ಲಿ ಹೊಸ ದಾಖಲೆ: 6.1 ಕೋಟಿ ಚದರ ಅಡಿ ಗುತ್ತಿಗೆ

Please login to join discussion

Like Us on Facebook

Follow Us on Twitter

Recent News

BDA News | ₹671 ಕೋಟಿ ರಸ್ತೆಗೆ 4 ತಿಂಗಳಲ್ಲೇ ‘ಗುಂಡಿ ಭಾಗ್ಯ’: ಎಸ್‌ಎಂ ಕೃಷ್ಣ ಮಾರ್ಗ ಬಿಡಿಎ ಕಮಿಷನ್ ದಂಧೆಯ ನರಕಕೂಪವೇ?

October 27, 2026

Real Estate News | ಕಚೇರಿ ಸ್ಥಳ ಬಾಡಿಗೆಯಲ್ಲಿ ಹೊಸ ದಾಖಲೆ: 6.1 ಕೋಟಿ ಚದರ ಅಡಿ ಗುತ್ತಿಗೆ

October 27, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BDA News | ₹671 ಕೋಟಿ ರಸ್ತೆಗೆ 4 ತಿಂಗಳಲ್ಲೇ ‘ಗುಂಡಿ ಭಾಗ್ಯ’: ಎಸ್‌ಎಂ ಕೃಷ್ಣ ಮಾರ್ಗ ಬಿಡಿಎ ಕಮಿಷನ್ ದಂಧೆಯ ನರಕಕೂಪವೇ?

October 27, 2026

Real Estate News | ಕಚೇರಿ ಸ್ಥಳ ಬಾಡಿಗೆಯಲ್ಲಿ ಹೊಸ ದಾಖಲೆ: 6.1 ಕೋಟಿ ಚದರ ಅಡಿ ಗುತ್ತಿಗೆ

October 27, 2026

ಹೊಯ್ಸಳ ಶಿಲ್ಪಕಲೆಯ ಹಿಂದಿನ ಅಚ್ಚರಿಯ ವಿಜ್ಞಾನದ ರಹಸ್ಯವೇನು ಗೊತ್ತಾ?

October 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d