Saturday, October 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

    ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ ಮಗುವನ್ನು ಗಮನಿಸದೆ ರೀಲ್ಸ್ ಮಾಡಿದ ದಂಪತಿ: ವಿಡಿಯೋ ವೈರಲ್!

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

    ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

  • Bengaluru Focus

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

    ‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

    ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

‘Pride of Karnataka’ ಮೊದಲ ಯಾತ್ರೆಯಲ್ಲಿ 75 ಅತಿಥಿಗಳ ಪ್ರಯಾಣ; ಒಟ್ಟು 13 ಐಷಾರಾಮಿ ಟ್ರಿಪ್‌ಗಳ ನಿಗದಿ.

by Bengaluru Wire Desk
October 24, 2026
in Bengaluru Focus, Public interest
Reading Time: 2 mins read
0

ಬೆಂಗಳೂರು, ಅ.24 www.bengaluruwire.com: ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ನ (Golden Chariot) 2026–27ನೇ ಸಾಲಿನ ಪ್ರವಾಸಿ ಋತುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲು ನಿಲ್ದಾಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.

ಗೋಲ್ಡನ್ ಚಾರಿಯಟ್‌ಗೆ ಹೊಸ ರೂಪ: 

ರೈಲಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕರ್ನಾಟಕ ದರ್ಶನದ ಪರಿಕಲ್ಪನೆಯನ್ನು ಮತ್ತಷ್ಟು ಸಮಗ್ರವಾಗಿ ಮುಂದುವರಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಶ್ರೀಮಂತ ಪರಂಪರೆ, ಪ್ರವಾಸಿ ವೈವಿಧ್ಯತೆಯನ್ನು ದೇಶ–ವಿದೇಶದ ಪ್ರವಾಸಿಗರಿಗೆ ಪರಿಚಯಿಸಲು ಗೋಲ್ಡನ್ ಚಾರಿಯಟ್‌ಗೆ ಹೊಸ ರೂಪ ಮತ್ತು ನೂತನ ಪ್ರವಾಸಿ ಮಾರ್ಗಗಳನ್ನು ನೀಡಲಾಗಿದೆ”. 

“ಸಚಿವ ಕೆ.ಜೆ. ಜಾರ್ಜ್ ಅವರು ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ‘Pride of Karnataka’ ಸೇರಿದಂತೆ ಹೊಸ ಯಾತ್ರಾ ಮಾರ್ಗಗಳನ್ನು ರೂಪಿಸಿ, ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸುವತ್ತ ವಿಶೇಷ ಗಮನ ಹರಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲ ಯಾತ್ರೆಯಲ್ಲಿ 75 ಅತಿಥಿಗಳು: ಐದು ರಾತ್ರಿ ಹಾಗೂ ಆರು ದಿನಗಳ ‘ಪ್ರೈಡ್ ಆಫ್ ಕರ್ನಾಟಕ’ (Pride of Karnataka) ಮೊದಲ ಯಾತ್ರೆಯಲ್ಲಿ 75 ಅತಿಥಿಗಳು ಪ್ರಯಾಣ ಬೆಳೆಸಿದ್ದು, ಅವರ ಆತಿಥ್ಯ ಮತ್ತು ಸೇವೆಗಾಗಿ ರೈಲಿನಲ್ಲಿ ಸುಮಾರು 60 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೋಲ್ಡನ್ ಚಾರಿಯಟ್‌ನಲ್ಲಿ ಸುಸಜ್ಜಿತ ಅತಿಥಿ ಕೊಠಡಿಗಳು, ಊಟದ ಬೋಗಿಗಳು, ಸ್ಪಾ ಸೇರಿದಂತೆ ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳಿವೆ.

“ವಿಶ್ರಾಂತಿ, ಉತ್ತಮ ದೃಶ್ಯಾನುಭವ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ರೀತಿಯಲ್ಲಿ ಈ ಯಾತ್ರೆಯನ್ನು ರೂಪಿಸಲಾಗಿದೆ. ಕರ್ನಾಟಕವನ್ನು ಸಂಪೂರ್ಣವಾಗಿ ನೋಡದ ರಾಜ್ಯದ ಜನರೂ ಸೇರಿದಂತೆ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ನಮ್ಮ ರಾಜ್ಯದ ವೈವಿಧ್ಯತೆಯನ್ನು ಒಂದೇ ಯಾತ್ರೆಯಲ್ಲಿ ಅನುಭವಿಸುವ ಅವಕಾಶ ಪಡೆಯಬೇಕು” ಎಂದು ಸಿಎಂ ಆಶಿಸಿದರು.

ಪ್ರತಿ ನಿಲ್ದಾಣದಲ್ಲೂ ವಿಶಿಷ್ಟ ಸ್ಥಳೀಯ ಅನುಭವ: ರೈಲಿನೊಳಗಿನ ಐಷಾರಾಮಿ ಸೌಲಭ್ಯದ ಜೊತೆಗೆ, ಪ್ರತಿಯೊಂದು ನಿಲ್ದಾಣದಲ್ಲೂ ಸ್ಥಳೀಯ ಸಂಸ್ಕೃತಿ ಮತ್ತು ಪರಿಸರದ ನೇರ ಅನುಭವಕ್ಕೆ ಆದ್ಯತೆ ನೀಡಲಾಗಿದೆ:

ಬಂಡೀಪುರ: ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿ ಮೂಲಕ ರಾಜ್ಯದ ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪತ್ತಿನ ದರ್ಶನ.

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ರಾಜವೈಭವದ ವೀಕ್ಷಣೆ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣಕ್ಕೆ ಭೇಟಿ.

ಬೇಲೂರು–ಹಳೇಬೀಡು: ಹೊಯ್ಸಳರ ಕಾಲದ ದೇಗುಲಗಳ ಅಪೂರ್ವ ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಪರಂಪರೆಯ ಪರಿಚಯ.

ಚಿಕ್ಕಮಗಳೂರು: ಆಯ್ದ ಕಾಫಿ ತೋಟಗಳಿಗೆ ಭೇಟಿ, ಸ್ಥಳೀಯ ಕಾಫಿ ಸಂಸ್ಕೃತಿ ಹಾಗೂ ಮಲೆನಾಡಿನ ಜೀವನಶೈಲಿಯ ಅನಾವರಣ.

ಹಂಪಿ: ಯುನೆಸ್ಕೋ ವಿಶ್ವ ಪರಂಪರೆ ತಾಣದ ಸ್ಮಾರಕಗಳು, ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ವಾಸ್ತುಶಿಲ್ಪ ವೈಭವದ ಮಾರ್ಗದರ್ಶಿತ ವೀಕ್ಷಣೆ.

ಗೋವಾ: ಉತ್ತರ ಗೋವಾದ ಐತಿಹಾಸಿಕ ಚರ್ಚುಗಳು, ಇಂಡೋ–ಪೋರ್ಚುಗೀಸ್ ಪರಂಪರೆ ಮತ್ತು ಕರಾವಳಿಯ ಸೊಬಗಿನ ಅನುಭವ.

2026–27ನೇ ಸಾಲಿನ 3 ವಿಶೇಷ ಐಷಾರಾಮಿ ಪ್ಯಾಕೇಜ್‌ಗಳು: ಈ ಪ್ರವಾಸಿ ಋತುವಿನಲ್ಲಿ ಒಟ್ಟು 13 ಐಷಾರಾಮಿ ಯಾತ್ರೆಗಳನ್ನು ನಿಗದಿಪಡಿಸಲಾಗಿದ್ದು, ಪ್ರವಾಸಿಗರಿಗಾಗಿ ಮೂರು ವಿಭಿನ್ನ ಮಾರ್ಗಗಳನ್ನು ಪರಿಚಯಿಸಲಾಗಿದೆ:

Pride of Karnataka (5 ರಾತ್ರಿ / 6 ದಿನಗಳು): ಬೆಂಗಳೂರು – ಬಂಡೀಪುರ – ಮೈಸೂರು – ಹಳೇಬೀಡು – ಚಿಕ್ಕಮಗಳೂರು – ಹಂಪಿ – ಗೋವಾ – ಬೆಂಗಳೂರು.

Jewels of South (5 ರಾತ್ರಿ / 6 ದಿನಗಳು): ಬೆಂಗಳೂರು – ಮೈಸೂರು – ಹಂಪಿ – ಮಹಾಬಲಿಪುರಂ – ತಂಜಾವೂರು – ಚೆಟ್ಟಿನಾಡು – ಕೊಚ್ಚಿ – ಕುಮಾರಕೋಂ – ಬೆಂಗಳೂರು. (ಕರ್ನಾಟಕದ ಜೊತೆಗೆ ದಕ್ಷಿಣ ಭಾರತದ ಪ್ರಮುಖ ತಾಣಗಳ ಜೋಡಣೆ).

Glimpses of Karnataka (3 ರಾತ್ರಿ / 4 ದಿನಗಳು): ಬೆಂಗಳೂರು – ಬಂಡೀಪುರ – ಮೈಸೂರು – ಹಂಪಿ – ಬೆಂಗಳೂರು. (ಕಡಿಮೆ ಅವಧಿಯಲ್ಲಿ ರಾಜ್ಯದ ಪ್ರಮುಖ ಆಕರ್ಷಣೆಗಳ ವೀಕ್ಷಣೆ).

ಹೊಸ ತಾಣಗಳ ಮ್ಯಾಪಿಂಗ್ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು: ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. “ರಾಜ್ಯದಲ್ಲಿ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವಿದೆ. ಈಗಿರುವ ಪ್ರಸಿದ್ಧ ತಾಣಗಳ ಜೊತೆಗೆ ಹೊಸ ಪ್ರದೇಶಗಳನ್ನೂ ಗುರುತಿಸಿ (ಮ್ಯಾಪ್ ಮಾಡಿ) ಪ್ರವಾಸಿಗರಿಗೆ ಪರಿಚಯಿಸಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳು ಹೆಚ್ಚಲಿವೆ” ಎಂದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಲವರ್ಧನೆ: ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, “ಗೋಲ್ಡನ್ ಚಾರಿಯಟ್ ಅನ್ನು ಕೇವಲ ಐಷಾರಾಮಿ ರೈಲು ಯಾತ್ರೆಯಾಗಿ ನೋಡದೆ, ಕರ್ನಾಟಕದ ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿ ನಾಡು ಮತ್ತು ಆತಿಥ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಪ್ರೀಮಿಯಂ ಪ್ರವಾಸೋದ್ಯಮ ಉತ್ಪನ್ನವಾಗಿ ರೂಪಿಸಲಾಗಿದೆ. ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕದ ಪ್ರವಾಸೋದ್ಯಮದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಾಗುವುದು” ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ರೈಲಿನ ಐಷಾರಾಮಿ ಆತಿಥ್ಯ ಮತ್ತು ಪ್ರತಿ ನಿಲ್ದಾಣದ ಸ್ಥಳೀಯ ಅನುಭವಗಳನ್ನು ಸಮಗ್ರವಾಗಿ ಜೋಡಿಸುವುದು ಈ ರೈಲಿನ ವಿಶೇಷತೆ. ಮುಂದಿನ ಹಂತದಲ್ಲಿ ಬುಕ್ಕಿಂಗ್, ಮಾರುಕಟ್ಟೆ ಮತ್ತು ಪ್ರವಾಸಿ ಸೇವೆಗಳನ್ನು ಇನ್ನಷ್ಟು ಬಲಪಡಿಸಿ ಜಾಗತಿಕ ಮಟ್ಟದಲ್ಲಿ ಇದರ ವ್ಯಾಪ್ತಿ ವಿಸ್ತರಿಸಲಾಗುವುದು” ಎಂದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಕೆಎಸ್‌ಟಿಡಿಸಿ (KSTDC), ಐಆರ್‌ಸಿಟಿಸಿ (IRCTC) ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ:

ವೆಬ್‌ಸೈಟ್: www.goldenchariot.org

ಇ-ಮೇಲ್: pd@goldenchariot.org | marketing@kstdc.co

ದೂರವಾಣಿ ಸಂಖ್ಯೆ: +91 89706 50010

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

Next Post

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

Next Post

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

Please login to join discussion

Like Us on Facebook

Follow Us on Twitter

Recent News

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

October 24, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: 2.9 ತೀವ್ರತೆ ದಾಖಲು

October 24, 2026

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ

October 24, 2026

ಸಂಸತ್ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವದ ಸಂಭ್ರಮ

October 23, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d