Friday, October 23, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

    ಮೈಸೂರು ನಂದಿಧ್ವಜ ಪೂಜೆಗೆ ಸಚಿವರ ಪ್ರವೇಶಕ್ಕೆ ತಡೆ: ವಿಚಾರಣೆಗೆ ಸಿಎಂ ಆದೇಶ; ದೆಹಲಿಯಲ್ಲಿ ಬರಗಾಲ, ನೀರಾವರಿ ಯೋಜನೆಗಳ ಚರ್ಚೆ

    ಶಿವಮೊಗ್ಗ ದಸರಾದಲ್ಲಿ ಭಾರೀ ಅವಾಂತರ: ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಢೀರ್ ಓಟ, ಅಂಬಾರಿ ಧ್ವಂಸ

    ಬೆಂಗಳೂರು ದಕ್ಷಿಣದಲ್ಲಿ ಸಂಜೆ ವೇಳೆಯೂ ಕಸ ಸಂಗ್ರಹಣೆ ಆರಂಭ: ಉದ್ಯೋಗಿಗಳಿಗೆ ಬಿಗ್ ರಿಲೀಫ್

    ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ ಮಗುವನ್ನು ಗಮನಿಸದೆ ರೀಲ್ಸ್ ಮಾಡಿದ ದಂಪತಿ: ವಿಡಿಯೋ ವೈರಲ್!

    Defence News | ಹಿಮಾಲಯ ಸೀಳಿ 16,700 ಅಡಿ ಎತ್ತರದಲ್ಲಿ ‘ನಿಮ್ಮು–ಪದಮ್–ದಾರ್ಚಾ’ ರಸ್ತೆ ಲೋಕಾರ್ಪಣೆ: ಇತಿಹಾಸ ಬರೆದ ಬಿಆರ್‌ಒ

    ಮೈಸೂರು ದಸರಾದಲ್ಲಿ ಐತಿಹಾಸಿಕ ಕಂಬಳ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್: ದಸರಾ ರೀಲ್ಸ್ ಸ್ಪರ್ಧೆ ಘೋಷಣೆ

    ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ಇನ್ಮುಂದೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ: ಆ್ಯಪ್ ಬಳಸದಿದ್ದರೆ ವೇತನ ಕಡಿತ

    ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ 1,500 ರೂ. ದಂಡ: ಸುಳ್ಳು ದೂರು ಕೊಟ್ಟರೆ ನಾಗರಿಕರಿಗೂ ತಪ್ಪಿದ್ದಲ್ಲ ಬರೆ

  • Bengaluru Focus

    ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

    ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

    ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

    ಬೆಂಗಳೂರಿನ ಜಂಟಿ ಆಸ್ತಿ ಮಾಲೀಕರೇ ಇನ್ನು ಮುಂದೆ ಇ-ಆಸ್ತಿ 2.0 ನಲ್ಲಿ ನಿವೇಶನ ಉಪ-ವಿಭಜನೆಗೆ ಅವಕಾಶ

    ಹಬ್ಬದ ಸೀಸನ್‌ನಲ್ಲಿ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: 80 ಸಿಹಿ ತಿಂಡಿ ಮಳಿಗೆಗಳ ಮೇಲೆ ದಾಳಿ, 10 ಘಟಕಗಳಿಗೆ ನೋಟಿಸ್

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

ಮಾತೃಭಾಷೆ ಕನ್ನಡ ಎಂದರೆ ಅರ್ಜಿ ತಿರಸ್ಕಾರ: ಖಾಸಗಿ ಕಂಪನಿಗಳ ಕನ್ನಡಿಗ ವಿರೋಧಿ ನೀತಿ ವಿರುದ್ಧ ಜನಾಕ್ರೋಶ.

by Bengaluru Wire Desk
October 23, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಅ.23 www.bengaluruwire.com: ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ಸಿಟಿ’ ಎಂದು ಬೀಗುತ್ತಿರುವ ಬೆಂಗಳೂರಿನಲ್ಲಿ, ನೆಲದ ಮಕ್ಕಳಿಗೇ ಉದ್ಯೋಗವಿಲ್ಲದಂತಾಗಿದೆಯೇ? ಹೌದು ಎನ್ನುತ್ತಿವೆ ಇತ್ತೀಚಿನ ಬೆಳವಣಿಗೆಗಳು. 

ಅಭ್ಯರ್ಥಿಗಳ ರೆಸ್ಯೂಮ್‌ನಲ್ಲಿ (Resume) ಮಾತೃಭಾಷೆ ‘ಕನ್ನಡ’ ಎಂದು ನಮೂದಿಸಿದ್ದರೆ ಸಾಕು, ಅಂತಹ ಅರ್ಜಿಗಳನ್ನು ಮುಲಾಜಿಲ್ಲದೆ ಕಸದ ಬುಟ್ಟಿಗೆ ಎಸೆಯುವ ಅಘೋಷಿತ ನೀತಿಯೊಂದು ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಹೊರ ರಾಜ್ಯಗಳಿಗೆ ತೆರಳಿ ಅಲ್ಲಿ ಕಡಿಮೆ ಸಂಬಳಕ್ಕೆ ಒಪ್ಪುವ ಜಸ್ಟ್ ಪಾಸಾದವರಿಗೆ ನಮ್ಮ ರಾಜ್ಯದ ಕಂಪನಿಗಳು ಕೆಲಸಕ್ಕೆ ನೇಮಿಸಿಕೊಂಡು, ಪ್ರತಿಭಾವಂತ ಕನ್ನಡಿಗ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ವಿಷಯ ರಾಜ್ಯದ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದ್ದರೂ, ಸದ್ಯ ಏನೂ ಮಾಡಲಾರದ ಹಂತಕ್ಕೆ ಬಂದು ತಲುಪಿದೆ ಎಂಬ ಆಘಾತಕಾರಿ ವಿಷಯ ಕೇಳಿಬಂದಿದೆ.

ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ (Instagram) ಎತ್ತಿರುವ ಧ್ವನಿ ಈಗ ವೈರಲ್ ಆಗಿದ್ದು, ಸರ್ಕಾರದ ಬಣ್ಣ ಬಯಲು ಮಾಡಿದೆ. ಕನ್ನಡಿಗರ ಈ ದಯನೀಯ ಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆ ಮಹಿಳೆ, ಆಡಳಿತಾರೂಢ ನಾಯಕರ ಕಣ್ಣು ತೆರೆಸುವಂತಹ ಚಾಟಿ ಏಟು ನೀಡಿದ್ದಾರೆ.

ಕನ್ನಡ ನೆಲ, ಜಲ ಬೇಕು; ಆದರೆ ಕನ್ನಡಿಗರು ಬೇಡವೇ?:

ರಾಜ್ಯದ ಭೂಮಿ, ನೀರು, ವಿದ್ಯುತ್ ಹಾಗೂ ತೆರಿಗೆ ವಿನಾಯಿತಿಗಳನ್ನು ಪಡೆದು ಇಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುವ ಬಹುರಾಷ್ಟ್ರೀಯ ಹಾಗೂ ಖಾಸಗಿ ಕಂಪನಿಗಳಿಗೆ ಈಗ ಕನ್ನಡಿಗರೇ ಅಸ್ಪೃಶ್ಯರಾಗಿದ್ದಾರೆ. “ರೆಸ್ಯೂಮ್‌ನಲ್ಲಿ ಕನ್ನಡ ಎಂದಿದ್ದರೆ ಕೆಲಸ ಕೊಡಲ್ಲ” ಎಂಬ ಕೂಗು ಕೇವಲ ಆರೋಪವಲ್ಲ, ಇದು ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಬೇರೂರಿರುವ ‘ಭಾಷಾ ದ್ವೇಷ’ ಮತ್ತು ‘ಪ್ರಾದೇಶಿಕ ತಾರತಮ್ಯ’ದ ಕರಾಳ ಮುಖ. 

ಹೊರರಾಜ್ಯದವರ ಲಾಬಿಗೆ ಮಣಿದು ಸ್ಥಳೀಯ ಪ್ರತಿಭಾವಂತರನ್ನು ವ್ಯವಸ್ಥಿತವಾಗಿ ಹೊರಗಿಡುವ ಷಡ್ಯಂತ್ರ ಎಗ್ಗಿಲ್ಲದೆ ನಡೆಯುತ್ತಿದ್ದರೂ, ನಮ್ಮನ್ನಾಳುವ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ದುರಂತ.

ಡಿ.ಕೆ. ಶಿವಕುಮಾರ್ ಅವರೇ, ಟೌನ್‌ಶಿಪ್ ಇರಲಿ; ಮೊದಲು ಇಲ್ಲಿನ ಅನ್ಯಾಯ ಸರಿಪಡಿಸಿ:

ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಿಸಿ ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡುತ್ತಿರುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ವೈರಲ್ ವಿಡಿಯೋದಲ್ಲಿ ಮಹಿಳೆಯು ಪ್ರಶ್ನಿಸಿದ್ದಾರೆ. “ಹೊಸ ಟೌನ್‌ಶಿಪ್ ಮಾಡಿ ಉದ್ಯೋಗ ಕೊಡುವುದು ಆಮೇಲಿರಲಿ, ಮೊದಲು ಈಗಾಗಲೇ ರಾಜ್ಯದಲ್ಲಿ ತಲೆಎತ್ತಿರುವ ಸಾವಿರಾರು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಘೋರ ಅನ್ಯಾಯವನ್ನು ತಡೆಯಿರಿ” ಎಂದು ನೇರವಾಗಿ ಹೇಳಿದ್ದಾರೆ. ಃಃಃ

ಇರುವ ಕಂಪನಿಗಳಲ್ಲೇ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಸಾಧ್ಯವಾಗದಿದ್ದರೆ, ಹೊಸ ಟೌನ್‌ಶಿಪ್ ನಿರ್ಮಿಸಿ ಯಾರಿಗೆ ಮಣೆ ಹಾಕುತ್ತೀರಿ? ಅಲ್ಲಿಯೂ ಹೊರರಾಜ್ಯದವರನ್ನೇ ತುಂಬುತ್ತೀರಾ? ಎಂಬುದು ಸದ್ಯ ಕನ್ನಡಿಗರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಖಾಸಗಿ ಕಂಪನಿಗಳ ‘ಕನ್ನಡ ವಿರೋಧಿ’ ಧೋರಣೆಗೆ ಕಡಿವಾಣ ಎಂದು?:

ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಸರ್ಕಾರ ಖಾಸಗಿ ವಲಯದ ಮೀಸಲಾತಿ ವಿಧೇಯಕವನ್ನು ತಂದು, ಉದ್ಯಮಿಗಳ ಒತ್ತಡಕ್ಕೆ ಮಣಿದು ತಕ್ಷಣವೇ ಹಿಂದೆ ಸರಿದಿದ್ದು ಸರ್ಕಾರದ ಇಚ್ಛಾಶಕ್ತಿಯ ಕೊರತೆಗೆ ಹಿಡಿದ ಕೈಗನ್ನಡಿ. 

ಅಭಿವೃದ್ಧಿ ಎಂದರೆ ಕೇವಲ ರಿಯಲ್ ಎಸ್ಟೇಟ್ ಮತ್ತು ಟೌನ್‌ಶಿಪ್‌ಗಳ ನಿರ್ಮಾಣವಲ್ಲ; ನೆಲದ ಭಾಷಿಕರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವುದು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಖಾಸಗಿ ಕಂಪನಿಗಳ ಈ ‘ಕನ್ನಡ ವಿರೋಧಿ’ ಧೋರಣೆಗೆ ಕಡಿವಾಣ ಹಾಕದಿದ್ದರೆ, ಕನ್ನಡಿಗರು ತಮ್ಮದೇ ನಾಡಿನಲ್ಲಿ ನಿರಾಶ್ರಿತರಾಗುವ ದಿನ ದೂರವಿಲ್ಲ. (ಚಿತ್ರಕೃಪೆ: ಜೆಮಿನಿ ಎಐ)

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

Please login to join discussion

Like Us on Facebook

Follow Us on Twitter

Recent News

ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

October 23, 2026

ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

October 23, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರೆಸ್ಯೂಮ್‌ನಲ್ಲಿ ‘ಕನ್ನಡ’ ಇದ್ರೆ ಕೆಲಸಕ್ಕಿಲ್ಲ ಜಾಗ! ತವರಿನಲ್ಲೇ ಕನ್ನಡಿಗರಿಗೆ ಉದ್ಯೋಗ ವಂಚನೆ: ಸರ್ಕಾರಕ್ಕೆ ಮಹಿಳೆಯ ಖಡಕ್ ಸವಾಲು

October 23, 2026

ಬೆಂಗಳೂರಿನಲ್ಲಿ ಕಸದಲ್ಲೂ ಕಾಸು ಹೊಡೆಯುವ ದಂಧೆ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ

October 23, 2026

‘ಆಲಿಸು ಕಂದಾ’: 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಭಾಗ್ಯ

October 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d