Friday, July 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

    Energy News | ರಾಜ್ಯದಲ್ಲಿ ಮಳೆ ಕೊರತೆ: ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ

    ಎಲ್ ನಿನೋ ಭೀತಿ: ಬರ ಎದುರಿಸಲು ಕರ್ನಾಟಕ ಸರ್ಕಾರದ ‘ಮಾಸ್ಟರ್ ಪ್ಲಾನ್’ ಏನು?

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ ರಚನೆ, ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್: ಸಚಿವ ಯು.ಟಿ. ಖಾದರ್

    ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ: ಕೇಂದ್ರದ ಸಿಜಿಹೆಚ್ಎಸ್ (CGHS) ಪರಿಷ್ಕೃತ ದರಗಳ ಅಳವಡಿಕೆಗೆ ರಾಜ್ಯ ಸರ್ಕಾರ ಆದೇಶ

    ಉಡುಪಿಯ ಕೋಟದಲ್ಲಿ ಸರ್ವರ್ ಸಮಸ್ಯೆಯಿಂದ ಸಾಲಿನಲ್ಲಿ ನಿಂತರೂ ಪಡಿತರ ಪಡೆಯಲು ಆಗದೆ ಅಸಹಾಯಕರಾಗಿ ನಿಂತ ಪಡಿತರ ಚೀಟಿದಾರರು

    Lokayukta News | ರಾಜ್ಯದ ಪಡಿತರ ವಿತರಣೆಯಲ್ಲಿ ಭಾರೀ ಅಕ್ರಮ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

    Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

  • Bengaluru Focus

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

    PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

    KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ ₹5,000 ದಂಡ ಏರಿಕೆ ಮಾಡಿ, ನಿಯಮ ಬಿಗಿಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಪತ್ರ

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಬೆಂಗಳೂರು ವೈರ್ ರಿಯಾಲಿಟಿ ಚೆಕ್ ವರದಿ ಹಿನ್ನಲೆ: ಶಿವಾಜಿನಗರ ಪಾದಾಚಾರಿ ಮಾರ್ಗ ಒತ್ತುವರಿ ತೆರವು: ಪಾಲಿಕೆ ಅಧಿಕಾರಿಗಳ ಮೇಲೆ ಪುಂಡರ ಅಟ್ಯಾಕ್ ಅಕ್ಷಮ್ಯ!!

    Namma Metro Green Train

    Namma Metro News | ನಮ್ಮ ಮೆಟ್ರೋ ಹಸಿರು ಮಾರ್ಗ: ವಿದ್ಯುತ್ ವ್ಯತ್ಯಯ ಸರಿಪಡಿಸಿದ ಬೆನ್ನಲ್ಲೇ ಸೇವೆ ಪುನರಾರಂಭ

    BWSSB News | ಬೆಂಗಳೂರಿನ ಈ ಪ್ರಮುಖ ಪ್ರದೇಶಗಳಲ್ಲಿ ಬುಧವಾರ ಕಾವೇರಿ ನೀರು ಇರಲ್ಲ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

'ಬೆಂಗಳೂರು ವೈರ್' ವರದಿ ಇಂಪ್ಯಾಕ್ಟ್: ಜೀವ ಬೆದರಿಕೆಗೂ ಹೆದರದೆ ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಗೊಳಿಸಿದ 'ಜಿಬಿಎ ಯೋಧರಿಗೆ' ವಿಕಾಸಸೌಧದಲ್ಲಿ ಗೌರವ.

by Bengaluru Wire Desk
July 24, 2026
in Bengaluru Focus, Public interest
Reading Time: 1 min read
0

​ಬೆಂಗಳೂರು,  ಜು.24 www.bengaluruwire.com: ಶಿವಾಜಿನಗರ ಬಸ್ ನಿಲ್ದಾಣದ ಬಳಿ ದಶಕಗಳಿಂದ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆ ಯಶಸ್ವಿಯಾಗಿದೆ. 

ಈ ಕಾರ್ಯಾಚರಣೆ ವೇಳೆ ಕಿಡಿಗೇಡಿಗಳಿಂದ ಹಲ್ಲೆಗೊಳಗಾದರೂ, ಹಿಂದೆ ಸರಿಯದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳನ್ನು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ವಿಕಾಸಸೌಧದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.

​’ಬೆಂಗಳೂರು ವೈರ್’ ವರದಿ ಇಂಪ್ಯಾಕ್ಟ್:

​ಶಿವಾಜಿನಗರ ಬಸ್ ನಿಲ್ದಾಣದ ಬಳಿ ಹಲವು ವರ್ಷಗಳಿಂದ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಪಾದಚಾರಿಗಳಿಗೆ ಹಾಗೂ ಬಸ್ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯ ಕುರಿತು ಬೆಂಗಳೂರು ವೈರ್ (Bengaluru Wire) ರಿಯಾಲಿಟಿ ಚೆಕ್ ನಡೆಸಿತ್ತು. ಜುಲೈ 20ರಂದು ಜಿಪಿಎಸ್ ಆಧಾರಿತ ದೃಶ್ಯಗಳ ಸಮೇತ ಎಕ್ಸ್‌ಕ್ಲೂಸಿವ್ ವರದಿಯನ್ನು ಪ್ರಸಾರ ಮಾಡಿತ್ತು. ಇದನ್ನೂ ಓದಿ: https://bengaluruwire.com/2026/07/21/shivajinagar-footpath-eviction-bbmp-officials-attacked/

​ಈ ವರದಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಜುಲೈ 21ರಂದು ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆಗೆ ಮುಂದಾದರು. ಈ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿತ್ತು. ಈ ಸುದ್ದಿ ಕೂಡಲೇ ರಾಷ್ಟ್ರೀಯ ಮಟ್ಟದ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿ ಭಾರಿ ಸಂಚಲನ ಮೂಡಿಸಿತ್ತು. ಹಲ್ಲೆ ಪ್ರಕರಣದ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ 11 ಮಂದಿಯನ್ನು ಬಂಧಿಸಲಾಯಿತು.

​ಇದಾದ ಬಳಿಕ, ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ಮುಂದುವರಿಸಿ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಜುಲೈ 22 ರಂದು ಕಾರ್ಯಾಚರಣೆ ನಡೆಸಿದ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನು ನೋಡಿ: https://www.instagram.com/reel/DbDlZtOoxb6/?igsh=MW9vYjNuY2V5dGM2Mw==

​ಅಧಿಕಾರಿಗಳ ಬೆಂಬಲಕ್ಕೆ ನಿಂತ ಸಚಿವರು ಹಾಗೂ ಮೇಲಧಿಕಾರಿಗಳು:

​ಈ ಇಡೀ ಕಾರ್ಯಾಚರಣೆಯಲ್ಲಿ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಅಭಿವೃದ್ಧಿ ಆಯುಕ್ತ ವೆಂಕಟಾಚಲಪತಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೆಂಬಲಕ್ಕೆ ದೃಢವಾಗಿ ನಿಂತಿದ್ದರು.

​ನಿಮ್ಮಂತಹ ಅಧಿಕಾರಿಗಳೇ ಸರ್ಕಾರಕ್ಕೆ ನಿಜವಾದ ಶಕ್ತಿ: ಕೃಷ್ಣ ಬೈರೇಗೌಡ

​ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

​”ಸರ್ಕಾರ ಎಷ್ಟೇ ಯೋಜನೆ ರೂಪಿಸಿದರೂ, ಅದನ್ನು ಜನರಿಗೆ ತಲುಪಿಸಲು ನಿಷ್ಠಾವಂತ ಅಧಿಕಾರಿಗಳೇ ಅಡಿಪಾಯ. ಸಮಾಜಘಾತಕ ಶಕ್ತಿಗಳ ಜೀವ ಬೆದರಿಕೆಗೂ ಹೆದರದೆ, ಶಿವಾಜಿನಗರದ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಮ್ಮ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಧರಿಗೆ ಅಭಿನಂದನೆಗಳು. ಇಂದು ನನ್ನ ಕಚೇರಿಯಲ್ಲಿ ಈ ಕರ್ತವ್ಯನಿಷ್ಠ ಅಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು. ನಿಮ್ಮಂತಹ ಅಧಿಕಾರಿಗಳೇ ನಮ್ಮ ಇಲಾಖೆಗೆ ಮತ್ತು ಸರ್ಕಾರಕ್ಕೆ ನಿಜವಾದ ಶಕ್ತಿ.” – ಕೃಷ್ಣ ಬೈರೇಗೌಡ, ಸಚಿವರು, ಗ್ರೇಟರ್ ಬೆಂಗಳೂರು ನಗರ ಅಭಿವೃದ್ಧಿ ಇಲಾಖೆ.

​ಸನ್ಮಾನಿತರ ವಿವರ:

​ಸಚಿವರ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಳಕಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು:

​ಆತಿಫ್ – ಕಾರ್ಯಾಪಲಕ ಅಭಿಯಂತರರು

​ಮಾಧವರಾವ್ – ಸಹಾಯಕ‌ ಕಾರ್ಯಪಾಲಕ ಅಭಿಯಂತರರು

​ಸಾವಿತ್ರಿ – ಸಹಾಯಕ‌ ಕಾರ್ಯಪಾಲಕ ಅಭಿಯಂತರರು

​ರುಚಿತಾ – ಸಹಾಯಕ ಅಭಿಯಂತರರು

​ಗೌತಮ್ – ಇಂಜಿನಿಯರ್

​ಜೆಸಿಬಿ ಚಾಲಕನ ಪ್ರತಿನಿಧಿ

​ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಉಪಸ್ಥಿತರಿದ್ದರು.

WhatsApp Join our WhatsApp Channel
Previous Post

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

Please login to join discussion

Like Us on Facebook

Follow Us on Twitter

Recent News

GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

July 24, 2026

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

July 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

July 24, 2026

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

July 24, 2026

PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

July 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group