Monday, September 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

    NEET PG-2026 | ನೀಟ್ ಪಿಜಿ-2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

  • Bengaluru Focus

    ಕಾವೇರಿ 6ನೇ ಹಂತ: “₹7,000 ಕೋಟಿ ಲೂಟಿಗೆ ಸ್ಕೆಚ್” –  ಆರ್.ಅಶೋಕ್ ಗಂಭೀರ ಆರೋಪ

    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕಲಾಗ್ರಾಮದ ಸಮಾಧಿಗಳನ್ನು ತಕ್ಷಣ ತೆರವುಗೊಳಿಸಿ: ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸರ್ಕಾರಕ್ಕೆ ನೋಟಿಸ್

    ಬೆಂಗಳೂರಿನ ಇಸ್ಕಾನ್ ದೇವಸ್ಥಾನ

    Temple News | ​ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ನಾಳೆಯಿಂದ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

​ಪೇಪರ್ ವಿತರಕನಿಂದ ಸಿಎಂ ಮಾಧ್ಯಮ ಸಲಹೆಗಾರರವರೆಗೆ: ನಡೆದು ಬಂದ ಹಾದಿ ಬಿಚ್ಚಿಟ್ಟ ಕೆ.ವಿ.ಪ್ರಭಾಕರ್

ಸಿಎಂ ಸಿದ್ದರಾಮಯ್ಯ ಅವರಿಂದ ತಾಳ್ಮೆ, ಸಮಾಧಾನ ಕಲಿತಿದ್ದೇನೆ. ಪತ್ರಕರ್ತರ ಕಲ್ಯಾಣವೇ ನನ್ನ ಆದ್ಯತೆ ಎಂದ ಕೆವಿಪಿ.

by Bengaluru Wire Desk
May 22, 2026
in Bengaluru Focus, News Wire
Reading Time: 1 min read
0

ಬೆಂಗಳೂರು, ಮೇ.22 www.bengaluruwire.com: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ತಾಳ್ಮೆ, ಸಮಾಧಾನ ಹಾಗೂ ಇತರರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಇರಬೇಕು. ಈ ಮೂರೂ ಅತ್ಯಮೂಲ್ಯ ಗುಣಗಳನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರೂಢಿಸಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (ಕೆವಿಪಿ) ತಿಳಿಸಿದರು.

​ನಗರದ ಕೆ.ಜಿ.ರಸ್ತೆಯ ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮಾಧ್ಯಮ-ಸಂವಾದ’ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ತಮ್ಮ ವೃತ್ತಿ ಬದುಕಿನ ನೆನಪುಗಳನ್ನು ಮೆಲುಕು ಹಾಕಿದರು.

​ಸಿದ್ದರಾಮಯ್ಯ ಅವರೊಂದಿಗೆ 13 ವರ್ಷಗಳ ಪಯಣ

​”2013ರಲ್ಲಿ ನಾನು ಕನ್ನಡಪ್ರಭ ಪತ್ರಿಕೆಯಲ್ಲಿದ್ದಾಗ ಮಾಜಿ ಶಾಸಕ ರಾಮಚಂದ್ರಪ್ಪನವರ ಕರೆ ಮೇರೆಗೆ, ಅಂದಿನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರ ಅನುಮತಿ ಪಡೆದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದೆ. ನನ್ನನ್ನು ನೋಡಿದ ತಕ್ಷಣ ‘ಪತ್ರಿಕೆ ಬಿಡು, ನಮ್ಮೊಂದಿಗೆ ಬಂದು ಮಾಧ್ಯಮ ನಿರ್ವಹಣೆ ಮಾಡು’ ಎಂದು ಸಿಎಂ ಸೂಚಿಸಿದರು. ಅಂದಿನಿಂದ ಇಂದಿನವರೆಗೆ ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಅವರ ನೆರಳಾಗಿ 13 ವರ್ಷಗಳನ್ನು ಕಳೆದಿದ್ದೇನೆ,” ಎಂದು ಪ್ರಭಾಕರ್ ಸ್ಮರಿಸಿದರು.

​ಸಂವಾದದ ಪ್ರಮುಖ ಅಂಶಗಳು:

​ತಾಳ್ಮೆಯ ಪಾಠ: ಸಿಎಂ ಅವರಿಂದ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿದೆ. ಕೋಲಾರದ ಜನತೆ, ರಾಜ್ಯದ ಪತ್ರಕರ್ತರು ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.

​ಕಷ್ಟ ಕಾಲದ ಸಾಥ್: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದೆ. ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಕಷ್ಟ-ಸುಖಗಳಲ್ಲಿ ಅವರೊಂದಿಗೇ ನಿಂತೆ.

ಬೆಂಗಳೂರು ನಗರ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಗಾಂಧಿ ನೇತೃತ್ವದ ತಂಡದಿಂದ ಕೆ.ವಿ.ಪ್ರಭಾಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

​ಬಸ್ ಪಾಸ್, ಆರೋಗ್ಯ ಸಂಜೀವಿನಿ: ಶೀಘ್ರದಲ್ಲೇ ಗುಡ್ ನ್ಯೂಸ್:

​ಮಾಧ್ಯಮ ಸಲಹೆಗಾರನಾಗಿ ಪತ್ರಕರ್ತರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ನನ್ನದಾಗಿತ್ತು. ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಹಾಗೂ ಸಿಎಂ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸುವಲ್ಲಿ ಶ್ರಮಿಸಿದ್ದು ನನಗೆ ಆತ್ಮತೃಪ್ತಿ ತಂದಿದೆ. “ಆರೋಗ್ಯ ಸಂಜೀವಿನಿ ಯೋಜನೆಯಲ್ಲಿರುವ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿ, ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಯತ್ನ ನಡೆಯುತ್ತಿದ್ದು, ಒಂದೇ ವಾರದಲ್ಲಿ ಗುಡ್ ನ್ಯೂಸ್ ಬರಲಿದೆ,” ಎಂದು ಅವರು ಭರವಸೆ ನೀಡಿದರು.

​ನಾನು ಲಿಫ್ಟ್‌ನಲ್ಲಿ ಬಂದವನಲ್ಲ, ಸೈಕಲ್ ತುಳಿದು ಬಂದವನು:

​ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಕೆವಿಪಿ, “ನಾನು ನೇರವಾಗಿ ಲಿಫ್ಟ್ ಹತ್ತಿಕೊಂಡು ಬಂದು ಈ ಸ್ಥಾನಕ್ಕೇರಿದವನಲ್ಲ. ಒಂದೊಂದೇ ಮೆಟ್ಟಿಲು ಹತ್ತಿ ಬಂದವನು. ಆರಂಭದಲ್ಲಿ ‘ಕೋಲಾರವಾಣಿ’ ಪತ್ರಿಕೆಯಲ್ಲಿ ಸೈಕಲ್ ಮೇಲೆ ಪೇಪರ್ ಪೇರಿಸಿಕೊಂಡು ವಿತರಿಸುವ ಕೆಲಸ ಮಾಡಿದ್ದೇನೆ. ಆ ಪರಿವಾರದಲ್ಲಿ ಊಟ ಮಾಡಿ ಬೆಳೆದಿದ್ದೇನೆ. ಬೆಂಗಳೂರಿಗೆ ಬರಲು ಕಾರಣರಾದ ವಾಸುದೇವ ಹೊಳ್ಳ, ಮಂಜುನಾಥ್, ಗೋಪಿನಾಥ್ ಅವರ ಪ್ರೀತಿಯನ್ನು ಎಂದಿಗೂ ಮರೆಯಲಾರೆ,” ಎಂದು ಭಾವುಕರಾದರು.

​ಮಾಧ್ಯಮ ಸ್ವಾತಂತ್ರ್ಯಕ್ಕೆ ಸದಾ ಗೌರವ:

​ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಎಂ ವಿರುದ್ಧ ಟೀಕೆಗಳು ಅಥವಾ ನಕಾರಾತ್ಮಕ ಸುದ್ದಿಗಳು ಪ್ರಸಾರವಾದರೂ ನಾವೆಂದೂ ಅದನ್ನು ತಡೆಯುವ (ಬ್ಲಾಕ್ ಮಾಡುವ) ಕೆಲಸ ಮಾಡಿಲ್ಲ. “ಸಿಎಂ ಆಗಲಿ, ನಾನಾಗಲೀ ಮಾಧ್ಯಮ ಸ್ವಾತಂತ್ರ್ಯವನ್ನು ಎಂದಿಗೂ ಪ್ರಶ್ನಿಸಿಲ್ಲ. ನನಗೆ ತಿಳಿದಷ್ಟು ವಾಸ್ತವವನ್ನು ಪತ್ರಕರ್ತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನಷ್ಟೇ ಮಾಡುತ್ತೇನೆ,” ಎಂದು ಸ್ಪಷ್ಟಪಡಿಸಿದರು.

​ಗರ್ವ, ದರ್ಪ ತೋರದ ಕೆವಿಪಿ: ಶಿವಾನಂದ ತಗಡೂರು ಪ್ರಶಂಸೆ:

​ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, “ಸಾಮಾನ್ಯ ಪತ್ರಕರ್ತನೊಬ್ಬ ವಿಧಾನಸೌಧದ ಕುರ್ಚಿಯಲ್ಲಿ ಕುಳಿತಿರುವುದೇ ನಮಗೆಲ್ಲರಿಗೂ ಹೆಮ್ಮೆ. ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಕೆವಿಪಿ ಅವರು ಎಂದಿಗೂ ಗರ್ವ, ದರ್ಪ ತೋರಿಲ್ಲ. ಪತ್ರಕರ್ತರ ಕಷ್ಟಗಳನ್ನು ತಾಯ್ತನದ ಪ್ರೀತಿಯಿಂದ ಆಲಿಸುವ ಗುಣ ಅವರಲ್ಲಿದೆ,” ಎಂದು ಶ್ಲಾಘಿಸಿದರು.

​ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಂ ಮಾತನಾಡಿ, “ಸೈಕಲ್ ಮೇಲೆ ಪೇಪರ್ ಹಂಚುತ್ತಿದ್ದ ವ್ಯಕ್ತಿ ಇಂದು ಸಿಎಂ ಮಾಧ್ಯಮ ಸಲಹೆಗಾರರಾಗಿರುವುದು ಸಣ್ಣ ಸಾಧನೆಯಲ್ಲ. ಅವರು ಪತ್ರಕರ್ತರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

​ಸಂವಾದಕ್ಕೂ ಮುನ್ನ ಪಂಕಜ ಅವರು ದ.ರಾ.ಬೇಂದ್ರೆ ಅವರ ‘ಬಾರೋ ಸಾಧನ ಕೇರಿಗೆ’ ಗೀತೆ ಹಾಡಿದರು. ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ರಾಜ್ಯ ಸಮಿತಿ ಸದಸ್ಯ ರವಿಕುಮಾರ್ ಟೆಲೆಕ್ಸ್, ಖಜಾಂಚಿ ವಾಸುದೇವ ಹೊಳ್ಳ, ಬಿಯುಡಬ್ಲ್ಯುಜೆ ಅಧ್ಯಕ್ಷರಾದ ಸೋಮೇಖರ್ ಗಾಂಧಿ ಹಾಗೂ ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹಿರಿಯ ಸಂಪಾದಕರು, ವರದಿಗಾರರು ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ರಾಜ್ಯದಲ್ಲಿ 50,000 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ಭೂಮಿ ವಶ: ಅರಣ್ಯ ಸಿಬ್ಬಂದಿಗೆ ಸುರಕ್ಷಾ ಕ್ಯಾಬಿನ್ ವಿತರಣೆ

Next Post

Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

Next Post

Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

ಬೆಂಗಳೂರು: ಮೇ 31ರೊಳಗೆ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ; ಮಳೆಗಾಲದ ಸಿದ್ಧತೆ ಚುರುಕು

Please login to join discussion

Like Us on Facebook

Follow Us on Twitter

Recent News

ಕಾವೇರಿ 6ನೇ ಹಂತ: “₹7,000 ಕೋಟಿ ಲೂಟಿಗೆ ಸ್ಕೆಚ್” –  ಆರ್.ಅಶೋಕ್ ಗಂಭೀರ ಆರೋಪ

September 7, 2026
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕಾವೇರಿ 6ನೇ ಹಂತ: “₹7,000 ಕೋಟಿ ಲೂಟಿಗೆ ಸ್ಕೆಚ್” –  ಆರ್.ಅಶೋಕ್ ಗಂಭೀರ ಆರೋಪ

September 7, 2026
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d