Sunday, August 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Forest News | ರಾಜ್ಯದ IFS ಅಧಿಕಾರಿ ಡಾ.ರಮೇಶ್ ಕುಮಾರ್ ಗೆ ರಾಷ್ಟ್ರ ಮಟ್ಟದ “ಇಕೋ ವಾರಿಯರ್ 2024” ಪ್ರಶಸ್ತಿ ಲಭಿಸಿದೆ

by Bengaluru Wire Desk
September 19, 2024
in News Wire, Public interest
Reading Time: 2 mins read
0

ಬೆಂಗಳೂರು, ಸೆ.19 www.bengaluruwire.com : “ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ”ಯಲ್ಲಿ ಗಣನೀಯ ಕೊಡುಗೆ ನೀಡಿದ ಮೈಸೂರು ಹುಲಿ ಸಂರಕ್ಷಣಾ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಅವರಿಗೆ  ಭಾರತೀಯ ಅರಣ್ಯ ಸೇವೆ ಸಂಘ ಹಾಗೂ ಇಂಡಿಯನ್ ಮಾಸ್ಟರ್ ಮೈಂಡ್ಸ್ ಕೊಡ ಮಾಡುವ “ಇಕೋ ವಾರಿಯರ್ ಅವಾರ್ಡ್ 2024” (“Eco Warrior Award 2024”) ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.

ನವದೆಹಲಿಯ ಜನಪಥ್ ನಲ್ಲಿನ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರ ಅರಣ್ಯ ಮಹಾನಿರ್ದೇಶಕರು ಮತ್ತು ವಿಶೇಷ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಅವರು ಡಾ.ಪಿ.ರಮೇಶ್ ಕುಮಾರ್ ಅವರಿಗೆ ಪ್ರಶಸ್ತಿಯನ್ನು ವಿತರಿಸಿದರು.

ಎರಡನೇ ವರ್ಷದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಾದ್ಯಂತ ಅರಣ್ಯ ಕ್ಷೇತ್ರದಲ್ಲಿ ಅರಣ್ಯ ರಕ್ಷಣೆ, ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಭದ್ರತೆ, ತಂತ್ರಜ್ಞಾನದ ಬಳಕೆ ಹಾಗೂ ಸಮುದಾಯ ಸಂಪರ್ಕ ವಿಭಾಗಗಳಲ್ಲಿ ಅನುಕರಣೀಯ ಕೆಲಸ ಮಾಡಿದ ಐಎಫ್‌ಎಸ್ ಅಧಿಕಾರಿಗಳಿಗೆ ನೀಡುವ ಪ್ರಶಸ್ತಿಯಾಗಿದೆ.

ಡಾ.ಪಿ.ರಮೇಶ್ ಕುಮಾರ್ ಕರ್ನಾಟಕ ಕೇಡರ್‌ನ 2008 ಬ್ಯಾಚ್‌ನ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿದ್ದಾರೆ. ರಾಜ್ಯದ ವನ್ಯಜೀವಿ ಪ್ರದೇಶ ಹಾಗೂ ಸಂರಕ್ಷಿತ ಪ್ರದೇಶಗಳಲ್ಲಿ 14 ವರ್ಷಗಳ ಕಾಲ ಕರ್ನಾಟಕದ ಅನೇಕ ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಜೀವಿಗಳನ್ನು ಒಳಗೊಂಡಂತೆ ವನ್ಯಜೀವಿಗಳ ರಕ್ಷಣೆ, ಸಂರಕ್ಷಣೆ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ತಮ್ಮ ಸಂಪೂರ್ಣ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ.

ಡಾ.ಪಿ.ರಮೇಶ್ ಕುಮಾರ್ ಐಎಫ್ ಎಸ್.

“ಬಂಡಿಪುರ ಯುವ ಮಿತ್ರ” ಜನಸ್ಪಂದನ ಕಾರ್ಯಕ್ರಮ :

ಬಂಡೀಪುರದಲ್ಲಿ ಕಾರ್ಯನಿರ್ವಹಿಸುವಾಗ ಸ್ಥಳೀಯ ಜನರಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು “ಬಂಡಿಪುರ ಯುವ ಮಿತ್ರ” ಎಂಬ ನವೀನ ಜನಸ್ಪಂದನ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ, ಹಮ್ಮಿಕೊಂಡು ಈ ವನ್ಯಜೀವಿ ಜಾಗೃತಿಯಲ್ಲಿ ಗರಿಷ್ಠ ಮಟ್ಟದಲ್ಲಿ ಜನರು ಭಾಗವಹಿಸಿದ್ದರು. ಈ ಜನಸ್ಪಂದನಾ ಕಾರ್ಯಕ್ರಮವು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ (IBR) ನಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

ಡಾ.ಪಿ.ರಮೇಶ್ ಕುಮಾರ್ ಲಭಿಸಿದ ಇಕೋ ವಾರಿಯರ್ ಅವಾರ್ಡ್ ಪ್ರಮಾಣಪತ್ರ

ಅದೇ ರೀತಿ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಹಿಂದುಳಿದ ಬುಡಕಟ್ಟುಗಳಿಗಾಗಿ ಅನೇಕ ಸಮುದಾಯ ಆಧಾರಿತ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ಅದನ್ನು ಜಾರಿಗೊಳಿಸಿದ್ದಾರೆ.

9 ವನ್ಯಜೀವಿ ನಿರ್ವಹಣೆ ಯೋಜನೆಗಳನ್ನು ಜಾರಿಗೊಳಿಸಿದ ಪ್ಲಾನರ್ :

ಇವರೊಬ್ಬ ಅನುಭವಿ ವನ್ಯಜೀವಿ ಮತ್ತು ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶ ಸೇರಿದಂತೆ 9 ವನ್ಯಜೀವಿ ನಿರ್ವಹಣೆ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಕ್ಷೇತ್ರದ ಅನುಭವದೊಂದಿಗೆ, ಅನೇಕ ಅಳಿವಿನಂಚಿನಲ್ಲಿರುವ, ವಿಮರ್ಶಾತ್ಮಕವಾಗಿ ಅಳಿವಿನಂಚಿನಲ್ಲಿರುವ ಮತ್ತು ರಾಜ್ಯದಲ್ಲಿ

ದುರ್ಬಲ ಜಾತಿಯ ವನ್ಯಜೀವಿಗಳ ಬಗ್ಗೆ ಅವರು ಬರೆದ 17 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ.

ಅಳಿವಿನಂಚಿನ ವನ್ಯಜೀವಿ ಸಂರಕ್ಷಣೆ :

ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸುವಲ್ಲಿ, ಹುಲಿ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಅಪಾರ ಅನುಭವ ಮತ್ತು ಕೌಶಲ್ಯವನ್ನು ಹೊಂದಿದ್ದಾರೆ. ಗ್ರೇಟ್ ಇಂಡಿಯನ್ ಬಸ್ಟರ್ಡ್, ಲಯನ್-ಟೈಲ್ಡ್ ಮಕಾಕ್, ಗ್ರಿಜ್ಲ್ಡ್ ಜೈಂಟ್ ಅಳಿಲು, ಗೂನು ಬೆನ್ನಿನ ಮಹಾಸೀರ್ ಇತ್ಯಾದಿ ಪ್ರಾಣಿ- ಪಕ್ಷಿಗಳ ವನ್ಯಜೀವಿ ನಿರ್ವಹಣೆ ಯೋಜನೆ, ಚೇತರಿಕೆ ಮತ್ತು ಮೇಲ್ವಿಚಾರಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ.

ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ.ರಮೇಶ್ ಕುಮಾರ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಂತೆ ಸವಿವರವಾಗಿ ವಿವರಿಸಿ ಇಲ್ಲಿನ ಕಾಡಿನ ಪರಿಚಯ ಮಾಡಿದ್ದರು.
ಇಕೋ ವಾರಿಯರ್ ಅವಾರ್ಡ್ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಡೈರೆಕ್ಟರ್ ಜನರಲ್ ಎಸ್.ಪಿ ಯಾದವ್, ಸುಪ್ರೀಮ್ ಕೋರ್ಟ್ ಸೆಂಟ್ರಲ್ ಎಂಪವರ್ಡ್ ಕಮಿಟಿ (CEC) ಸದಸ್ಯ ಸಿ.ಪಿ. ಗೋಯಲ್, ಐಎಫ್ ಎಸ್ ಅಸೋಸಿಯೇಷನ್ ​​ಅಧ್ಯಕ್ಷ ಅವಸ್ತಿ, ನಟ ರಣದೀಪ್ ಹೂಡಾ ಹಾಗೂ ಹಲವು ಐಎಫ್ ಎಸ್ ಅಧಿಕಾರಿಗಳು ಈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Previous Post

Video News | ಆಕಾಶದಲ್ಲಿ ನಿರ್ಮಾಣವಾಗಲಿದೆ ಭಾರತೀಯ ಬಾಹ್ಯಾಕಾಶ ನಿಲ್ದಾಣ : ಗಗನಯಾನ ಕಾರ್ಯಕ್ರಮ ವಿಸ್ತರಣೆಗೆ ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ

Next Post

ಕಾವೇರಿ ಐದನೇ ಹಂತ ಪೂರ್ವಭಾವಿ ಕಾಮಗಾರಿ : ನಗರದ ಈ ಭಾಗಗಳಲ್ಲಿ ಸೆ.21ರಂದು ನೀರು ಪೂರೈಕೆ ಬಂದ್!!

Next Post
BWSSB Head Office

ಕಾವೇರಿ ಐದನೇ ಹಂತ ಪೂರ್ವಭಾವಿ ಕಾಮಗಾರಿ : ನಗರದ ಈ ಭಾಗಗಳಲ್ಲಿ ಸೆ.21ರಂದು ನೀರು ಪೂರೈಕೆ ಬಂದ್!!

ಬೆಂಗಳೂರು : ಕೊತ್ತನೂರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಅರಣ್ಯ ಭೂಮಿ ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

Please login to join discussion

Like Us on Facebook

Follow Us on Twitter

Recent News

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

August 1, 2026

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group