Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
  • Home
  • News Wire

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result
Bengaluru Wire
No Result
View All Result
Home BW Special

BW EXCLUSIVE REPORT | Karnataka Landslide | ನಾಡಿನಲ್ಲಿ ಈ ಬಾರಿ 46 ಕಡೆ ಭೂ ಕುಸಿತ – ಸರ್ಕಾರದ ಇಚ್ಛಾಶಕ್ತಿಯ ಕುಸಿತ : 720 ಮಳೆ ಮಾಪನ ಕೇಂದ್ರಗಳೇ ಸ್ಥಗಿತ!! 7 ಜಿಲ್ಲೆಗಳ ಭವಿಷ್ಯದ ಬಗ್ಗೆ ಏನಂತಾರೆ ತಜ್ಞರು?

2021ರ ಉನ್ನತ ಮಟ್ಟದ ತಜ್ಞರ ಸಮಿತಿ ವರದಿ – 2022ರ ಕೆಎಂಎನ್ ಡಿಎಂಸಿ ಕಾರ್ಯ ಯೋಜನೆ ಜಾರಿಗೆ ನಿರ್ಲಕ್ಷ್ಯಆರೋಪ | 2009ರಿಂದ 2021ರ ವರೆಗೆ ಒಟ್ಟಾರೆ 13 ವರ್ಷಗಳಲ್ಲಿ 1,272 ಭೂ ಕುಸಿತಗಳಾಗಿವೆ. ಆ ಪೈಕಿ 2016ರಿಂದ ಭೂ ಕುಸಿತವಾಗುವ ಪ್ರಕರಣ ಹೆಚ್ಚಾಗಿದೆ ಹಾಗೂ ಸಾವು-ನೋವುಗಳು ಸಂಭವಿಸಿವೆ.

by Bengaluru Wire Desk
August 1, 2024
in BW Special, News Wire, Public interest
Reading Time: 3 mins read
0
ಅಂಕೋಲಾದಲ್ಲಿ ಸಂಭವಿಸಿದ ಭೂ ಕುಸಿತದ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

ಅಂಕೋಲಾದಲ್ಲಿ ಸಂಭವಿಸಿದ ಭೂ ಕುಸಿತದ ಪಕ್ಷಿನೋಟ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಜು.31 www.bengaluruwire.com : ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಈ ಬಾರಿ ಒಟ್ಟು ಈತನಕ 46 ಕಡೆಗಳಲ್ಲಿ ಭೂಕುಸಿತವಾಗಿದ್ದು, ಜೀವಹಾನಿ, ಆಸ್ತಿಪಾಸ್ತಿಹಾನಿ ಹೆಚ್ಚಾಗಿದೆ. ಪಾಕೃತಿಕ ವಿಪತ್ತನ್ನು ಸಂಪೂರ್ಣವಾಗಿ ತಡೆಯಲಾಗದಿದ್ದರೂ, ಭೂ ಕುಸಿತ ನಿಯಂತ್ರಣ ಕ್ರಮವಾಗಿ ಫೆಬ್ರವರಿ 2021ರಲ್ಲಿ ‘ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾರ್ಗೋಪಾಯಗಳು’ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್‌ ಡಿಎಂಎ) ಭೂಕುಸಿತ ಪ್ರಕರಣಗಳ ನಿರ್ವಹಣೆಗಾಗಿ 2022ರಲ್ಲಿ ಕಾರ್ಯಯೋಜನೆಯನ್ನು ರಾಜ್ಯ ಸರ್ಕಾರ ಪರಿಗಣಿಸದೆ ಹಾಗೂ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಈ ಅವಘಡಗಳ ಸಂಭವಿಸಲು ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದಾದ್ಯಂತ ಪ್ರತಿ ಗ್ರಾಮಪಂಚಾಯಿತಿಯೂ ಸೇರಿದಂತೆ ಒಟ್ಟಾರೆ 6505 ಸ್ಥಳಗಳಲ್ಲಿ ಅಳವಡಿಸಿರುವ ಮಳೆ ಮಾಪನ ಕೇಂದ್ರಗಳ ಪೈಕಿ 5785 ಕೇಂದ್ರಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ. ಉಳಿದ 720 ಕೇಂದ್ರಗಳು ಸ್ಥಗಿತಗೊಂಡಿದೆ. ಇನ್ನು 935 ಹೋಬಳಿಗಳಲ್ಲಿ ಟೆಲಿಮೆಟ್ರಿ ಹವಾಮಾನ ಕೇಂದ್ರದ ಪೈಕಿ 85 ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಸೂಕ್ತ ಕಾಲಾವಧಿಯಲ್ಲಿ ಮಳೆ ಮುನ್ಸೂಚನೆಯನ್ನು, ಹವಾಮಾನ ಪರಿಸ್ಥಿತಿಯನ್ನು ಹಾಗೂ ಅದರಿಂದ ಸಂಭವಿಸಬಹುದಾದ ಪರಿಣಾಮಗಳನ್ನು ವಿಶ್ಲೇಷಿಸಿ ಭೂ ಕುಸಿತ ಸಂಭವಿಸುವ ಪ್ರದೇಶಗಳಲ್ಲಿನ ಜನರಿಗೆ ಎಚ್ಚರಿಕೆ ನೀಡುವ ಕಾರ್ಯದಲ್ಲಿ ವಿಫಲವಾಗಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ. 2022ರಲ್ಲಿ ಕರ್ನಾಟಕದಲ್ಲಿ 56 ಕಡೆ, ಬರದಿಂದಾಗಿ ಹೆಚ್ಚಿನ ಮಳೆಯಾಗದ ಕಾರಣ 2023ರಲ್ಲಿ 2 ಕಡೆಗಳಲ್ಲಿ ಹಾಗೂ 2024ರಲ್ಲಿ ಭಾರೀ ಮಳೆಗೆ ಈ ತನಕ 46 ಕಡೆಗಳಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತ ಪ್ರಕರಣಗಳು ಜರುಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಒಂದು ದಶಕದಿಂದೀಚೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕುಸಿತ ಒಂದು ಸಾಮಾನ್ಯ ವಿದ್ಯಮಾನದಂತಾಗಿದ್ದು, ರಾಜ್ಯದ ಗಂಭೀರ ಸಮಸ್ಯೆಗಳಲ್ಲೊಂದಾಗಿ ಬದಲಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಏಳು ಜಿಲ್ಲೆಗಳ 30 ತಾಲ್ಲೂಕುಗಳು ಪ್ರತಿ ಮಳೆಗಾಲದಲ್ಲಿ ಭೂಕುಸಿತದ ಭೀತಿ ಸಾಮಾನ್ಯ ಎನ್ನುವಂತಾಗಿದೆ. ಕಾರವಾರ ಸಮೀಪದ ಕಡವಾಡದಲ್ಲಿ 2009ರಲ್ಲಿ ಸಂಭವಿಸಿದ ಭಾರಿ ಭೂಕುಸಿತವೇ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಈ ಶತಮಾನದ ಮೊದಲ ದೊಡ್ಡ ಭೂಕುಸಿತ ಎಂದು ಹೇಳಲಾಗುತ್ತಿದೆ. ಆ ಬಳಿಕ ಗುಡ್ಡ ಕುಸಿತ ಘಟಿಸುತ್ತಲೇ ಇದ್ದು, 2016ರ ನಂತರ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೊಡಗಿನಲ್ಲಿ 2018ರಲ್ಲಿ ಘಟಿಸಿದ ಭೂಕುಸಿತ ಪ್ರಾಕೃತಿಕ ವಿಕೋಪ ಘಟನೆಯು ಬದಲಾಗುತ್ತಿರುವ ಹವಾಮಾನದ ಸಂಕೇತವಾಗಿ ನಿಸರ್ಗ ನೀಡಿದ ದೊಡ್ಡ ಎಚ್ಚರಿಕೆ ಗಂಟೆಯಾಗಿತ್ತು. ಆ ವರ್ಷದ ಮುಂಗಾರು ಮಳೆಯು, ಕೊಡಗಿನಲ್ಲಿ ಕಳೆದ 20 ವರ್ಷಗಳಲ್ಲಿ ಸುರಿಯುತ್ತಿದ್ದ ಸರಾಸರಿ ಮಳೆಗಿಂತ ಶೇ 32ರಷ್ಟು ಹೆಚ್ಚು ಮಳೆ ಸುರಿದಿತ್ತು. ಅದರಿಂದಾಗಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಭೂಕುಸಿತ ಸಂಭವಿಸಿದ್ದವು. 105 ಭೂಕುಸಿತಗಳನ್ನು ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ದೃಢಪಡಿಸಿತ್ತು. ಈ ದುರ್ಘಟನೆಯಲ್ಲಿ 20 ಮಂದಿ ಸಾವಿಗೀಡಾಗಿ ಸಾಕಷ್ಟು ಆಸ್ತಿಪಾಸ್ತಿ, ರೈತರ ಬೆಳೆ ಹಾನಿಯಾಗಿತ್ತು. ಇದಾದ ಬಳಿಕ ಆಗಿನ ಬಿಜೆಪಿ ಸರ್ಕಾರವು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಆಶೀಸರ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿಯು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ, ಸಂಬಂಧಪಟ್ಟ ತಜ್ಞರ ಅಭಿಪ್ರಾಯದೊಂದಿಗೆ 2021ರ ಫೆಬ್ರವರಿಯಂದು ಅಂತಿಮ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

  • ಜಿಐಎಸ್ ಮತ್ತು ಕೆಎಸ್ಎನ್ಎಂಡಿಎಂಸಿ ರಾಜ್ಯದಲ್ಲಿ ಭೂ ಕುಸಿತ ಉಂಟಾಗಿರುವ ಅಪಾಯವಿರುವ ಪ್ರದೇಶಗಳನ್ನು ಗುರ್ತಿಸಿರುವುದನ್ನು ನಕ್ಷೆಯಲ್ಲಿ ತೋರಿಸಿದೆ.

ಅದಾದ ನಂತರ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್‌ಡಿಎಂಎ) ಭೂಕುಸಿತ ಪ್ರಕರಣಗಳ ನಿರ್ವಹಣೆಗಾಗಿ 2022ರಲ್ಲಿ ಕಾರ್ಯಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಹೆಚ್ಚು ಮಳೆ ಬೀಳುವ, ಗುಡ್ಡಕುಸಿತದ ಸಂಭವನೀಯತೆ ಇರುವ ಸ್ಥಳಗಳನ್ನು ಗುರುತಿಸುವುದು, ಸೂಚನಾ ಫಲಕ ಅಳವಡಿಸುವುದು, ತಡೆಗೋಡೆ ನಿರ್ಮಿಸುವುದು, ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವುದು, ವಿವಿಧ ಇಲಾಖೆಗಳ ಸಮನ್ವಯ ಸಾಧಿಸುವುದು, ತುರ್ತು ಕ್ರಮಕ್ಕೆ ಸಿದ್ಧವಾಗಿರುವುದು ಸೇರಿದಂತೆ ಹಲವು ಕಾರ್ಯಸೂಚಿಗಳನ್ನು ಪ್ರಸ್ತಾಪಿಸಿತ್ತು. ಆದರೆ, ಭೂ ಕುಸಿತ ಅಧ್ಯಯನ ಸಮಿತಿ ವರದಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯ ಯೋಜನೆ, ಈ ಎರಡೂ ವರದಿಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತ ಎರಡು ದಾಖಲೆಗಳು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.

ರಾಜ್ಯದ ಸುಮಾರು ಶೇ13 ಭಾಗದ ಪ್ರದೇಶದಲ್ಲಿ ಭೂಕುಸಿತವಾಗುತ್ತದೆ ಎಂದು 2021ರ ಭೂ ಕುಸಿತ ಅಧ್ಯಯನ ಸಮಿತಿ ಅಂದಾಜಿಸಿತ್ತು. ಆದರೆ ಕೆಎಸ್ ಎನ್ ಡಿಎಂಸಿ  ರಾಜ್ಯದ ವಿಸ್ತೀರ್ಣದ ಶೇ.15.30ರಷ್ಟು ಭೂ ಭೂಗಗಳಲ್ಲಿ ಭೂ ಕುಸಿತವಾಗುತ್ತದೆ ಎಂದು ಹೇಳಿದೆ. 2009ರಲ್ಲಿ ಕೇವಲ 27 ಭೂ ಕುಸಿತ ಪ್ರಕರಣಗಳು ವರದಿಯಾಗಿತ್ತು. 2009ರಿಂದ 2021ರ ವರೆಗೆ ಒಟ್ಟಾರೆ 13 ವರ್ಷಗಳಲ್ಲಿ 1,272 ಭೂ ಕುಸಿತಗಳಾಗಿವೆ. ಆ ಪೈಕಿ 2016ರಿಂದ ಭೂ ಕುಸಿತವಾಗುವ ಪ್ರಕರಣ ಹೆಚ್ಚಾಗಿದೆ ಹಾಗೂ ಸಾವು-ನೋವುಗಳು ಸಂಭವಿಸಿವೆ. 2016ರಲ್ಲಿ 125, 2017ರಲ್ಲಿ 219, 2018ರಲ್ಲಿ 462, 2019ರಲ್ಲಿ 161, 2020ರಲ್ಲಿ 264 ಹಾಗೂ 2021ರಲ್ಲಿ 66 ಭೂಮಿ ಅಥವಾ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸಿದ್ದವು. ಇನ್ನು ಈ ಪ್ರಾಕೃತಿಕ ವಿಕೋಪದಿಂದ 6 ವರ್ಷಗಳಲ್ಲಿ 44 ಮಂದಿ ಮೃತಪಟ್ಟಿದ್ದರು.

ಉತ್ತರಕನ್ನಡದ ಯಲ್ಲಾಪುರ ತಾಲೂಕಿನಲ್ಲಿ 2021ರಲ್ಲಾದ ಭೂ ಕುಸಿತವಾದ ಸ್ಥಳದ ಚಿತ್ರ. (ಚಿತ್ರಕೃಪೆ : ಕೆಎಸ್ ಡಿಎಂಎ)

 ಭೂಕುಸಿತವು ಎಲ್ಲಿ ಆಗುತ್ತಿದೆ?:

ಕೇಂದ್ರ ಸರ್ಕಾರದ ಅಧೀನದ ಇಸ್ರೋ (ISRO) ಅಂಗಸಂಸ್ಥೆಯಾದ National Remote Sensing Centre- NRSC(ISRO, GoI) ಮತ್ತು ಭಾರತಿಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (GSI) ಈಗಾಗಲೇ ಪಶ್ಚಿಮಘಟ್ಟದಲ್ಲಿ ಈವರೆಗೆ ಘಟಿಸಿರುವ ಎಲ್ಲ ಭೂಕುಸಿತಗಳನ್ನು ಸಮಗ್ರವಾಗಿ ಅಧ್ಯಯನಮಾಡಿ. ಅದರ ಆಧಾರದಲ್ಲಿ ತಮ್ಮ ವೈಜ್ಞಾನಿಕ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ. ಭವಿಷ್ಯದಲ್ಲಿ ಭೂಕುಸಿತವಾಗಬಹುದಾದ ಪ್ರದೇಶಗಳನ್ನೂ ಊಹಿಸಿವೆ (Simulation Models). ಅವುಗಳ ನಿಖರ ಮಾಹಿತಿಯ ಪ್ರಕಾರ, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಎಳು ಜಿಲ್ಲೆಗಳ (ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಗೂ ಉತ್ತರ ಕನ್ನಡ) ಕಡಿದಾದ ಗುಡ್ಡ ಕಣಿವೆಗಳ ಪ್ರದೇಶಗಳಲ್ಲಿ ಈ ಭೂಕುಸಿತವು ಘಟಿಸಿವೆ.

ಮತ್ತು, ಅಲ್ಲಿಯೇ ಭವಿಷ್ಯದಲ್ಲೂ ಭೂಕುಸಿತವಾಗುವ ಸಾಧ್ಯತೆಗಳಿವೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (Karnataka State Natural Disaster Monitoring Centre-KSNDMC) ರಾಜ್ಯದ ಸುಮಾರು ಶೇ13 ಭಾಗದ ಪ್ರದೇಶದಲ್ಲಿ ಭೂಕುಸಿತವಾಗುತ್ತದೆ ಎಂದು ಅಂದಾಜಿಸಿದೆ.

ಭವಿಷ್ಯದಲ್ಲೂ ಭೂ ಕುಸಿತ ಸಾಧ್ಯತೆಯ 23 ತಾಲ್ಲೂಕುಗಳ ವಿವರ :

ಭವಿಷ್ಯದಲ್ಲಿ ಭೂಕುಸಿತದ ಸಾಧ್ಯತೆಗಳಿರುವ ಈ ಜಿಲ್ಲೆಗಳ 23 ತಾಲೂಕುಗಳನ್ನೂ ಅದು ಗುರುತಿಸಿದೆ. ಅವೆಂದರೆ:

ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ (ಕೊಡಗು ಜಿಲ್ಲೆ), ಸಕಲೇಶಪುರ ( ಹಾಸನ ಜಿಲ್ಲೆ), ಕೊಪ್ಪ, ಮೂಡಿಗೆರೆ. ಶೃಂಗೇರಿ ಹಾಗೂ ಚಿಕ್ಕಮಗಳೂರು (ಚಿಕ್ಕಮಗಳೂರು ಜಿಲ್ಲೆ), ಸಾಗರ ( ಶಿವಮೊಗ್ಗ ಜಿಲ್ಲೆ), ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ಹಾಗೂ ಜೋಯ್ತಾ (ಉತ್ತರ ಕನ್ನಡ ಜಿಲ್ಲೆ), ಕಾರ್ಕಳ ( ಉಡುಪಿ ಜಿಲ್ಲೆ), ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ)

ಇವುಗಳ ಜೊತೆಗೆ, ಈ ಕೆಲವು ವರ್ಷಗಳಲ್ಲಿ ಕುಂದಾಪುರ ತಾಲ್ಲೂಕು (ಉಡುಪಿ ಜಿಲ್ಲೆ), ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕು (ಶಿವಮೊಗ್ಗ ಜಿಲ್ಲೆ) ಹಾಗೂ ಖಾನಾಪುರ ತಾಲ್ಲೂಕು (ಬೆಳಗಾಂ ಜಿಲ್ಲೆ)ಯ ಹಲವು ಪ್ರದೇಶಗಳಲ್ಲೂ ಭೂಕುಸಿತವಾಗುತ್ತಿದೆ. ಈ ಎಲ್ಲ ತಾಲ್ಲೂಕು ಪ್ರದೇಶಗಳ ಕಡಿದಾದ ಗುಡ್ಡ-ಕಣಿವೆ ಪ್ರದೇಶಗಳನ್ನು “ಭೂಕುಸಿತವಾಗಬಲ್ಲ ಸೂಕ್ಷ್ಮ ಪ್ರದೇಶ” (Landslide Vulnerable Sensitive Zone) ಎಂದು ಗುರುತಿಸಬೇಕಿದೆ. 

ಪ್ರಮುಖವಾಗಿ ಭೂ ಕುಸಿತ ಅಧ್ಯಯನ ಸಮಿತಿಯು ಭೂ ಕುಸಿತಕ್ಕೆ ಇರುವ ಪ್ರಮುಖ ಕಾರಣಗಳನ್ನು ತನ್ನ ವರದಿಯಲ್ಲಿ ತಿಳಿಸಿತ್ತು. ಆ ವರದಿಯಲ್ಲಿನ ಪ್ರಮುಖಾಂಶಗಳು ಈ ಕೆಳಕಂಡಂತಿದೆ :

ಭೂಕುಸಿತಕ್ಕೆ ಕಾರಣಗಳೇನು?:

ಕೊಡಗಿನ ಮಡಿಕೇರಿ ತಾಲ್ಲೂಕಿನ ರಾಣಿಪೇಟೆಯಲ್ಲಿ ಭೂ ಕುಸಿತವಾದ 2018ರ ಚಿತ್ರ. (ಕೃಪೆ : ಕೆಎಂಡಿಎಮ್ಎ)

ಈವರೆಗಿನ ಎಲ್ಲ ಅಧ್ಯಯನಗಳ ಸಮೀಕ್ಷೆ ಹಾಗೂ ಸಮಾಲೋಚನೆಯ ನಂತರ. ಮಲೆನಾಡು ಹಾಗೂ ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಭೂಗರ್ಭಶಾಸ್ತ್ರದ ಅಧ್ಯಯನದಂತೆ, ಪಶ್ಚಿಮಘಟ್ಟವು ಮೂಲತಃ ಭೂಕುಸಿತದ ಸಾಧ್ಯತೆಯಿರುವ ಸೂಕ್ತ ಪ್ರದೇಶವೇ ಆಗಿದೆ. ಇಲ್ಲಿನ ಕಲ್ಲುಮಿಶ್ರಿತ ಸಡಿಲವಾದ ಮಣ್ಣಿನ ರಚನೆ. ಕಡಿದಾದ ಗುಡ್ಡಗಳು, ತೆಳುವಾದ ಮೇಲ್ಪಣ್ಣಿನ ಹೊದಿಕೆ ಇವೆಲ್ಲ ಭೂಕುಸಿತಕ್ಕೆ ಪೂರಕವಾಗಬಲ್ಲ ಸನ್ನಿವೇಶ ಸೃಷ್ಟಿಸಬಲ್ಲವು. ಕಲ್ಲುಬಂಡೆಗಳ ಅದಿರಿನ ಸ್ವರೂಪ ಮತ್ತು ರಚನೆ. ಮೇಲ್ಮಣ್ಣು ಹಾಗೂ ಕೆಳಸ್ಥರದ ಭೂರಚನೆ. ಮೇಲ್ಪದರದ ಹಸಿರು ಮರಗಿಡಗಳ ಹೊದಿಕೆ ಅಥವಾ ಕಾಡಿನ ನಾಶ, ಇಳಿಜಾರಿನ ಪ್ರದೇಶದ ಭೂಸ್ವರೂಪ ಬದಲಾವಣೆ, ನೀರಿನ ಹರಿವಿನ ನೈಸರ್ಗಿಕ ಬಸಿಗಾಲುವೆಗಳ ನಾಶ ಅಥವಾ ಹೂಳು ತುಂಬಿರುವದು ಅಥವಾ ಅವನ್ನು ಆನ್ಯ ಉದ್ದೇಶಕ್ಕೆ ಬದಲಾಯಿಸಿರುವುದು, ರಸ್ತೆ, ಸೇತುವೆ ಅಥವಾ ಕಟ್ಟಡ ಕಟ್ಟುವ ಉದ್ದೇಶಕ್ಕಾಗಿ ಇಳಿಜಾರನ್ನು ಅತಿಯಾಗಿ ಕತ್ತರಿಸಿರುವುದು, ಮಣ್ಣು ಸಡಿಲವಾದ ಪ್ರದೇಶದಲ್ಲಿಯೇ ಮಳೆನೀರು ಹರಿಯತೊಡಗುವುದು ಮತ್ತು ಇಂಗುವುದು.

ಇಳಿಜಾರು ಪ್ರದೇಶದ ಕ್ವಾರಿಗಳು, ಕಡಿದಾದ ಇಳಿಜಾರಿನಲ್ಲಿನ ಕಾಮಗಾರಿಗಳು, ಗುಡ್ಡಗಳ ಬುಡದಲ್ಲಿ ಮಣ್ಣು ಸವೆತ, ತೊರೆ-ಹೊಳೆಯಂಚುಗಳಲ್ಲಿ ಮಣ್ಣು ಸವೆತ, ಅನ್ಯ ಉದ್ದೇಶಕ್ಕಾಗಿ ಆರಣ್ಯಭೂಮಿಯನ್ನು ತ್ವರಿತವಾಗಿ ಹಾಗೂ ವ್ಯಾಪಕವಾಗಿ ಭೂಪರಿವರ್ತನೆ ಮಾಡಿದ್ದು ಇವೆಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಭೂಕುಸಿತಕ್ಕೆ ಪೂರಕ ಪರಿಸ್ಥಿತಿ ನಿರ್ಮಿಸುತ್ತಿವೆ. ಒಟ್ಟಾರೆಯಾಗಿ, ಇದರಿಂದಾಗುವ ಈ ಬಗೆಯ ಭೂಕುಸಿತಗಳನ್ನು “ತೇವಾಂಶಭರಿತ ಮಣ್ಣು ಹಾಗೂ ಕಲ್ಲುಬಂಡೆಗಳ ಚಾರುವಿಕೆ” ಎಂದು ತಜ್ಞರು ಗುರುತಿಸುತ್ತಾರೆ. (Mud- Slides and Rock-Falls).

ಭೂ ಕುಸಿತಕ್ಕೆ ಎರಡು ಬಗೆಯ ಪ್ರಚೋದನೆ ಕಾರಣ :

ಈ ಬಗೆಯ ಭೂಕುಸಿತಕ್ಕೆ ಅಂತಿಮವಾಗಿ ಎರಡು ಬಗೆಯ ಪ್ರಚೋದನೆಗಳು ಕಾರಣ ಎಂದು ಹೇಳಬಹುದು ಒಂದನೆಯದು, ಒಮ್ಮೆಲೆ ಅತಿಯಾಗಿ ಸುರಿಯುವ ಭಾರಿಮಳೆ (ಕರ್ನಾಟಕದಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ ಸರಾಸರಿ ಒಂದೇ ತೆರನಲ್ಲಿದ್ದರೂ. ಕೆಲವೇ ಗಂಟೆಗಳಲ್ಲಿ ಒಮ್ಮೆಲೆ ಅತಿಯಾಗಿ ಮಳೆ ಸುರಿಯುವ ಸಂದರ್ಭಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವದನ್ನು ಹವಾಮಾನ ತಜ್ಞರು ದಾಖಲಿಸಿದ್ದಾರೆ. ಸ್ಥಳೀಯ ಹಾಗೂ ಜಾಗತಿಕ ಪರಿಸರದ ಗುಣಮಟ್ಟದಲ್ಲಿನ ಭಾರಿ ಏರುಪೇರಿನಿಂದಾಗುತ್ತಿರುವ ಒಟ್ಟಾರೆ ಫಲಶೃತಿಯಾದ “ಹವಾಮಾನ ಬದಲಾವಣೆ”ಯ ಪರಿಣಾಮವಿದು ಎನ್ನಬಹುದು). ಎರಡನೇಯದು, ಸಡಿಲವಾದ ಮೇಲಣ್ಣಿನ ಹಸಿರು ಹೊದಿಕೆಯನ್ನು ನಾಶಮಾಡುವ ಹಾಗೂ ಭಾರಿ ಪ್ರಮಾಣದ ಮಳೆನೀರನ್ನು ಒಮ್ಮೆಲೆ ಮಣ್ಣಿನೊಳಕ್ಕೆ ಬಿಟ್ಟು ಕೊಡುವ ತೆರನಾದ ಭೂಸ್ವರೂಪ ಪರಿವರ್ತನೆ. ಇವೆರಡೂ ಪ್ರಮುಖ ಕಾರಣಗಳಾಗಿವೆ. ಒಂದು ಪ್ರದೇಶದಲ್ಲಿ ಏಕಕಾಲಕ್ಕೆ ಇವೆರಡೂ ಪ್ರಚೋದನೆಗಳು ಜೊತೆಯಾದರೆ, ಅಲ್ಲಿ ಭೂಕುಸಿತವಾಗತೊಡಗುತ್ತದೆ.

ತಜ್ಞರು ಹೇಳುವಂತೆ, ಇಂದು ಸಂಭವಿಸುತ್ತಿರುವ ಬಹುತೇಕ ಎಲ್ಲ ಭೂಕುಸಿತಗಳೂ ಮಾನವ ನಿರ್ಮಿತವೇ ಆಗಿವೆ. ಅದರಲ್ಲೂ ಮುಖ್ಯವಾಗಿ ಅರಣ್ಯ ಒತ್ತುವರಿ, ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳು, ರಸ್ತೆ, ಮನೆ ಇತ್ಯಾದಿಗಳ ನಿರ್ಮಾಣಕ್ಕಾಗಿ ಕಾಡು ಹಾಗೂ ಗುಡ್ಡಗಳನ್ನು ಕಡಿಯುವುದು ಗುಡ್ಡ ಕುಸಿತಕ್ಕೆ ಕಾರಣವಾಗುತ್ತಿವೆ. ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಮಿತಿಮೀರಿದರೆ ಇಂಥ ಅನಾಹುತಗಳು ಸಂಭವಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೆಎಸ್ಎನ್ಎಂಡಿಎಂಸಿಯ ಮಳೆ ಮಾಪನ ಮತ್ತು ಹವಾಮಾನ ಕೇಂದ್ರದ ಸಾಂದರ್ಭಿಕ ಚಿತ್ರ.

ಆಗಾಗ ಕೈ ಕೊಡುತ್ತಿವೆ ಮಳೆ ಮಾಪನ ಕೇಂದ್ರಗಳು :

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ರಾಜ್ಯದಾದ್ಯಂತ ಬ್ಯಾಟರಿ ಮತ್ತು ಸೌರ ಫಲಕ ಆಧಾರಿತ 6505 ಮಳೆ ಮಾಪನ ಕೇಂದ್ರ (TRG), ಹೋಬಳಿ ಮಟ್ಟಗಳಲ್ಲಿ 935 ಟೆಲಿಮೆಟ್ರಿಕ್ ಹವಾಮಾನ ಕೇಂದ್ರ (TWS) ಸ್ಥಾಪಿಸಲಾಗಿದೆ. 6505 ಟಿಆರ್ ಜಿ ಕೇಂದ್ರಗಳ ಪೈಕಿ 5,500 ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆಯಷ್ಟೆ ಎಂದು ಮೂಲಗಳು ತಿಳಿಸಿವೆ.

ದಟ್ಟ ಮೋಡ- ಭಾರೀ ಮಳೆ ಜಿಪಿಆರ್ ಎಸ್ ನಿಂದ ದತ್ತಾಂಶ ರವಾನೆಗೆ ತೊಡಕು :

ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಮೋಡ ಜಾಸ್ತಿಯಿರುವ ಕಾರಣ ಜಿಪಿಆರ್ ಎಸ್ ಮೂಲಕ ದತ್ತಾಂಶ ಸಮರ್ಪಕವಾಗಿ ಕೆಎಸ್ ಎನ್ ಡಿಎಂಸಿಗೆ ರವಾನೆಯಾಗುವದರಲ್ಲಿ ಸಮಸ್ಯೆಯಿದೆ. ಆಗಾಗ ಬ್ಯಾಟರಿ ಕೈಕೊಡುವುದರಿಂದ ಮಳೆ ಮಾಪನ ಕೇಂದ್ರಗಳಿಂದ ಮಳೆ ಮಾಹಿತಿ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ನಿರಂತರವಾಗಿ ಮಾಹಿತಿ ರವಾನೆ ಕಷ್ಟವಾಗುತ್ತಿದೆ. ಆದರೂ ದಿನನಿತ್ಯ ಕೇಂದ್ರದಿಂದ ಉಸ್ತುವಾರಿ ನಡೆಸಿ ಸೇವಾದಾರರಿಗೆ ಸಂಪರ್ಕಿಸಿ ಮಳೆ ಮಾಪನ ಕೇಂದ್ರದ ಸಮಸ್ಯೆಯನ್ನು ಮೂರು ದಿನಗಳ ಒಳಗೆ ರಿಪೇರಿ ಮಾಡುತ್ತಾರೆ. ಒಂದೊಮ್ಮೆ ಟಿಆರ್ ಜಿ ಅಥವಾ ಟಿಡಬ್ಲ್ಯುಎಸ್ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಪಕ್ಕದ ಕೇಂದ್ರದ ಮಾಹಿತಿಯನ್ನು ಆಧರಿಸಿ ಹವಾಮಾನ ವರದಿ ನೀಡುತ್ತೇವೆ.

ಇದನ್ನೂ ಓದಿ : Nandi Hills| ನಂದಿ ಗಿರಿಧಾಮದಲ್ಲಿ ಭೂರಮೆಯ ಶೃಂಗಾರ : ಮಂಜು- ಮಳೆ ನಡುವೆ ಚುಮು ಚುಮು ಚಳಿ!!

ಜಿಪಿಆರ್ ಎಸ್ ಗಿಂತ ಜಿಸ್ಯಾಟ್ ಉತ್ತಮ ಆದರೆ ವಚ್ಚದಾಯಕ :

ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮೋಡ ಜಾಸ್ತಿಯಾದಾಗ ಜಿಪಿಆರ್ ಎಸ್ ಮೂಲಕ ದತ್ತಾಂಶ ರವಾನೆಗೆ ತೊಡಕಾಗುತ್ತದೆ. ಜಿಪಿಆರ್ ಎಸ್ ಆಧಾರಿತ ಮಳೆ ಮಾಪನ ಕೇಂದ್ರದಲ್ಲಿ ಬ್ಯಾಟರಿ ಕೈಕೊಡುವ,  ಸೂರ್ಯನ ಶಾಖವಿಲ್ಲದೆ ಸೌರಫಲಕದಿಂದ ವಿದ್ಯುತ್ ಇಲ್ಲದೆ ಸಮಸ್ಯೆಯಾಗುತ್ತದೆ. ಜಿಪಿಆರ್ ಎಸ್ ಸೌಲಭ್ಯಕ್ಕೆ ಕೇಂದ್ರವೊಂದಕ್ಕೆ ವರ್ಷಕ್ಕೆ 10 ಸಾವಿರ ರೂ. ತನಕ ಜಿಪಿಆರ್ ಎಸ್ ಸೌಲಭ್ಯಕ್ಕೆ ಖರ್ಚಾಗುತ್ತದೆ. ಅದರ ಬದಲು ಟಿಆರ್ ಜಿ ಕೇಂದ್ರದಲ್ಲಿ ಮೋಡಮ್ ಹಾಕಿ ಯಾವುದೇ ತೊಡಕಿಲ್ಲದೆ ನೇರವಾಗಿ ಉಪಗ್ರಹ ಆಧಾರಿತ ವಿಸ್ಯಾಟ್ (VSAT) ಗೆ ಮಳೆ ಮಾಹಿತಿ ರವಾನಿಸಿ ಅಲ್ಲಿಂದ ಕೆಎಸ್ ಡಿಎಂಸಿ ಸರ್ವರ್ ಗೆ ಡೇಟಾ ರವಾನಿಸಬಹುದು. ಇದು ವೆಚ್ಚದಾಯಕ. ಕೇಂದ್ರವೊಂದಕ್ಕೆ ವರ್ಷಕ್ಕೆ ಒಂದು ಲಕ್ಷ ರೂ. ವೆಚ್ಚವಾಗುತ್ತದೆ. ತೀವ್ರ ಅಗತ್ಯವಿರುವ ಕಡೆ ಸರ್ಕಾರ ಇದನ್ನು ಅಳವಡಿಸಬಹುದು ಎಂದು ಕೆಎಸ್ ಡಿಎಂಸಿ ಉನ್ನತ ಮೂಲಗಳು ತಿಳಿಸಿದೆ.

ಭೂ ಕುಸಿತ : ಜನರನ್ನು ಎಚ್ಚರಿಸುವ ಕೆಲಸ ಸಕಾಲದಲ್ಲಾಗುತ್ತಿಲ್ಲ :

“ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಪಶ್ಚಿಮಘಟ್ಟ, ಕರಾವಳಿ ಭಾಗಗಳಲ್ಲಿ ಗುಡ್ಡ ಕುಸಿತ ಸಾಮಾನ್ಯ ಎನ್ನುವಂತಾಗಿರುವುದು ದುರದೃಷ್ಟಕರ. ಭೂ ಕುಸಿತ ಶಾಶ್ವತ ತಡೆಗೆ ರಾಜ್ಯ ಸರ್ಕಾರ ವಿಜ್ಞಾನ ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರದ ನವೀನ ಮಾರ್ಗಗಳನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಗೆ ಗಮನ ಕೊಡಬೇಕು. ಒಂದೇ ದಿನ 250  ಮಿ.ಮೀನಿಂದ 400 ಮಿ.ಮೀ ಮಳೆಯಾದರೆ ಗುಡ್ಡ ಅಥವಾ ಭೂಕುಸಿತ ಸಾಮಾನ್ಯವಾಗಿ ಆಗುತ್ತದೆ. ಭೂ ಕುಸಿತದ ಅಪಾಯವಿರುವ ಪ್ರದೇಶಗಳನ್ನು ಈಗಾಗಲೇ ರಾಜ್ಯದಲ್ಲಿ ಗುರ್ತಿಸಲಾಗಿದೆ. ಹೀಗಿರುವಾಗ ಜೋರು ಮಳೆ ಬರುವ 24 ಗಂಟೆಗಳ ಮೊದಲೇ ಇಂತಹ ಸ್ಥಳಗಳಲ್ಲಿ ಅಳವಡಿಸಿರುವ ಮಳೆ ಮಾಪನ ಕೇಂದ್ರಗಳ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿ ಭೂ ಕುಸಿತ ಸಂಭವಿಸುವ ಕಡೆ, ಸ್ಥಳೀಯರನ್ನು ಅಪಾಯದ  ಸ್ಥಳದಿಂದ ಬೇರೆಡೆ ಸ್ಥಳಾಂತರವಾಗುವಂತೆ ಎಚ್ಚರಿಕೆ ನೀಡುವ ಪ್ರಮುಖ ಕೆಲಸ ಸರಿಯಾಗಿ ಆಗುತ್ತಿಲ್ಲ” ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಹಾಗೂ ವಿಜ್ಞಾನಿ ವಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಅಗತ್ಯ ಸ್ಥಳಗಳಲ್ಲಿ 3 ಡಿ ಸಬ್‌ಸರ್ಫೇಸ್ ಇಮೇಜಿಂಗ್ ಬಳಕೆ :

“ರಾಜ್ಯದಲ್ಲಿ ಹಲವು ಕಡೆ ಮಳೆ ಮಾಪನ ಕೇಂದ್ರಗಳು, ಟೆಲಿಮೆಟ್ರಿ ಹವಾಮಾನ ಕೇಂದ್ರಗಳು ಕಾರ್ಯ ಸ್ಥಗಿತಗೊಳಿಸಿವೆ. ಈ ಬಗ್ಗೆ ಕೂಡಲೇ ಕಂದಾಯ ಇಲಾಖೆ ತುರ್ತು ಗಮನ ಹರಿಸಬೇಕಿದೆ. ಭೂಕುಸಿತದ ಹೆಚ್ಚಿನ ಅಪಾಯದ ವಲಯಗಳಲ್ಲಿ, ಭೂಗರ್ಭ ನಿರೋಧಕ ಚಿತ್ರಣದಿಂದ ಮ್ಯಾಪಿಂಗ್ ಮಾಡಬೇಕಾಗಿದೆ. ಅಗತ್ಯವಿರುವ ಕಡೆಗಳಲ್ಲಿ ನಿರ್ದಿಷ್ಟ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಮಧ್ಯಸ್ಥಿಕೆಗಳಿಗೆ ಒಳನೋಟ ಪಡೆದುಕೊಳ್ಳಲು 3 ಡಿ ಸಬ್‌ಸರ್ಫೇಸ್ ಇಮೇಜಿಂಗ್ ಬಳಸಬೇಕು. ಭೂ ಕುಸಿತ ಪ್ರದೇಶದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಪುನಃ ಅದೇ ರೀತಿಯ ಕುಸಿತದ ಪ್ರಕರಣ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪದ್ಧತಿಯೇ ನಮ್ಮಲ್ಲಿಲ್ಲದಿರುವುದು ಬೇಸರದ ಸಂಗತಿ. ಭೂ ಕುಸಿತ ನಿಯಂತ್ರಣಕ್ಕೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಈ ವಲಯದಲ್ಲಿ ಹೆಚ್ಚಿನ ಅನುಭವ ಹೊಂದಿದ ವಿಜ್ಞಾನಿಗಳು ಹಾಗೂ ತಜ್ಞರನ್ನು ರಾಜ್ಯ ಸರ್ಕಾರ ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು” ಎಂದು ವಿ.ಎಸ್.ಪ್ರಕಾಶ್ ಹೇಳಿದ್ದಾರೆ.

ಭೂಕುಸಿತ ತಡೆಗೆ ಹಸಿರು ಕವಚ ಯೋಜನೆ ಜಾರಿಗೆ ಆಗ್ರಹ :

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ

“ಕರ್ನಾಟಕದ ಪಶ್ಚಿಮಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗೆ ಹಸಿರು ಕವಚ ಯೋಜನೆ ಜಾರಿಯ ಜೊತೆಗೆ 2021ರ ಭೂ ಕುಸಿತ ತಡೆ ಅಧ್ಯಯನ ವರದಿಯ ಶಿಫಾರಸ್ಸುಜಾರಿ ಮಾಡಬೇಕು. ಪಶ್ಚಿಮ ಘಟಕ್ಕೆ ಸುಸ್ಥಿರ ರಸ್ತೆ ಅಭಿವೃದ್ಧಿ ನೀತಿ, ಗುಡ್ಡಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ನಿಯಮಾವಳಿಗಳಲ್ಲಿ ಬದಲಾವಣೆ ಸೇರಿದಂತೆ ಮೊದಲಾದ ತುರ್ತು ಕ್ರಮ ಕೈಗೊಳ್ಳಬೇಕು. ಭೂ ಕುಸಿತ ತಡೆಗೆ ನಿಶ್ಚಿತ ಕಾರ್ಯ ಯೋಜನೆ ರೂಪಿಸಿ ಅದನ್ನು ಆದ್ಯತೆ ಮೇರೆಗೆ ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧತೆ ತೋರಿಸಬೇಕು” ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸರ್ಕಾರವನ್ನು ಆಗ್ರಹಿಸಿದ್ದಾರೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Previous Post

POWER NEWS | ರಾಜ್ಯದಲ್ಲಿ ವರ್ಷಧಾರೆಯಿಂದ ಇಂಧನ ಇಲಾಖೆಗೆ 96.61 ಕೋಟಿ ರೂ. ನಷ್ಟ : ಈ ಬಾರಿ ಬೇಸಿಗೆ ಅವಧಿಯಲ್ಲಿ 1083 ಕೋಟಿ ರೂ. ವಿದ್ಯುತ್ ಖರೀದಿ

Next Post

Interruption in Bank retail payments | Ransomware ದಾಳಿ : ದೇಶದ ಸಹಕಾರಿ, ಪ್ರಾದೇಶಿಕ ಬ್ಯಾಂಕಿಂಗ್ ಜಾಲದ ಸೇವೆಯಲ್ಲಿ ವ್ಯತ್ಯಯ

Next Post
Online Use

Interruption in Bank retail payments | Ransomware ದಾಳಿ : ದೇಶದ ಸಹಕಾರಿ, ಪ್ರಾದೇಶಿಕ ಬ್ಯಾಂಕಿಂಗ್ ಜಾಲದ ಸೇವೆಯಲ್ಲಿ ವ್ಯತ್ಯಯ

CREATOR: gd-jpeg v1.0 (using IJG JPEG v62), quality = 75?

Green Hydrogen Mission | ಹಸಿರು ಜಲಜನಕ ಮಿಷನ್ ಗೆ 19744 ಕೋಟಿ ರೂ. ಮೀಸಲು : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ

Please login to join discussion

Like Us on Facebook

Follow Us on Twitter

Recent News

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group