Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Nandi Hills| ನಂದಿ ಗಿರಿಧಾಮದಲ್ಲಿ ಭೂರಮೆಯ ಶೃಂಗಾರ : ಮಂಜು- ಮಳೆ ನಡುವೆ ಚುಮು ಚುಮು ಚಳಿ!!

ಜೂನ್ ನಿಂದ ಜನವರಿ ತನಕ ಪ್ರವಾಸಿಗರ ಸೀಸನ್ | ರೋಪ್ ವೇ - ಸರ್ಕೀಟ್ ಪ್ರವಾಸಕ್ಕೆ ಪ್ರವಾಸೋದ್ಯಮ ಇಲಾಖೆ ಚಿಂತನೆ

by Bengaluru Wire Desk
July 26, 2024
in Bengaluru Focus, Public interest
Reading Time: 2 mins read
1

ಬೆಂಗಳೂರು, ಜು.26 www.bengaluruwire.com : ಮಳೆಗಾಲದಲ್ಲಿ ಭೂರಮೆಯ ಶೃಂಗಾರ ವರ್ಣಿಸಲು ಸಾಧ್ಯವಿಲ್ಲ. ವಿಶ್ವವಿಖ್ಯಾತ ನಂದಿ ಗಿರಿಧಾಮ ಮಳೆ, ಮಂಜು, ಚುಮು ಚುಮು ಚಳಿಯಿಂದ ಪ್ರಕೃತಿಯ ಸೊಬಗು ಮೇರೆ ಮೀರಿದೆ. ವಾರಾಂತ್ಯದಲ್ಲಿ ಜನರ ಭೇಟಿ ಜಾಸ್ತಿಯಾಗಿದೆ. ವಾರದ ದಿನಗಳಲ್ಲೂ ಬೆಳಗ್ಗೆ ಹೊತ್ತು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ.

ದೇವನಹಳ್ಳಿ, ಚಿಕ್ಕಬಳ್ಳಾಪುರದ ಕಡೆ ಮಳೆ ತುಂತುರು ಮಳೆ ಹನಿ ಸುರಿಯುತ್ತಿದ್ದರೆ ಸಮುದ್ರ ಮಟ್ಟದಿಂದ 4851 ಅಡಿ ಮೇಲ್ಭಾಗದಲ್ಲಿ 90 ಎಕರೆ ಪ್ರದೇಶವಿರುವ ನಂದಿಬೆಟ್ಟದಲ್ಲಿ ಸುಯ್ಯನೆ ಬೀಸುವ ಗಾಳಿಯ ಪರಿಗೆ ಹಿಮ- ಮಂಜಿನ ನಡುವೆ ನೀಲಗಿರಿ ಮತ್ತಿತರ ಮರಗಳು ಬಾಗುತ್ತಾ, ಬಳಕುತ್ತಿರುವುದನ್ನು, ತೋಟಗಾರಿಕೆ ಇಲಾಖೆ ಉತ್ತಮವಾಗಿ ನಿರ್ವಹಿಸುತ್ತಿರುವ ಉದ್ಯಾನವನವನ್ನು ಅಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ನೋಡುತ್ತಾ ಕಣ್ತುಂಬಿಕೊಳ್ಳುತ್ತಿದ್ದಾರೆ.

ಒಂದೇ ಸಮನೆ ಮಳೆ ಗಾಳಿ, ಮಂಜಿಗೆ ನಂದಿಬೆಟ್ಟದಲ್ಲಿನ ಮಂಗಗಳು, ರಕ್ಷಣೆಗಾಗಿ ಗಿರಿಧಾಮದ ಅತಿಥಿ ಗೃಹದ ಮಾಡಿನ ಕೆಳಗೆ ಒಟ್ಟಿಗೇ ನೆಲೆಸಿ, ಬೆಚ್ಚನೆಯ ಅನುಭವ ಪಡೆಯುತ್ತಿವೆ. 

ವಾರದ ದಿನಗಳಲ್ಲೂ ಬೆಳಗ್ಗೆ 6 ಗಂಟೆಗೆ ನಂದಿಬೆಟ್ಟ ಮೇಲ್ಭಾಗ ಪ್ರವೇಶಕ್ಕೆ ಮಳೆಯನ್ನೂ ಲೆಕ್ಕಿಸದೆ ಬೆಂಗಳೂರು ಸುತ್ತಮುತ್ತಲ ಭಾಗಗಳಿಂದ ವಿದ್ಯಾರ್ಥಿಗಳು, ಸ್ನೇಹಿತರು, ಪ್ರೇಮಿಗಳು ದ್ವಿಚಕ್ರ ವಾಹನ, ಕಾರುಗಳಿಂದ ಭೇಟಿ ನೀಡುವುದನ್ಙು ಮಾತ್ರ ನಿಲ್ಲಿಸುತ್ತಿಲ್ಲ. ಇನ್ನು ವಾರಾಂತ್ಯದಲ್ಲಿ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಎಂಬುದು ಸಾಮಾನ್ಯವಂತಾಗಿದೆ. ಇನ್ನು ರಸ್ತೆಯ ಎರಡು ಬದಿ ವಿರುದ್ಧ ದಿಕ್ಕಿನಲ್ಲೂ ವಾಹನಗಳು ನಿಂತು ನಂದಿಬೆಟ್ಟದಿಂದ‌ ಅತ್ತ ವಾಪಾಸ್ ಬರುವವರು ಕೆಳಗೆ ಬರಲು ಆಗದೆ, ಇತ್ತ ಕೆಳಗಿಂದ ಮೇಲೆ ಹೋದವರು ವಾಪಸ್ ಸಹ ಬರಲಾಗದೆ ಪರದಾಡುವಂತಾಗಿದೆ.

ಜೂನ್ ನಿಂದ ಜನವರಿ ತನಕ ಪ್ರವಾಸಿಗರ ಸೀಸನ್ :

ಮಳೆಗಾಲದಲ್ಲಿ ಜೂನ್ ನಿಂದ ಜನವರಿ ತನಕ ಬೆಳಗಿನ ಹೊತ್ತು ಜನ ಬರುತ್ತಾರೆ. ಮಂಜು ಮತ್ತು ಮಳೆ ನೋಡಲು ಪ್ರವಾಸಿಗರು ಇಲ್ಲಿಗೆ ಅಗಮಿಸುತ್ತಾರೆ. ವಾರದ ದಿನದಲ್ಲಿ 2,500 ನಿಂದ 3 ಸಾವಿರ ಜನ ಇರ್ತಾರೆ. ಒಂದು ಹಾಗೂ ನಾಲ್ಕನೇ ಶನಿವಾರ ರಜಾ ದಿನ ಬಂದರೆ ಅದರ ಹಿಂದಿನ ದಿನ ಶುಕ್ರವಾರ 3,500 – 4,000, ಶನಿವಾದರೆ 8 ರಿಂದ 10,000 ಜನ ಇಲ್ಲಿಗೆ  . ಸಾಮಾನ್ಯ ದಿನಗಳಲ್ಲಿ ಶನಿವಾರ 7,000 ರಿಂದ 9,000, ಭಾನುವಾರ 12,000 ಜನ ಬರ್ತಾರೆ ಎಂದು ಹೇಳುತ್ತಾರೆ ನಂದಿ ಗಿರಿಧಾಮದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮನೋಜ್ ಹೇಳಿದ್ದಾರೆ.

ನಂದಿ ಗಿರಿಧಾಮದ ಪ್ರವೇಶದ್ವಾರದ ಬಳಿಯ ವಾಹನ ನಿಲ್ದಾಣ ಪ್ರದೇಶ.

ಗಿರಿಧಾಮದ ಪ್ರವೇಶದ್ವಾರದ ಹೊರಗೆ 300 ಕಾರಿಗೆ, 1,500 ಟೂವೀಲರ್ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಟೂ ವೀಲರ್ ನಲ್ಲಿ ಬರುವವರು ಜಾಸ್ತಿ. ಸೂರ್ಯೋದಯಕ್ಕೆ ವೀಕ್ಷಿಸಲೆಂದು ಬೆಳಗ್ಗೆ 5.30 ರಿಂದ 10ರ ತನಕ ಬರುವವರು ಜಾಸ್ತಿ. ಗಾಂಧಿ ಭವನ, ನೆಹರು ಅತಿಥಿ ಗೃಹಗಳಲ್ಲಿ 34 ಕೊಠಡಿಗಳಿರುತ್ತೆ. ವಾರಾಂತ್ಯ ಎಲ್ಲ ರೂಮು ಬುಕಿಂಗ್ ಇರುತ್ತೆ. ಸರ್ಕ್ಯೂಟ್ ಫಿಸಿಬಿಲಿಟಿ ಅಧ್ಯಯನ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರೋಪ್ ವೇ – ಸರ್ಕೀಟ್ ಪ್ರವಾಸ :

ವಿಶೇಷವಾಗಿ ನಂದಿಗಿರಿಧಾಮವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರೋಪ್ ವೇ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣದಿಂದ ನಂದಿಬೆಟ್ಟಕ್ಕೆ ಪ್ರವಾಸಿ ಸರ್ಕಿಟ್ ರೂಪಿಸಲು ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ ರೂಪಿಸುತ್ತಿವೆ ಅಲ್ಲದೆ ಸರ್ಕಾರ ರಚಿಸುತ್ತಿರುವ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಈ ಅಂಶ ಅಡಕವಾಗಿದೆ ಎಂದು ಮೂಲಗಳು ತಿಳಿಸಿವೆ.‌  ಈ ಪ್ರವಾಸಿ ಸರ್ಕಿಟ್‌ನಿಂದ ನಂದಿಗಿರಿಧಾಮವಷ್ಟೇ ಅಲ್ಲ ಚಿಕ್ಕಬಳ್ಳಾಪುರಕ್ಕೆ ಹೊಂದಿಕೊಂಡಿರುವ ಪ್ರವಾಸಿ ತಾಣಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಹೇಗಿರುತ್ತೆ ಪ್ರವಾಸಿ ಸರ್ಕಿಟ್? : 

ವಿಮಾನ ನಿಲ್ದಾಣದಿಂದ ವಿವಿಧ ಕಡೆಗಳಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂಟು ಮತ್ತು ನಾಲ್ಕು ಗಂಟೆಗಳ ಈ ಪ್ರವಾಸಿ ಸರ್ಕಿಟ್ ಯೋಜನೆ ಸಿದ್ಧವಾಗುತ್ತಿದೆ. ನಾಲ್ಕು ಗಂಟೆ ಪ್ರವಾಸಿ ಸರ್ಕಿಟ್‌ ಪ್ಯಾಕೇಜ್ ನಲ್ಲಿ ದೇವನಹಳ್ಳಿಯ ಟಿಪ್ಪು ಜನಿಸಿದ ಕೋಟೆ, ಸ್ಥಳದಿಂದ ಪ್ರವಾಸ ಆರಂಭವಾಗುತ್ತೆ. ಅಲ್ಲಿಂದ ನಂದಿ ಗಿರಿಧಾಮ, ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ, ಕಣಿವೆ ಬಸವಣ್ಣ ಮತ್ತು ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ ವೀಕ್ಷಿಸಬಹುದು. ಈ ಎಲ್ಲ ಸ್ಥಳಗಳಲ್ಲಿ ವೀಕ್ಷಿಸಿ ವಾಪಸ್ ವಿಮಾನ ನಿಲ್ದಾಣ ತಲುಪಲು ನಾಲ್ಕು ತಾಸುಗಳ ಕಾಲಮಿತಿ ಇರುತ್ತದೆ. ಇನ್ನು ಎಂಟು ಗಂಟೆಯ ಪ್ರವಾಸಿ ಸರ್ಕಿಟ್‌ನಲ್ಲಿ ಈ ಮೇಲಿನ ಸ್ಥಳಗಳ ಜೊತೆಗೆ ರಂಗಸ್ಥಳ, ಈಶ ಯೋಗ ಕೇಂದ್ರವೂ ಇರಲಿದೆ. ಯಾವಾಗ ಈ ವ್ಯವಸ್ಥೆ ಜಾರಿಗೆ ಬರುವುದೋ ಕಾದು ನೋಡಬೇಕು. 

Previous Post

NEET Vs CET | ರಾಷ್ಟ್ರ ಮಟ್ಟದ ನೀಟ್ ವ್ಯವಸ್ಥೆಗೆ ಸಡ್ಡು ಹೊಡೆದ ರಾಜ್ಯ ಸರ್ಕಾರ : ಉಭಯ ಸದನಗಳಲ್ಲಿ ಸಿಇಟಿ ಪ್ರವೇಶಾತಿಗೆ ನಿರ್ಣಯ

Next Post

Sandalwood PEPE Film | ಓ ಮೈ ಗಾಡ್! ದೊಡ್ಮನೆ ಮೊಮ್ಮಗನ ಚಿತ್ರಕ್ಕೆ ‘ಎ’ ಸರ್ಟಿಫಿಕೇಟಾ?

Next Post

Sandalwood PEPE Film | ಓ ಮೈ ಗಾಡ್! ದೊಡ್ಮನೆ ಮೊಮ್ಮಗನ ಚಿತ್ರಕ್ಕೆ ‘ಎ’ ಸರ್ಟಿಫಿಕೇಟಾ?

ಕನ್ನಡ ರಾಜ್ಯೋತ್ಸವಕ್ಕೂ ಮುನ್ನವೇ ಬೆಂಗಳೂರಿನ ಗಾಂಧಿನಗರದಲ್ಲಿ ಕನ್ನಡ ಡಿಂಡಿಮ : ಯಶಸ್ವಿಯಾಗಿ ನಡೆದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group