Saturday, September 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

  • Bengaluru Focus

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Science News | ನಮ್ಮ ಪೂರ್ವಜ ಮಂಗ ಸ್ವತಃ ವೈದ್ಯ ; ತನ್ನ ಗಾಯಕ್ಕೆ ತಾನೇ ಔಷಧಿ ಹಾಕಿ ಗುಣಪಡಿಸಿಕೊಂಡಿದೆ – ಹೊಸ ಸಂಶೋಧನೆಯಲ್ಲಿ ಬಯಲು

ವಾನರ ಜಾತಿಯ ಒರಾಂಗುಟನ್ ವೈದ್ಯರ ಪಾತ್ರವನ್ನು ವಹಿಸುತ್ತದೆ, ತನಗೆ ತಿಳಿದಿರುವ ಔಷಧೀಯ ಸಸ್ಯ ಬಳಸಿ, ಸ್ವತಃ ತನ್ನ ಗಾಯವನ್ನು ಗುಣಪಡಿಸಿಕೊಳ್ಳುತ್ತವೆ ಎಂಬ ಮೊದಲ ದಾಖಲಿತ ಪ್ರಕರಣ ಇದಾಗಿದೆ.

by Bengaluru Wire Desk
May 5, 2024
in News Wire, Public interest
Reading Time: 1 min read
0

ಇತರ ದೊಡ್ಡ ಮಂಗಗಳಂತೆ, ಒರಾಂಗುಟನ್‌ಗಳು ಅನೇಕ ಮಾನವ ತರಹದ ಅಭ್ಯಾಸಗಳನ್ನು ಹೊಂದಿರುವುದನ್ನು ನಾವು ಆಗಾಗ ಮಾಧ್ಯಮಗಳಲ್ಲಿ, ಇಂಟರ್ ನೆಟ್ ನಲ್ಲಿ ಓದಿರುತ್ತೇವೆ, ನೋಡಿರುತ್ತೇವೆ. ಅವು ಉಪಕರಣಗಳನ್ನು ಬಳಸುವುದು, ತಮ್ಮ ಗೂಡುಗಳ ಮೇಲೆ ಛಾವಣಿ ಹಾಕುವುದು ಇತ್ಯಾದಿ ಚಟುವಟಿಕೆ ಮಾಡುವುದನ್ನು ಪ್ರಾಣಿತಜ್ಞರು ಗಮನಿಸಿದ್ದಾರೆ. ಆದರೆ ಈಗ ಸಂಶೋಧಕರು ಮತ್ತೊಂದು ಬೆರಗುಗೊಳಿಸುವ ಹೋಲಿಕೆಯನ್ನು ಗಮನಿಸಿದ್ದಾರೆ.

ಸುಮಾತ್ರಾದಲ್ಲಿ ಒರಾಂಗುಟನ್ ಜಾತಿಯ ಮಂಗವು ತನಗಾದ ಗಾಯವನ್ನು ಗುಣಪಡಿಸಲು ಔಷಧೀಯ ಸಸ್ಯವನ್ನು ಬಳಸುವುದನ್ನು ಪತ್ತೆಹಚ್ಚಿದ್ದಾರೆ. ಅದನ್ನು ವೈಜ್ಞಾನಿಕ ರೀತಿಯಲ್ಲಿ ಮೊದಲ ಬಾರಿಗೆ ದಾಖಲಿಸಿದ್ದಾರೆ. ಈ ಕುರಿತಂತೆ ವಿಜ್ಞಾನ ಪತ್ರಿಕೆ ಸೈನ್ಸ್ ಡಾಟ್ ಆರ್ಗ್ ನಲ್ಲಿ ಇತ್ತೀಚೆಗೆ ಈ ಬಗ್ಗೆ ವೈಜ್ಞಾನಿಕ ವರದಿ ಪ್ರಕಟವಾಗಿದೆ. ತಾಜಾ ಗಾಯಕ್ಕೆ ಚಿಕಿತ್ಸೆ ನೀಡಲು ವೈಜ್ಞಾನಿಕವಾಗಿ ಸಾಬೀತಾಗಿರುವ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವನ್ನು ಬಳಸಿದ ಮೊದಲ ದಾಖಲಿತ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ.

 “ಇದು ನಿಜವಾಗಿಯೂ ಉತ್ತಮವಾದ ದಾಖಲಿತ ಅಧ್ಯಯನವಾಗಿದೆ. ಸಸ್ತನಿಗಳಿಂದ ಗಾಯಗಳ ಚಿಕಿತ್ಸೆಯ ಬಗ್ಗೆ ಬಹಳಷ್ಟು ಹೊಸ ಮಾಹಿತಿಯು ಬೆಳಕಿಗೆ ಬರುತ್ತಿದೆ ಮತ್ತು ಇದು ಇತರ ಪ್ರಾಣಿಗಳಲ್ಲಿಯೂ ಸಹ ಸಂಭವಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ “ಎಂದು ನಾಗಸಾಕಿ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಫಾರ್ ಟ್ರಾಪಿಕಲ್ ಮೆಡಿಸಿನ್‌ನ ಪ್ರೈಮಟಾಲಜಿಸ್ಟ್ ಮೈಕೆಲ್ ಹಫ್ಮನ್ ಹೇಳುತ್ತಾರೆ.

ಒಂದು ದಿನ ವೀಕ್ಷಕರು ಅಸಮಾನ್ಯವಾದುದನ್ನು ಗಮನಿಸಿದರು :

ಜ್ಯೂರಿಚ್ ವಿಶ್ವವಿದ್ಯಾನಿಲಯ, ಇಂಡೋನೇಷ್ಯಾದ ರಾಷ್ಟ್ರೀಯ ವಿಶ್ವವಿದ್ಯಾನಿಲಯ ಮತ್ತು ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಬಿಹೇವಿಯರ್ (MPGAB) ಜಂಟಿಯಾಗಿ ನಿರ್ವಹಿಸಲ್ಪಡುವ ಅರಣ್ಯ ಮೀಸಲು ಪ್ರದೇಶದಲ್ಲಿ ರಾಕಸ್‌ ಎಂಬ ಅಡ್ಡ ಹೆಸರಿನ ವಯಸ್ಕ ಗಂಡು ಒರಾಂಗುಟಾನ್‌ ಸೇರಿದಂತೆ 150 ಸುಮಾತ್ರಾನ್ ಒರಾಂಗುಟಾನ್‌ಗಳಿವೆ.  (ರಾಕಸ್ ಹೆಸರಿನ ಅರ್ಥ “ದುರಾಸೆ”) ಕಳೆದ 3 ದಶಕಗಳಲ್ಲಿ, ಇಲ್ಲಿನ ಕ್ಷೇತ್ರ ತಂಡಗಳು ವಾಡಿಕೆಯಂತೆ ಮಂಗಗಳ ಮೇಲೆ ಅಧ್ಯಯನ ನಡೆಸಿದ್ದು, ಸುಮಾರು 30,000 ಗಂಟೆಗಳ ಅವಲೋಕನಗಳನ್ನು ದಾಖಲಿಸಿವೆ. ಒಂದು ದಿನ ಅವರು ಅಸಾಮಾನ್ಯವಾದುದನ್ನು ಗಮನಿಸಿದರು.

ರಾಕುಸ್ ಎಂಬ ಒರಾಗುಂಟಾನ್ ಗಾಯವಾದಾಗ ಹೀಗೆ ಮಾಡಿತ್ತು :

2022 ರಲ್ಲಿ, ರಾಕಸ್ ತನ್ನ 30ನೇ ವಯಸ್ಸಿನ ಆರಂಭದಲ್ಲಿ ಕೆಲವು ವೈಯಕ್ತಿಕ ಚಟುವಟಿಕೆಗಳನ್ನು ಮಾಡುತ್ತಿತ್ತು. ಆ ಒರಾಗುಂಟಾನ್ “ಫ್ಲ್ಯಾಂಗ್ಡ್” ಎಂಬ ವಿಶಿಷ್ಟವಾದ ದ್ವಿತೀಯ ಲೈಂಗಿಕ ಬೆಳವಣಿಗೆಯಾದಾಗ ಹೆಚ್ಚು ಆಕ್ರಮಣಕಾರಿಯಾಗಿತ್ತು. ಇತರ ಪುರುಷ  ಒರಾಗುಂಟಾನ್ ಜೊತೆ ಹಲವು ಘರ್ಷಣೆಗಳಲ್ಲಿ ತೊಡಗುತ್ತಿತ್ತು. ಜೂನ್ ತಿಂಗಳ ಅಂತ್ಯದಲ್ಲಿ ಒಂದು ದಿನ, ವೀಕ್ಷಕರು ಒರಾಂಗುಟನ್‌ಗಳ ನಡುವಿನ ಘರ್ಷಣೆಯ ಶಬ್ದಗಳನ್ನು ಕೇಳಿದರು.  ಸ್ವಲ್ಪ ಸಮಯದ ನಂತರ, ಅವುಗಳ ಘರ್ಷಣೆಯಲ್ಲಿ, ರಾಕುಸ್ ಒರಾಗುಂಟಾನ್ ಕೋತಿಯ ಬಲ ಕೆನ್ನೆಯ ಮೇಲೆ ಆಳವಾದ ಕೆಂಪು ಗಾಯ ಮತ್ತು ಅದರ ಬಾಯಿಯೊಳಗೆ ಮತ್ತೊಂದು ಗಾಯವನ್ನು ಗುರುತಿಸಿದರು.

 ಈ ಗಲಾಟೆಯಾದ ಮೂರು ದಿನಗಳ ನಂತರ, ರಾಕುಸ್ ಮರದ ಮೇಲೆ ಕುಳಿತು, ಅಕಾರ್ ಕುನಿಂಗ್ ಎಂದು ಕರೆಯಲ್ಪಡುವ ಫೈಬ್ರೂರಿಯಾ ಟಿಂಕ್ಟೋರಿಯಾದ ಎಲೆಗಳನ್ನು ತಿನ್ನುತ್ತಿತ್ತು. ಈ ಸಸ್ಯವು ಹಲವು ಔಷಧೀಯ ಗುಣಗಳನ್ನು ಹೊಂದಿದ ಎಲೆಯಾಗಿದ್ದು, ಆಗ್ನೇಯ ಏಷ್ಯಾ ಮತ್ತು ಚೀನಾದಾದ್ಯಂತ ಈ ಎಲೆಗಳನ್ನು ನೋವು ನಿವಾರಕ, ಜ್ವರ ನಿವಾರಣೆ ಮತ್ತು ಮೂತ್ರವರ್ಧಕವಾಗಿ ಬಳಸಲಾಗುತ್ತದೆ.  ಒರಾಂಗುಟಾನ್ ಮಂಗವು ಸಾಮಾನ್ಯವಾಗಿ ಫೈಬ್ರೂರಿಯಾ ಟಿಂಕ್ಟೋರಿಯಾ ಎಲೆಯನ್ನು ಅಪರೂಪವಾಗಿ ತಿನ್ನುತ್ತವೆ. 

ಆದರೆ ಇತರ ಒರಾಗುಂಟಾನ್ ಜೊತೆ ಗಲಾಟೆಯಾಗಿ ಗಾಯಗೊಂಡ ನಂತರ ರಾಕುಸ್ ಮಂಗವು ಅರ್ಧ ಗಂಟೆಗೂ ಹೆಚ್ಚು ಕಾಲ ಆ ಎಲೆಗಳನ್ನು ತಿನ್ನುತ್ತಿತ್ತು. ನಂತರ ಅದು ಎಲೆಗಳನ್ನು ಚೆನ್ನಾಗಿ ಅಗೆದು ತನ್ನ ಉದ್ದನೆಯ ಬೆರಳುಗಳಿಂದ ಆ ಹಸಿರು ತಿರುಳನ್ನು ಬಾಯಿಂದ ತೆಗೆದು, ತನ್ನ ಕೆನ್ನೆಯ ಮೇಲಿನ ಗಾಯದ ಮೇಲೆ ಅದನ್ನು ಗಾಯ ಗುಣವಾಗುವ ತನಕ ಆಗಾಗ ಮಾಡುತ್ತಲೇ ಇತ್ತು.

ಬೇರೆ ಮಂಗಗಳಿಂದ ಸ್ವಯಂ ಚಿಕಿತ್ಸೆ ಜ್ಞಾನ ಪಡೆಯುತ್ತವಾ? :

ಬೇರೆ ಮಂಗಗಳ ಜೊತೆಗಿನ ಕಾದಾಟದಲ್ಲಿ ರಾಕುಸ್ ಹೆಸರಿನ ಒರಾಗುಂಟಾನ್ ಗೆ ಆದ ಗಾಯವು 8 ದಿನಗಳಲ್ಲಿ ಗುಣವಾಯಿತು. ಒಂದು ತಿಂಗಳೊಳಗೆ ಸಂಪೂರ್ಣವಾಗಿ ಗಾಯ ವಾಸಿಯಾಯಿತು. ಕೇವಲ ಮಸುಕಾದ ಗಾಯದ ಗುರುತು ಮಾತ್ರ ಉಳಿದಿತ್ತು.  ತಮ್ಮ ಲೇಖನದಲ್ಲಿ, ಸಂಶೋಧಕರು ರಾಕಸ್ ಅವರ ನಡವಳಿಕೆಯು “ನೋವು ಕಡಿಮೆ ಮಾಡುವ, ಉರಿಯೂತವನ್ನು ತಡೆಗಟ್ಟುವ ಮತ್ತು ಗಾಯದ ಗುಣಪಡಿಸುವಿಕೆಯನ್ನು ವೇಗಗೊಳಿಸುವ ಸ್ವಯಂ ಔಷಧಿಗಳನ್ನು ಬಳಸುತ್ತಿದೆ ” ಎಂದು ಹೇಳಿದ್ದಾರೆ. ಒರಾಂಗುಟನ್‌ಗಳು ಸಾಮಾಜಿಕ ಕಲಿಯುವ ಮತ್ತು ಗಾಯದ ಸ್ವಯಂ ಚಿಕಿತ್ಸೆಯು ಒಂದು ಕೋತಿಯಿಂದ ಇನ್ನೊಂದಕ್ಕೆ ಹರಡುವ ಸಾಂಸ್ಕೃತಿಕ ಜ್ಞಾನವಾಗಿರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ.

“ಇದು ಖಚಿತವಾಗಿ ಬಹುದೊಡ್ಡ ಆಶ್ಚರ್ಯವಾಗಿದೆ.  “ಈ ನಡವಳಿಕೆಗಳು ಎಷ್ಟು ಉದ್ದೇಶಪೂರ್ವಕವೆಂದು ಹೇಳಲು ಯಾವಾಗಲೂ ಕಷ್ಟ, ಆದರೆ ಈ ಸಂದರ್ಭದಲ್ಲಿ ಅದು ಉದ್ದೇಶಪೂರ್ವಕ ಮತ್ತು ಯೋಜಿತವಾಗಿದೆ ಎಂದು ಸ್ಪಷ್ಟವಾಗಿತ್ತು” ಹೇಳುತ್ತಾರೆ, ಮೀಸಲು ಪ್ರದೇಶದಲ್ಲಿ ಒರಾಂಗುಟಾನ್ ಸಂಶೋಧನಾ ಯೋಜನೆ ನಿರ್ದೇಶಿಸಿದ ಮತ್ತು ಸಹಲೇಖಕರಾದ ಎಂಪಿಜಿಎಬಿ ವಿಜ್ಞಾನಿ ಕ್ಯಾರೋಲಿನ್ ಶುಪ್ಲಿ .

ಈ ಹೊಸ ಸಂಶೋಧನೆಯು ನಮ್ಮ ವಿಕಾಸದ ಇತಿಹಾಸದ ಬಗ್ಗೆ ಜಿಜ್ಞಾಸೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈಗ ಹಲವಾರು ವಾನರ ಜಾತಿಗಳ ನಡುವೆ ಸ್ವಯಂ ಔಷಧಿಗಳನ್ನು ದಾಖಲಿಸಲಾಗಿದೆ. ಸಂಶೋಧಕರು ಅಂತಹ ನಡವಳಿಕೆಗಳು ಮಾನವ ಮತ್ತು ಮಂಗಗಳ ಕೊನೆಯ ಸಾಮಾನ್ಯ ಪೂರ್ವಜರ ಸಂಗ್ರಹದ ಭಾಗವಾಗಿರಬಹುದು ಎಂದು ಭಾವಿಸುತ್ತಾರೆ.  “ಆ ವಾನರರ ಅರಿವಿನ ಸಾಮರ್ಥ್ಯ ತುಂಬಾ ಹಳೆಯದಾಗಿರಬೇಕು” ಎಂದು ಶುಪ್ಲಿ ಹೇಳಿದ್ದಾರೆ.

ಒಟ್ಟಾರೆ ಹಿಂದಿನ ಅಧ್ಯಯನಗಳು ಮಂಗಗಳು ಮತ್ತು ಇತರ ಪ್ರಾಣಿಗಳಲ್ಲಿ ಇತರ ರೀತಿಯ ಸ್ವಯಂ ಔಷಧಿಗಳ ಬಗ್ಗೆ ವಿವರಿಸಿವೆ.  ಉದಾಹರಣೆಗೆ, ಕೆಲವು ಚಿಂಪಾಂಜಿಗಳು ಹುಳಗಳ ಸೋಂಕುಗಳಿಗೆ ಚಿಕಿತ್ಸೆ ನೀಡಲು ಔಷಧೀಯ ಪೊದೆಸಸ್ಯ ವೆರ್ನೋನಿಯಾ ಅಮಿಗ್ಡಲಿನಾ (Vernonia Amygdalina) ದ ಕಹಿ ಎಲೆಗಳನ್ನು ಹುಡುಕಿ ಅವುಗಳನ್ನು ತಿನ್ನುತ್ತವೆ. 

ಮತ್ತೊಂದು ಅಧ್ಯಯನ ಬೋರ್ನಿಯೊದಲ್ಲಿನ ಒರಾಂಗುಟಾನ್‌ಗಳು ಡ್ರಾಕೇನಾ ಕ್ಯಾಂಟ್ಲೇಯಿ ಎಲೆಯಿಂದ  ಮಸಾಜ್ ಮಾಡಿಕೊಳ್ಳುತ್ತವೆ ಎಂದು ವರದಿ ಮಾಡಿದೆ. ಇದು ಸ್ಥಳೀಯ ಜನರು ನೋಯುತ್ತಿರುವ ಸ್ನಾಯುಗಳು, ಕೀಲು ನೋವು ಮತ್ತು ಊತಕ್ಕೆ ಚಿಕಿತ್ಸೆ ನೀಡಲು ಬಳಸುವ ಉರಿಯೂತದ ಗುಣಲಕ್ಷಣಗಳನ್ನು ನಿವಾರಣೆ ಮಾಡುವ ಔಷದೀಯ ಸಸ್ಯವಾಗಿದೆ.  ಮಂಗಗಳು ಎಲೆಗಳನ್ನು ಆರಿಸಿ, ಅವುಗಳನ್ನು ಹಸಿರು ಬಿಳಿ ನೊರೆಯಾಗಿ ಅಗಿಯುತ್ತವೆ. ನಂತರ ಆ ಅಗಿದ ವಸ್ತುವನ್ನು ತಮ್ಮ ಕೈ ಮತ್ತು ಕಾಲುಗಳ ಮೇಲೆ ಉಜ್ಜಿಕೊಳ್ಳುತ್ತವೆ.

ಚಿಂಪಾಂಜಿಗಳು ಪೌಲ್ಟಿಸಿನಂತಹ ಔಷಧೀಯ ಸಸ್ಯಗಳೊಂದಿಗೆ ಗಾಯಗಳಿಗೆ ಚಿಕಿತ್ಸೆ ನೀಡುವುದನ್ನು ಸಹ ವಿವರಿಸಿವೆ.  ಈಗ, ಗುನುಂಗ್ ಲೆಯುಸರ್ ರಾಷ್ಟ್ರೀಯ ಉದ್ಯಾನವನದ ಸುವಾಕ್ ಬಾಲಿಂಬಿಂಗ್ ಸಂಶೋಧನಾ ಪ್ರದೇಶದಲ್ಲಿ ಸಂಶೋಧಕರು ಅಂತಹ ನಡವಳಿಕೆಯನ್ನು ಮತ್ತೊಂದು ಮಂಗನ ಜಾತಿಯಿಂದ ವೈಜ್ಞಾನಿಕವಾಗಿ ದಾಖಲಿಸಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Crime News | ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ಬೆದರಿಕೆ – ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Next Post

Namma Metro Video News | ದೆಹಲಿಯಂತಾಯ್ತಾ ಬೆಂಗಳೂರು ಮೆಟ್ರೋ ರೈಲು ?: ಪ್ರಯಾಣಿಕರ ಎದುರೇ ಯುವಕ – ಯುವತಿಯ ಅಸಭ್ಯ ವರ್ತನೆ!!

Next Post

Namma Metro Video News | ದೆಹಲಿಯಂತಾಯ್ತಾ ಬೆಂಗಳೂರು ಮೆಟ್ರೋ ರೈಲು ?: ಪ್ರಯಾಣಿಕರ ಎದುರೇ ಯುವಕ - ಯುವತಿಯ ಅಸಭ್ಯ ವರ್ತನೆ!!

ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

BBMP News | ನಕಲಿ ದಾಖಲೆ ಆಧರಿಸಿ ಕಟ್ಟಡ ನಕ್ಷೆ ಮಂಜೂರಾತಿ : ಪಶ್ಚಿಮ ವಲಯದ ಎಡಿಟಿಪಿ ನಾರಾಯಣಸ್ವಾಮಿ ಬಿಬಿಎಂಪಿಯಿಂದ ಬಿಡುಗಡೆ – ಇಲಾಖಾ ವಿಚಾರಣೆಗೆ ಆದೇಶ

Please login to join discussion

Like Us on Facebook

Follow Us on Twitter

Recent News

Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

September 19, 2026

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

September 19, 2026

ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

September 19, 2026

​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

September 19, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d