Thursday, August 6, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

  • Bengaluru Focus

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಸರ್ಕಾರಕ್ಕೆ 1 ಕೋಟಿ ರೂ. ಡಿವಿಡೆಂಡ್ ನೀಡಿದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

    GBA News | ಶಾಂತಿನಗರ ಇಇ ಕಚೇರಿಯಲ್ಲಿ 9 ಕೋಟಿ ರೂ.ಗಳ ಕಂಪ್ಯೂಟರ್ ಬಿಲ್ ಹಗರಣ: ಲೋಕಾಯುಕ್ತಕ್ಕೆ ದೂರು

    ಗಾಂಧಿನಗರ: ‘ಬೆಂಗಳೂರು ಪೇಟೆ’ ಪ್ರದೇಶದಲ್ಲಿ ಅಗ್ನಿ ಅವಘಡ ನಿಯಂತ್ರಣಕ್ಕೆ ನಗರದ ಪ್ರಥಮ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ ಲೋಕಾರ್ಪಣೆ

    ಮತದಾರರ ಪಟ್ಟಿ ಪರಿಶೀಲನೆ ಸಾಂದರ್ಭಿಕ ಚಿತ್ರ

    GBA News | ಮತದಾರರ ಪಟ್ಟಿ ಪರಿಷ್ಕರಣೆ: ಆಗಸ್ಟ್ 8 ಕಡೇ ದಿನ, ಸಮಸ್ಯೆ ಇದ್ದರೆ 1950ಗೆ ಕರೆ ಮಾಡಿ

    GBA News | ​ಕಗ್ಗದಾಸಪುರದಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ: ಪೂರ್ವ ಪಾಲಿಕೆಯಿಂದ ಇ.ಇ.ಎಫ್.ಸಿ ಯೋಜನೆ ಯಶಸ್ವಿ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Opportunities In Telecom For Agniveers | ಭವಿಷ್ಯದಲ್ಲಿ ಮೂರು ಸೇನೆಗಳ ಅಗ್ನಿವೀರರ ಸೇವೆ ಬಳಸಿಕೊಳ್ಳಲು ದೂರಸಂಪರ್ಕ ಸಚಿವಾಲಯ ಮಹತ್ವದ ಸಭೆ

ಸೇನೆಯ ‘ಅಗ್ನಿಪಥ’ ಯೋಜನೆ ಪ್ರಕಟಗೊಂಡ ಮರುದಿನವೇ ದೂರಸಂಪರ್ಕ ಸಚಿವಾಲಯದಿಂದ ಬುಧವಾರ ಸಭೆ | ಟೆಲಿಕಾಮ್ ಸೇವೆ ಒದಗಿಸುವ ನಾಲ್ಕು ಕಂಪನಿಗಳ ಪ್ರತಿನಿಧಿಗಳು ಭಾಗಿ | ಟೆಲಿಕಾಮ್ ರಂಗದಲ್ಲಿ ಕುಶಲ ಅಗ್ನಿವೀರರನ್ನು ಬಳಸಿಕೊಳ್ಳಲು ಸಹಮತಿ ವ್ಯಕ್ತಪಡಿಸಿದ ಸಂಸ್ಥೆಗಳು | ಅಗ್ನಿವೀರರಿಗ ಅವಕಾಶಗಳ ಮಹಾಪೂರ?

by Bengaluru Wire Desk
June 15, 2022
in News Wire
Reading Time: 1 min read
0
ಡ್ರಿಲ್ ಮಾಡುತ್ತಿರುವ ಸೇನಾ ಯೋಧರ ಸಾಂದರ್ಭಿಕ ಚಿತ್ರ

ಡ್ರಿಲ್ ಮಾಡುತ್ತಿರುವ ಸೇನಾ ಯೋಧರ ಸಾಂದರ್ಭಿಕ ಚಿತ್ರ

ನವದೆಹಲಿ, ಜೂ.15, www.bengaluruwire.com : ದೇಶದ ರಕ್ಷಣಾ ಪಡೆಯ ಸೈನಿಕರ ನೇಮಕಾತಿಯಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ‘ಅಗ್ನಿಪಥ’ ಯೋಜನೆ ಪ್ರಕಟವಾದ ಮರುದಿನವೇ ಕೇಂದ್ರ ದೂರಸಂಪರ್ಕ ಸಚಿವಾಲಯ (Department of Telecom- DoT) ಬುಧವಾರ ಎಲ್ಲಾ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳೊಂದಿಗೆ (Telecom Service Providers –TSps) ಮಹತ್ವದ ಸಭೆಯನ್ನು ನಡೆಸಿದೆ.

ದೂರಸಂಪರ್ಕ ಇಲಾಖೆ ಹಾಗೂ ಇತರ ಟೆಲಿಕಾಮ್ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಕಂಪನಿಗಳು ‘ಅಗ್ನಿಪಥ’ ಯೋಜನೆಯಲ್ಲಿ 4 ವರ್ಷಗಳ ಕಾಲ ರಕ್ಷಣಾ ಇಲಾಖೆಯ ಸಶಸ್ತ್ರಪಡೆಯಲ್ಲಿ ತರಬೇತಿ ಹಾಗೂ ಸೇವೆ ಪೂರ್ಣಗೊಳಿಸಿ ಹೊರಬರುವ ಕೌಶಲ್ಯಯುಕ್ತ, ಪ್ರತಿಭಾವಂತ, ಶಿಸ್ತುಬದ್ಧ ‘ಅಗ್ನಿವೀರ’ರನ್ನು ಹೇಗೆ ತಮ್ಮ ಕ್ಷೇತ್ರದಲ್ಲಿ ಬಳಸಿಕೊಳ್ಳಬಹುದೆಂಬ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿದೆ.

ಏರ್ ಟೆಲ್ (Airtel), ಬಿಎಸ್ ಎನ್ಎಲ್ (BSNL), ರಿಲಯನ್ಸ್ ಜಿಯೋ (Reliance Jio) ಹಾಗೂ ವೊಡಾಫೋನ್- ಐಡಿಯಾ (Vocafone- Idea) ಈ ನಾಲ್ಕು ಟೆಲಿಕಾಮ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಡಿಒಟಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಂತ್ರಜ್ಞಾನ ಸದಸ್ಯರ ನೇತೃತ್ವದಲ್ಲಿ ಸಂಚಾರ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಟೆಲಿಕಾಮ್ ಕ್ಷೇತ್ರದ ಯಾವ್ಯಾವ ರಂಗದಲ್ಲಿ ‘ಅಗ್ನಿವೀರ’ರನ್ನು ಬಳಸಿಕೊಳ್ಳಬಹುದು, ಉದ್ಯೋಗ ಒದಗಿಸಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಮುಖವಾಗಿ ಆಪ್ಟಿಕಲ್ ಫೈಬರ್ ನಿರ್ವಹಣೆ, ಹವಾನಿಯಂತ್ರಣ ಉಪಕರಣ, ಕಟ್ಟಕಡೆಯವರೆಗೂ ಸಂಪರ್ಕ ಒದಗಿಸುವಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು, ಗೃಹ ಬಳಕೆಗೆ ಫೈಬರ್ ಒದಗಿಸುವುದು, ಗ್ರಾಹಕರೊಂದಿಗೆ ಒಡನಾಟ ಇಟ್ಟುಕೊಳ್ಳುವ ಕಡೆಗಳಲ್ಲಿ ‘ಅಗ್ನಿವೀರ’ರ ಸೇವೆಯನ್ನು ಬಳಕೆ ಮಾಡಿಕೊಳ್ಳುವ ಅಂಶಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಸೇನೆಯಲ್ಲಿ ‘ಅಗ್ನಿಪಥ’ ಯೋಜನೆಯಲ್ಲಿ ತರಬೇತಿ ಪಡೆದು, ಶಿಸ್ತುಬದ್ಧ ಹಾಗೂ ಕುಶಲ ‘ಅಗ್ನಿವೀರ’ರಾಗಿ ಹೊರಬರುವವರು ಟೆಲಿಕಾಮ್ ಕ್ಷೇತ್ರ ಸೇರಿದಂತೆ ದೇಶಕ್ಕೆ ಆಸ್ತಿಯಾಗಲಿದ್ದಾರೆ. 4 ವರ್ಷಗಳ ಸೇವೆ ಮುಗಿಸಿ ಹೊರಬರುವ ಅಗ್ನಿವೀರರನ್ನು ಬಳಸಿಕೊಳ್ಳಲು ಟೆಲಿಕಾಮ್ ಸೇವಾ ಕಂಪನಿಗಳು ಒಪ್ಪಿಗೆ ಸೂಚಿಸಿದವು. ಅಲ್ಲದೇ ಇದೇ ವೇಳೆ ತಮ್ಮ ಕ್ಷೇತ್ರದಲ್ಲಿ ಟೆಲಿಕಾಮ್ ಕಂಪನಿಗಳಿಗೆ ಅಗತ್ಯವಾದ ಕೌಶಲ್ಯಗಳೇನು? ಎಂಬುದರ ಬಗ್ಗೆ ಶೀಘ್ರದಲ್ಲಿಯೇ ದೂರಸಂಪರ್ಕ ಇಲಾಖೆಗೆ ತಿಳಿಸುವುದಾಗಿ ಹೇಳಿದೆ. ಇಂತಹ ಕೌಶಲ್ಯಗಳನ್ನು ‘ಅಗ್ನಿಪಥ’ ಯೋಜನೆಯಡಿ ತರಬೇತಿ ನೀಡಿದರೆ ಅವರು ಸೇವೆ ಮುಗಿಸಿ ಹೊರಬರುವ ಸಂದರ್ಭದಲ್ಲಿ ಟೆಲಿಕಾಮ್ ಉದ್ಯಮದಲ್ಲಿ ಕೆಲಸ ಮಾಡಲು ಸನ್ನದ್ಧರಾದರೆ ಅಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂದು ಟಿಎಸ್ ಪಿಎಸ್ ಪ್ರತಿನಿಧಿಗಳು ಸಭೆಯಲ್ಲಿ ಅಭಿಪ್ರಾಯಪಟ್ಟರು.

ಅಗ್ನಿಪಥ ಯೋಜನೆಯ ಪ್ರಾತಿನಿಧಿಕ ಚಿತ್ರ

ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ಭದ್ರತಾ ಸಮಿತಿಯು ‘ಅಗ್ನಿಪಥ’ ಯೋಜನೆಗೆ ಅನುಮೋದನೆ ನೀಡಿತ್ತು. ಭಾರತದಲ್ಲಿರುವ ‘ದೇಶಭಕ್ತ ಹಾಗೂ ಸ್ಪೂರ್ತಿದಾಯಕ’ ಯುವ ಸಮೂಹಕ್ಕೆ ದೇಶಕ್ಕಾಗಿ ನಾಲ್ಕು ವರ್ಷ ಸೇವೆ ಸಲ್ಲಿಸುವ ಅವಕಾಶವನ್ನು ಈ ಹೊಸ ಯೋಜನೆಯು ಒದಗಿಸಲಿದೆ. ನಾಲ್ಕು ವರ್ಷಗಳ ಕರ್ತವ್ಯ ನಿರ್ವಹಿಸಿದ ಬಳಿಕ, ಸೇನೆಯ ಅಗತ್ಯತೆ ಮತ್ತು ಆಯಾ ಕಾಲಮಾನಕ್ಕೆ ರೂಪಿಸಿದ ನೀತಿ- ನಿಯಮಾವಳಿಗಳಿಗೆ ಪೂರಕವಾಗಿ ಸೇನೆಯ ಖಾಯಂ ನೇಮಕಾತಿಯಲ್ಲಿ ಭಾಗವಹಿಸುವ ಅವಕಾಶವನ್ನು ಈ ‘ಅಗ್ನಿವೀರ’ರಿಗೆ ನೀಡಲು ಯೋಜನೆಯಲ್ಲಿ ರೂಪಿಸಲಾಗಿದೆ.

ಈ ಹೊಸ ನೀತಿಯು 90 ದಿನದಲ್ಲಿ ಜಾರಿಗೆ ಬರಲಿದ್ದು, ಪ್ರಥಮ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 2023ರ ಜುಲೈ ವೇಳೆಗೆ ‘ಅಗ್ನಿವೀರ’ರ ಮೊದಲ ತಂಡವು ಸೇರ್ಪಡೆಯಾಗಲಿದೆ. ಸೈನಿಕರ ನೇಮಕಾತಿಗೆ ಇದುವರೆಗೆ ಅನುಸರಿಸಿಕೊಂಡ ವಿಧಾನವು ಇನ್ನು ಮುಂದೆ ಇರದು.

‘ಅಗ್ನಿಪಥ’ ಯೋಜನೆಯಡಿ ಸೇನೆಗೆ ಸೇರಲು ಇರುವ ಅರ್ಹತೆಯೇನು? :

  • ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ಸೇನೆ ಸೇರಲು ಅರ್ಜಿ ಸಲ್ಲಿಸಬಹುದು
  • ಸೇನಾ ನೇಮಕಾತಿಗೆ ಇದ್ದ ದೈಹಿಕ, ವೈದ್ಯಕೀಯ ಹಾಗೂ ವೃತ್ತಿಪರ ಮಾನದಂಡಗಳು ಅಗ್ನಿಪಥ ಯೋಜನೆಗೂ ಅನ್ವಯಿಸುತ್ತದೆ

ಸಂಬಳ ಮತ್ತು ಸೇವಾ ಸೌಲಭ್ಯಗಳ ವಿವರ ಈ ಕೆಳಕಂಡಂತಿದೆ :

  • ಮೊದಲ ವರ್ಷದಲ್ಲಿ ಪ್ರತಿ ತಿಂಗಳು 30 ಸಾವಿರ ವೇತನ. ಇದರಲ್ಲಿ 21 ಸಾವಿರ ಅಗ್ನಿವೀರರಿಗೆ ದೊರೆಯಲಿದೆ. ಉಳಿದ 9 ಸಾವಿರ ಸಂಚಿತ ನಿಧಿಗೆ ಸೇರಲಿದೆ. ಇಷ್ಟೆ ಪ್ರಮಾಣದ ಮೊತ್ತವನ್ನು ಸರ್ಕಾರವು ಸಂಚಿತ ನಿಧಿಗೆ ನೀಡಲಿದೆ.
  • ಸೇನೆಗೆ ಸೇರಿದ ಎರಡನೇ ವರ್ಷ 33 ಸಾವಿರ ಸಂಬಳ, ಮೂರನೇ ವರ್ಷ 36,500 ರೂ. ಹಾಗೂ ನಾಲ್ಕನೇ ವರ್ಷ 40 ಸಾವಿರ ವೇತನ ದೊರೆಯಲಿದೆ.
  • ಈ ನಾಲ್ಕು ವರ್ಷಗಳ ಕರ್ತವ್ಯ ನಿರ್ವಹಿಸಿದ ನಂತರ 11.71 ಲಕ್ಷ ರೂ. ನಿಧಿಯು ಪ್ರತಿ ಅಗ್ನಿವೀರನಿಗೆ  ದೊರೆಯಲಿದೆ. ಇದಕ್ಕೆ ಯಾವ ರೀತಿಯಲಿ ಆದಾಯ ತೆರಿಗೆ ಕಡಿತವಿರುವುದಿಲ್ಲ.
  • ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷ ಸೇನೆಗೆ ಸೇರುವ ಸೈನಿಕರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯಗಳು ಇರುವುದಿಲ್ಲ.

ಸೇನೆಯಲ್ಲಿ ಇರುವ ತನಕ ಆ ಯೋಧನಿಗೆ 48 ಲಕ್ಷ ರೂ. ವಿಮೆ ಒದಗಿಸಲಾಗುತ್ತದೆ

WhatsApp Join our WhatsApp Channel
Previous Post

BW SPECIAL | BDA Land Acquisition Section Corruption Part-2 | ಸರ್ವೆ ಇಲಾಖೆ ವಾಪಸ್ ಕರೆಸಿಕೊಂಡ್ರೂ ಬಿಡಿಎ ಬಿಟ್ಟು ಹೋಗದ ಸರ್ವೆಯರ್ ಗಳು ; ಕಮಾಯಿಗಾಗಿ ಬೃಹತ್ ಡಿಮ್ಯಾಂಡ್ ಅಥಾರಿಟಿಯಾಗಿದ್ಯಾ ಬಿಡಿಎ?

Next Post

Karnataka ACB Raid | ರಾಜ್ಯಾದ್ಯಂತ 21 ಸರ್ಕಾರಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ : ಮನೆಯ ಶೌಚಾಲಯದಲ್ಲೂ ಕಂತೆ ಕಂತೆ ಹಣ ಪತ್ತೆ

Next Post

Karnataka ACB Raid | ರಾಜ್ಯಾದ್ಯಂತ 21 ಸರ್ಕಾರಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ : ಮನೆಯ ಶೌಚಾಲಯದಲ್ಲೂ ಕಂತೆ ಕಂತೆ ಹಣ ಪತ್ತೆ

Kota Dr.Shivarama Karanth Theme Park | ಕೋಟಾದ ಡಾ.ಶಿವರಾಮ ಕಾರಂತರ ಥೀಮ್ ಪಾರ್ಕ್ ಮೇಲ್ದರ್ಜೆಗೆ

Please login to join discussion

Like Us on Facebook

Follow Us on Twitter

Recent News

GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

August 5, 2026

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

August 5, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

August 5, 2026

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

August 5, 2026
ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

August 5, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group