Thursday, September 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

  • Bengaluru Focus
    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

  • Public interest
  • BW Special
  • Life Style
  • Photo Gallery
  • Video
No Result
View All Result

Home Public interest

ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಪೋಲೀಸರು ಖಾಸಗಿ ಕಾರ್ಯಕ್ರಮ ಆಚರಿಸುವಂತಿಲ್ಲ : ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸುತ್ತೋಲೆ

by Bengaluru Wire Desk
August 2, 2021
in Public interest
Reading Time: 2 mins read
0

ಬೆಂಗಳೂರು, (www.bengaluruwire.com) :
ರಾಜ್ಯ ಪೊಲೀಸರು ಇನ್ನು ಮುಂದೆ ಪೊಲೀಸ್ ಠಾಣೆಯಲ್ಲಿ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಆಚರಣೆ ಆಚರಿಸುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇತ್ತಿಚೆಗಷ್ಟೆ ಸುತ್ತೋಲೆ ಹೊರಡಿಸಿದ್ದಾರೆ.

ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗಳ ಜೊತೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರಬಾರದು. ಆ ಮೂಲಕ ಪೊಲೀಸರು ಕಡ್ಡಾಯವಾಗಿ ಶಿಸ್ತು ಹಾಗೂ ಶಿಷ್ಟಾಚಾರ ಕಾಯ್ದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್

ಪೊಲೀಸ್ ಅಧಿಕಾರಿಗಳ ಶಿಸ್ತು ಮತ್ತು ಶಿಷ್ಟಾಚಾರ ಕುರಿತು ಪೊಲೀಸ್ ಮಹಾನಿರೀಕ್ಷಕರು ಹೊರಡಿಸಿರುವ ಆದೇಶದ ಪತ್ರದಲ್ಲಿ, ಅಪರಾಧಗಳ ತಡೆ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದೆ.

ಸಮವಸ್ತ್ರದಲ್ಲಿನ ಪೊಲೀಸ್ ಅಧಿಕಾರಿಗಳ ವರ್ತನೆಯು ಇಡೀ ಪೊಲೀಸ್ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಸದಾ ಅರಿಯುವುದು ಸೂಕ್ತ. ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಸಮಾಜಘಾತುಕ ಚಟುವಟಿಕೆಗಳನ್ನು ತಟಸ್ಥಗೊಳಿಸಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಮಾಡಬೇಕು.

ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ತಮ್ಮ ಕಛೇರಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅವಶ್ಯಕ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕಡ್ಡಾಯವಾಗಿ ಈ ಕೆಳಕಂಡ ಕ್ರಮವನ್ನು ಎಲ್ಲಾ ಪೋಲಿಸರು ಅನುಸರಿಸಬೇಕೆಂದು ಪೊಲೀಸ್ ಮಹಾನಿರೀಕ್ಷಕರ ಕಚೇರಿ ಆದೇಶ ಪತ್ರದಲ್ಲಿ ತಿಳಿಸಿದೆ:

ಠಾಣೆಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಆಚರಣೆ ಆಚರಿಸುವಂತಿಲ್ಲ, ಅಪರಾಧ ಹಿನ್ನೆಲೆಯುಳ್ಳ ಸಮಾಜ ಘಾತುಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ, ಸಮಾಜಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಅಥವಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ.

ಖಾಸಗಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮುನ್ನ ಸಂಘಟನೆ, ಸಂಸ್ಥೆಯ ವಿವರವನ್ನು ಸರಿಯಾಗಿ ತಿಳಿದು ಪಾಲ್ಗೊಳ್ಳಬೇಕು. ಇಲಾಖೆಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳು ಸಾರ್ವಜನಿಕರ ಅರಿವು ಮತ್ತು ಸಾರ್ವಜನಿಕ ಮತ್ತು ಪೊಲೀಸರ ಸಂಬಂಧ ವೃದ್ಧಿಸುವ ಉದ್ದೇಶ ಹೊಂದಿದ್ದಾಗಿರಬೇಕು.

ಪೊಲೀಸ್ ಠಾಣೆ ಅಥವಾ ಪೊಲೀಸ್ ಇಲಾಖೆಯ ವಿವಿಧ ಕಚೇರಿಗಳಿಗೆ ಆಗಮಿಸುವ ಮತ್ತು ನಿರ್ಗಮಿಸುವ ಪೊಲೀಸರು ಸ್ವಾಗತ, ಬೀಳ್ಕೊಡುಗೆ ಆಚರಣೆಯಿಂದ ದೂರವಿರುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಸ್ವಾಗತ- ಬೀಳ್ಕೊಡುಗೆ ಸಮಾರಂಭ ಆಚರಿಸಿದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಉಳಿದವರು ಪಾಲ್ಗೊಳ್ಳದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.

ಹಿರಿಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದ ಯಾವುದೇ ಕಾರ್ಯಕ್ರಮಗಳಿಗಾಗಿ ಪೊಲೀಸರಿಂದ ಅಥವಾ ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಬಾರದು. ಈ ಎಲ್ಲಾ ಅಂಶಗಳು ಕಡ್ಡಾಯವಾಗಿ ಪಾಲಿಸಲು ಹಾಗೂ ಉಲ್ಲಾಂಘನೆಯಾಗದಂತೆ ಮೇಲ್ವಿಚಾರಣೆ ನಡೆಸುವಂತೆ ಸುತ್ತೋಲೆಯಲ್ಲಿ ಎಲ್ಲಾ ಜಿಲ್ಲೆಯ ಸೂಪರಿಂಟೆಂಡೆಂಟ್ ಗಳಿಗೆ ಡಿಜಿ ಮತ್ತು ಐಜಿಯಾಗಿರುವ ಪ್ರವೀಣ್ ಕುಮಾರ್ ಸೂದ್ ತಿಳಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕರ ಹೊಸ ಸುತ್ತೋಲೆ ಹೊರಡಿಸಿದ ಕ್ರಮವನ್ನು ಕರ್ನಾಟಕ ರಾಷ್ಟ್ರಸಮಿತಿ ಪಕ್ಷ (ಕೆ.ಆರ್.ಎಸ್) ಸ್ವಾಗತಿಸಿದೆ.

ಕಳೆದ ಎರಡು- ಮೂರು ವರ್ಷಗಳಿಂದ ಈ ವಿಚಾರವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಹಲವು ವೇದಿಕೆಗಳಲ್ಲಿ ಇದೇ ವಿಷಯವಾಗಿ ಪ್ರಸ್ತಾಪಿಸುತ್ತಾ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಾ ಬಂದಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದರ ಹಿನ್ನೆಲೆಯಲ್ಲಿ ಕೆಆರ್ ಎಸ್ ಪಕ್ಷದ ವತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರವನ್ನೂ ಬರೆದಿತ್ತು. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಅವರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಂದಿದ್ದರು ಎಂದು ಕೆ.ಆರ್.ಎಸ್ ಪಕ್ಷ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದೆ.

“ಈ ವಿಚಾರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮೊನ್ನೆ ತಾನೇ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದು ಅತ್ಯಂತ ತುರ್ತಿನ ಮತ್ತು ಮಹತ್ವದ ಸುತ್ತೋಲೆ. ನಮ್ಮ ಪಕ್ಷದ ಆಗ್ರಹವನ್ನು ಪರಿಗಣಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಧನ್ಯವಾದಗಳನ್ನು ತಿಳಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿಂತ ದೊಡ್ಡವರು ಯಾರೂ ಅಲ್ಲ.”

– ರವಿಕೃಷ್ಣಾ ರೆಡ್ಡಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ ಪಕ್ಷ

ಪೊಲೀಸ್ ಮಹಾ ನಿರ್ದೇಶಕರು ಈ ಎರಡು ವಿಷಯಗಳ ಬಗ್ಗೆಯೂ ಆದೇಶ ಹೊರಡಿಸುವಂತೆ ಕೆ.ಆರ್.ಎಸ್ ಪಕ್ಷ ಕೋರಿದೆ :

  1. ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವಾಗ ಅದನ್ನು ವಿಡಿಯೋ ಮಾಡುವ ಸಾರ್ವಜನಿಕರನ್ನು ತಡೆಯುವ, ಅವರ ಮೇಲೆ ದೌರ್ಜನ್ಯ ಎಸಗುವ, ಫೋನ್ ಕಿತ್ತುಕೊಳ್ಳುವ ಮತ್ತು ಅದರಲ್ಲಿಯ ಮಾಹಿತಿಯನ್ನು ಡಿಲೀಟ್ ಮಾಡುವ ಕಾನೂನುಬಾಹಿರ ಕೃತ್ಯಗಳನ್ನು ಪೊಲೀಸರು ಅವ್ಯಾಹತವಾಗಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿಯೂ ಆದಷ್ಟು ಬೇಗ ಸುತ್ತೋಲೆ ಹೊರಡಿಸಬೇಕೆಂದು ಕೆ.ಆರ್.ಎಸ್ ಪಕ್ಷ ಆಗ್ರಹಿಸುತ್ತದೆ.
  2. ಪೊಲೀಸ್ ಠಾಣೆಗಳಲ್ಲಿ ಇರುವ ಸಿಸಿಟಿವಿ’ಯ ಒಂದು ಟಿವಿ ಸ್ಕ್ರೀನ್ ಅನ್ನು ಠಾಣೆಯ ಬಾಗಿಲ ಬಳಿ ಸಾರ್ವಜನಿಕರು ನೋಡಲು ಆಸ್ಪದ ಇರುವಂತಹ ಸ್ಥಳದಲ್ಲಿ ಇಡಬೇಕು. ಹಾಗೂ ಸಾರ್ವಜನಿಕರು ಅದನ್ನು ಚಿತ್ರೀಕರಿಸಿಕೊಳ್ಳಲೂ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸುತ್ತದೆ. ಆ ಮೂಲಕ ಠಾಣೆಗಳಲ್ಲಿ ನಡೆಯುವ ಹಲವು ಕಾನೂನುಬಾಹಿರ ಚಟುವಟಿಕೆಗಳು, ರಿಯಲ್ ಎಸ್ಟೇಟ್ ವ್ಯವಹಾರಗಳು, ದಲ್ಲಾಳಿ ಕೆಲಸಗಳು, ಅನಾಗರಿಕ ವರ್ತನೆಗಳು ಹತೋಟಿಗೆ ಬರುತ್ತವೆ ಎಂದು ನಾವು ನಂಬುತ್ತೇವೆ ಎಂದು ಕೆ.ಆರ್.ಎಸ್. ಪಕ್ಷದ ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದೆ.

ಇನ್ನು ಮುಂದೆ ಪೊಲೀಸ್ ಅಧಿಕಾರಿಗಳು ಎಲ್ಲೆಂದರಲ್ಲಿ, ಬೇಕಾದ ಕಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುಂಚೆ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ ಈ ಸರ್ಕುಲ್ಯರ್ ಜ್ಞಾಪಿಸಿಕೊಂಡರೆ ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

E- RUPI | ಭವಿಷ್ಯದ ಡಿಜಿಟಲ್ ಪೇಮೆಂಟ್ಸ್ ಸ್ವರೂಪದ ‘ಇ-ರುಪಿ’ ಇಂದು ಪ್ರಧಾನಿ ಮೋದಿಯಿಂದ ಬಿಡುಗಡೆ : ಇದರ ವಿಶೇಷತೆಯೇನು?

Next Post

ಬೆಂಗಳೂರಿನಲ್ಲಿ ಕೋವಿಡ್ ನಿಯಮ ಪಾಲಿಸದಿದ್ದರೆ ದಂಡ ಗ್ಯಾರಂಟಿ….!

Next Post

ಬೆಂಗಳೂರಿನಲ್ಲಿ ಕೋವಿಡ್ ನಿಯಮ ಪಾಲಿಸದಿದ್ದರೆ ದಂಡ ಗ್ಯಾರಂಟಿ....!

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮತ್ತೆ ಸಂಕಷ್ಟ ; ಹೈಕೋರ್ಟ್ ನಿಂದ ತುರ್ತು ನೋಟಿಸ್ ಜಾರಿ

Please login to join discussion

Like Us on Facebook

Follow Us on Twitter

Recent News

GBA Head Office Image

GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

September 17, 2026

Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

September 17, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
GBA Head Office Image

GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

September 17, 2026

Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

September 17, 2026

ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

September 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d