Monday, September 7, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

    IST | ಒನ್ ನೇಷನ್, ಒನ್ ಟೈಮ್: 6 ತಿಂಗಳಲ್ಲಿ ದೇಶಾದ್ಯಂತ ಕಡ್ಡಾಯವಾಗಲಿದೆ ‘ಭಾರತೀಯ ಪ್ರಮಾಣಿತ ಸಮಯ’

    ಗ್ರಾ.ಪಂ ಸೇವೆ, ಇ-ಸ್ವತ್ತು ಅಹವಾಲಿಗೆ ಶೀಘ್ರವೇ ಆನ್‌ಲೈನ್ ಆ್ಯಪ್: ಸಚಿವ ಈಶ್ವರ ಖಂಡ್ರೆ ಸೂಚನೆ

    Kudremukh Neelakurinji | ​ಕುದುರೆಮುಖ ಬೆಟ್ಟಗಳಲ್ಲಿ ನೀಲಕುರಿಂಜಿ ವೈಭವ

    NEET PG-2026 | ನೀಟ್ ಪಿಜಿ-2026 ಪರೀಕ್ಷೆ ಯಶಸ್ವಿ: 2.65 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿ

  • Bengaluru Focus
    Namma Metro Purple Line

    Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಬೆಂಗಳೂರಿಗೆ ಬಿಗ್ ಗಿಫ್ಟ್: ಬಿಎಂಟಿಸಿಗೆ ಹಂತ ಹಂತವಾಗಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ

    ​ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ

    2021ರ ಪಾರ್ಕಿಂಗ್ ನೀತಿಯಡಿ ಹೊಸ ಕರಡು ನಿಯಮ ಪ್ರಕಟ: ಕಟ್ಟಡದಲ್ಲಿ ಪಾರ್ಕಿಂಗ್ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ರೆ ಕಠಿಣ ಕ್ರಮ

    Hebbal Short Tunnel IISC Study Report | ಹೆಬ್ಬಾಳ ಕಿರು ಸುರಂಗ ಯೋಜನೆ ಅವೈಜ್ಞಾನಿಕ: ರಾಜ್ಯಪಾಲರಿಗೆ ಐಐಎಸ್ಸಿ ವರದಿ ಸಲ್ಲಿಕೆ

    ಕಲಾಗ್ರಾಮದ ಸಮಾಧಿಗಳನ್ನು ತಕ್ಷಣ ತೆರವುಗೊಳಿಸಿ: ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸರ್ಕಾರಕ್ಕೆ ನೋಟಿಸ್

    ಬೆಂಗಳೂರಿನ ಇಸ್ಕಾನ್ ದೇವಸ್ಥಾನ

    Temple News | ​ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ನಾಳೆಯಿಂದ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

    KPSC KAS Recruitment 2026 | ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 7ರವರೆಗೆ ವಿಸ್ತರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರು ಟ್ರಾಫಿಕ್‌ಗೆ ಮಾಸ್ಟರ್ ಪ್ಲಾನ್: ಸಿಟಿ ಒಳಗೆ ಬರುವ 600 ಪೆಟ್ರೋಲ್ ಟ್ಯಾಂಕರ್‌ಗಳ ದಿಕ್ಕು ಬದಲಿಸಲು ಎನ್ಐಪಿಡಿಎ ಮನವಿ

ನಗರದ ಸಂಚಾರ ದಟ್ಟಣೆಯನ್ನು ಶೇ.10 ರಷ್ಟು ಕಡಿಮೆ ಮಾಡಲು ಎಸ್‌ಟಿಆರ್‌ಆರ್ ಹಾಗೂ ನೈಸ್ ರಸ್ತೆ ಬಳಕೆ ಮಾಡುವಂತೆ ಪೊಲೀಸ್ ಕಮಿಷನರ್‌ಗೆ ತೈಲ ವಿತರಕರ ಸಂಘದಿಂದ ಅಧಿಕೃತ ಪ್ರಸ್ತಾವನೆ.

by Bengaluru Wire Desk
July 13, 2026
in Bengaluru Focus
Reading Time: 1 min read
0

ಬೆಂಗಳೂರು, ಜು.13 www.bengaluruwire.com: ಐಟಿ ಸಿಟಿ ಬೆಂಗಳೂರಿನ ಜನರನ್ನು ಹೈರಾಣಾಗಿಸುತ್ತಿರುವ ಸಂಚಾರ ದಟ್ಟಣೆಗೆ (Traffic Congestion) ಮುಕ್ತಿ ಹಾಡಲು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ (NIPDA) ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. 

ನಗರದ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುವ ನೂರಾರು ಭಾರೀ ತೈಲ ಟ್ಯಾಂಕರ್‌ಗಳನ್ನು ಪೆರಿಫೆರಲ್ ಕಾರಿಡಾರ್‌ಗಳ ಮೂಲಕ ಡೈವರ್ಟ್ ಮಾಡುವುದರಿಂದ ಸಿಟಿಯ ಟ್ರಾಫಿಕ್ ಕಿರಿಕಿರಿಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು ಎಂದು ಸಂಘವು ತಿಳಿಸಿದೆ.

​ಈ ಕುರಿತು “ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್” (Greater Bengaluru District & Neighbouring Districts) ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಕಮಿಷನರ್‌ ಅವರಿಗೆ ಅಧಿಕೃತ ಮನವಿಯೊಂದನ್ನು ಸಲ್ಲಿಸಿದೆ.

​ದೇವನಗೊಂದಿ ಐಓಸಿಎಲ್ (IOCL) ಟರ್ಮಿನಲ್ ಸೇರಿದಂತೆ ವಿವಿಧ ತೈಲ ಕಂಪನಿಗಳ ಘಟಕಗಳಿಂದ ಹೊರಡುವ ಪೆಟ್ರೋಲ್, ಡೀಸೆಲ್ ಹಾಗೂ ಎಥನಾಲ್ ಹೊತ್ತ ಟ್ಯಾಂಕರ್‌ಗಳನ್ನು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR), ನೈಸ್ (NICE) ರಸ್ತೆ ಹಾಗೂ ಇತರ ಬೈಪಾಸ್ ರಸ್ತೆಗಳ ಮೂಲಕ ಮರುಮಾರ್ಗಗೊಳಿಸುವಂತೆ ಸಂಘವು ಒತ್ತಾಯಿಸಿದೆ.

​ಸಿಟಿ ಟ್ರಾಫಿಕ್‌ಗೆ ತಲೆನೋವಾದ ಹೊರ ಜಿಲ್ಲೆಯ ಟ್ಯಾಂಕರ್‌ಗಳು:

​ಪ್ರಸ್ತುತ ದೇವನಗೊಂಡಿ ಟರ್ಮಿನಲ್‌ನಿಂದ ಲೋಡ್ ಮಾಡಿಕೊಳ್ಳುವ ನೂರಾರು ಟ್ಯಾಂಕರ್‌ಗಳು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ ಹಾಗೂ ಚಿತ್ರದುರ್ಗ ಸೇರಿದಂತೆ ವಿವಿಧ ಹೊರ ಜಿಲ್ಲೆಗಳಿಗೆ ತಲುಪಬೇಕಿದೆ. ಆದರೆ, ಈ ವಾಹನಗಳು ಬೆಂಗಳೂರು ನಗರದ ಹೃದಯಭಾಗದ ಮೂಲಕವೇ ಹಾದು ಹೋಗುತ್ತಿರುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ದುಸ್ತರವಾಗುತ್ತಿದೆ.

​ವಿಶೇಷವಾಗಿ ಕೆ.ಆರ್. ಪುರಂ, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಯಶವಂತಪುರ, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ ಪೀಕ್ ಅವರ್‌ಗಳಲ್ಲಿ ಈ ಭಾರೀ ವಾಹನಗಳು ಸಂಚರಿಸುವುದರಿಂದ ಇಡೀ ಟ್ರಾಫಿಕ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ. ಒಂದು ಭಾರೀ ಟ್ಯಾಂಕರ್ ರಸ್ತೆಯಲ್ಲಿ ಸುಮಾರು 3 ಕಾರುಗಳಷ್ಟು ಜಾಗವನ್ನು ಆಕ್ರಮಿಸಿಕೊಳ್ಳುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ತೀವ್ರಗೊಳ್ಳುತ್ತಿದೆ.

​ಎಸ್‌ಟಿಆರ್‌ಆರ್ (STRR) ಬಳಕೆಯಿಂದ ಸಿಗುವ ಲಾಭಗಳು:

​NIPDA ನೀಡಿರುವ ಅಂಕಿ-ಅಂಶಗಳ ಪ್ರಕಾರ, ಪ್ರತಿದಿನ ಸುಮಾರು 400 ರಿಂದ 600 ತೈಲ ಟ್ಯಾಂಕರ್‌ಗಳು ಬೆಂಗಳೂರು ನಗರದ ಒಳಗೆ ಪ್ರವೇಶಿಸುತ್ತವೆ ಅಥವಾ ನಗರದ ಮೂಲಕ ಹಾದುಹೋಗುತ್ತವೆ. ಇವುಗಳನ್ನು ನಗರದ ಹೊರವಲಯದ ರಸ್ತೆಗಳಿಗೆ ಡೈವರ್ಟ್ ಮಾಡುವುದರಿಂದ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು:

​ಶೇ. 10 ರಷ್ಟು ಟ್ರಾಫಿಕ್ ಕಡಿತ: ಪ್ರಮುಖ ಕಾರಿಡಾರ್‌ಗಳಲ್ಲಿ ಭಾರೀ ವಾಹನಗಳ ಸಂಚಾರ ಶೇ. 8 ರಿಂದ 12 ರಷ್ಟು ಕಡಿಮೆಯಾಗಲಿದ್ದು, ಪೀಕ್ ಅವರ್‌ಗಳಲ್ಲಿ ಒಟ್ಟಾರೆ ನಗರದ ಟ್ರಾಫಿಕ್ ದಟ್ಟಣೆ ಶೇ. 10 ರಷ್ಟು ಇಳಿಕೆಯಾಗಲಿದೆ.

​ಕೋಟಿ ಮೌಲ್ಯದ ಇಂಧನ ಉಳಿತಾಯ: ಟ್ರಾಫಿಕ್‌ನಲ್ಲಿ ಸಿಲುಕುವ ಟ್ಯಾಂಕರ್‌ಗಳ ಐಡ್ಲಿಂಗ್ ಸಮಯ 30 ರಿಂದ 60 ನಿಮಿಷ ಕಡಿಮೆಯಾಗಲಿದೆ. ಇದರಿಂದ ದಿನಕ್ಕೆ 2,500 ರಿಂದ 5,000 ಲೀಟರ್ ಡೀಸೆಲ್ ಉಳಿತಾಯವಾಗಲಿದ್ದು, ವಾರ್ಷಿಕವಾಗಿ ಸುಮಾರು 9 ರಿಂದ 18 ಲಕ್ಷ ಲೀಟರ್ ಇಂಧನ ರಾಷ್ಟ್ರಕ್ಕೆ ಉಳಿಯಲಿದೆ.

​ಮಾಲಿನ್ಯ ಮುಕ್ತ ಬೆಂಗಳೂರು: ಈ ಯೋಜನೆಯಿಂದಾಗಿ ವಾರ್ಷಿಕವಾಗಿ ಸುಮಾರು 2,500 ರಿಂದ 5,000 ಟನ್ ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಲಿದ್ದು, ನಗರದ ವಾಯು ಗುಣಮಟ್ಟ ಸುಧಾರಿಸಲಿದೆ.

​ಸಾರ್ವಜನಿಕ ಸುರಕ್ಷತೆ: ಜನನಿಬಿಡ ಪ್ರದೇಶಗಳಲ್ಲಿ ಅತ್ಯಂತ ಜ್ವಲನಕಾರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊತ್ತ ವಾಹನಗಳು ಸಂಚರಿಸುವುದು ತಪ್ಪುವುದರಿಂದ ದೊಡ್ಡ ಮಟ್ಟದ ಅಪಘಾತದ ಅಪಾಯಗಳು ಇಲ್ಲವಾಗುತ್ತವೆ.

​ಜಂಟಿ ಕಾರ್ಯಪಡೆ ರಚನೆಗೆ ಎನ್ಐಪಿಡಿಎ ಆಗ್ರಹ:

​ಈ ಬೃಹತ್ ಬದಲಾವಣೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಬೆಂಗಳೂರು ಸಂಚಾರ ಪೊಲೀಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಪ್ರಮುಖ ತೈಲ ಕಂಪನಿಗಳಾದ IOCL, BPCL, HPCL ಮತ್ತು ಸಾರಿಗೆ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ “ಜಂಟಿ ಕಾರ್ಯಪಡೆ” (Joint Task Force) ಒಂದನ್ನು ರಚಿಸಬೇಕು ಎಂದು ಅಸೋಸಿಯೇಷನ್ ವಿನಂತಿಸಿದೆ.

​ನಗರದ ಒಳಗಿರುವ ಪೆಟ್ರೋಲ್ ಬಂಕ್‌ಗಳಿಗೆ ಬರುವ ಟ್ಯಾಂಕರ್‌ಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಹೊರ ಜಿಲ್ಲೆಯ ಟ್ಯಾಂಕರ್‌ಗಳಿಗೆ ಜಿಪಿಎಸ್ ಆಧಾರಿತ ರೂಟ್ ಮಾನಿಟರಿಂಗ್ ಅಳವಡಿಸಿ, ಕಡ್ಡಾಯವಾಗಿ STRR ಮತ್ತು ನೈಸ್ ರಸ್ತೆ ಬಳಸುವಂತೆ ನಿಯಮ ರೂಪಿಸಬೇಕೆಂದು ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪೊಲೀಸ್ ಕಮಿಷನರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

39 ಅಗತ್ಯ ಔಷಧಗಳ ಬೆಲೆ ಕಡಿತ: ಬಿಪಿ, ಶುಗರ್, ಹಾರ್ಟ್ ರೋಗಿಗಳಿಗೆ ಕೇಂದ್ರದಿಂದ ಭರ್ಜರಿ ರಿಲೀಫ್

Next Post

ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

Next Post

ರಾಜ್ಯಕ್ಕೆ ಬಂಡವಾಳ ಹರಿವು: ಕೋಲ್ಕತ್ತಾದಲ್ಲಿ ಸಚಿವ ಎಂ.ಬಿ. ಪಾಟೀಲ ರೋಡ್‌ ಶೋ

ಆದಾಯ ತೆರಿಗೆ ವಂಚಕರ ಪಾಲಿಗೆ ಸಿಂಹಸ್ವಪ್ನ, ರಂಗಭೂಮಿ ಸವ್ಯಸಾಚಿ: ಐಆರ್‌ಎಸ್ ಅಧಿಕಾರಿ ಜಯರಾಮ್ ರಾಯಪುರ ಎಂಬ ಬಹುಮುಖ ಪ್ರತಿಭೆ

Please login to join discussion

Like Us on Facebook

Follow Us on Twitter

Recent News

ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ವಿಧಾನಸೌಧದ ಸಾಂದರ್ಭಿಕ ಚಿತ್ರ

“ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆ ‘Tr’ ಗೌರವನಾಮ ಬಳಸಲು ಸರ್ಕಾರ ಅಧಿಕೃತ ಆದೇಶ”

September 6, 2026
Namma Metro Purple Line

Namma Metro News | ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗಕ್ಕೆ 4 ಹೊಸ ರೈಲುಗಳು ಶೀಘ್ರದಲ್ಲೇ ಸೇರ್ಪಡೆ

September 5, 2026

ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

September 4, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d