Friday, July 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

    Energy News | ರಾಜ್ಯದಲ್ಲಿ ಮಳೆ ಕೊರತೆ: ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ

    ಎಲ್ ನಿನೋ ಭೀತಿ: ಬರ ಎದುರಿಸಲು ಕರ್ನಾಟಕ ಸರ್ಕಾರದ ‘ಮಾಸ್ಟರ್ ಪ್ಲಾನ್’ ಏನು?

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶಾಸಕರ ಸಮಿತಿ ರಚನೆ, ವಿಮಾನ ನಿಲ್ದಾಣಗಳಲ್ಲಿ ಎಬೋಲಾ ಸ್ಕ್ರೀನಿಂಗ್: ಸಚಿವ ಯು.ಟಿ. ಖಾದರ್

    ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ: ಕೇಂದ್ರದ ಸಿಜಿಹೆಚ್ಎಸ್ (CGHS) ಪರಿಷ್ಕೃತ ದರಗಳ ಅಳವಡಿಕೆಗೆ ರಾಜ್ಯ ಸರ್ಕಾರ ಆದೇಶ

    ಉಡುಪಿಯ ಕೋಟದಲ್ಲಿ ಸರ್ವರ್ ಸಮಸ್ಯೆಯಿಂದ ಸಾಲಿನಲ್ಲಿ ನಿಂತರೂ ಪಡಿತರ ಪಡೆಯಲು ಆಗದೆ ಅಸಹಾಯಕರಾಗಿ ನಿಂತ ಪಡಿತರ ಚೀಟಿದಾರರು

    Lokayukta News | ರಾಜ್ಯದ ಪಡಿತರ ವಿತರಣೆಯಲ್ಲಿ ಭಾರೀ ಅಕ್ರಮ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

    Central Election Commission | ಚುನಾವಣಾ ಆಯೋಗದಿಂದ ಅಖಿಲ ಭಾರತ ಮಾಧ್ಯಮ ಸಮ್ಮೇಳನ: ಪಾರದರ್ಶಕತೆಗೆ ‘ಇಸಿಐನೆಟ್’ ಮತ್ತು 100% ವೆಬ್‌ಕಾಸ್ಟಿಂಗ್‌ಗೆ ಒತ್ತು

  • Bengaluru Focus

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

    PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

    KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ ₹5,000 ದಂಡ ಏರಿಕೆ ಮಾಡಿ, ನಿಯಮ ಬಿಗಿಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಪತ್ರ

    ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಆ. 31 ಕೊನೆಯ ದಿನ

    ಬೆಂಗಳೂರು ವೈರ್ ರಿಯಾಲಿಟಿ ಚೆಕ್ ವರದಿ ಹಿನ್ನಲೆ: ಶಿವಾಜಿನಗರ ಪಾದಾಚಾರಿ ಮಾರ್ಗ ಒತ್ತುವರಿ ತೆರವು: ಪಾಲಿಕೆ ಅಧಿಕಾರಿಗಳ ಮೇಲೆ ಪುಂಡರ ಅಟ್ಯಾಕ್ ಅಕ್ಷಮ್ಯ!!

    Namma Metro Green Train

    Namma Metro News | ನಮ್ಮ ಮೆಟ್ರೋ ಹಸಿರು ಮಾರ್ಗ: ವಿದ್ಯುತ್ ವ್ಯತ್ಯಯ ಸರಿಪಡಿಸಿದ ಬೆನ್ನಲ್ಲೇ ಸೇವೆ ಪುನರಾರಂಭ

    BWSSB News | ಬೆಂಗಳೂರಿನ ಈ ಪ್ರಮುಖ ಪ್ರದೇಶಗಳಲ್ಲಿ ಬುಧವಾರ ಕಾವೇರಿ ನೀರು ಇರಲ್ಲ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಸ್ಥಿರಾಸ್ತಿ ವ್ಯವಹಾರ: ನಾಳೆಯಿಂದ (ಆಗಸ್ಟ್ 31) ನೋಂದಣಿ ಶುಲ್ಕ ಶೇ.1 ರಿಂದ ಶೇ.2ಕ್ಕೆ ಹೆಚ್ಚಳ

ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಣ : ಶುಲ್ಕ ಪರಿಷ್ಕರಣೆ ಸಮರ್ಥಿಸಿಕೊಂಡ ಸರ್ಕಾರ

by Bengaluru Wire Desk
August 30, 2025
in News Wire, Public interest
Reading Time: 1 min read
0

ಬೆಂಗಳೂರು, ಆ.30 www.bengaluruwire.com : ಸ್ಥಿರಾಸ್ತಿ ವ್ಯವಹಾರಗಳ ಮೇಲಿನ ನೋಂದಣಿ ಶುಲ್ಕವನ್ನು ಕರ್ನಾಟಕ ಸರ್ಕಾರ ಆಗಸ್ಟ್ 31ರಿಂದ ಜಾರಿಗೆ ಬರುವಂತೆ ಶೇ. 1 ರಿಂದ ಶೇ. 2ಕ್ಕೆ ಹೆಚ್ಚಿಸಿದೆ. 

ನೆರೆ ರಾಜ್ಯಗಳ ದರಗಳೊಂದಿಗೆ ಹೋಲಿಸಿದರೆ, ರಾಜ್ಯದಲ್ಲಿ ಈ ಶುಲ್ಕ ಕಡಿಮೆಯಿದ್ದು, ಅದನ್ನು ಸಮೀಕರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ನೋಂದಣಿ, ಮುದ್ರಾಂಕ ಮತ್ತು ಇತರ ಸೆಸ್‌ಗಳನ್ನು ಒಳಗೊಂಡಂತೆ, ಕರ್ನಾಟಕದಲ್ಲಿ ಒಟ್ಟು ಶುಲ್ಕವು ಇದುವರೆಗೆ ಶೇ. 6.6ರಷ್ಟಿತ್ತು. ಇದೇ ಸಮಯದಲ್ಲಿ, ತಮಿಳುನಾಡಿನಲ್ಲಿ ಶೇ. 9, ಕೇರಳದಲ್ಲಿ ಶೇ. 10, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶೇ. 7.5ರಷ್ಟು ಶುಲ್ಕ ವಿಧಿಸಲಾಗುತ್ತಿದೆ. ಆದ್ದರಿಂದ, ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಲು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ವಿವರಿಸಿದ್ದಾರೆ.

ವ್ಯತ್ಯಾಸದ ಮೊತ್ತ ಪಾವತಿಗೆ ಸೂಚನೆ :

ನೋಂದಣಿ ಶುಲ್ಕ ಪರಿಷ್ಕರಣೆ ಹಿನ್ನೆಲೆಯಲ್ಲಿ, ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಶುಲ್ಕ ಪಾವತಿಸಿ ಅಪಾಯಿಂಟ್‌ಮೆಂಟ್ ಪಡೆಯದಿರುವವರು, ಹೆಚ್ಚುವರಿ ಶುಲ್ಕವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಈ ಮೊತ್ತವನ್ನು ಈ ಮೊದಲು ಬಳಸಿದ ಲಾಗಿನ್ ಮೂಲಕವೇ ಪಾವತಿಸಬೇಕಾಗುತ್ತದೆ. ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ, ಈ ಕುರಿತಾದ ಅಗತ್ಯ ಸೂಚನೆಗಳನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ ಎಂದು ಮುಲೈ ಮುಗಿಲನ್ ತಿಳಿಸಿದ್ದಾರೆ.

ಅಲ್ಲದೆ, ಈಗಾಗಲೇ ನೋಂದಣಿಗೆ ಸಲ್ಲಿಸಲಾಗಿರುವ ಮತ್ತು ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೂ ಸಹ ಹೊಸದಾಗಿ ಪರಿಷ್ಕರಿಸಿದ ಶೇ. 2ರ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಲಾಗುತ್ತದೆ. ಈ ವರ್ಗದ ಅರ್ಜಿದಾರರಿಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪರಿಷ್ಕೃತ ಶುಲ್ಕದ ವಿವರವನ್ನು ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ, ಎಲ್ಲ ಅರ್ಜಿದಾರರು ಈ ನವೀಕರಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಚ್ಚಿನ ವಿವರಗಳಿಗಾಗಿ, ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಹಂತ ಹಂತವಾಗಿ ಅನುಸರಿಸಬಹುದಾದ ಸೂಚನೆಗಳು ಲಭ್ಯವಿವೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ನೀರು, ವಿದ್ಯುತ್ ದರ, ಬಸ್ ಹಾಗೂ ಮೆಟ್ರೋ ಟಿಕೆಟ್ ಬೆಲೆ ಏರಿಕೆ ಹೀಗೆ ನಾನಾ ರೀತಿಯ ಬೆಲೆ ಏರಿಕೆಯಿಂದ ಜನರು ತತ್ತರಿಸಿರುವಾಗ, ಸ್ಥಿರಾಸ್ತಿ ವ್ಯವಹಾರಗಳ ಮೇಲಿನ ನೋಂದಣಿ ಶುಲ್ಕ ಹೆಚ್ಚಳದ ನಿರ್ಧಾರ ಮತ್ತೊಂದು ಹೊರೆಯಾಗಿದೆ ಎಂದು ನಾಗರೀಕರು ಅಳಲು ತೋಡಿಕೊಂಡಿದ್ದಾರೆ.

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

ಕೆಂಪೇಗೌಡ ಲೇಔಟ್ ಮೇಜರ್ ಆರ್ಟಿಯಲ್ ರಸ್ತೆಗೆ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ : ಶೋಭಾ ಕರಂದ್ಲಾಜೆ ಗಡ್ಕರಿಗೆ ಪತ್ರ

Next Post

ಬಿಬಿಎಂಪಿ ಕಾಮಗಾರಿ ಹಗರಣ: ನ್ಯಾ.ನಾಗಮೋಹನ ದಾಸ್ ಆಯೋಗದಿಂದ  ಸರ್ಕಾರಕ್ಕೆ 8900 ಪುಟಗಳ ವರದಿ ಸಲ್ಲಿಕೆ

Next Post

ಬಿಬಿಎಂಪಿ ಕಾಮಗಾರಿ ಹಗರಣ: ನ್ಯಾ.ನಾಗಮೋಹನ ದಾಸ್ ಆಯೋಗದಿಂದ  ಸರ್ಕಾರಕ್ಕೆ 8900 ಪುಟಗಳ ವರದಿ ಸಲ್ಲಿಕೆ

ಜಿಬಿಎ ಪ್ರಧಾನ ಕಚೇರಿಯ ನವೀಕೃತ ಮೀಟಿಂಗ್ ಹಾಲ್-1 ಸಿದ್ಧ : ಐದು ನಗರ ಪಾಲಿಕೆಗಳಲ್ಲಿ 450 ವಾರ್ಡ್ ರಚನೆ 

Please login to join discussion

Like Us on Facebook

Follow Us on Twitter

Recent News

GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

July 24, 2026

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

July 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

July 24, 2026

ಗ್ರಾ.ಪಂ. ವ್ಯಾಪ್ತಿಯ ಹೆದ್ದಾರಿ ಬದಿಯ ಮಳಿಗೆ, ಜಾಹೀರಾತುಗಳಿಗೆ ಶೀಘ್ರದಲ್ಲೇ ತಟ್ಟಲಿದೆ ತೆರಿಗೆ ಬಿಸಿ

July 24, 2026

PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

July 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group