Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

KMF Nandini Milk | ಕೆಎಂಎಫ್ ನಂದಿನಿ ಹಾಲಿನ ದರ 5 ರೂ. ಏರಿಕೆ ಸಾಧ್ಯತೆ : ಹೆಚ್ಚುವರಿ ಹಾಲು ಕಡಿತ

ನೂತನ ವರ್ಷದಲ್ಲಿ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡುವ ನಿರೀಕ್ಷೆ | 50 ಎಂಎಲ್ ಹೆಚ್ಚುವರಿ ಹಾಲು ಕಡಿತ, 2 ರೂ. ದರವೂ ಇಳಿಕೆ | ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

by Bengaluru Wire Desk
December 26, 2024
in Bengaluru Focus, News Wire, Photo Gallery
Reading Time: 1 min read
0

ಬೆಂಗಳೂರು, ಡಿ.26 www.bengaluruwire.com : ಕರ್ನಾಟಕ ಹಾಲು ಒಕ್ಕೂಟ (KMF) ಮತ್ತೆ ನಂದಿನಿ ಹಾಲಿನ ದರ ಪರಿಷ್ಕರಣೆ (Nandini Milk Rate Revision)ಗೆ ಮುಂದಾಗಿದ್ದು, ಹೊಸ ವರ್ಷದಿಂದ ಪ್ರತೀ ಲೀಟರ್ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಕೇವಲ ಆರು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳವಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಏರಿಕೆ ಮಾಡುವ ಕುರಿತು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್‌. ಭೀಮಾನಾಯ್ಕ (L Bhimanaika) ಅವರು ಗುರುವಾರ ಸುಳಿವು ನೀಡಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಹಂತದಲ್ಲಿ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ ತಿಳಿಸಿದ್ದಾರೆ.

ನೂತನ ವರ್ಷದಲ್ಲಿ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡುವ ನಿರೀಕ್ಷೆ :

‘ಹಾಲು ಉತ್ಪಾದಿಸುವ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿನ ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಸಿಎಂ ಶೀಘ್ರದಲ್ಲೇ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಿಸುವ ರೈತರ ಪರ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ‘ದಕ್ಷಿಣ ಭಾರತದ ಇತರೆ ರಾಜ್ಯಗಳು ಮತ್ತು ಅಮುಲ್‌ ಹಾಲಿಗೆ ಹೋಲಿಸಿದರೆ ಕರ್ನಾಟಕ (Karnataka)ದ ನಂದಿನಿ ಹಾಲಿನದರ ಕಡಿಮೆಯಿದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್‌ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕೆಎಂಎಫ್ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿಕೆ ನೀಡಿದ್ದರು.

50 ಎಂಎಲ್ ಹೆಚ್ಚುವರಿ ಹಾಲು ಕಡಿತ, ದರವೂ ಇಳಿಕೆ :

ಇದೇ ವೇಳೆ ಈ ಹಿಂದೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹೆಚ್ಚುವರಿ ಹಾಲನ್ನು ಕಡಿತ ಮಾಡಿ ಅದರ ದರವನ್ನೂ ಕೂಡ 2 ರೂ.ನಷ್ಟು ಇಳಿಕೆ ಮಾಡಲಾಗುತ್ತೆ ಎಂದು ಭೀಮಾನಾಯ್ಕ್ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೆಎಂಎಫ್‌ಗೆ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ಯಾಕೆಟ್‌ನಲ್ಲಿ ನೀಡಲಾಗುತ್ತಿದ್ದ ಹಾಲಿನ ಪ್ರಮಾಣವನ್ನು 50 ಎಂಎಲ್‌ ಹೆಚ್ಚಿಸಿ ದರವನ್ನೂ 2 ರೂ.  ಹೆಚ್ಚಳ ಮಾಡಲಾಗಿತ್ತು. ಇದೀಗ ಹಾಲಿನ ಜೊತೆಗೆ ದರವನ್ನೂ ಹಿಂಪಡೆಯುವುದಾಗಿ ಭೀಮಾನಾಯ್ಕ್‌ ತಿಳಿಸಿದ್ದಾರೆ.

ಈ ಹಿಂದೆ ಜೂನ್‌ 25ರಂದು 1000 ಎಂಎಲ್‌ ಹಾಲಿಗೆ 50 ಎಂಎಲ್‌ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡುವ ಘೋಷಣೆ ಮಾಡಲಾಗಿತ್ತು. ಜೂನ್‌ 26ರಿಂದಲೇ ಹೊಸ ತೀರ್ಮಾನ ಅನುಷ್ಠಾನಕ್ಕೆ ಬಂದಿತ್ತು. ಈ ವೇಳೆ ಹಾಲಿನ ದರವನ್ನು ಲೀಟರ್‌ಗೆ 44 ರೂ.ನಿಂದ 46 ರೂ.ಗೆ ಏರಿಕೆ ಮಾಡಲಾಗಿತ್ತು. ಹಾಗೆಯೇ 22 ರೂ. ಇದ್ದ 500 ಎಂಎಲ್‌ ಪ್ಯಾಕೆಟ್ ಹಾಲಿಗೂ 50 ಎಂಎಲ್ ಹೆಚ್ಚುವರಿ ಸೇರಿಸಲಾಗಿತ್ತು. ಹಾಗೂ ದರವನ್ನು 24 ರೂ.ಗೆ ಏರಿಕೆ ಮಾಡಲಾಗಿತ್ತು.

ಇದಕ್ಕೂ ಮುನ್ನ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂದಿನಿ ವತಿಯಿಂದ ಪ್ರಥಮ ಬಾರಿಗೆ ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವ ವೆಂಕಟೇಶ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಮಾರ್ಕೆಟಿಂಗ್ ನಿರ್ದೇಶಕರಾದ ರಘುನಂದನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಸೇನಾ ವಾಹನ ಅಪಘಾತದಲ್ಲಿ ಮೃತರಾದ ಯೋಧರಿಗೆ ಸಿಎಂ ಸಿದ್ದರಾಮಯ್ಯ ಅಂತಿಮ ಗೌರವ

Next Post

ಭಾರತದ ಆರ್ಥಿಕ ಉದಾರೀಕರಣದ ರುವಾರಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಸ್ತಂಗತ

Next Post

ಭಾರತದ ಆರ್ಥಿಕ ಉದಾರೀಕರಣದ ರುವಾರಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಸ್ತಂಗತ

ಮೆಡಿಕಲ್ ಸ್ಟೋರ್ ನಲ್ಲಿ ನೀವು ಖರೀದಿಸುವ ಔಷಧಿ ಅಸಲಿಯಾ? ನಕಲಿಯಾ? ಒಂದೇ ಕ್ಷಣದಲ್ಲಿ ಹೀಗೆ ಪತ್ತೆ ಹಚ್ಚಬಹುದು!!

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d