Sunday, September 20, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire
    ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

    ​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ಗ್ರಾಮಠಾಣಾ ಆಸ್ತಿಗಳಿಗೆ ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಖಾತೆ: ಈಶ್ವರ ಖಂಡ್ರೆ ಸೂಚನೆ

    ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಅನುಮೋದನೆ: ತುಳು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ

    Breaking News | ನವೆಂಬರ್ ಅಂತ್ಯಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ ಭರವಸೆ

    ಮೆಕ್ಕಾ ವಾಯುಪ್ರದೇಶದ ಬಳಿ ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ: ಪವಿತ್ರ ಕ್ಷೇತ್ರಗಳ ರಕ್ಷಣೆ ‘ರೆಡ್ ಲೈನ್’ ಎಂದ ರಿಯಾದ್

    ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

    UPI ವಹಿವಾಟಿಗೆ ಹೊಸ ನಿಯಮ: ಯಾರಿಗೆ ಶುಲ್ಕ? ಯಾರಿಗೆ ಉಚಿತ? ಇಲ್ಲಿದೆ ಸಂಪೂರ್ಣ ವಿವರ

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

  • Bengaluru Focus

    ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

    Power News | ಭಾರತ್ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ: ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ​ಜೆ.ಪಿ. ನಗರದಿಂದ ಗೊಟ್ಟಿಗೆರೆವರೆಗೆ ಶೇ. 34 ರಷ್ಟು ಬೀದಿ ದೀಪ ಬಂದ್; ​ಕತ್ತಲಲ್ಲಿ ರಸ್ತೆಗಳು; ಸಚಿವ ಕೃಷ್ಣ ಬೈರೇಗೌಡ ದಿಢೀರ್ ರಾತ್ರಿ ರೌಂಡ್ಸ್

    GBA Head Office Image

    GBA News | ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳು ಮತ್ತಷ್ಟು ಸುಲಭ; ಸೆ. 21ರಿಂದ ‘ಇ-ಆಸ್ತಿ 2.0’ ನೂತನ ಇ-ಖಾತಾ ವ್ಯವಸ್ಥೆ ಜಾರಿ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗ್ರಾಹಕರ ಗಮನಕ್ಕೆ: ಈ 20 ಪಟ್ಟಣಗಳಲ್ಲಿ 2 ದಿನ ಆನ್‌ಲೈನ್‌ ಸೇವೆಗಳು ಬಂದ್

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Property Tax News | ಬಿಬಿಎಂಪಿಯಿಂದ 4284 ಕೋಟಿ ರೂ. ಅತ್ಯಧಿಕ ಆಸ್ತಿ ತೆರಿಗೆ ಸಂಗ್ರಹಿಸಿ ದಾಖಲೆ : ಗುರಿ ಸಾಧನೆಯಲ್ಲಿ ಒಟಿಎಸ್ ಯೋಜನೆ ವಿಫಲ

by Bengaluru Wire Desk
December 1, 2024
in Bengaluru Focus
Reading Time: 1 min read
0
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬೆಂಗಳೂರು: ಡಿ.1 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಒಟ್ಟಾರೆ 20.7 ಲಕ್ಷ ಆಸ್ತಿಗಳಿದ್ದು, ಆ ಪೈಕಿ 2024-25ನೇ ಸಾಲಿನಲ್ಲಿ ಬಿಬಿಎಂಪಿ (PPMP)ಯು ನ.30ಕ್ಕೆ ಕೊನೆಗೊಂಡಂತೆ 4284 ಕೋಟಿ ರೂ. ಭಾರೀ ಮೊತ್ತದ ಆಸ್ತಿ ತೆರಿಗೆ (Property tax)ಯನ್ನು ಸಂಗ್ರಹಿಸಿದೆ. ಇದು ಪಾಲಿಕೆಯಲ್ಲಿ ಸಂಗ್ರಹವಾದ ಇದುವರೆಗಿನ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಪಾಲಿಕೆ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್ 2025ರ ವೇಳೆಗೆ 5200 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ನಾಗರೀಕರಿಗೆ ಇ-ಖಾತಾ (E-Khata)ವನ್ನು ಸುಗಮವಾಗಿ ಪಡೆಯಲು ಬಿಬಿಎಂಪಿ ಬದ್ಧವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಆಫ್ ಲೈನ್ (Offline) ಮೂಲಕ 2024-25ನೇ ಆರ್ಥಿಕ ವರ್ಷದಲ್ಲಿ 521.35 ಕೋಟಿ ರೂ. ಸಂಗ್ರಹವಾದರೆ, ಆನ್ ಲೈನ್ (Online) ಮೂಲಕ 3,762.81 ಕೋಟಿ ರೂ. ಸಂಗ್ರಹವಾಗಿದೆ. ಮಹದೇವಪುರ ವಲಯದಲ್ಲಿ 1148.35 ಕೋಟಿ ರೂ. ಸಂಗ್ರಹವಾಗುವುದರೊಂದಿಗೆ ಅತಿ ಹೆಚ್ಚು ಆಸ್ತಿ ಸಂಗ್ರಹಿಸಿದ ವಲಯವಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ 136.2 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲೂ ಆಸ್ತಿ ತೆರಿಗೆ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಸ್ವತ್ತಿನ ಮಾಲೀಕರು ಆಫ್ ಲೈನ್ ನಲ್ಲಿ 36.36 ಕೋಟಿ ರೂ. ತೆರಿಗೆ ಕಟ್ಟಿದ್ದಾರೆ.

ಗುರಿ ಸಾಧನೆಯಲ್ಲಿ ವಿಫಲವಾಯ್ತು ಒಟಿಎಸ್ ಯೋಜನೆ :

ಸುಸ್ತಿದಾರರ ಅನುಕೂಲಕ್ಕಾಗಿ ಜಾರಿಗೆ ತಂದ ಒಟಿಎಸ್ (One Time Settlement – OTS) ಅವಕಾಶ ನ.30ಕ್ಕೆ ಕೊನೆಗೊಂಡಿದೆ. ಪಾಲಿಕೆ ಸಂಗ್ರಹಿಸಿದ ಒಟ್ಟಾರೆ ಆಸ್ತಿ ತೆರಿಗೆಗಳ ಪೈಕಿ, ನಗರದಲ್ಲಿನ 4.2 ಕೋಟಿ ಆಸ್ತಿಗಳಿಂದ ಅಂದಾಜು 1,150 ಕೋಟಿ ರೂ. ನಿಂದ 1200 ಕೋಟಿ ರೂ. ಬಾಕಿ ತೆರಿಗೆಗಳ ಪೈಕಿ ಒಟಿಎಸ್ ಯೋಜನೆಯಡಿ ಪಾಲಿಕೆಗೆ ಅಂದಾಜು 2 ಲಕ್ಷ ಆಸ್ತಿಗಳಿಂದ 700 ರಿಂದ 750 ಕೋಟಿ ರೂ. ಹಣ ಸಂಗ್ರಹವಾಗಿದೆ. ಫೆಬ್ರವರಿಯಲ್ಲಿ ಜಾರಿಗೆ ತಂದ ಒಟಿಎಸ್ ಯೋಜನೆಯನ್ನು ಹಲವು ಬಾರಿ ವಿಸ್ತರಣೆ ಮಾಡಿದರೂ ಬಾಕಿ ಆಸ್ತಿ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಡಿಸೆಂಬರ್ ಒಂದರಿಂದ ತೆರಿಗೆ ಬಿಸಿ ತಟ್ಟಲಿದೆ ಎಂದು ಬೆಂಗಳೂರು ವೈರ್ ಗೆ ಪಾಲಿಕೆ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

90 ಸಾವಿರ ಆಸ್ತಿ ತೆರಿಗೆ ಸುಸ್ತಿದಾರರ ಬ್ಯಾಂಕ್ ಅಟ್ಯಾಚ್ ಮೆಂಟ್ :

ಡಿಸೆಂಬರ್‌ 1ರಿಂದ ಬಾಕಿಯ ಬಡ್ಡಿ ದಂಡ ಸೇರಿ ಬಾಕಿ ತೆರಿಗೆಯ ಎರಡು ಮೂರು ಪಟ್ಟು ಹೆಚ್ಚಳವಾಗಬಹುದು. ಈನತಕ ಆಸ್ತಿ ತೆರಿಗೆ ಪಾವತಿಸದ 90,000 ಆಸ್ತಿಮಾಲೀಕರಿಗೆ, ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ಆಸ್ತಿ ತೆರಿಗೆ ಬಾಕಿಯನ್ನು ಬಡ್ಡಿ ಸಮೇತ ವಸೂಲಿ ಮಾಡುತ್ತಿದೆ. ಇದಲ್ಲದೆ ಇದುವರೆಗೆ 10,000 ಆಸ್ತಿಗಳಿಗೆ ಬೀಗಮುದ್ರೆ ಹಾಕಿದೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಬೆಂಗಳೂರು ವೈರ್ ಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ ಇಂದಿನಿಂದ ಜಾರಿಗೆ ಬರುವಂತೆ ಸುಸ್ತಿದಾರರು ಕಟ್ಟುವ ಆಸ್ತಿ ತೆರಿಗೆ ದರವು ಬಡ್ಡಿ ಮತ್ತು ದಂಡದೊಂದಿಗೆ ದುಪ್ಪಟ್ಟಾಗಲಿದೆ. ಉದಾಹರಣೆಗೆ ಒಟಿಎಸ್ ಯೋಜನೆಯಲ್ಲಿ 25,000 ರೂ. ಪರಿಷ್ಕೃತ ತೆರಿಗೆ, ಬಡ್ಡಿ ದರವಿಲ್ಲದೆ ಪ್ರತಿ ವರ್ಷಕ್ಕೆ ಕೇವಲ 100 ರೂ. ದಂಡ ಸೇರಿ ಕೇವಲ 25,100 ರೂ. ತೆರಿಗೆ ಕಟ್ಟಿದರೆ ಸಾಕಿತ್ತು. ಆದರೆ ಡಿ.1ರಿಂದ ಇದೇ 25,000 ರೂ. ಪರಿಷ್ಕೃತ ತೆರಿಗೆ ಜೊತೆಗೆ 13,000 ರೂ. ಬಡ್ಡಿ ಹಾಗೂ ಪರಿಷ್ಕೃತ ತೆರಿಗೆ ಮೊತ್ತದಷ್ಟೇ 25,000 ರೂ. ಸೇರಿ ಒಟ್ಟಾರೆ 63,500 ರೂ.ಗಳನ್ನು ಸುಸ್ತಿದಾರ ಆಸ್ತಿ ಮಾಲೀಕರು ಕಟ್ಟಬೇಕಿದೆ.

ಏನಿದು ಒಟಿಎಸ್ ಯೋಜನೆ? :

ಒಂದು ಬಾರಿ ಪರಿಹಾರ (One Time Settlement – OTS) ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್‌ (ಒನ್‌ ಟೈಮ್‌ ಸೆಟ್ಲ್‌ ಮೆಂಟ್)‌ ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ಈ ಮೂಲಕ ತೆರಿಗೆದಾರರಿಗೆ ಬಾಕಿ ಮೇಲಿನ ಬಡ್ಡಿ ಚಕ್ರಬಡ್ಡಿ ಮತ್ತು ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವ ಯೋಜನೆ ಇದಾಗಿತ್ತು. ನಂತರ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಮೊದಲು ಸೆಪ್ಟಂಬರ್‌ 30 ಮತ್ತು ನಂತರ ನವಂಬರ್‌ 30 ರವೆಗೆ ಗಡುವು ವಿಸ್ತರಿಸಲಾಗಿತ್ತು. ಇನ್ನು ಮುಂದೆ ಒಟಿಎಸ್ ಯೋಜನೆ ಅವಕಾಶ ಸುಸ್ತಿದಾರರಿಗಿಲ್ಲವಾಗಿದೆ.

ಅಪಾರ್ಟ್ ಮೆಂಟ್ ನಿವಾಸಿಗಳ ಹೆಸರಿಗೆ ಖಾತೆಯಾಗುತ್ತಿಲ್ಲ ಯಾಕೆ? :

ಬೆಂಗಳೂರಿನಲ್ಲಿ ಪ್ರತಿ ವರ್ಷ ನೂರಾರು ಅಪಾರ್ಟ್ ಮೆಂಟ್ ಗಳು ಪೂರ್ಣವಾಗುತ್ತವೆ. ಅವುಗಳನ್ನು ಡೆವಲಪ್ ಮಾಡಿದ ಡೆವಲಪರ್ ಗಳು ಎಷ್ಟೋ ಅಪಾರ್ಟ್ ಮೆಂಟ್ ಯೂನಿಟ್ ಅಥವಾ ಫ್ಲಾಟ್ ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದರೂ, ಸಾವಿರಾರು ಪ್ರಕರಣಗಳಲ್ಲಿ ಇನ್ನೂ ಕೂಡ ವಿದ್ಯುತ್ ಬಿಲ್ ಹಾಗೂ ಪಾಲಿಕೆ ಖಾತೆಗಳನ್ನು ಫ್ಲಾಟ್ ಖರೀದಿಸಿದ ಗ್ರಾಹಕರಿಗೆ ವರ್ಗಾವಣೆ ಮಾಡದೆ ಡೆವಲಪರ್ ಗಳು ಅಥವಾ ಆ ಭೂಮಿಯ ಮೂಲ ಮಾಲೀಕರ ಹೆಸರಲ್ಲೇ ಇರುತ್ತಿದೆ. ಹೀಗಾಗಿ ಫ್ಲಾಟ್ ಖರೀದಿಸಿದವರ ಹೆಸರಿಗೆ ಖಾತಾ ವರ್ಗಾವಣೆಯಾದರೆ ವರ್ಷಂಪ್ರತಿ ಬಿಬಿಎಂಪಿಗೆ ಆಸ್ತಿ ತೆರಿಗೆ ರೂಪದಲ್ಲಿ ವರ್ಷಪ್ರತಿ ಕೋಟ್ಯಾಂತರ ರೂಪಾಯಿ ಹಣ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಅಪಾರ್ಟ್ ಮೆಂಟ್ ಡೆವಲಪರ್ ಗಳು ಮತ್ತು ಪಾಲಿಕೆ ಕಂದಾಯ ಸಿಬ್ಬಂದಿ, ಅಧಿಕಾರಿಗಳ ಒಳ ಒಪ್ಪಂದದಿಂದಾಗಿ ನೂತನ ಖರೀದಿದಾರರ ಹೆಸರಿಗೆ ಮಾರಾಟವಾಗಿ ಹಲವು ವರ್ಷಗಳಾದರೂ ಪಾಲಿಕೆ ಖಾತೆ ದಾಖಲೆಗಳಲ್ಲಿ ಕಂಡು ಬರುವುದೇ ಇಲ್ಲ. ಇದರಿಂದ ಪಾಲಿಕೆಗೆ ನೂರಾರು ಕೋಟಿ ರೂ. ಆಸ್ತಿ ತೆರಿಗೆ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಕಂದಾಯ ವಿಶೇಷ ಆಯುಕ್ತರು ಸೂಕ್ತ ಕ್ರಮ ವಹಿಸಬೇಕಿದೆ ಎಂದು ನಾಗರೀಕ ಸಂಘ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Viral Video News | ಜೈಲಿನಿಂದ ರಿಲೀಸ್ ಆದ ಖುಷಿಯಲ್ಲಿ ಬಂಧೀಖಾನೆ ಮುಂದೆಯೇ ನೃತ್ಯ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

Next Post

Jay shah ICC Chairman | ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕಾರ : ICC ಮಂಡಳಿಗೆ ಹೊಸ ಅಧಿಪತಿ

Next Post
ICC Chairman Jay Shah

Jay shah ICC Chairman | ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕಾರ : ICC ಮಂಡಳಿಗೆ ಹೊಸ ಅಧಿಪತಿ

Sabarimala Temple | ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಕೆಎಸ್ ಆರ್ ಟಿಸಿಯಿಂದ ಐರಾವತ ವೋಲ್ವೊ ಬಸ್ ಸೇವೆ

Please login to join discussion

Like Us on Facebook

Follow Us on Twitter

Recent News

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL | ಕಸ್ತೂರಿರಂಗನ್ ವರದಿ: ಪಶ್ಚಿಮ ಘಟ್ಟ ಸಂರಕ್ಷಣೆಗೆ ‘ಕರ್ನಾಟಕ ಪರ್ಯಾಯ ಮಾದರಿ’ ಮಂಡಿಸಿದ ಡಾ. ಪ್ರಕಾಶ್ ಕಮ್ಮರಡಿ

September 20, 2026

ಕೇವಲ 30 ನಿಮಿಷದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ: ‘ನಂಬಿಕೆ ನಕ್ಷೆ 2.0’ ಲೋಕಾರ್ಪಣೆ!

September 20, 2026
ಎಲ್ ಪಿಜಿ ಸಿಲಿಂಡರ್ ಸಾಂದರ್ಭಿಕ ಚಿತ್ರ

​ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

September 20, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d