Friday, April 24, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

    ಲೋಕಾಯುಕ್ತ ಕಚೇರಿಯ ಸಾಂದರ್ಭಿಕ ಚಿತ್ರ

    Karnataka Lokayukta | ಕರ್ನಾಟಕ ಲೋಕಾಯುಕ್ತಕ್ಕೆ 40ರ ಸಂಭ್ರಮ: ಏಪ್ರಿಲ್ 18ರಂದು ಸಾರ್ಥಕ ಪಯಣದ ಕಾರ್ಯಕ್ರಮ

  • Bengaluru Focus

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW EXCLUSIVE | 83 ಕೆರೆಗಳು ತುಂಬಿದರೂ ಸಂತೋಷಪಡುವ ಸ್ಥಿತಿಯಲ್ಲಿಲ್ಲ ಬೆಂಗಳೂರು : ಯಲಹಂಕ, ಮಹದೇವಪುರ ವಲಯಗಳಲ್ಲಿ ಮಳೆಹಾನಿಗೆ ನಿಖರ ಕಾರಣಗಳೇನು? ಪಾಲಿಕೆ ಎಡವಿದ್ದೆಲ್ಲಿ?

ಈ ವರ್ಷದ ಮಾರ್ಚ್ ನಲ್ಲಿ ನಗರದ 183 ಕೆರೆಗಳ ಪೈಕಿ 46 ಕೆರೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿತ್ತು. ಆದರೀಗ ಒಟ್ಟಾರೆಯಾಗಿ 183 ಕೆರೆಗಳಲ್ಲಿ ಸರಾಸರಿಯಾಗಿ ಶೇ.83.18ರಷ್ಟು ನೀರು ತುಂಬಿದೆ. ಆದರೂ ನಗರದಲ್ಲಿನ ಕೆರೆಯಿಂದ ಕೆರೆಯ ನಡುವಿನ ಸರಪಳಿಗೆ ಸೂಕ್ತ ರಾಜಕಾಲುವೆ ಸಂಪರ್ಕ ಕಲ್ಪಿಸಿಲ್ಲ.

by Bengaluru Wire Desk
October 23, 2024
in Bengaluru Focus, BW Special, Public interest
Reading Time: 4 mins read
0
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮಪುರ ಕೆರೆ ತುಂಬಿ ಕೋಡಿ ಹರಿಯುತ್ತಿರುವ ದ್ರೋಣ್ ಕ್ಯಾಮರಾ ಚಿತ್ರ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮಪುರ ಕೆರೆ ತುಂಬಿ ಕೋಡಿ ಹರಿಯುತ್ತಿರುವ ದ್ರೋಣ್ ಕ್ಯಾಮರಾ ಚಿತ್ರ.

ಬೆಂಗಳೂರು, ಅ.23 www.bengaluruwire.com : ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಮಳೆಯಾದ ಕಾರಣ ಬಿಬಿಎಂಪಿ ವ್ಯಾಪ್ತಿಯಲ್ಲಿನ 183 ಕೆರೆಗಳ ಪೈಕಿ 83 ಕೆರೆಗಳು ತುಂಬಿವೆ. ಇದೇ ತಿಂಗಳಿನಲ್ಲಿ ಯಲಹಂಕ ವಲಯ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ನಗರದ ಉಳಿದ ಭಾಗಗಳಿಗಿಂತ ಹೆಚ್ಚಿನ ಮಳೆಯಾದ ಕಾರಣ ಈ ಎರಡು ವಲಯಗಳ ವ್ಯಾಪ್ತಿಯಲ್ಲಿರುವ 76 ಕೆರೆಗಳ ಪೈಕಿ 52 ಕೆರೆಗಳು ತುಂಬಿ ಈ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ, ಬಡಾವಣೆ, ಉದ್ಯಾನವನ, ರಸ್ತೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಲು ಕಾರಣ ಎಂಬುದು ಬಿಬಿಎಂಪಿಯ ಕೆರೆ ನೀರಿನ ಮಟ್ಟದ ಅಂಕಿಅಂಶದಿಂದ ಬಹಿರಂಗವಾಗಿದೆ.

ಇದೇ ರಾಜಧಾನಿ ಬೆಂಗಳೂರಿನ ಐದೂ ತಾಲೂಕುಗಳನ್ನು ರಾಜ್ಯ ಸರ್ಕಾರ ಈ ವರ್ಷದ ಆರಂಭದಲ್ಲಿ ಬರಪೀಡಿತ ಎಂದು ಘೋಷಿಸಿತ್ತು. 2023-24ನೇ ಸಾಲಿನಲ್ಲಿ ಮಳೆಯಿಲ್ಲದ ಕಾರಣ ಬೆಂಗಳೂರಿನಲ್ಲಿ ಬಿಬಿಎಂಪಿಗೆ ಸೇರಿದ 183 ಕೆರೆಗಳ ಪೈಕಿ 46 ಕೆರೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿತ್ತು. ಒಟ್ಟಾರೆ 183 ಕೆರೆಗಳ 31,909.85 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಕೆರೆಗಳಲ್ಲಿ ಆಗ ಕೇವಲ ಶೇ.45.89 ರಷ್ಟು ಮಾತ್ರ ನೀರಿತ್ತು. ಆದರೆ ಪ್ರಸ್ತುತ ನಗರದ 183 ಕೆರೆಗಳಲ್ಲಿ ಒಟ್ಟಾರೆ 26,543.23 ದಶಲಕ್ಷ ಲೀಟರ್ ಅಂದರೆ ಸರಾಸರಿಯಾಗಿ ಶೇ.83.18ರಷ್ಟು ನೀರನ್ನು ಹೊಂದಿದೆ.

ಯಲಹಂಕದ ಕೇಂದ್ರೀಯ ವಿಹಾರ್, ಟಾಟಾ ನಗರ ಮತ್ತಿತರ ಕಡೆಗಳಲ್ಲಿ ತೀವ್ರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಿದರು. ಈ ಬಾರಿ ಯಲಹಂಕ ವಲಯದಲ್ಲಿ 27 ಕೆರೆಗಳ ಪೈಕಿ 20 ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೆರೆ ಕೋಡಿ ಹರಿದಿದೆ.

ಯಲಹಂಕ ವಲಯದಲ್ಲಿ 27 ಕೆರೆಗಳ ಪೈಕಿ 20 ಕೆರೆಗಳು ತುಂಬಿವೆ
ಪ್ರಮುಖ ಕೆರೆಗಳ ಹೆಸರುಕೆರೆಯ ವಿಸ್ತೀರ್ಣಕೆರೆಯಲ್ಲಿ ನೀರು ತುಂಬಿದ ಪ್ರಮಾಣ
ಯಲಹಂಕ ಕೆರೆ292.1 ಎಕರೆಶೇ.100
ಕೋಗಿಲು ಕೆರೆ73.28 ಎಕರೆಶೇ.100
ಅಟ್ಟೂರು ಕೆರೆ90.4 ಎಕರೆಶೇ.100
ಜಕ್ಕೂರು ಕೆರೆ164.17 ಎಕರೆಶೇ.100
ದೊಡ್ಡಬೊಮ್ಮನಸಂದ್ರ ಕೆರೆ124.19 ಎಕರೆಶೇ.100
ರಾಚೇನಹಳ್ಳಿ ಕೆರೆ131.6 ಎಕರೆಶೇ.100
ಹಾರೋಹಳ್ಳಿ ಕೆರೆ74.32 ಎಕರೆಶೇ.87.50
ಸಿಂಗಪುರ ಕೆರೆ66 ಎಕರೆಶೇ.100
ಪುಟ್ಟೇನಹಳ್ಳಿ ಕೆರೆ37 ಎಕರೆಶೇ.100
ಹೆಬ್ಬಾಳ ಕೆರೆ269.5 ಎಕರೆಶೇ.100

ಇನ್ನು ಮಹದೇವಪುರ ವಲಯದಲ್ಲಿನ 49 ಕೆರೆಗಳ ಪೈಕಿ 32 ಕೆರೆಗಳು ತುಂಬಿ ಹೋಗಿರುವುದರಿಂದ ಹಾಗೂ ಈ ವಲಯದಲ್ಲಿ ಇನ್ನೂ ಕೂಡ ಸೂಕ್ತ ರಾಜಕಾಲುವೆ ನಿರ್ಮಾಣ ಹಾಗೂ ಕೆರೆಗಳಿಗೆ ಸೂಕ್ತ ರೀತಿ ಸಮರ್ಪಕವಾಗಿ ಸಂಪರ್ಕ ಕಲ್ಪಿಸದೆ ಆ ಭಾಗದ ಜನ ಸಂಚಾರಕ್ಕೆ, ಮನೆಗಳಿಗೆ, ಕೆಳ ಸೇತುವೆ, ರಸ್ತೆಗಳಲ್ಲಿ ನೀರು ನಿಂತು ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗುತ್ತಿದೆ.

ಮಹದೇವಪುರ ವಲಯದಲ್ಲಿ 49 ಕೆರೆಗಳ ಪೈಕಿ 32 ಕೆರೆಗಳು ತುಂಬಿವೆ
ಪ್ರಮುಖ ಕೆರೆಗಳ ಹೆಸರುಕೆರೆಯ ವಿಸ್ತೀರ್ಣಕೆರೆಯಲ್ಲಿ ನೀರು ತುಂಬಿದ ಪ್ರಮಾಣ
ಚಿಕ್ಕಬೆಳ್ಳಂದೂರು ಕೆರೆ72 ಎಕರೆಶೇ.100
ದೊಡ್ಡನೆಕ್ಕುಂದಿ ಕೆರೆ114.17 ಎಕರೆಶೇ.77.78
ಕಲ್ಕೆರೆ ಕೆರೆ186.38 ಎಕರೆಶೇ.100
ರಾಮಪುರ ಕೆರೆ188.11 ಎಕರೆಶೇ.100

ಸಾವಿರಾರು ಕೋಟಿ ರೂ. ವೆಚ್ಚವಾದರೂ ರಾಜಕಾಲುವೆ ಸುಸ್ಥಿತಿಗೆ ಬಂದಿಲ್ಲ :

ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 840 ಕಿಲೋಮೀಟರ್‌ಗಳಷ್ಟು ಉದ್ದದ ಬೃಹತ್ ಮಳೆನೀರುಗಾಲುವೆಗಳಿದ್ದು, ಕೋರ್ ಏರಿಯಾಗಳಲ್ಲಿ 240 ಕಿಲೋಮೀಟರ್‌ಗಳು ಮತ್ತು ಹೊರ ಪ್ರದೇಶಗಳಲ್ಲಿ 600 ಕಿಲೋಮೀಟರ್‌ಗಳಷ್ಟು ರಾಜಕಾಲುವೆಗಳಿವೆ. ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಅನುದಾನ, ಬಿಬಿಎಂಪಿ ಸೇರಿದಂತೆ ಸಾವಿರಾರು ಕೋಟಿ ರೂ.ಗಳ ಹಣವನ್ನು ರಾಜಕಾಲುವೆ ನಿರ್ಮಾಣಕ್ಕೆ ಸುರಿದರೂ ಬೆಂಗಳೂರಿನಲ್ಲಿ ಸ್ವಲ್ಪ ಜೋರು ಮಳೆಯಾದರೆ ನಗರದಲ್ಲಿನ ಕೆರೆ ಸರಪಳಿಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಸೂಕ್ತ ರೀತಿ ಸಂಪರ್ಕ ಹೊಂದಿರದ ಕಾರಣ ವರುಣನ ಆರ್ಭಟವಾದರೆ ರಸ್ತೆ, ಮನೆಗಳಿಗೆ, ಆಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗುವ, ಮಳೆ ನೀರು ನಿಲ್ಲುವ ದಾರುಣ ಪರಿಸ್ಥಿತಿ ನಿಂತಿಲ್ಲ. ರಾಜಕಾಲುವೆ ಒತ್ತುವರಿ ಕಾರ್ಯವನ್ನು ತಡೆಯುವಲ್ಲಿ ಬಿಬಿಎಂಪಿಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.

ರಾಮಪುರ ಕೆರೆ ತುಂಬಿ ಅಕ್ಕಪಕ್ಕದ ಪ್ರದೇಶಗಳಿಗೆ ಕೆರೆಯ ನೀರು ತುಂಬಿರುವ ಪಕ್ಷಿನೋಟ.

ಸಿಲಿಕಾನ್ ಸಿಟಿಯಲ್ಲಿನ ಕೆರೆಗಳನ್ನು ಸಂಪರ್ಕಿಸುವ ಹಲವು ರಾಜಕಾಲುವೆಗಳನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಅಕ್ರಮವಾಗಿ ನೀರು ಹರಿಯುವ ಮಾರ್ಗವನ್ನು ಬದಲಾಯಿಸಿರುವ, ಅತಿಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ, ಅಗಲವಾಗಿರುವ ರಾಜಕಾಲುವೆಯನ್ನು ದೊಡ್ಡ ವಾಣಿಜ್ಯ ಕಟ್ಟಡ, ಅಪಾರ್ಟ್ ಮೆಂಟ್ ಹಾಗೂ ಪ್ರಭಾವಿಗಳ ನಿರ್ಮಾಣ ಕಾರ್ಯಗಳಿಗಾಗಿ ಅವರ ಅನುಕೂಲಕ್ಕೆಂದು ಪಾಲಿಕೆ ಬೃಹತ್ ನೀರುಗಾಲುವೆ ಭ್ರಷ್ಟ ಅಧಿಕಾರಿಗಳು ಕೆಲವು ಕಡೆಗಳಲ್ಲಿ ಅದರ ವಿಸ್ತೀರ್ಣ ಕಡಿಮೆಗೊಳಿಸಿ ಪುನಃ ಸ್ವಲ್ಪ ದೂರದ ಬಳಿಕ ದೊಡ್ಡದಾಗಿ ರಾಜಕಾಲುವೆ ನಿರ್ಮಾಣ ಮಾಡಿರುವ ಹೀಗೆ ನಾನಾ ಕಾರಣಗಳಿಗಾಗಿ ನಗರದಲ್ಲಿನ ಸರಪಳಿ ವ್ಯವಸ್ಥೆ ಹೊಂದಿದ ಕೆರೆಗಳು ಒಂದಕ್ಕೊಂದು ಸಂಪರ್ಕ ಕಡಿದುಕೊಂಡಿರುವುದೇ ಪ್ರತಿ ಬಾರಿ ನಿರಂತರವಾಗಿ ಜೋರು ಮಳೆಯಾದರೆ ಕೆರೆ ಉಕ್ಕಿ, ರಾಜಕಾಲುವೆ ಉಕ್ಕಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಮುಖ್ಯ ಪ್ರಧಾನ ಎಂಜಿನಿಯರ್ ಗೆ ಹೆಚ್ಚುವರಿ 4 ಸಿಇ ಹುದ್ದೆ ಏಕೆ? :

ಕೋರ್ಟ್ ಚಡಿಯೇಟು ನೀಡಿದಾಗಲಷ್ಟೇ ಶಾಸ್ತ್ರಕ್ಕೆ ರಾಜಕಾಲುವೆ ಒತ್ತುವರಿ ತೆರವು ಮಾಡುವ ಬೃಹತ್ ನೀರಗಾಲುವೆ ವಿಭಾಗದ ಕಾರ್ಯಾಚರಣೆಯ ಸಾಂದರ್ಭಿಕ ಚಿತ್ರ.

ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಹಲವು ಅರ್ಹರಾದ ಹಲವು ಎಂಜಿನಿಯರ್ ಗಳಿದ್ದಾರೆ. ಆದರೆ ಬಿಬಿಎಂಪಿ ಮುಖ್ಯ ಪ್ರಧಾನ ಎಂಜಿನಿಯರ್ ಹುದ್ದೆಯಲ್ಲಿರುವ ಪ್ರಹ್ಲಾದ್ ಅವರಿಗೇ ಪಾಲಿಕೆಯ ರಸ್ತೆ ಮತ್ತು ಮೂಲ ಸೌಕರ್ಯ, ಬೃಹತ್ ನೀರುಗಾಲುವೆ, ಕೆಸಿ ವ್ಯಾಲಿ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ಚೀಫ್ ಎಂಜಿನಿಯರ್ ಗಳ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪಾಲಿಕೆಯಲ್ಲಿ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ, ಮುಖ್ಯ ಕಾರ್ಯದರ್ಶಿಗಳು ಹೀಗೆ ಬಿಬಿಎಂಪಿ, ರಾಜ್ಯ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುವಲ್ಲೇ ಮುಖ್ಯ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಅವರಿಗೆ  ಹೆಚ್ಚು ಸಮಯ ಹಿಡಿಯುವಾಗ ಮತ್ತೆ ಹೆಚ್ಚುವರಿಯಾಗಿ ಈ ನಾಲ್ಕು ಚೀಫ್ ಎಂಜಿನಿಯರ್ ಹುದ್ದೆಗಳನ್ನು ನೀಡಿರುವುದರಿಂದ ರಾಜಧಾನಿಯಲ್ಲಿ ಪ್ರಮುಖ ರಸ್ತೆ, ಬೃಹತ್ ನೀರುಗಾಲುವೆ ವಿಚಾರದಲ್ಲಿ ಸೂಕ್ತ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗದೆ ನಗರದಲ್ಲಿ ಮಳೆ ಬಂದಾಗಲೆಲ್ಲಾ ಬೆಂಗಳೂರು ಸಂಕಷ್ಟ ಅನುಭವಿಸುತ್ತಿದೆ. ಪೂರ್ಣ ರೂಪದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇನ್ನೂ ಆಗಿಲ್ಲ. ಈ ಕಾರಣದಿಂದಾಗಿ ಬಿಬಿಎಂಪಿ ಜನರ ಹಿಡಿಶಾಪಕ್ಕೆ ಗುರಿಯಾಗಿದೆ ಎಂದು ಸಾಕಷ್ಟು ದೂರುಗಳು ಕೇಳಿಬಂದಿದೆ.

ಇದನ್ನೂ ಓದಿ : BW EXCLUSIVE | Bangalore Lakes Status Analysis | ಸಂಪೂರ್ಣ ಬತ್ತಿದೆ ಬೆಂಗಳೂರಿನ 46 ಕೆರೆಗಳು : ನಗರದ ಕೆರೆಗಳಲ್ಲಿ ನೀರಿನ ಸಂಗ್ರಹವಿರೋದು ಶೇ.46ರಷ್ಟು ಮಾತ್ರ!! ಇಲ್ಲಿದೆ ಬೆಂಗಳೂರು ವೈರ್ ವಿಶ್ಲೇಷಣಾತ್ಮಕ ವರದಿ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಉಳಿದ 6 ವಲಯಗಳಲ್ಲಿ ತುಂಬಿದ ಕೆರೆಗಳು ಹಾಗೂ ಪ್ರಮುಖ ಕೆರೆಗಳ ಹೆಸರು, ಅವುಗಳ ವಿಸ್ತೀರ್ಣ ಹಾಗೂ ಅದರಲ್ಲಿನ ನೀರಿನ ಪ್ರಮಾಣದ ವಿವರ ಈ ಕೆಳಕಂಡಂತಿದೆ :

ಬೊಮ್ಮನಹಳ್ಳಿ ವಲಯದಲ್ಲಿ 44 ಕೆರೆಗಳ ಪೈಕಿ 10 ಕೆರೆಗಳು ತುಂಬಿದೆ
ಪ್ರಮುಖ ಕೆರೆಗಳ ಹೆಸರುಕೆರೆಯ ವಿಸ್ತೀರ್ಣಕೆರೆಯಲ್ಲಿ ನೀರು ತುಂಬಿದ ಪ್ರಮಾಣ
ಬೇಗೂರು ಕೆರೆ137 ಎಕರೆಶೇ.41.67
ಹುಳಿಮಾವು ಕೆರೆ140.17 ಎಕರೆಶೇ.25
ವೆಂಕೋಜಿರಾವ್ ಕೆರೆ142.29 ಎಕರೆಶೇ.100
ಬೆಂಗಳೂರು ದಕ್ಷಿಣ ವಲಯದಲ್ಲಿ 7 ಕೆರೆಗಳ ಪೈಕಿ 1 ಕೆರೆ ತುಂಬಿದೆ
ಮಡಿವಾಳ ಕೆರೆ268.2 ಎಕರೆಶೇ.100
ಪೂರ್ವ ವಲಯದಲ್ಲಿ 1 ಕೆರೆಯಿದ್ದು ಪೂರ್ಣ ರೂಪದಲ್ಲಿ ತುಂಬಿದೆ
ಅಲಸೂರು ಕೆರೆ106 ಎಕರೆಶೇ.100
ರಾಜರಾಜೇಶ್ವರಿ ನಗರ ವಲಯದಲ್ಲಿ 34 ಕೆರೆಗಳ ಪೈಕಿ 15 ಕೆರೆಗಳು ತುಂಬಿದೆ
ಜೆ.ಪಿ.ಪಾರ್ಕ್103.22 ಎಕರೆಶೇ.100
ಕನ್ನಹಳ್ಳಿ ಕೆರೆ68 ಎಕರೆಶೇ.100
ಹೊಸಕೆರೆಹಳ್ಳಿ ಕೆರೆ59.26 ಎಕರೆಶೇ.83.33
ಉಲ್ಲಾಳ ಕೆರೆ26 ಎಕರೆಶೇ.63.75
ಹೇರೋಹಳ್ಳಿ ಕೆರೆ34 ಎಕರೆಶೇ.100
ದಾಸರಹಳ್ಳಿ ವಲಯದಲ್ಲಿ 11 ಕೆರೆಗಳ ಪೈಕಿ 5 ಕೆರೆಗಳು ತುಂಬಿದೆ
ಕರಿವೋಬನಹಳ್ಳಿ ಕೆರೆ53.24 ಎಕರೆಶೇ.100
ದಾಸರಹಳ್ಳಿ ಕೆರೆ27.33 ಎಕರೆಶೇ.100
ಚಿಕ್ಕಬಾಣಾವರ ಕೆರೆ105.15 ಎಕರೆಶೇ.10.53
ಪಶ್ಚಿಮ ವಲಯದಲ್ಲಿ 2 ಕೆರೆಗಳ ಪೈಕಿ ಯಾವುದು ಶೇ.100ರಷ್ಟು ತುಂಬಿಲ್ಲ
ಸ್ಯಾಂಕಿ ಕೆರೆ46.19 ಎಕರೆಶೇ.78.26
ನಾಯಂಡಹಳ್ಳಿ ಕೆರೆ15.08 ಎಕರೆಶೇ.75.48

ಕಳೆದ 22 ದಿನಗಳಲ್ಲಿ 123 ವರ್ಷಗಳಲ್ಲೇ 5ನೇ ಅತಿಹೆಚ್ಚು ಮಳೆ :

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 183 ಕೆರೆಗಳ ಪೈಕಿ ಬಹುತೇಕ ಕೆರೆಗಳು ಸಣ್ಣ ಕೆರೆಗಳೇ ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ತುಂಬಿ ಕೊಂಡಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ 22ರ ತನಕ ವಾಡಿಕೆ ಮಳೆ 11.8 ಸೆಂಟಿಮೀಟರ್ ಮಳೆಯಾಗುತ್ತೆ. ಆದರೆ ಈ ಬಾರಿ 24.01 ಸೆಂ.ಮೀ ಮಳೆಯಾಗಿದೆ. 1901ನೇ ಇಸವಿಯಿಂದ 2024ರ ಇಸವಿಯ ತನಕ ಈ ಅವಧಿಯಲ್ಲಿ ಅತಿಹೆಚ್ಚು ಮಳೆಯಾಗಿ ದಾಖಲೆ ನಿರ್ಮಾಣವಾಗಿದ್ದು 2005ರ ಇಸವಿಯಲ್ಲಿ. ಆಗ 29.01 ಸೆಂ.ಮೀ ಮಳೆಯಾಗಿತ್ತು. 1943ರಲ್ಲಿ 28.7 ಸೆಂ.ಮೀ ಹಾಗೂ 1970ನೇ ಇಸವಿಯಲ್ಲಿ 25.3 ಸೆಂ.ಮೀ ಮಳೆಯಾಗಿದೆ. ಇದಾದ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದ್ದು 2024ರ ಈ ಅವಧಿಯಲ್ಲಿ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಮುಖ ಕೆರೆಗಳಿಗೆ ತೂಬು ಕಾಲುವೆ ನಿರ್ಮಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ? :

ಜಕ್ಕೂರು ಕೆರೆಯಲ್ಲಿ ಬಿಬಿಎಂಪಿ ಅಳವಡಿಸಿರುವ ತೂಬಿನ ರಚನೆಯ ಚಿತ್ರ.

ಈ ಹಿಂದೆ ನಗರದಲ್ಲಿ ಭಾರೀ ಮಳೆಯಾಗಿ ಕೆರೆಗಳಲ್ಲಿ ಕೋಡಿ ಹರಿದು ತಗ್ಗು ಪ್ರದೇಶಗಳ ಮನೆಗಳಿಗೆ, ರಸ್ತೆ, ಖಾಲಿ ಜಾಗಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ನಷ್ಟವಾದಾಗ ಹಿಂದಿನ ಬಿಜೆಪಿ ಸರ್ಕಾರ ಪ್ರಮುಖ ಕೆರೆಗಳಿಗೆ 36 ಕೋಟಿ ರೂ. ವೆಚ್ಚದಲ್ಲಿ ತೂಬು ಕಾಲುವೆ (ತನ್ನ ಕೆಳಗೆ ನೀರು ಹರಿಯುವುದಕ್ಕೆ ಅವಕಾಶ ಕೊಡುವ ಚಲಿಸಬಲ್ಲ ದ್ವಾರವನ್ನು ಸೂಚಿಸುತ್ತದೆ.) ಅಳವಡಿಸುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದಾದ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ತೂಬು ನಿರ್ಮಾಣಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ ಕಾರಣ, ಹೇಗೊ ಸಿಕ್ಕ ಅನುದಾನದಲ್ಲಿ ಬಿಬಿಎಂಪಿಯ ಕೆರೆ ವಿಭಾಗ ಕೇವಲ 9 ಕೆರೆಗಳಿಗೆ ತೂಬು ಅಳವಡಿಸಿದೆ. ಜಕ್ಕೂರು ಕೆರೆ, ದೊಡ್ಡನೆಕ್ಕುಂದಿ ಕೆರೆ,  ಇನ್ನು 10 ತೂಬುಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರತಿಯೊಂದು ತೂಬು ನಿರ್ಮಾಣಕ್ಕೆ ತಲಾ 25 ಲಕ್ಷ ರೂ. ವೆಚ್ಚವಾಗುತ್ತದೆ.

ಉಳಿದಂತೆ 83 ಕೆರೆಗಳಿಗೆ ತೂಬು ನಿರ್ಮಾಣ ಕಾರ್ಯಕ್ಕೆ ಕೆರೆ ವಿಭಾಗದ ವಿಶೇಷ ಆಯುಕ್ತರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆರೆಗಳಿಗೆ ತೂಬುಗಳಿದ್ದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಸಂಗ್ರಹಕ್ಕೆ ಹಾಗೂ ಹೆಚ್ಚಾದ ನೀರನ್ನು ಹೊರಗೆ ಬಿಡುವಲ್ಲಿ ಪ್ರಮುಖವಾಗಿದೆ. ನಗರದಲ್ಲಿನ 183 ಕೆರೆಗಳಲ್ಲಿ ಕೆಲವೊಮ್ಮೆ ಕೆರೆ ತುಂಬಿದರೂ ತೂಬಿಲ್ಲದ ಕಾರಣ ಅಗತ್ಯ ಪ್ರಮಾಣದ ನೀರು ಸಂಗ್ರಹಕ್ಕೆ ಅವಕಾಶವಿಲ್ಲದೆ ಅನಗತ್ಯವಾಗಿ ನೀರು ಕೋಡಿ ಹರಿದು ಹೋಗುತ್ತಿದೆ. ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರವಿಲ್ಲದೆ ಕೆರೆ ಬತ್ತಿ ಹೋಗುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ತೂಬು ನಿರ್ಮಾಣದಲ್ಲಿ ಹಾಗೂ ಸೂಕ್ತ ರೀತಿಯಲ್ಲಿ ಮಳೆ ನೀರು ರಾಜಕಾಲುವೆಯಲ್ಲಿ ಹರಿದು ಕೆರೆ ಸೇರಿ ಅಲ್ಲಿಂದ ಮತ್ತೊಂದು ಕೆರೆ ರಾಜಕಾಲುವೆಯ ಮೂಲಕ ಸರಾಗವಾಗಿ ಹರಿಯಲು ಅನುವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯವಹಿಸಿರುವುದರಿಂದ ಭಾರೀ ಮಳೆಯಾದಾಗ ನಗರದಲ್ಲಿ ಪದೇ ಪದೇ ಸಮಸ್ಯೆ ಎದುರಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದೆ. ಇನ್ನಾದರೂ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

ಭಾರತದ ಎಸ್ ಡಿಐ ಏರ್ ಫೋರ್ಸ್ : ಜಾಗತಿಕ ಮಟ್ಟದಲ್ಲಿ ಏರ್ ಫೋರ್ಸ್ ಸಾಫ್ಟ್ ವೇರ್ ಉತ್ಕೃಷ್ಟತೆ ಸಾಧಿಸಿದ ವಿಶ್ವದ ಮೊದಲ ಸಂಸ್ಥೆ ಎಂಬ ಗರಿ

Next Post

ಇಂದಿನಿಂದ ಹಾಸನಾಂಬೆ ಜಾತ್ರೋತ್ಸವ ಆರಂಭ : ಒಟ್ಟು 9 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ಅವಕಾಶ

Next Post

ಇಂದಿನಿಂದ ಹಾಸನಾಂಬೆ ಜಾತ್ರೋತ್ಸವ ಆರಂಭ : ಒಟ್ಟು 9 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ಅವಕಾಶ

ಕಟ್ಟಡ ಕುಸಿತದಲ್ಲಿ ಮೃತರಾದವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ : ಅನಧಿಕೃತ ಕಟ್ಟಡ ಕಟ್ಟಿದರೆ ಅಧಿಕಾರಿಗಳೇ ನೇರ ಹೊಣೆ - ಸಿಎಂ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group