Sunday, April 26, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

KGF Mining Lease | ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆಗೆ ಹಸಿರು ನಿಶಾನೆ : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ

ಸರ್ಕಾರಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಕಡ್ಡಾಯ | ನಗರ ಸ್ಥಳೀಯ ಸಂಸ್ಥೆ ಆಸ್ತಿ ತೆರಿಗೆ ವಸೂಲಿಗೆ ಸ್ವಸಹಾಯ ಗುಂಪುಗಳ ನೆರವು

by Bengaluru Wire Desk
June 20, 2024
in News Wire, Public interest
Reading Time: 1 min read
0
ವಿಧಾನಸೌಧದ ಸಾಂದರ್ಭಿಕ ಚಿತ್ರ

ವಿಧಾನಸೌಧದ ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 20 www.bengaluruwire.com : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ಸೇರಿದಂತೆ ಒಟ್ಟು 20 ವಿಷಯಗಳ ಮೇಲೆ ಚರ್ಚೆ ಮಾಡಿ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಸಂಪುಟ ಸಭೆ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಸಚಿವ ಸಂಪುಟದ ನಿರ್ಣಯಗಳ ಕುರಿತು  ಮಾತನಾಡುತ್ತಾ, ವಾಣಿಜ್ಯ ಕೈಗಾರಿಕೆ ಇಲಾಖೆ ಗೆ ಸಂಬಂಧಿಸಿದಂತೆ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ. ನಿಷ್ಕ್ರಿಯವಾಗಿದ್ದ 1003.4 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸಲು ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಹಮತಿಸಿದೆ. ಗಣಿ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡಲು ಸಂಪುಟದಲ್ಲಿ ಹಸಿರು ನಿಶಾನೆ ತೋರಲಾಗಿದೆ.

ವಾಣಿಜ್ಯ ಕೈಗಾರಿಕೆ ಇಲಾಖೆ ಗೆ ಸಂಬಂಧಿಸಿದಂತೆ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ. ನಿಷ್ಕ್ರಿಯವಾಗಿದ್ದ 1003.4 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸಲು ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಹಮತಿಸಿದೆ. ಗಣಿ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡಲು ಸಂಪುಟ ಗ್ರೀನ್ ಸಿಗ್ನಲ್ ಸೂಚಿಸಿದೆ.

ಟೇನಿಂಗ್ ಡಂಪ್ಸ್ ಬಳಸಿ ಗಣಿ ಚಟುವಟಿಕೆ ಮುಂದುವರಿಸಲು ಅವಕಾಶ ನೀಡಲಾಗಿದ್ದು, 2230 ಎಕರೆ ಭೂಮಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ನೀಡಬೇಕು. 75.24 ಕೋಟಿ ರೂ. ಸರ್ಕಾರಕ್ಕೆ ಪಾವತಿ ಮಾಡುವುದು ಬಾಕಿ ಇದೆ. ಅದನ್ನೂ ಭರಿಸುವಂತೆ ಭಾರತ್ ಮೈನಿಂಗ್ಸ್​​ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ವಿಶ್ವ ವಿದ್ಯಾಲಯಗಳ ಅಭಿವೃದ್ದಿಗೆ 297.77 ಕೋಟಿ ರೂ. ಬಿಡುಗಡೆಗೆ ಕ್ಯಾಬಿನೆಟ್ ಅನುಮೋದಿಸಲಾಗಿದೆ. ಶಿಕ್ಷಣ ಇಲಾಖೆಯ ಎಲ್ಲ ಸರ್ಕಾರಿ ಶಾಲೆ ಹಾಗೂ ಪದವಿ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ನಿರ್ಧಾರ ಮಾಡಲಾಗಿದ್ದು, 29.15 ಕೋಟಿ ರೂ. ಅಂದಾಜು ವೆಚ್ಚದಲ್ಲಿ 46,829 ಸರ್ಕಾರಿ ಶಾಲೆ, 1434 ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ಉಚಿತ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಕ್ರೈಸ್ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ರೋಟರಿ ಸಂಸ್ಥೆಗೆ ಇದರ ಜವಾಬ್ದಾರಿ ನೀಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬೆಳಗಾವಿ ಬಳಿಯಲ್ಲಿ ಬಡಾವಣೆ ನಿರ್ಮಾಣಕ್ಕೆ 137 ಕೋಟಿ ರೂ. ಅಂದಾಜು ವೆಚ್ಚಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಚಿವ ಸಂಪುಟದಲ್ಲಿ ಕಳವಳ ವ್ಯಕ್ತವಾಗಿದ್ದು ಸರ್ಕಾರದ ನಿಲುವನ್ನು  ಉನ್ನತ ಶಿಕ್ಷಣ ಸಚಿವರು ತಿಳಿಸಲಿದ್ದಾರೆ.  ಏಳನೇ ವೇತನ ಆಯೋಗದ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸಚಿವರು ತಿಳಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಕಡ್ಡಾಯ :

ಜನವರಿ-26ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡಲು ಸೂಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಹಾಗೂ ನವೆಂಬರ್-26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲು ಸಚಿವ ಸಂಪುಟ ನಿರ್ಧರಿಸಿದೆ.

ನಗರ ಸ್ಥಳೀಯ ಸಂಸ್ಥೆ ಆಸ್ತಿ ತೆರಿಗೆ ವಸೂಲಿಗೆ ಸ್ವಸಹಾಯ ಗುಂಪುಗಳ ನೆರವು :

ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಮೊತ್ತ 1860 ಕೋಟಿ ಬಾಕಿ ಇದ್ದು, ಈ ಮೊತ್ತವನ್ನು ವಸೂಲು ಮಾಡಲು ಸ್ವಸಹಾಯ ಗುಂಪುಗಳ ನೆರವು ಪಡೆಯಲು ತೀರ್ಮಾನಿಸಿದೆ. ಸ್ವ-ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿನ ಶೇ.5 ರಷ್ಟನ್ನು ಪ್ರೊತ್ಸಾಹ ಧನ ರೂಪದಲ್ಲಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. 

ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾವೇಶಗೊಳಿಸುವ ದಿನಾಂಕ, ಸ್ಥಳ ಮತ್ತು ವೇಳೆಯನ್ನು ನಿಗದಿಪಡಿಸಿ ಅಧಿವೇಶನವನ್ನು ಕರೆಯಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ದಿನಾಂಕ ಗೊತ್ತು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ.

ಒಳಾಡಳಿತ ಇಲಾಖೆಯಿಂದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಒಟ್ಟು 33 ಘಟಕಗಳ ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಈ ಮೂಲಕ ಪೋಲಿಸ್ ಠಾಣೆಗಳ ಮೇಲಿನ ಕೆಲಸದ ಹೊರೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.

WhatsApp Join our WhatsApp Channel
Previous Post

Kidwai – Indiragandhi Hospital | ಕಿದ್ವಾಯಿ – ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಚಳಿ ಬಿಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್

Next Post

10th International Yoga Day | ಜಮ್ಮು ಕಾಶ್ಮೀರದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಭಾಗಿ : ರಾಜ್ಯದಲ್ಲೂ ನಡೆಯಿತು ಯೋಗೋತ್ಸವ

Next Post

10th International Yoga Day | ಜಮ್ಮು ಕಾಶ್ಮೀರದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಭಾಗಿ : ರಾಜ್ಯದಲ್ಲೂ ನಡೆಯಿತು ಯೋಗೋತ್ಸವ

ಸಾಂದರ್ಭಿಕ ಚಿತ್ರ

BMTC News | ಹೊಸ ಬಿಎಂಟಿಸಿ ಬಸ್ ಮಾರ್ಗ : ಮಲ್ಲೇಶ್ವರ ಬಸ್ ನಿಲ್ದಾಣದಿಂದ, ಬನಶಂಕರಿ ಬಸ್ ನಿಲ್ದಾಣಕ್ಕೆ ನೂತನ ಸೇವೆ ಆರಂಭ - ಇಲ್ಲಿದೆ ಬಸ್ ಸಂಚಾರ ವೇಳೆಯ ಮಾಹಿತಿ

Please login to join discussion

Like Us on Facebook

Follow Us on Twitter

Recent News

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026

GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

April 25, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group