Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Golden Badges For MLAs | ಕರ್ನಾಟಕದ ಎಲ್ಲಾ ಶಾಸಕರಿಗೆ ವಿಧಾನಸಭೆಯಿಂದ ತಲಾ ಮೂರು ಚಿನ್ನದ ಆಕರ್ಷಕ ಬ್ಯಾಡ್ಜ್ ಹಂಚಿಕೆ

ಆಸ್ಟ್ಟೇಲಿಯಾದ ಮೇಯರ್‌, ಸ್ಪೀಕರ್ ಯು.ಟಿ.ಖಾದರ್ ಗೆ ಅಲ್ಲಿನ ಸರ್ಕಾರದ ಲಾಂಛನದ ಬ್ಯಾಡ್ಜ್ ಗಿಫ್ಟ್ ಕೊಟ್ಟಾಗ ಹೊಳೆದ ಐಡಿಯಾ!!

by Bengaluru Wire Desk
February 22, 2024
in News Wire, Public interest
Reading Time: 1 min read
0

ಬೆಂಗಳೂರು, ಫೆ.22 www.bengaluruwire.com : ಕರ್ನಾಟಕ ರಾಜ್ಯದ ಲಾಂಛನವಾದ ಗಂಡ ಭೇರುಂಡದ ಚಿನ್ನ ಲೇಪಿತ ಬ್ಯಾಡ್ಜ್ ಗಳನ್ನು ವಿಧಾನಸಭೆಯು ತನ್ನ ಎಲ್ಲಾ ಸದಸ್ಯರುಗಳಿಗೆ ವಿತರಿಸಿದೆ. ರಾಜ್ಯದ ವಿಧಾನಸಭೆಯಲ್ಲಿ ಶಾಸಕರನ್ನು ಗುರುತಿಸಲು ಗಂಡ ಭೇರುಂಡದ ಲಾಂಛನವಿರುವ ತಲಾ ಮೂರು ಬ್ಯಾಡ್ಜ್ ಗಳನ್ನು ವಿತರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. 

ರಾಜ್ಯದ ಶಾಸಕರುಗಳು ರಾಜ್ಯದಿಂದ ಹೊರ ಹೋದಾಗ ಗುರುತಿಸಿ ಅವರಿಗೆ ಸಿಗಬೇಕಾದ ಸೂಕ್ತ ಗೌರವಗಳನ್ನು ನೀಡಲು ಈ ಲಾಂಛನ ನೆರವಾಗಲಿದೆ. ಇನ್ನೂ, ರಾಜ್ಯ ಸರಕಾರದ ಲಾಂಛನವಾದ ಗಂಡು ಬೇರುಂಡ ಬಿಲ್ಲೆಯು ಸುಮಾರು ಒಂದೂವರೆ ಇಂಚಿನಷ್ಟು ಉದ್ದವಿದ್ದು, ಚಿನ್ನ ಲೇಪಿತವಾಗಿದೆ. ಬ್ಯಾಡ್ಜ್ ನಲ್ಲಿ ಎಂಎಲ್‍ಎ ಎಂಬ ಅಕ್ಷರಗಳನ್ನು ಉಬ್ಬು ಚಿತ್ರದಂತೆ ಮುದ್ರಿಸಲಾಗಿದೆ.

ಬೆಂಗಳೂರಿನ ಐ ಡ್ರೀಮ್ಸ್‌ ಟ್ರೇಡ್‌ ಅಂಡ್‌ ಈವೆಂಟ್‌ ಲಿಮಿಟೆಡ್‌ ಕಂಪನಿಯಿಂದ ತಲಾ 2832 ರೂ. ನಂತೆ ಈ ಬ್ಯಾಡ್ಜ್‌ಗಳನ್ನು ಸರ್ಕಾರ ಖರೀದಿ ಮಾಡಿತ್ತು. ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್‌ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್‌ ಅವರು ಸೂಚಿಸಿದ್ದಾರೆ. “ವಿಧಾನಸೌಧಕ್ಕೆ ಬರುವವರೆಲ್ಲರೂ ಶಾಸಕ, ಸಚಿವರ ರೀತಿಯಲ್ಲೇ ಉಡುಪು ಧರಿಸಿ ಬರುತ್ತಾರೆ. ಹಾಗಾಗಿ ಮುಂದಿನ ವಿಧಾನಸಭೆ ಅಧಿವೇಶನಕ್ಕೆ ಬರುವಾಗ ಎಲ್ಲ ಸದಸ್ಯರೂ ಈ ಬ್ಯಾಡ್ಜ್‌ ಕಡ್ಡಾಯವಾಗಿ ಧರಿಸಿ ಬರಬೇಕು. ಇದರಿಂದ ನಮ್ಮ ಭದ್ರತಾ ಸಿಬ್ಬಂದಿಗೂ ಶಾಸಕರನ್ನು ಗುರುತಿಸಲು ನೆರವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಶಾಸಕರಿಗೆ ನೀಡಿದ ಕಿಟ್ ನಲ್ಲೇನಿದೆ? :

ಸಚಿವಾಲಯದಿಂದ ಎಲ್ಲ ಸದಸ್ಯರಿಗೂ ಒಂದು ಕಿಟ್‌ ಕೊಡಲಾಗಿದೆ. ಅದರಲ್ಲಿ ಪ್ರತಿ ಸದಸ್ಯರಿಗೂ ಗಂಡಭೇರುಂಡ ಲಾಂಛನವುಳ್ಳ ಮೂರು ಬ್ಯಾಡ್ಜ್‌ಗಳನ್ನು ನೀಡಲಾಗಿದೆ. ಅದರಲ್ಲಿ ಒಂದನ್ನು ತಮ್ಮ ಊರಿನಲ್ಲಿ, ಇನ್ನೊಂದು ಬೆಂಗಳೂರಿನಲ್ಲಿ ಇಟ್ಟುಕೊಳ್ಳಬಹುದು. ಮೂರನೆಯದನ್ನು ಪ್ರತಿ ದಿನ ಬಳಕೆಗೆಂದು ನೀಡಲಾಗಿದೆ. ಶಾಸಕರು ದೆಹಲಿ ಮತ್ತಿತರ ಕಡೆ ಕಾರ್ಯಕ್ರಮಗಳಿಗೆ ಹೋಗುವಾಗ ಗೌರವ ಸೂಚಕವಾಗಿ ಈ ಬ್ಯಾಡ್ಜ್‌ ಧರಿಸಿ ತೆರಳಬಹುದು.

ಆಸ್ಟ್ಟೇಲಿಯಾದ ಮೇಯರ್‌ ಒಬ್ಬರನ್ನು ಇತ್ತೀಚೆಗೆ ಭೇಟಿಯಾದಾಗ ಅವರು ತಮಗೆ ಸರ್ಕಾರದ ಲಾಂಛನದ ಬ್ಯಾಡ್ಜನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅಲ್ಲದೆ, ಅಲ್ಲಿನ ಜನಪ್ರತಿನಿಧಿಗಳು ಗೌರವ ಸೂಚಕವಾಗಿ ಈ ಲಾಂಛನವನ್ನು ಧರಿಸುತ್ತಾರೆ ಎಂದು ತಿಳಿಸಿದ್ದರು. ಹಾಗಾಗಿ ಇದೇ ರೀತಿಯಲ್ಲಿ ನಮ್ಮ ಕರ್ನಾಟಕದಲ್ಲಿಯೂ ಗಂಡ ಭೇರುಂಡ ಬ್ಯಾಡ್ಜ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್‌ ಈ ಹಿಂದೆ ಹೇಳಿದ್ದರು. ಅದರಂತೆ ಗಂಡಭೇರುಂಡ ಸಣ್ಣ ಪ್ರತಿಕೃತಿಯ ಬಿಲ್ಲೆಯನ್ನು ಸದಸ್ಯರಿಗೆ ಹಂಚಿಕೆ ಮಾಡಿದ್ದಾರೆ.

WhatsApp Join our WhatsApp Channel
Previous Post

BW EXCLUSIVE | BBMP Solid Waste | ಬೆಂಗಳೂರಿನ ಕಸಕ್ಕೆ ಆಶ್ರಯ ತಾಣಗಳಿವು : ಹಳ್ಳಿಗಳ ಅಭಿವೃದ್ಧಿ ಹೆಸರಲ್ಲಿ 6 ವರ್ಷದಲ್ಲಿ ಬಿಬಿಎಂಪಿಯಿಂದ ಬಿಡುಗಡೆಯಾಗಿತ್ತು 1052 ಕೋಟಿ ರೂ. : ಈಗಲೂ ನಿಂತಿಲ್ಲ ಗ್ರಾಮಸ್ಥರ ಪ್ರತಿಭಟನೆ ; ಇದರ ಅಸಲಿಯತ್ತೇನು?

Next Post

Ragi Malt To Govt. School Students | 55 ಲಕ್ಷ ಸರ್ಕಾರಿ ಶಾಲಾ ಮಕ್ಕಳ ದೈಹಿಕ ಮಾನಸಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆಗೆ ಚಾಲನೆ

Next Post

Ragi Malt To Govt. School Students | 55 ಲಕ್ಷ ಸರ್ಕಾರಿ ಶಾಲಾ ಮಕ್ಕಳ ದೈಹಿಕ ಮಾನಸಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆಗೆ ಚಾಲನೆ

ಬಿಡಿಎ ಬಡಾವಣೆ ಕುರಿತ ಗ್ರಾಫಿಕ್ಸ್ ಸಾಂದರ್ಭಿಕ ಚಿತ್ರ

BDA NPKL Layout News | ನಾಡಪ್ರಭು ಕೆಂಪೇಗೌಡ ಬಡಾವಣೆ ಭೂಸ್ವಾಧೀನ ಅಧಿಸೂಚನೆ : ಬಿಡಿಎ ಮೇಲ್ಮನವಿ ಎತ್ತಿಹಿಡಿದ ಹೈಕೋರ್ಟ್

Please login to join discussion

Like Us on Facebook

Follow Us on Twitter

Recent News

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group