Saturday, August 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    KEA ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

    ​ಪೇಪರ್ ಲೀಕ್ ತಡೆಗೆ ಹೊಸ ಅಸ್ತ್ರ: ಸಂಸತ್ತಿನಲ್ಲಿ ಅಂಗೀಕಾರಗೊಂಡಿತು ಕಠಿಣ ವಿಧೇಯಕ

    ಆ. 15ರಿಂದ ಸ್ವಿಗ್ಗಿ ಸೇವೆ ಸ್ಥಗಿತ? ಆನ್‌ಲೈನ್ ಆಹಾರ ನೀಡಿಕೆ ಸಂಸ್ಥೆ ವಿರುದ್ಧ ಬೆಂಗಳೂರು ಹೋಟೆಲುಗಳ ಸಂಘದ ಖಡಕ್ ಎಚ್ಚರಿಕೆ

    1200 ಬೋರ್‌ವೆಲ್‌ಗಳಿಗೆ ಮರುಜೀವ: ತಮಿಳುನಾಡು ಐಎಎಸ್ ಅಧಿಕಾರಿಗೆ ನಟ ಮಾಧವನ್ ಸಲಾಂ

    Indian billionaires Increased | ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ 4 ಪಟ್ಟು ಹೆಚ್ಚಳ: 576ಕ್ಕೆ ಏರಿಕೆ

    BIG BREAKING NEWS | ಮೇಕೆದಾಟು ಯೋಜನೆ: ನೆರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ, ಕೇಂದ್ರ ಸರ್ಕಾರದ ಸ್ಪಷ್ಟನೆ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

  • Bengaluru Focus

    Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

    BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

    ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: 22 ಸಾವಿರ ಟನ್ ಪಾರಂಪರಿಕ ಕಸ ತೆರವು

    ​ಬೆಳ್ಳಂದೂರು ಎಸ್‌ಟಿಪಿ ಪ್ರಕರಣ: ತನಿಖೆ ಮುಂದುವರಿಕೆ, ಕಾರ್ಮಿಕರ ಸುರಕ್ಷತೆಗೆ ಜಲಮಂಡಳಿ ಒತ್ತು

    BWSSB Head Office

    BWSSB News | ಬೆಂಗಳೂರು: ಜು. 31ರಂದು ಈ ಪ್ರದೇಶಗಳಲ್ಲಿ 15 ಗಂಟೆ ಕಾವೇರಿ ನೀರು ಇರಲ್ಲ

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BBMP E-Aasthi | ಆಸ್ತಿ ಮಾಲೀಕರೇ ಗಮನಿಸಿ : ಪಾಲಿಕೆಯ ಪೂರ್ವ ವಲಯದ ಬಳಿಕ ಫೆ.3ರಿಂದ ಹೊಸದಾಗಿ ಈ ವಾರ್ಡ್ ನಲ್ಲಿ ಇ-ಆಸ್ತಿ ವ್ಯವಸ್ಥೆ ಜಾರಿ

ಫೆ.2 ರ ನಂತರ ಕೈ ಬರಹದ ಸಹಿಯುಳ್ಳ ಹಿಂಬರಹವನ್ನು ತೆರಿಗೆದಾರರಿಗೆ ವಿತರಿಸಿದಲ್ಲಿ ಕಠಿಣ ಕ್ರಮ - ಚೀಫ್ ಕಮಿಷನರ್ | ಅಕ್ರಮ ಖಾತೆಗಳಿಗೆ ಬೀಳಲಿದೆ ಬ್ರೇಕ್

by Bengaluru Wire Desk
February 4, 2024
in Bengaluru Focus, Public interest
Reading Time: 1 min read
0
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.04 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಪೂರ್ವ ವಲಯದಲ್ಲಿ ಮಾತ್ರ ಜಾರಿಯಲ್ಲಿದ್ದ ಇ-ಆಸ್ತಿ ತಂತ್ರಾಂಶ ಪದ್ಧತಿಯನ್ನು ರಾಜರಾಜೇಶ್ವರಿ ನಗರ ವಲಯದ ಹೆಮ್ಮಿಗೆಪುರ ವಾರ್ಡ್ ನಲ್ಲಿ ಫೆ.3ರಿಂದ ಜಾರಿಗೆ ತರಲಾಗಿದೆ. ಬಳಿಕ ಹಂತ ಹಂತವಾಗಿ ಇತರ ವಾರ್ಡ್ ಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ.

ಪಾಲಿಕೆಯ ಹೆಮ್ಮಿಗೆಪುರ ವಾರ್ಡ್ (198) ವ್ಯಾಪ್ತಿಗೆ ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮ ಮತ್ತು ಉತ್ತರಹಳ್ಳಿ ಮನವರ್ತೆಕಾವಲ್ ಗ್ರಾಮದ ಭಾಗಶಃ ಪ್ರದೇಶಗಳ ಸರ್ವೆ ನಂಬರ್‌ಗಳನ್ನು ಪಾಲಿಕೆ ಆಡಳಿತ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿರುತ್ತದೆ. ಈ ಪ್ರದೇಶವನ್ನು ಹೆಮ್ಮಿಗೆಪುರ ವಾರ್ಡ್‌ನಲ್ಲಿ ಇ-ಆಸ್ತಿ ತಂತ್ರಾಂಶವನ್ನು ಫೆ.3ರಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ. 

ಈ ಹಿನ್ನಲೆಯಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಸ್ವತ್ತುಗಳ ಖಾತೆ ನೋಂದಾವಣೆ, ಖಾತೆ ವರ್ಗಾವಣೆ, ನಮೂನೆ-ಎ (Form-A) ಅಥವಾ ನಮೂನೆ-ಬಿ (Form-B) ವಹಿಯ ಪ್ರತಿಗಳನ್ನು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿಯೇ ನಿರ್ವಹಿಸಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಡಿಜಿಟಲ್ ಸಹಿಯುಳ್ಳ ನಮೂನೆ -ಎ ಅಥವಾ ನಮೂನೆ ಬಿ ನ್ನು ಕಡ್ಡಾಯವಾಗಿ ತಂತ್ರಾಂಶದಿಂದ ತೆಗೆದು ತೆರಿಗೆದಾರರಿಗೆ ನೀಡುವಂತೆ ಕಚೇರಿ ಆದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇನ್ನು ಮುಂದೆ ಕೈಬರಹದ ಖಾತಾ ಪ್ರಮಾಣ ಪತ್ರ ಮತ್ತು ಉದೃತ ಭಾಗವನ್ನು ನೀಡುವುದನ್ನು ಫೆ.3ರಿಂದ ಸಂಪೂರ್ಣವಾಗಿ ನಿಷೇಧಿಸಿದೆ. ಹೀಗಾಗಿ ಇ-ಆಸ್ತಿ ತಂತ್ರಾಂಶದಲ್ಲಿ ಹೊಸದಾಗಿ ನಮೂನೆ-ಎ / ನಮೂನೆ ಬಿ ಸೃಜಿಸುವವರೆಗೂ ಸಕಾಲ ತಂತ್ರಾಂಶದ ಮೂಲಕ ಎಲ್ಲಾ ಖಾತಾ ಸೇವೆಗಳಿಗೆ ಕೈಬರಹದ ಮೂಲಕ ಉತ್ತರ ಪತ್ರವನ್ನು ಮಾತ್ರ ನೀಡತಕ್ಕದ್ದು. ತದನಂತರ ಇಂತಹ ಸ್ವತ್ತುಗಳ ವಿವರಗಳನ್ನು ಕಡ್ಡಾಯವಾಗಿ ಇ ಆಸ್ತಿ ತಂತ್ರಾಂಶದಲ್ಲಿ ನಮೂದಿಸಿ ನಮೂನೆ-ಎ / ನಮೂನೆ – ಬಿ ವಿತರಿಸಬೇಕು. ಇನ್ನುಳಿದ ವಾರ್ಡ್‌ಗಳಲ್ಲಿ ಹಂತಹಂತವಾಗಿ ಈ ಪದ್ಧತಿಯನ್ನು ಜಾರಿಗೊಳಿಸಲಾಗುವುದು.

ಒಂದು ವೇಳೆ ಫೆ.2 ರ ನಂತರ ಕೈ ಬರಹದ ಸಹಿಯುಳ್ಳ ಹಿಂಬರಹವನ್ನು ತೆರಿಗೆದಾರರಿಗೆ ವಿತರಿಸಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಖಡಕ್ ಆದೇಶ ಮಾಡಿದ್ದಾರೆ.

ಸರ್ಕಾರದ ಆದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕಂದಾಯ ಇಲಾಖೆಯು ನೀಡಲಾಗುತ್ತಿರುವ ಸೇವೆಗಳನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ, ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಲು ಸೂಚಿಸಲಾಗಿರುತ್ತದೆ. 

ಬಿಬಿಎಂಪಿ ಹಾಗೂ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಪಾಲಿಕೆಯ ಕಾಯ್ದೆ ಹಾಗೂ ನಿಯಮಾವಳಿಗೆ ಅನ್ವಯವಾಗುವಂತೆ ಇ-ಆಸ್ತಿ ತಂತ್ರಾಂಶವನ್ನು (E-Aasthi Software) ಅಭಿವೃದ್ಧಿಪಡಿಸಲಾಗುತ್ತಿರುತ್ತದೆ.

WhatsApp Join our WhatsApp Channel
Previous Post

Bharath Ratna 2024 | ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

Next Post

Taxi Uniform Rate | ಅಗ್ರಿಗೇಟರ್ ಕಂಪನಿ ಹಾಗೂ ಟ್ಯಾಕ್ಸಿ ಚಾಲಕರಿಂದ ಪ್ರಯಾಣಿಕರ ಸುಲಿಗೆಗೆ ಬ್ರೇಕ್ : ಸಾರಿಗೆ ಇಲಾಖೆಯಿಂದ ಏಕರೂಪ ದರ ನಿಗದಿ 

Next Post

Taxi Uniform Rate | ಅಗ್ರಿಗೇಟರ್ ಕಂಪನಿ ಹಾಗೂ ಟ್ಯಾಕ್ಸಿ ಚಾಲಕರಿಂದ ಪ್ರಯಾಣಿಕರ ಸುಲಿಗೆಗೆ ಬ್ರೇಕ್ : ಸಾರಿಗೆ ಇಲಾಖೆಯಿಂದ ಏಕರೂಪ ದರ ನಿಗದಿ 

ವಿಧಾನಸೌಧದ ಸಾಂದರ್ಭಿಕ ಚಿತ್ರ

Stamp Duty Rate Hike | ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಳವಾಗಿದ್ದಾಯ್ತು : ಈಗ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಹೆಚ್ಚಳದ ಬರೆ ಎಳೆದ ಸರ್ಕಾರ

Please login to join discussion

Like Us on Facebook

Follow Us on Twitter

Recent News

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಜಸ್ಟ್ ಕ್ಲೀನ್ ಬೆಂಗಳೂರು’: ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಬೃಹತ್ ಅಭಿಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

August 1, 2026

Lokayukta News | ಪಾಲಿಕೆಯೇ ಟಿಪ್ಪರ್ ಖರೀದಿಸಿ ಕಸ ವಿಲೇವಾರಿ ಮಾಡಲಿ: 5 ನಗರ ಪಾಲಿಕೆಗಳಿಗೆ ಲೋಕಾಯುಕ್ತರ ಖಡಕ್ ಸೂಚನೆ

August 1, 2026

BDA News | ಬಿಡಿಎ ಲಂಚಾವತಾರ: ಎನ್‌ಪಿಕೆಎಲ್ ರೈತರಿಗೆ ನಿವೇಶನ ನೀಡಲು ಲಂಚ ಕೇಳಿದ ಎಇಇ, ನೋಟಿಸ್ ಜಾರಿ

July 31, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group