Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus
    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Tiger Claw | ಹುಲಿ ಉಗುರು ಹಾಗೂ ಇನ್ನಿತರ ವನ್ಯಜೀವಿಗಳ ಅಂಗಾಂಗಗಳನ್ನು ಯಾರೇ ಅಕ್ರಮವಾಗಿ ಹೊಂದಿದ್ದರೂ ಕಠಿಣ ಕಾನೂನು ಕ್ರಮ : ಈಶ್ವರ ಖಂಡ್ರೆ

ರಾಜ್ಯದಲ್ಲಿ ಹಲವು ಗಣ್ಯರ ಬಳಿಯೂ ಹುಲಿ ಉಗುರಿನ ಸರಗಳಿವೆ ಎಂಬ ಬಗ್ಗೆ ಸಾಕಷ್ಟು ದೂರುಗಳ ಹಿನ್ನಲೆ | ವನ್ಯಜೀವಿ ಉತ್ಪನ್ನ ಮಾರಾಟ ತಡೆಗೆ ಉನ್ನತಾಧಿಕಾರ ಸಮಿತಿ ರಚನೆ - ಈಶ್ವರ ಖಂಡ್ರೆ

by Bengaluru Wire Desk
October 25, 2023
in News Wire, Public interest
Reading Time: 1 min read
0
ಬೀದರ್ ನಲ್ಲಿಂದು ವನ್ಯಜೀವಿ ಅಂಗಾಂಗಳ ದಾಸ್ತಾನು, ಸಂಗ್ರಹ ಮತ್ತಿತರ ವಿಚಾರಗಳ ಬಗ್ಗೆ ಮಾಧ್ಯಮಗಳೊಂದಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡುತ್ತಿರುವ ಚಿತ್ರ.

ಬೆಂಗಳೂರು, ಅ.25 www.bengaluruwire.com : ಹುಲಿ ಉಗುರು, ಹುಲಿ ಹಲ್ಲು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನ ಜಾಗೃತಿ ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.

ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿದ್ದು, ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (APCCF) ನೇತೃತ್ವದಲ್ಲಿ ಸಮಿತಿ ರಚಿಸುವಂತೆ ನಿರ್ದೇಶಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ (ದೂರು) ಪ್ರಕರಣಗಳು, ಕಾನೂನಿನಡಿಯಲ್ಲಿ ಕೈಗೊಂಡಿರುವ ಕ್ರಮ ಹಾಗೂ ಹಾಲಿ ದಾಖಲಾಗಿರುವ ಮತ್ತು ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಒಂದು ವಾರದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಿದ್ದಾರೆ.

ಅರಣ್ಯ ಇಲಾಖೆಯವರು ಪ್ರಕರಣವೊಂದರಲ್ಲಿ ಕಳ್ಳಬೇಟೆಗಾರರಿಂದ ವಶಪಡಿಸಿಕೊಂಡ ಹುಲಿ ಉಗುರು ಮತ್ತು ಹಲ್ಲುಗಳ ಸಾಂದರ್ಭಿಕ ಚಿತ್ರ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಇರುವ ಲಾಕೆಟ್ ಧರಿಸಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದರು. ಆ ನಂತರ ಹಲವು ಗಣ್ಯರ ಬಳಿಯೂ ಹುಲಿ ಉಗುರಿನ ಸರ ಇದೆ ಎಂಬ ಬಗ್ಗೆ ದೂರುಗಳು ಬರುತ್ತಿದ್ದು, ರಾಜ್ಯದಾದ್ಯಂತ ವನ್ಯಜೀವಿಗಳ ಯಾವುದೇ ಅಂಗಾಂಗ ಹೊಂದಿದ ವಸ್ತುಗಳ ಸಂಗ್ರಹಣೆ, ಮಾರಾಟ, ದಾಸ್ತಾನನ್ನು ಸಂಪೂರ್ಣ ನಿಯಂತ್ರಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವರು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು:

ಈ ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ವನ್ಯ ಜೀವಿಯ ಯಾವುದೇ ಅಂಗಾಂಗದ ಉತ್ಪನ್ನಗಳನ್ನು ಅಕ್ರಮವಾಗಿ ಹೊಂದುವುದು ಅಪರಾಧವಾಗುತ್ತದೆ. ಈ ಬಗ್ಗೆ ದೂರು ಬಂದರೆ ಇಲಾಖೆ ವತಿಯಿಂದ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುತ್ತದೆ ಎಂದೂ ಅವರು ಬೀದರ್ ನಲ್ಲಿಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮೈಸೂರಿನಲ್ಲಿಂದು ಹುಲಿ ಉಗುರು ಧರಿಸಿದ ಬಗ್ಗೆ ನಟರಾದ ದರ್ಶನ್ ಹಾಗೂ ಜಗ್ಗೇಶ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

Mysore Dasara 2023 Live | ಮೈಸೂರಿನ ಜಗದ್ವಿಖ್ಯಾತ 414ನೇ ದಸರಾ ಜಂಬೂಸವಾರಿ ನೇರಪ್ರಸಾರ : ನಿಮ್ಮ ಮೊಬೈಲ್ ನಲ್ಲಿ ನೋಡಿ!!

Next Post

KPSC Exams | ಲೋಕಸೇವಾ ಆಯೋಗದ ವಿವಿಧ ಮೂರು ನೇಮಕಾತಿಗಳಿಗೆ ಒಂದೇ ದಿನ ಪರೀಕ್ಷೆ : ದಿನಾಂಕ ಬದಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ

Next Post
ಕೆಪಿಎಸ್ ಸ್ಸಿ ಕೇಂದ್ರ ಕಚೇರಿ ಕಟ್ಟಡ

KPSC Exams | ಲೋಕಸೇವಾ ಆಯೋಗದ ವಿವಿಧ ಮೂರು ನೇಮಕಾತಿಗಳಿಗೆ ಒಂದೇ ದಿನ ಪರೀಕ್ಷೆ : ದಿನಾಂಕ ಬದಲಿಸಲು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ

Power News | ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿ : ಸಚಿವ ಕೆ.ಜೆ.ಜಾರ್ಜ್

Please login to join discussion

Like Us on Facebook

Follow Us on Twitter

Recent News

CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026

Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

September 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d