Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

  • Bengaluru Focus

    ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರಿನ ಲ್ಯಾಂಡ್ ಮಾರ್ಕ್ ಗೆ ಕುತ್ತು? : ಬಸವನಗುಡಿ ವಾರ್ಡ್ ಇನ್ಮುಂದೆ  ದೊಡ್ಡ ಗಣಪತಿ ವಾರ್ಡ್, ಹನುಮಂತನಗರ ವಾರ್ಡ್ ಗವಿಗಂಗಾಧರೇಶ್ವರ ಹೆಸರಿಗೆ ಬದಲಾವಣೆ – ಬಿಬಿಎಂಪಿ 225 ವಾರ್ಡ್ ಪುನರ್ವಿಂಗಡಣೆಯಲ್ಲಿ 16 ವಾರ್ಡ್ ಗಳ ಹೆಸರು ಬದಲು

ಬಿಜೆಪಿ ಶಾಸಕರು ಪ್ರತಿನಿಧಿಸುವ ಮೂರು ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ವಾರ್ಡ್ ಗಳ ಹೆಸರು ಬದಲಾವಣೆ

by Bengaluru Wire Desk
September 25, 2023
in Bengaluru Focus, Public interest
Reading Time: 2 mins read
0
ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರಿನ ಪಕ್ಷಿನೋಟ ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.25 www.bengaluruwire.com : ಕಾಂಗ್ರೆಸ್ ನೇತೃತ್ವದ ಸರ್ಕಾರ ಬೃಹತ್ ಬೆಂಗಳೂರು ನಗರ ಪಾಲಿಕೆ (BBMP)ಯಲ್ಲಿ 225 ವಾರ್ಡ್ ಪುನರ್ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಸೋಮವಾರ ಪ್ರಕಟಸಿದ್ದು (ಸೆ.25),  ಕರಡು ಅಧಿಸೂಚನೆಯಲ್ಲಿದ್ದ 16 ವಾರ್ಡ್ ಹೆಸರುಗಳನ್ನು ಅಂತಿಮವಾಗಿ ಬದಲಿಸಿದೆ.

ಈ 16 ವಾರ್ಡ್ ಗಳ ಪೈಕಿ 3 ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ವಾರ್ಡ್‌ಗಳ ಹೆಸರನ್ನು‌ ಮುಲಾಜಿಲ್ಲದೆ ಬದಲಾಯಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ (ಶಾಸಕ ಕೆ.ಗೋಪಾಲಯ್ಯ), ರಾಜಾಜಿನಗರ (ಶಾಸಕ ಎಸ್.ಸುರೇಶ್ ಕುಮಾರ್) ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ (ಶಾಸಕ ಎಲ್.ಎ ರವಿಸುಬ್ರಮಣ್ಯ) ದಲ್ಲಿ ತಲಾ ಮೂರು ವಾರ್ಡ್ ಗಳ ಹೆಸರು ಬದಲಾವಣೆಯಾಗಿದೆ. ಅದರಲ್ಲೂ ಬಸವನಗುಡಿಯ ಕ್ಷೇತ್ರದಲ್ಲಿ 198ನೇ ವಾರ್ಡ್ ಬಸವನಗುಡಿ ಹೆಸರನ್ನು ದೊಡ್ಡ ಗಣಪತಿಯೆಂದೂ, ಹಲವು ದಶಕಗಳಿಂದ ಸ್ಥಳೀಯ ಜನರಿಗೆ ಹಾಗೂ ಬೆಂಗಳೂರಿನ ಸಂಸ್ಕೃತಿ ಹೆಗ್ಗುರುತಿನ ಹೆಸರಿದ್ದ 200ನೇ ವಾರ್ಡ್ ಗಿರಿನಗರ ಹೆಸರನ್ನು ಸ್ವಾಮಿ ವಿವೇಕಾನಂದ ವಾರ್ಡ್ ಎಂದೂ ಹಾಗೂ ಬಸವನಗುಡಿಗೆ ಕಲಶಪ್ರಾಯವಾಗಿದ್ದ 196ನೇ ವಾರ್ಡ್ ಹನುಮಂತನಗರ ಹೆಸರನ್ನು ಗವಿಗಂಗಾಧರೇಶ್ವರ ಹೆಸರಿಗೆ ಬದಲಾಯಿಸಲಾಗಿದೆ.

ಈ ಹಿಂದೆ 198 ವಾರ್ಡ್ ಹಾಗೂ 243 ವಾರ್ಡ್ ಮಾಡಿದಾಗಲೂ ಗಿರಿನಗರ, ಹನುಮಂತನಗರ ಹಾಗೂ ಬಸವನಗುಡಿ ಹೆಸರುಗಳು ವಾರ್ಡ್ ಪುನರ್ವಿಂಗಡಣೆ ಮಾಡಿದ್ದರೂ ಹಳೆಯ ಹೆಸರುಗಳನ್ನು ತೆಗೆದಿರಲಿಲ್ಲ. ಇದೀಗ 225 ವಾರ್ಡ್ ಗಳ ಅಂತಿಮ ಅಧಿಸೂಚನೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಸರ್ಕಸ್ ಮಾಡಿದೆ. 16 ವಾರ್ಡ್ ಗಳ ಹೆಸರು 225 ವಾರ್ಡ್ ಗಳ ಪುನರ್ ವಿಂಗಡಣೆ ಕರಡು ತಯಾರಿಸುವಾಗ ಇದ್ದ ಹೆಸರು ಅಂತಿಮ ಅಧಿಸೂಚನೆಯಲ್ಲಿ ಬದಲಾವಣೆ ಮಾಡಲಾಗಿದೆ.

16 ವಾರ್ಡ್ ಗಳ ಹೆಸರು ಬದಲಾಗಿರುವ ವಿವರ :

ಕ್ರಮ ಸಂಖ್ಯೆವಿಧಾನಸಭಾ ಕ್ಷೇತ್ರಪುನರ್ವಿಂಗಡಣೆಯಾದ ವಾರ್ಡ್ ಸಂಖ್ಯೆ ಮತ್ತು ಹೆಸರು (ಆವರಣದಲ್ಲಿರುವುದು ಹಳೆಯ ಹೆಸರು)
1)ಮಹಾಲಕ್ಷ್ಮಿಲೇಔಟ್46. ರಾಜೀವ್ ನಗರ (ಮಾರಪ್ಪನಪಾಳ್ಯ)
 47. ಡಾ.ಪುನೀತ್ ರಾಜ್ ಕುಮಾರ್ (ನಂದಿನಿ ಲೇಔಟ್)
 50. ನಾಲ್ವಡಿ ಕೃಷ್ಣರಾಜ ಒಡೆಯರ್ (ಡಾ.ಪುನೀತ್ ರಾಜ್ ಕುಮಾರ್)
2)ರಾಜಾಜಿನಗರ130. ಶ್ರೀ ರಾಮಮಂದಿರ (ಪ್ರಕಾಶ್ ನಗರ)
 131. ಶಿವನಗರ (ಶ್ರೀರಾಮಮಂದಿರ)
 132. ರಾಜಾಜಿನಗರ (ಶಿವನಗರ)
3)ಬಸವನಗುಡಿ196. ಗವಿಗಂಗಾಧರೇಶ್ವರ (ಹನುಮಂತನಗರ)
 198. ದೊಡ್ಡ ಗಣಪತಿ (ಬಸವನಗುಡಿ)
 200. ಸ್ವಾಮಿ ವಿವೇಕಾನಂದ (ಗಿರಿನಗರ)
4)ಮಹದೇವಪುರ98. ಹೂಡಿ (ಬೆಲತ್ತೂರು)
 99. ಭೈರತಿ (ಹೂಡಿ)
5)ಯಶವಂತಪುರ27. ಲಿಂಗಧೀರನಹಳ್ಳಿ (ಬ್ಯಾಡರಹಳ್ಳಿ)
6)ಸರ್ವಜ್ಞನಗರ83.ಸುಬ್ಬಯ್ಯನಪಾಳ್ಯ (ಕೆಎಸ್ ಎಫ್ ಸಿ ಲೇಔಟ್)
7)ಶಿವಾಜಿನಗರ118. ಸಂಪಂಗಿರಾಮನಗರ (ಎಸ್.ಆರ್.ನಗರ)
8)ಶಾಂತಿನಗರ167. ಅಶೋಕ್ ನಗರ (ಶಾಂತಲಾ ನಗರ)
9)ಚಿಕ್ಕಪೇಟೆ165. ಬಿ.ವೆಂಕಟರೆಡ್ಡಿ ನಗರ (ಸೋಮೇಶ್ವರ ನಗರ)

ನಿರೀಕ್ಷೆಯಂತೆಯೇ ನಗರಾಭಿವೃದ್ಧಿ ಇಲಾಖೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸಂಬಂಧಿಸಿದಂತೆ 225 ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ಆ.18 ರಂದು ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿತ್ತು. ಈ ಕರಡಿನ ವಾರ್ಡ್ ವಾರು ಪುನರ್ ವಿಂಗಡಣೆ ಕುರಿತಂತೆ ಸಾರ್ವಜನಿಕರು – ಸಂಸ್ಥೆಗಳಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಿತ್ತು. ಬಿಬಿಎಂಪಿ ವಾರ್ಡುಗಳ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್, ಆಗಸ್ಟ್ 8ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸರ್ಕಾರಕ್ಕೆ ಆಗಸ್ಟ್ 14ರಂದು ವಾರ್ಡ್ ವಾರು ಕರಡು ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದ್ದರು. ಇದನ್ನು ಒಪ್ಪಿದ ಸರ್ಕಾರವು 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿತ್ತು.

ಬಿಬಿಎಂಪಿ ವ್ಯಾಪ್ತಿಗೆ 2021ರ ನವೆಂಬರ್ 20ರಂದು ವಾರ್ಡುಗಳ ಪುನರ್ ವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನ ಅನ್ವಯ, ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು 243 ವಾರ್ಡುಗಳಾಗಿ ವಿಂಗಡಣೆಗೊಳಿಸಿ ಅಧಿಸೂಚಿಸಲಾಗಿತ್ತು. ಆದರೆ ಈ ಅಧಿಸೂಚನೆಯನ್ನು ಪ್ರಶ್ನಿಸಿ, ಅದರ ವಿರುದ್ಧ ದಾಖಲಾಗಿದ್ದ ರಿಟ್ ಅರ್ಜಿಗಳನ್ನು, ಹೈಕೋರ್ಟ್ 2022ರ ಸೆಪ್ಟೆಂಬರ್ 16ರ ಆದೇಶದಲ್ಲಿ ವಜಾಗೊಳಿಸಿತ್ತು. ಈ ಆದೇಶವನ್ನು, ಪ್ರಶ್ನಿಸಿ ಮಾಜಿ ಮೇಯರ್ ಬಿ.ಎಸ್. ಮಂಜುನಾಥ ರೆಡ್ಡಿ ಮತ್ತು ಇತರರು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ರಿಟ್ ಅಪೀಲು ದಾಖಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠ ಈ ವರ್ಷದ ಜೂನ್ 19ರಂದು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡಣೆ ಕುರಿತಂತೆ  ನಿಗದಿತ ಮಾರ್ಗಸೂಚಿಗಳು ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ 12 ವಾರಗಳ ಸಮಯವನ್ನು ನೀಡಿತ್ತು. ಇದರ ಆಧಾರದ ಮೇಲೆ  ರಾಜ್ಯ ಸರ್ಕಾರವು ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ಗಳ ಪುನರ್ ವಿಂಗಡಣಾ ಆಯೋಗವನ್ನು ಜೂನ್ 23ರಂದು ಪುನರ್ ರಚಿಸಿ ಆದೇಶಿಸಿತ್ತು.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರ ನವೆಂಬರ್ 20ರಂದು 243 ಬಿಬಿಎಂಪಿ ಕೌನ್ಸಿಲರ್ ಗಳನ್ನು ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದು ಪಾಲಿಕೆ ಪುರಪಿತೃಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿತ್ತು. ಇದರ ಆಧಾರದ ಮೇಲೆ ಪ್ರಸ್ತುತ 225 ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿದ್ದು, ಸೆ.25ರಂದು ಈ ಬಗ್ಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಸೋಮವಾರದಿಂದಲೇ ನಗರದಲ್ಲಿ 225 ವಾರ್ಡ್ ಗಳು ಅಧಿಕೃತವಾಗಿ ಚಾಲ್ತಿಗೆ ಬಂದಂತಾಗಿದೆ.

ಬ್ರಾಂಡ್ ಬೆಂಗಳೂರಿನ ಮೂಲ ಹೆಸರುಗಳ ಬದಲಾವಣೆ ಬಗ್ಗೆ ಮಾಜಿ ಮೇಯರ್ ಹೇಳಿದ್ದೇನು?:

“ಐವತ್ತು ವರ್ಷಗಳ ಹಿಂದೆ ಬಸವನಗುಡಿ ವಾರ್ಡ್ ಹೆಸರು ಬಸವೇಶ್ವರ ಎಂದಾಗಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಈ ವಾರ್ಡ್ ಹೆಸರನ್ನು ಬಸವನಗುಡಿ ಎಂದು ಹೆಸರಿಡಲಾಯಿತು. ಈಗ ದೊಡ್ಡ ಗಣಪತಿ ಎಂದು ಹೆಸರು ಬದಲಾಯಿಸಲಾಗಿದೆ. ಹನುಮಂತ ನಗರ ವಾರ್ಡ್ ನಲ್ಲಿ ಶ್ರೀರಾಮ ಹಾಗೂ ಹನುಮಂತನನ್ನು ಅಪ್ಪಿಕೊಂಡಿಕೊಂಡಿರುವ ಬೃಹದಾಕಾರದ ಪ್ರತಿಮೆಯಿರುವ ಬಹಳ ಹಳೆಯ ದೇವಸ್ಥಾನದಿಂದ ಹನುಮಂತನಗರ ಎಂದೇ ಎಲ್ಲೆಡೆ ಜನ ಜನಿತವಾಗಿತ್ತು. ಈಗ ಅದನ್ನು ಗವಿಗಂಗಾಧರೇಶ್ವರ ಎಂದು ಬದಲಾವಣೆ ಮಾಡಲಾಗಿದೆ. ಅದೇ ರೀತಿ 40 ವರ್ಷಗಳ ಹಿಂದೆ ಕೃಷ್ಣಭಟ್ ಎಂಬುವರು ಲೇಔಟ್ ಮಾಡಿದ್ದ ಸ್ಥಳವನ್ನು ಗಿರಿನಗರ ಮಾಡಲಾಗಿತ್ತು. ಆ ಹೆಸರು ಈಗ ಸ್ವಾಮಿ ವಿವೇಕಾನಂದ ಎಂದು ಹೆಸರು ನೀಡಿದ್ದಾರೆ. ಬೆಂಗಳೂರಿನ ಹೆಗ್ಗುರುತಾಗಿರುವ ಈ ಹೆಸರುಗಳನ್ನು ಬದಲಾಯಿಸಿದ್ದು ಬಹಳ ಬೇಸರದ ಸಂಗತಿ. ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸಿ ಕೌನ್ಸಿಲ್ ಆಡಳಿತ ಬಂದರೆ ಸಾಮಾನ್ಯ ನಾಗರೀಕರಿಗೆ ಅನುಕೂಲವಾಗಲಿದೆ.”

– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಕಾವೇರಿ ನೀರು ವಿವಾದ : ನಾಳೆ “ಬೆಂಗಳೂರು ಬಂದ್” ಗೆ 250ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ : ಸೆ.29ಕ್ಕೂ “ಕರ್ನಾಟಕ ಬಂದ್” – ಸಂಘಟನೆಗಳ ಮಧ್ಯೆ ಮೂಡದ ಒಮ್ಮತ

Next Post

BW SPECIAL | BBMP NAMMA CLINIC | ಬಿಬಿಎಂಪಿಯ ನಮ್ಮ ಕ್ಲಿನಿಕ್ ಗಳಲ್ಲಿ ಈವರೆಗೆ 4.84 ಲಕ್ಷ ಹೊರ ರೋಗಿಗಳಿಂದ ಆರೋಗ್ಯ ಸೇವೆ ಬಳಕೆ : ಔಷಧಿ ಕೊರತೆ ನಿವಾರಿಸಲು ಆಗ್ರಹ

Next Post
ಬಿಬಿಎಂಪಿ ನಮ್ಮ ಕ್ಲಿನಿಕ್ ವೊಂದರ ಸಾಂದರ್ಭಿಕ ಚಿತ್ರ.

BW SPECIAL | BBMP NAMMA CLINIC | ಬಿಬಿಎಂಪಿಯ ನಮ್ಮ ಕ್ಲಿನಿಕ್ ಗಳಲ್ಲಿ ಈವರೆಗೆ 4.84 ಲಕ್ಷ ಹೊರ ರೋಗಿಗಳಿಂದ ಆರೋಗ್ಯ ಸೇವೆ ಬಳಕೆ : ಔಷಧಿ ಕೊರತೆ ನಿವಾರಿಸಲು ಆಗ್ರಹ

WildLife News | ಮೈಸೂರು ಸಿಐಡಿ ಅರಣ್ಯ ಘಟಕದಿಂದ ಮನೆಯಲ್ಲಿ ಅಕ್ರಮವಾಗಿ 9 ಜಾತಿಯ ಹಾವು ಹಾಗೂ ಅಪರೂಪದ ಬೆಕ್ಕುಗಳನ್ನು ಸಾಕಿದ್ದ ಓರ್ವನ ಬಂಧನ

Please login to join discussion

Like Us on Facebook

Follow Us on Twitter

Recent News

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೋಲ್ಕತ್ತಾದ ಲೆನಿನ್, ಕಾರ್ಲ್ ಮಾರ್ಕ್ಸ್ ರಸ್ತೆಗಳ ಹೆಸರು ಬದಲು? ಪಶ್ಚಿಮ ಬಂಗಾಳ ಸರ್ಕಾರದಿಂದ ಸಿದ್ಧತೆ

September 14, 2026

ಕನಕಪುರ ಹಾಸ್ಟೆಲ್‌ಗೆ ಡಿಕೆಶಿ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಊಟ ಸವಿದ ಸಿಎಂ

September 14, 2026
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d