Sunday, June 28, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ತೋತಾಪುರಿ ಮಾವು ಬೆಳೆಗಾರರಿಗೆ ಗುಡ್ ನ್ಯೂಸ್: ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ (PDPS) ರೈತರ ನೋಂದಣಿ ಇಂದಿನಿಂದ ಶುರು

    Venezuela Earthquake Updates | ವೆನೆಜುವೆಲಾದಲ್ಲಿ ಶತಮಾನದ ಭೀಕರ ಭೂಕಂಪ: 235 ಸಾವು, 4,300ಕ್ಕೂ ಹೆಚ್ಚು ಮಂದಿಗೆ ಗಾಯ, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ

    Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    ವಿಧಾನಪರಿಷತ್ ಚುನಾವಣೆ: ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕಮಾಂಡ್

    ಬೆಂಗಳೂರು: ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಖಾಸಗಿ ಕ್ಲಿನಿಕ್ ವೈದ್ಯನ ವಿರುದ್ಧ ಎಫ್.ಐ.ಆರ್. ದಾಖಲು

    Science News | ​ಮುಂಗಾರಿನಾಟ: ಮಹಾರಾಷ್ಟ್ರದಲ್ಲಿ ಒಣಹವೆ, ಆದರೆ ರಾಜಸ್ಥಾನದ ಮರುಭೂಮಿಯಲ್ಲಿ ಭಾರಿ ಮಳೆ

    ಸೈಬರ್ ಕ್ರೈಮ್ ಕುರಿತ ಸಾಂದರ್ಭಿಕ ಚಿತ್ರ

    ಸೈಬರ್ ವಂಚಕರಿಗೆ ಸಿಂಹಸ್ವಪ್ನವಾದ ಕರ್ನಾಟಕ ಪೊಲೀಸ್: ಕೋಟ್ಯಂತರ ರೂಪಾಯಿ ಉಳಿಸಲು ಬ್ಯಾಂಕ್ ಖಾತೆಗಳು ಬ್ಲಾಕ್

  • Bengaluru Focus

    ಭೂ ಮಾಲೀಕರ ತ್ಯಾಗ ಸ್ಮರಣೆಗೆ ‘ವಾಲ್ ಆಫ್ ಗ್ರಾಟಿಟ್ಯೂಡ್’: ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಘೋಷಣೆ

    ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಇಳಿಕೆಗೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಹೋಟೆಲುಗಳ ಸಂಘ ಆಗ್ರಹ

    ​ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಜೂ. 28ರಂದು ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ‘ನಶಾಮುಕ್ತ ಭಾರತ ಸಂಕಲ್ಪ’ ಕಾರ್ಯಕ್ರಮ

    ಜುಲೈ 1ರಿಂದ ಬೆಂಗಳೂರಿನಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’: ಫುಟ್‌ಪಾತ್ ಒತ್ತುವರಿ, ಗುಜರಿ ವಾಹನಗಳಿಗೆ ಬ್ರೇಕ್

    ಕೃಷಿ ವಿವಿ ಕುಲಪತಿ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ಆರೋಪ: ಶೋಧನಾ ಸಮಿತಿ ರದ್ದತಿಗೆ ಆಗ್ರಹಿಸಿ ಮಧ್ಯಪ್ರವೇಶಕ್ಕೆ ಲೋಕಾಯುಕ್ತಕ್ಕೆ ಮನವಿ

    PRCI National Awards | ​ಪಿಆರ್ ಸಿಐ ನೆಕ್ಸ್ಟ್ ಜೆನ್ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಬಿಡಿಎಗೆ ಒಲಿದ ನಗರಾಡಳಿತದ ಅತ್ಯುತ್ತಮ ಪ್ರಶಸ್ತಿ ಗರಿ

    ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಎಆರ್ ರಸ್ತೆ ಕುಸಿತ: ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಬಿಡಿಎ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

    Metro News | ​ಸಿಲಿಕಾನ್ ವ್ಯಾಲಿಯೋ ಅಥವಾ ಮೂಲಸೌಕರ್ಯ ವೈಫಲ್ಯದ ರಾಜಧಾನಿಯೋ? ಜೂ.23 ಮೆಟ್ರೋ ಸ್ಥಗಿತವಾದ ಬೆನ್ನಲ್ಲೇ ಲಾರಿ, ಟ್ರಾಕ್ಟರ್ ಹತ್ತಿದ್ದರು ಐಟಿ ಉದ್ಯೋಗಿಗಳು!

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಡಿಜಿಟಲ್‌ ಪಾವತಿ ಗೊಂದಲ: ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಸ್ಪಷ್ಟನೆ ; ಯುಪಿಐ ನಿಲ್ಲಿಸಿದರೆ ತೆರಿಗೆ ತಪ್ಪದು

ನೋಟಿಸ್‌ಗೆ ಆತಂಕ ಬೇಡ, ತೆರಿಗೆ ನಿಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಇಲಾಖೆ; ರಾಜಿ ತೆರಿಗೆ ಪದ್ಧತಿಗೆ ಹೆಚ್ಚಿನ ಒತ್ತು

by Bengaluru Wire Desk
July 17, 2025
in News Wire, Public interest
Reading Time: 1 min read
0
ಜಿಎಸ್ ಟಿ ತೆರಿಗೆ ಕುರಿತ ಗ್ರಾಫಿಕ್ಸ್ ಚಿತ್ರ (ಸಾಂದರ್ಭಿಕ ಚಿತ್ರ)

ಜಿಎಸ್ ಟಿ ತೆರಿಗೆ ಕುರಿತ ಗ್ರಾಫಿಕ್ಸ್ ಚಿತ್ರ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಜು.17 www.bengaluruwire.com : ಡಿಜಿಟಲ್‌ ಪಾವತಿ ಗೇಟ್‌ವೇಗಳ ಮೂಲಕ ವಹಿವಾಟು ನಡೆಸುವ ವರ್ತಕರಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಇಲಾಖೆಯು ಪೂರಕ ಮಾಹಿತಿ ನೀಡುವ ಮೂಲಕ ಈ ಗೊಂದಲಗಳಿಗೆ ತೆರೆ ಎಳೆದಿದೆ. ವರ್ತಕರು ಆತಂಕಪಡದೆ, ತೆರಿಗೆ ನಿಯಮಗಳನ್ನು ಅರ್ಥಮಾಡಿಕೊಂಡು ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.

ಜಿಎಸ್‌ಟಿ ನೋಂದಣಿ ನಿಯಮಗಳು ಏನು ಹೇಳುತ್ತವೆ? :

ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 22ರ ಅನ್ವಯ, ಸರಕುಗಳ ಪೂರೈಕೆದಾರರ ಒಟ್ಟು ವಹಿವಾಟು ಒಂದು ಹಣಕಾಸು ವರ್ಷದಲ್ಲಿ ನಗದು, ಯುಪಿಐ, ಪಿಓಎಸ್ ಮೆಷಿನ್, ಬ್ಯಾಂಕ್ ಖಾತೆ ಅಥವಾ ಇನ್ನಾವುದೇ ವಿಧಾನಗಳಿಂದ ₹40 ಲಕ್ಷಗಳನ್ನು ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯ. ಅದೇ ರೀತಿ, ಸೇವೆಗಳ ಪೂರೈಕೆದಾರರ ವಹಿವಾಟು ₹20 ಲಕ್ಷಗಳನ್ನು ಮೀರಿದರೆ ನೋಂದಣಿ ಪಡೆಯುವುದು ಅನಿವಾರ್ಯ. ಈ ಒಟ್ಟು ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ (Taxable) ಹಾಗೂ ತೆರಿಗೆ ವಿನಾಯಿತಿ ಪಡೆದ (Exempted) ಸರಕು ಮತ್ತು ಸೇವೆಗಳು ಎರಡೂ ಸೇರಿರುತ್ತವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಜಿಎಸ್‌ಟಿ ಅಡಿಯಲ್ಲಿ ಸಾಮಾನ್ಯ (Regular) ನೋಂದಣಿ  ಪಡೆದರೆ, ತೆರಿಗೆ ಬಾಧ್ಯತೆಯು ಕೇವಲ ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲೆ ಪಾವತಿಸಿದ ಇನ್‌ಪುಟ್ ಟ್ಯಾಕ್ಸ್ (Input Tax) ಅನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದರಿಂದ ಪಾವತಿಸಬೇಕಾದ ನಿವ್ವಳ ತೆರಿಗೆ ಮೊತ್ತವು ಕಡಿಮೆ ಇರುತ್ತದೆ ಎಂದು ಇಲಾಖೆ ತಿಳಿಸಿದೆ.

ರಾಜಿ ತೆರಿಗೆ ಪದ್ಧತಿ – ಒಂದು ಉತ್ತಮ ಆಯ್ಕೆ :

ತಮ್ಮ ವಾರ್ಷಿಕ ವಹಿವಾಟು ₹1.50 ಕೋಟಿಗಿಂತ ಕಡಿಮೆ ಇರುವ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ಒಂದು ಸರಳ ಆಯ್ಕೆಯನ್ನು ನೀಡಿದೆ: ರಾಜಿ ತೆರಿಗೆ ಪದ್ಧತಿ (Composition Tax Scheme). ಈ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ, ವರ್ತಕರು ತಮ್ಮ ವಹಿವಾಟಿನ ಮೇಲೆ ಕೇವಲ ಶೇ. 0.5 SGST ಮತ್ತು ಶೇ. 0.5 CGST ಅಂದರೆ ಒಟ್ಟಾರೆ ಶೇ. 1ರಷ್ಟು ತೆರಿಗೆಯನ್ನು ಪಾವತಿಸಬಹುದು. ಆದರೆ, ನೋಂದಣಿ ಪಡೆಯದೆ ನಡೆಸುವ ವಹಿವಾಟಿಗೆ ಈ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ ಎಂಬುದನ್ನು ಇಲಾಖೆ ಎಚ್ಚರಿಸಿದೆ.

ಗೊಂದಲ ಬೇಡ, ಸಹಕರಿಸಿ :

ನೋಟಿಸ್‌ ಬಂದಿರುವ ವರ್ತಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ಸಂಬಂಧಪಟ್ಟ ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಬೇಕು. ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲಿಸಿ, ಜಿಎಸ್‌ಟಿ ನಿಯಮಗಳು ಮತ್ತು ಅದಕ್ಕೆ ಲಭ್ಯವಿರುವ ಪರಿಹಾರಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ, ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳನ್ವಯ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಇಲಾಖೆ ಭರವಸೆ ನೀಡಿದೆ.

ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ವರ್ತಕರಲ್ಲಿ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಸೂಚಿಸಲಾಗಿದೆ. ಅಲ್ಲದೆ, ಹೊಸದಾಗಿ ನೀಡಲಾಗುವ ನೋಂದಣಿಯು ತೆರಿಗೆದಾರರಿಗೆ ಯಾವುದೇ ತೊಂದರೆಯಾಗದಂತೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಯುಪಿಐ ನಿಲ್ಲಿಸಿದರೆ ತೆರಿಗೆ ತಪ್ಪದು :

ಇಲಾಖೆಯು ನೋಟಿಸು ನೀಡಿದ ಬೆನ್ನಲ್ಲೇ ಕೆಲವು ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಯುಪಿಐ ಕೇವಲ ಒಂದು ಪಾವತಿ ಮಾರ್ಗ ಮಾತ್ರ.

ಯಾವುದೇ ರೂಪದಲ್ಲಾಗಲೀ ವಹಿವಾಟು ನಡೆಸಿದಲ್ಲಿ ಅಂತಹ ವರ್ತಕರಿಂದ ಜಿಎಸ್‌ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದೆ.

ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಇದು ಒಟ್ಟು ವರ್ತಕರಲ್ಲಿ ಶೇ. 90ರಷ್ಟಿದೆ. ಉಳಿದ ಶೇ. 10ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ಸಮಂಜಸವಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಜಿಎಸ್‌ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. 

ವಾರ್ಷಿಕ ವಹಿವಾಟು ₹40 ಲಕ್ಷ (ಸರಕುಗಳ ಪೂರೈಕೆದಾರರು) ಅಥವಾ ₹20 ಲಕ್ಷ (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Join our WhatsApp Channel
Previous Post

Viral Video | Human Interest News | ನರಿಗಳ ಕುಟುಂಬಕ್ಕೆ ಮರುಭೂಮಿಯಲ್ಲಿ ಐಸ್‌ ವಾಟರ್: ಮಾನವೀಯತೆ ಮೆರೆದ ಅನಾಮಿಕ ಪ್ರಾಣಿಪ್ರಿಯ

Next Post

ಜೈವಿಕ ವಿಘಟನೆಯಾಗುವ ಕೈಚೀಲಗಳಿಗೆ ರಾಜ್ಯ ಸಚಿವ ಸಂಪುಟ ಸಮ್ಮತಿ: ಪರಿಸರ ಸ್ನೇಹಿ ಹೆಜ್ಜೆ

Next Post

ಜೈವಿಕ ವಿಘಟನೆಯಾಗುವ ಕೈಚೀಲಗಳಿಗೆ ರಾಜ್ಯ ಸಚಿವ ಸಂಪುಟ ಸಮ್ಮತಿ: ಪರಿಸರ ಸ್ನೇಹಿ ಹೆಜ್ಜೆ

ಮೆಟಾದಿಂದ ಕನ್ನಡ ಅನುವಾದ ದೋಷಕ್ಕೆ ಕ್ಷಮೆ, ಸಮಸ್ಯೆ ಪರಿಹಾರದ ಘೋಷಣೆ

Please login to join discussion

Like Us on Facebook

Follow Us on Twitter

Recent News

ಭೂ ಮಾಲೀಕರ ತ್ಯಾಗ ಸ್ಮರಣೆಗೆ ‘ವಾಲ್ ಆಫ್ ಗ್ರಾಟಿಟ್ಯೂಡ್’: ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಘೋಷಣೆ

June 27, 2026

ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಇಳಿಕೆಗೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಹೋಟೆಲುಗಳ ಸಂಘ ಆಗ್ರಹ

June 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಭೂ ಮಾಲೀಕರ ತ್ಯಾಗ ಸ್ಮರಣೆಗೆ ‘ವಾಲ್ ಆಫ್ ಗ್ರಾಟಿಟ್ಯೂಡ್’: ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಘೋಷಣೆ

June 27, 2026

ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಇಳಿಕೆಗೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಹೋಟೆಲುಗಳ ಸಂಘ ಆಗ್ರಹ

June 27, 2026

ತೋತಾಪುರಿ ಮಾವು ಬೆಳೆಗಾರರಿಗೆ ಗುಡ್ ನ್ಯೂಸ್: ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ (PDPS) ರೈತರ ನೋಂದಣಿ ಇಂದಿನಿಂದ ಶುರು

June 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group