ಬೆಂಗಳೂರು, ಜೂ.6 www.bengaluruwire.com : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR) ಕಾರ್ಯದರ್ಶಿಯಾಗಿ ಸುಧೀರ್ಘ ಅಧ್ಯಯನ ರಜೆಯ ಮೇಲೆ ತೆರಳಿದ್ದ ಐಪಿಎಸ್ ಅಧಿಕಾರಿ ಎಂ.ಹೇಮಂತ್ ನಿಂಬಾಳ್ಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ನೇಮಕ ಮಾಡಿದೆ.
1998ನೇ ಬ್ಯಾಚಿನ ಕರ್ನಾಟಕ ಕೆಡರ್ ನ ಐಪಿಎಸ್ ಅಧಿಕಾರಿಯಾಗಿರುವ ನಿಂಬಾಳ್ಕರ್ ಅವರ ಈ ನೂತನ ಹುದ್ದೆಯು ಮೈಸೂರು ದಕ್ಷಿಣ ವ್ಯಾಪ್ತಿಯ ಐಜಿಪಿ ಹುದ್ದೆ ಮತ್ತು ಜವಾಬ್ದಾರಿಗೆ ತತ್ಸಮಾನವಾಗಿದೆಯೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
13.01.2022 ರಂದು ಸರ್ಕಾರದ ಆದೇಶದಂತೆ ಸುದೀರ್ಘ ಅವಧಿಗೆ ಅಧ್ಯಯನ ರಜೆಯ ಮೇಲೆ ಐಪಿಎಸ್ ಅಧಿಕಾರಿ ಎಂ.ಹೇಮಂತ್ ನಿಂಬಾಳ್ಕರ್ ತೆರಳಿದ್ದರು. ರಾಜ್ಯ ಸರ್ಕಾರ ಈ ರಜೆಯನ್ನು ತಕ್ಷಣದಿಂದಲೇ ರದ್ದುಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಮಹತ್ವದ ಹುದ್ದೆಯ ಜವಾಬ್ದಾರಿಯನ್ನು ಈ ಹಿರಿಯ ಐಪಿಎಸ್ ಅಧಿಕಾರಿಗೆ ವಹಿಸಿಕೊಟ್ಟಿದೆ.
ಈ ಹಿಂದೆ ಡಿಐಪಿಆರ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿನೋತ್ ಪ್ರಿಯಾ ಅವರನ್ನು ಆ ಸೇವೆಯಿಂದ ಬಿಡುಗಡೆ ಮಾಡಿದೆ.





















