Monday, October 5, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಹೆಚ್ಚಳ: ಜೇಬಿಲ್ಲದ ಸಮವಸ್ತ್ರ, ಕಠಿಣ ನಿಯಮ!

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    Revenue News | ಕರ್ನಾಟಕದಲ್ಲಿ ಜಮೀನು ಸರ್ವೆ ಶುಲ್ಕ ದಿಢೀರ್ ಹೆಚ್ಚಳ: ಇಲ್ಲಿದೆ ಹೊಸ ದರಗಳ ಮಾಹಿತಿ

    BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

    LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

    ಅರಬ್ಬೀ ಸಮುದ್ರದಲ್ಲಿ ಭರ್ಜರಿ ಬೇಟೆ: ₹3,000 ಕೋಟಿ ಮೌಲ್ಯದ ಡ್ರಗ್ಸ್ ವಶ, 5 ಪಾಕಿಸ್ತಾನಿ ಪ್ರಜೆಗಳ ಬಂಧನ

    ​ತುಂಗಭದ್ರಾ ಹಿನ್ನೀರಿನಿಂದ ಅಕ್ರಮವಾಗಿ ನೀರು ಕದಿಯುತ್ತಿರುವ ಉಕ್ಕು ಕಾರ್ಖಾನೆ ವೈರಲ್ ವಿಡಿಯೋ: ಅನ್ನದಾತರ ಆಕ್ರೋಶ!

  • Bengaluru Focus

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

    BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

    BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

120 ಕೋಟಿ ನಾಯಿ ಸಂತಾನಹರಣ ಗೋಲ್ಮಾಲ್, ನಾಪತ್ತೆಯಾದ 20 ಲಕ್ಷ ಗಿಡಗಳು: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ

ಬೆಂಗಳೂರಿನಲ್ಲಿ ಮರಗಳ ಗಣತಿ ಮತ್ತು ಬೀದಿನಾಯಿ ಸಂತಾನಹರಣ ಚಿಕಿತ್ಸೆಯಲ್ಲಿ ನಡೆದಿರುವ ಭಾರಿ ಅಕ್ರಮಗಳ ಬಗ್ಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

by Bengaluru Wire Desk
June 30, 2026
in Bengaluru Focus
Reading Time: 1 min read
0

ಬೆಂಗಳೂರು, ಜೂ.30 www.bengaluruwire.com: ನಗರದ ಬೀದಿ ನಾಯಿಗಳ ಸಮಸ್ಯೆ, ವೃಕ್ಷ ಗಣತಿಯಲ್ಲಿನ ಕಳ್ಳಾಟ, ಫುಟ್‌ಪಾತ್ ತೆರವು ಮತ್ತು ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು, ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ​ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಕಳೆದ 8 ವರ್ಷಗಳಲ್ಲಿ 3 ಲಕ್ಷ ನಾಯಿಗಳಿಗೆ ಸಂತಾನಹರಣ (ABC) ಮಾಡಲಾಗಿದ್ದು, ಇದಕ್ಕಾಗಿ ಬರೋಬ್ಬರಿ 120 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಸಚಿವರು ಪಶುಪಾಲನಾ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

​”ಹಣ ಎಲ್ಲಿಗೆ ಹೋಯ್ತು? ಸಂತಾನ ಹರಣ ಯಾರಿಗೆ ಮಾಡಿದ್ರು ಅನ್ನೋ ಸಂಶಯವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಂದಿನ ಆರು ತಿಂಗಳಲ್ಲಿ 90,000 ಎಬಿಸಿ ಗುರಿ ಮುಟ್ಟಬೇಕು. ವರ್ಷಕ್ಕೆ 30 ಸಾವಿರದ ಬದಲು, ಸತತ ಮೂರು ವರ್ಷ 90,000 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಈ ಸಮಸ್ಯೆಗೆ ದೀರ್ಘಾವಧಿ ಪರಿಹಾರ ಸಿಗಲಿದೆ ಎಂದರು. ಪ್ರಸ್ತುತ 6,799 ನಾಯಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗಿದೆ.

​ನೆಟ್ಟ 20 ಲಕ್ಷ ಗಿಡಗಳು ಎಲ್ಲಿ ಹೋದವು?:

​2008ರಿಂದ ಈಚೆಗೆ ನಗರದಲ್ಲಿ 20 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಶೇ. 85ರಷ್ಟು ಪೂರ್ಣಗೊಂಡಿರುವ ‘ಟ್ರೀ ಸೆನ್ಸಸ್’ (ವೃಕ್ಷ ಗಣತಿ) ಪ್ರಕಾರ ನಗರದಲ್ಲಿರುವ ಒಟ್ಟು ಮರಗಳ ಸಂಖ್ಯೆ ಕೇವಲ 9 ಲಕ್ಷ. “ಹಾಗಾದರೆ 2008ಕ್ಕೂ ಮುನ್ನ ನೆಟ್ಟ ಮರಗಳು, ಮೈಸೂರು ಮಹಾರಾಜರು ನೆಟ್ಟ ಮರಗಳು ಮತ್ತು ಬಾಕಿ ಗಿಡಗಳೆಲ್ಲ ಎಲ್ಲಿ ಹೋದವು?” ಎಂದು ಸಚಿವರು ಪ್ರಶ್ನಿಸಿದ್ದಾರೆ. ಇದಕ್ಕೆ ಅಧಿಕಾರಿಗಳಿಂದ ಸರಿಯಾದ ಉತ್ತರ ಸಿಕ್ಕಿಲ್ಲ.

​ಒಂದು ಗಿಡ ನೆಡಲು ಸರ್ಕಾರಕ್ಕೆ ಸರಾಸರಿ 2,300 ರೂ. ಖರ್ಚಾಗುತ್ತಿದೆ. (ಗುಂಡಿ ತೋಡಲು 300 ರೂ., ಗಿಡಕ್ಕೆ 150 ರೂ., ಟ್ರೀ ಗಾರ್ಡ್‌ಗೆ 452 ರೂ., ಕಡ್ಡಿಗೆ 60 ರೂ., ಕಾವಲುಗಾರನಿಗೆ 160 ರೂ., ಹಾಗೂ ಮೂರು ವರ್ಷ ನೀರು ಹಾಕಲು 1400 ರೂ.). ಈ ವರ್ಷದಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಬೇಡಿಕೆಗೆ ಅನುಗುಣವಾಗಿ ಗಿಡಗಳನ್ನು ನೀಡಲಾಗುವುದು. 64 ಸಾವಿರ ಗಿಡ ನೆಡಲು 9 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

​ಸಹಾಯ್ ಪೋರ್ಟಲ್‌ನಲ್ಲಿ ದೂರು ನೀಡಿ: ವಯಸ್ಸಾಗಿರುವ, ಅಪಾಯಕ್ಕೆ ಎಡೆಮಾಡುವ ಅಥವಾ ಒಣಗಿರುವ ಮರಗಳಿದ್ದರೆ ಸಾರ್ವಜನಿಕರು ಜಿಬಿಎ ‘ಸಹಾಯ್’ ಪೋರ್ಟಲ್ (Sahaya Portal) ಮೂಲಕ ಆನ್‌ಲೈನ್‌ನಲ್ಲಿ ದೂರು ನೀಡಬಹುದು ಎಂದು ಸಚಿವರು ಮಾಹಿತಿ ನೀಡಿದರು.

​ಫುಟ್‌ಪಾತ್ ವ್ಯಾಪಾರಿಗಳ ಸಂಪೂರ್ಣ ಒಕ್ಕಲೆಬ್ಬಿಸುವಿಕೆ ಇಲ್ಲ:

​ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ನಗರದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ (ಮುಖ್ಯ ರಸ್ತೆಗಳು) ರಸ್ತೆಗಳ 2,000 ಕಿ.ಮೀ ಉದ್ದದ ಫುಟ್‌ಪಾತ್ ಒತ್ತುವರಿಯನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಫುಟ್‌ಪಾತ್ ವ್ಯಾಪಾರಿಗಳನ್ನು ನಾವು ಸಂಪೂರ್ಣವಾಗಿ ಒಕ್ಕಲೆಬ್ಬಿಸುತ್ತಿಲ್ಲ. ಬೆಂಗಳೂರಿನಲ್ಲಿ ವರ್ಷಕ್ಕೆ 300 ಪಾದಚಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ರಸ್ತೆಗಳನ್ನು ಬಿಟ್ಟು ಬೇರೆಡೆ ವ್ಯಾಪಾರ ಮಾಡಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.

​ಬಿಜೆಪಿ ಶಾಸಕರಿಗೆ ಅನುದಾನ ತಾರತಮ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ:

​ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಕೃಷ್ಣ ಬೈರೇಗೌಡ, “ಬಿಜೆಪಿ ಸರ್ಕಾರವಿದ್ದಾಗ ಅವರ ಶಾಸಕರಿಗೆ ಸರಾಸರಿ 480 ಕೋಟಿ ರೂ. ಮತ್ತು ಕಾಂಗ್ರೆಸ್ ಶಾಸಕರಿಗೆ ಕೇವಲ 110 ಕೋಟಿ ರೂ. ಅನುದಾನ ನೀಡಲಾಗಿತ್ತು. ಕಾಂಗ್ರೆಸ್ ಶಾಸಕರಿಗೆ ಕೇವಲ ಶೇ. 20ರಷ್ಟು ಅನುದಾನ ಕೊಟ್ಟು ಅನ್ಯಾಯ ಮಾಡಿದ್ದ ಬಿಜೆಪಿಗೆ ಈಗ ಮಾತನಾಡುವ ನೈತಿಕತೆ ಇಲ್ಲ,” ಎಂದರು.

​ಕಳೆದ ನಾಲ್ಕು ವರ್ಷಗಳಿಂದ ವಿರೋಧ ಪಕ್ಷದ ಕ್ಷೇತ್ರಗಳ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ನಾವು ಸರಾಸರಿ ಶೇ. 50ರಷ್ಟು ಅನುದಾನ ನೀಡುವ ಮೂಲಕ ಆ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಭಾರಿ ಅನಾಹುತ ಪಾರು, ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ. ಖಾದರ್ ಆದೇಶ

Next Post

GBA News | ಚಿಕ್ಕಪೇಟೆಯಲ್ಲಿ ಅನಧಿಕೃತ ಕಟ್ಟಡಗಳ ಸಮಗ್ರ ಸರ್ವೆಗೆ ಹೈ-ಪವರ್ ಟೀಮ್ ರಚನೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ

Next Post

GBA News | ಚಿಕ್ಕಪೇಟೆಯಲ್ಲಿ ಅನಧಿಕೃತ ಕಟ್ಟಡಗಳ ಸಮಗ್ರ ಸರ್ವೆಗೆ ಹೈ-ಪವರ್ ಟೀಮ್ ರಚನೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ

VTU News | ಇತಿಹಾಸ ಸೃಷ್ಟಿಸಿದ ವಿಟಿಯು: ಪರೀಕ್ಷೆ ಮುಗಿದ ಕೇವಲ 5 ನಿಮಿಷದಲ್ಲಿ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ

Please login to join discussion

Like Us on Facebook

Follow Us on Twitter

Recent News

ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

October 4, 2026

Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

October 3, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

October 4, 2026

Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

October 3, 2026

ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಹೆಚ್ಚಳ: ಜೇಬಿಲ್ಲದ ಸಮವಸ್ತ್ರ, ಕಠಿಣ ನಿಯಮ!

October 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d