Wednesday, July 1, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಭಾರಿ ಅನಾಹುತ ಪಾರು, ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ. ಖಾದರ್ ಆದೇಶ

    Uniform Civil Code | ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿಂದು ‘ಯುಸಿಸಿ’ ಮಸೂದೆ ಮಂಡನೆ: ಬಿಕ್ಕಟ್ಟಿನಲ್ಲಿರುವ ಟಿಎಂಸಿಗೆ ಹೊಸ ಸವಾಲು

    ಹಿರಿಯ ಪತ್ರಕರ್ತ ಎನ್. ಎಸ್. ಶಂಕರ್ ನಿಧನ: ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ತೀವ್ರ ಸಂತಾಪ

    ಬೆಂಗಳೂರು ಪ್ರವಾಸ ಮುಕ್ತಾಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜ್ಯಪಾಲರಿಂದ ಆತ್ಮೀಯ ಬೀಳ್ಕೊಡುಗೆ

    ತೋತಾಪುರಿ ಮಾವು ಬೆಳೆಗಾರರಿಗೆ ಗುಡ್ ನ್ಯೂಸ್: ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ (PDPS) ರೈತರ ನೋಂದಣಿ ಇಂದಿನಿಂದ ಶುರು

    Venezuela Earthquake Updates | ವೆನೆಜುವೆಲಾದಲ್ಲಿ ಶತಮಾನದ ಭೀಕರ ಭೂಕಂಪ: 235 ಸಾವು, 4,300ಕ್ಕೂ ಹೆಚ್ಚು ಮಂದಿಗೆ ಗಾಯ, ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ

    Health News | ​ಜೂ. 28ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 64 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ನೇಮಕ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂ ಗುಡ್‌ನ್ಯೂಸ್‌: ಒಸಿ ಇಲ್ಲದ ಮನೆಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕ, ಜುಲೈ 6 ಕಡೆ ದಿನ

  • Bengaluru Focus

    ಸತ್ಯಾಂಶ ತಿಳಿಯದೇ ಸುದ್ದಿ ಹಾಕಬೇಡಿ, ಅದು ವೈಯಕ್ತಿಕ ಜೀವನಕ್ಕೆ ಹಾನಿ ಮಾಡುತ್ತದೆ: ಪತ್ರಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Gruha Jyothi Scheme | ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಜುಲೈ 1ರಿಂದ ಮನೆ-ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ, ದಾಖಲೆಗಳ ಪರಿಶೀಲನೆ ಶುರು

    GBA News | ಚಿಕ್ಕಪೇಟೆಯಲ್ಲಿ ಅನಧಿಕೃತ ಕಟ್ಟಡಗಳ ಸಮಗ್ರ ಸರ್ವೆಗೆ ಹೈ-ಪವರ್ ಟೀಮ್ ರಚನೆ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ

    120 ಕೋಟಿ ನಾಯಿ ಸಂತಾನಹರಣ ಗೋಲ್ಮಾಲ್, ನಾಪತ್ತೆಯಾದ 20 ಲಕ್ಷ ಗಿಡಗಳು: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ

    GBA News | ​ಜುಲೈ 1ರಿಂದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು: 90 ಕಿ.ಮೀ ಫುಟ್‌ಪಾತ್ ಅಭಿವೃದ್ಧಿಗೆ ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಜಿ ಸೂಚನೆ

    GBA News | ಬೆಂಗಳೂರು: ನಾಳೆಯಿಂದ ಮನೆ-ಮನೆಗೆ ಬಿಎಲ್‌ಒ ಭೇಟಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮನವಿ

    IISC Study Report | ನಮ್ಮ ಮೆಟ್ರೋ 3ನೇ ಹಂತದ ಡಬಲ್-ಡೆಕ್ಕರ್ ಯೋಜನೆ ಆರ್ಥಿಕವಾಗಿ ನಷ್ಟ: ಐಐಎಸ್ಸಿ ಅಧ್ಯಯನ ವರದಿ

    ಬೆಂಗಳೂರು ಪ್ರವಾಸ ಮುಕ್ತಾಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜ್ಯಪಾಲರಿಂದ ಆತ್ಮೀಯ ಬೀಳ್ಕೊಡುಗೆ

    ಬೆಂಗಳೂರು: ₹1139 ಕೋಟಿ ವೆಚ್ಚದ ‘ಹೆಬ್ಬಾಳ ಸುರಂಗ ರಸ್ತೆ’ ಕಾಮಗಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BBMP Election | ಲೋಕಸಭಾ ಚುನಾವಣೆಗೂ‌ ಮುನ್ನ ಬಿಬಿಎಂಪಿ ಎಲೆಕ್ಷನ್

ಪ್ರಸ್ತುತ ಅಧಿಸೂಚನೆಯಂತೆ 243 ವಾರ್ಡ್ ಗಳಿದ್ದು, ಆ ವಾರ್ಡ್‌ಗಳಿಗೆ ಹೊಸದಾಗಿ ಮೀಸಲಾತಿ ಸಿದ್ದಪಡಿಸಿ, ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಸಲು ಬಿಬಿಎಂಪಿ ಚುನಾವಣಾ ಪೂರ್ವ ಸಮಿತಿ ಅಭಿಪ್ರಾಯಪಟ್ಟಿದೆ.

by Bengaluru Wire Desk
June 7, 2023
in Bengaluru Focus
Reading Time: 1 min read
0
ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

ಬೆಂಗಳೂರು, ಜೂ.7 www.bengaluruwire.com : ಎರಡು ವರ್ಷ ಎಂಟು ತಿಂಗಳುಗಳಿಗೂ ಹೆಚ್ಚು ಕಾಲದಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಸನ್ನಿಹಿತವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ್ದ ಕಾಂಗ್ರೆಸ್ ಗೆ ಪಾಲಿಕೆಯಲ್ಲೂ ಇದೇ ಅಲೆಯನ್ನು ಬಳಸಿ ರಾಜಧಾನಿಯ ಆಡಳಿತ ಕೈವಶಪಡಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನೇಮಿಸಿದ್ದ 10 ಮಂದಿ ಸದಸ್ಯರ ‘ಬಿಬಿಎಂಪಿ ಚುನಾವಣಾ ಪೂರ್ವ ಸಮಿತಿ’ 243 ವಾರ್ಡ್ ಗಳಿಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಸಲು ಅಭಿಪ್ರಾಯ ಪಟ್ಟಿದೆ.

ಈ ಸಂಬಂಧ ಎರಡು ಮೂರು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಈ ಸಂಬಂಧ ವರದಿ ನೀಡಲಿದೆ ಎಂದು‌ ಕಾಂಗ್ರೆಸ್ ಪಕ್ಷದ ಉನ್ನತ‌ ಮೂಲಗಳು ತಿಳಿಸಿದೆ.

10 ಮಂದಿ ಸದಸ್ಯರ ‘ಬಿಬಿಎಂಪಿ ಚುನಾವಣಾ ಪೂರ್ವ ಸಮಿತಿ’ಯನ್ನು ಕೆಪಿಸಿಸಿ ಅಧ್ಯಕ್ಷರು ಮೇ.24ರಂದು ರಚಿಸಿ 15 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ‌ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದರು.

ಸೋಮವಾರ ರಾತ್ರಿ ನಿಗೂಢ ಸ್ಥಳದಲ್ಲಿ ನಡೆದ ಸಮಿತಿ ಸದಸ್ಯರ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಗಂಭೀರ ಚರ್ಚೆಯಾಯಿತು. ಆಗ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಮತ್ತೆ ಕೈಹಾಕುವ ಬದಲು ಹೇಗಿದ್ದರೂ ಬಿಬಿಎಂಪಿ ಕಾಯ್ದೆ ತಿದ್ದುಪಡಿ ಮಾಡಿ 243 ವಾರ್ಡ್‌ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈಗ ಕೇವಲ ಮೀಸಲಾತಿಯನ್ನು ಪ್ರಕಟಿಸಿ, ಈ ವರ್ಷದ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಸಿ ಇದರ ಲಾಭ ಪಡೆಯಬೇಕು ಎನ್ನುವ ಅಭಿಪ್ರಾಯ ಸಮಿತಿಯಲ್ಲಿ ವ್ಯಕ್ತವಾಯಿತು.

ಈ ಸಭೆಯಲ್ಲಿ ಪಾಲಿಕೆಯನ್ನು ಈ ಹಿಂದೆ ವಿ.ಸುಬ್ರಮಣ್ಯಮ್ ಅವರ ತಜ್ಞರ ಸಮಿತಿ ವರದಿಯಂತೆ ಎರಡು ಅಥವಾ ಮೂರು ಭಾಗಗಳಾಗಿ ಮಾಡುವ ಬಗ್ಗೆ ಚರ್ಚೆಯಾದರೂ, ಆ ಪ್ರಕ್ರಿಯೆಗೆ ಕೈ ಹಾಕಿದರೆ ಚುನಾವಣೆ ನಡೆಸಲು ತಡವಾಗುತ್ತದೆ. ಹಾಗಾಗಿ ಪ್ರಥಮವಾಗಿ ಪಾಲಿಕೆ ಚುನಾವಣೆ ನಡೆಸಿ ಬಳಿಕ ಪಾಲಿಕೆ ವಿಭಜನೆ ಬಗ್ಗೆ ಯೋಚಿಸೋಣ ಎಂಬ ಸಲಹೆಯೂ ವ್ಯಕ್ತವಾಯಿತು. ಯಾವುದಕ್ಕೂ ಕೂಡಲೇ ಮೀಸಲಾತಿ ಸಿದ್ದಪಡಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸುವ ಬಗ್ಗೆ  ಹಾಗೂ ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧವಿದೆ ಎಂಬುದನ್ನು ಕೋರ್ಟಿಗೆ ಮನದಟ್ಟು ಮಾಡಿಕೊಡಬೇಕು. ಮಾಡಲು ಸಮಿತಿ ಕೆಪಿಸಿಸಿಗೆ ಸಲ್ಲಿಸುವ ವರದಿಯಲ್ಲಿ ತಿಳಿಸಲಿದೆ ಎಂದು ಗೊತ್ತಾಗಿದೆ.

ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಯಲ್ಲಿ ಬಿಜೆಪಿಯು ತನಗೆ ಲಾಭವಾಗುವಂತೆ ಕಾಯ್ದೆಗೆ ತಿದ್ದುಪಡಿ‌ ತಂದು 243 ವಾರ್ಡ್ ಗಳನ್ನು ಮಾಡಿದೆ. ಅದನ್ನು ಈಗ ಪುನಃ ತಿದ್ದಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರೆಟರೆ ಕಾಂಗ್ರೆಸ್ ಆಡಳಿತದ ಮೇಲೆ ತಪ್ಪು ತಿಳುವಳಿಕೆ ಬರುವ ಸಾಧ್ಯತೆಯಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಮತ್ತಷ್ಟು ಕಗ್ಗಂಟಾಗುವ ಹಿನ್ನಲೆಯಲ್ಲಿ 243 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟಿಸಿ ಚುನಾವಣೆಗೆ ಹೋಗುವುದು ಲೇಸು. ಒಂದೊಮ್ಮೆ ಈ ಪ್ರಕ್ರಿಯೆ ತಡವಾದರೂ ಚುನಾವಣಾ ಆಯೋಗ ಮತ್ತೆ ಕೋರ್ಟಿಗೆ ಹೋಗಿ ಚುನಾವಣೆ ನಡೆಸಲು ಕೋರಬಹುದು. ಇದರ ಬದಲು ಸರ್ಕಾರ ಚುನಾವಣೆಗೆ ಸಿದ್ದವಾದರೆ ಒಳಿತು ಎಂಬ ಅಭಿಪ್ರಾಯ ಸಮಿತಿಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ಖಚಿತಪಡಿಸಿದೆ.

ಪಾಲಿಕೆ ಚುನಾವಣೆ ನಡೆಸುವ ಸಂಬಂಧ ಸಮತಿಯು ಅಡ್ವೊಕೇಟ್ ಜನರಲ್ ಬಳಿಯೂ ಅಭಿಪ್ರಾಯ ಪಡೆದುಕೊಂಡಿತ್ತು ಎಂದು ತಿಳಿದುಬಂದಿದೆ.

ಕೆಪಿಸಿಸಿ ರಚಿಸಿದ್ದ ‘ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ಯಲ್ಲಿ ಕಾಂಗ್ರೆಸ್‌ ನ ‘ಬಿಬಿಎಂಪಿ ಮೇ ಚುನಾವಣೆ ಪೂರ್ವ ತಯಾರಿ ಸಮಿತಿ’ ಯಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಬೈರತಿ ಸುರೇಶ್‌, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎನ್.ಎ. ಹ್ಯಾರೀಸ್, ಪ್ರಿಯಕೃಷ್ಣ, ಎ.ಎಸ್‌.ಪೊನ್ನಣ್ಣ, ಮಾಜಿ ಶಾಸಕ ರಮೇಶ್ ಬಾಬು, ಮಾಜಿ ಮೇಯರ್ ಪದ್ಮಾವತಿ ಸದಸ್ಯ ರಾಗಿದ್ದಾರೆ. ಮಾಜಿ ಮೇಯರ್ ಪಿ.ಆರ್.ರಮೇಶ್‌ ಸಂಚಾಲಕರಾಗಿದ್ದಾರೆ.

243 ವಾರ್ಡ್ ಗಳಿಗೆ ಪಾಲಿಕೆ ಚುನಾವಣೆ :
“ಬಿಬಿಎಂಪಿಗೆ 243 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ
ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ ತನ್ನ ಸಭೆಯಲ್ಲಿ ಅಭಿಪ್ರಾಯಪಟ್ಟಿದೆ. ಸದ್ಯದಲ್ಲೆ ಕೆಪಿಸಿಸಿ ನಿಗದಿಪಡಿಸಿದ ಕಾಲಾವಧಿಯಲ್ಲಿ ವರದಿ ಸಲ್ಲಿಕೆ‌ ಮಾಡುತ್ತೇವೆ”
– ರಾಮಲಿಂಗಾರೆಡ್ಡಿ, ಅಧ್ಯಕ್ಷರು, ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ

WhatsApp Join our WhatsApp Channel
Previous Post

Karwar Naval | ನೌಕಾಪಡೆಯಿಂದ ಕಾರವಾರದಲ್ಲಿ 100 ವರ್ಷ ಹಳೆಯ ಆಲದ ಮರ ಸ್ಥಳಾಂತರ

Next Post

BBMP General Transfers | ಬಿಬಿಎಂಪಿಯಲ್ಲೂ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ : ಹೇಗೆ ನಡೆಯುತ್ತೆ ಟ್ರಾನ್ಸ್ ಫರ್?

Next Post
ಬಿಬಿಎಂಪಿ ಕೇಂದ್ರ ಕಚೇರಿ, ಸಾಂದರ್ಭಿಕ ಚಿತ್ರ

BBMP General Transfers | ಬಿಬಿಎಂಪಿಯಲ್ಲೂ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ : ಹೇಗೆ ನಡೆಯುತ್ತೆ ಟ್ರಾನ್ಸ್ ಫರ್?

ಗೃಹಜ್ಯೋತಿ ಯೋಜನೆ ಜಾರಿ ಕುರಿತಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದರು.  ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಬೆಸ್ಕಾಂ ಎಂಡಿ ಮಹಂತೇಶ್ ಬೀಳಗಿ, ಹಣಕಾಸು ನಿರ್ದೇಶಕರಾದ ದರ್ಶನ್.ಜೆ ಪಾಲ್ಗೊಂಡಿದ್ದರು.

GRUHA JYOTHI SCHEME FAQ | ಗೃಹ ಜ್ಯೋತಿ ಯೋಜನೆಗೆ ಜೂನ್ 15 ರಿಂದ ಅರ್ಜಿ ಆಹ್ವಾನ: ಹೊಸ ಮನೆ ಕಟ್ಟಿದವರಿಗೆ ಹೊಸ ಯೋಜನೆ ಅನ್ವಯವಾಗುತ್ತಾ? ಸರಾಸರಿ ಬಳಕೆಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಏನಾಗುತ್ತೆ?

Please login to join discussion

Like Us on Facebook

Follow Us on Twitter

Recent News

ಸತ್ಯಾಂಶ ತಿಳಿಯದೇ ಸುದ್ದಿ ಹಾಕಬೇಡಿ, ಅದು ವೈಯಕ್ತಿಕ ಜೀವನಕ್ಕೆ ಹಾನಿ ಮಾಡುತ್ತದೆ: ಪತ್ರಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

July 1, 2026

ವಿಬಿ-ಜಿ ರಾಮ್ ಜಿ ಕಾಯ್ದೆ 2025: ವೇತನ ದರ ಪರಿಷ್ಕರಣೆ, ದೇಶಾದ್ಯಂತ ದಿನಗೂಲಿ ಮೊತ್ತವು ಇನ್ನುಮುಂದೆ ₹300 ಕ್ಕಿಂತ ಕಡಿಮೆ ಇರುವಂತಿಲ್ಲ

July 1, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸತ್ಯಾಂಶ ತಿಳಿಯದೇ ಸುದ್ದಿ ಹಾಕಬೇಡಿ, ಅದು ವೈಯಕ್ತಿಕ ಜೀವನಕ್ಕೆ ಹಾನಿ ಮಾಡುತ್ತದೆ: ಪತ್ರಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

July 1, 2026

ವಿಬಿ-ಜಿ ರಾಮ್ ಜಿ ಕಾಯ್ದೆ 2025: ವೇತನ ದರ ಪರಿಷ್ಕರಣೆ, ದೇಶಾದ್ಯಂತ ದಿನಗೂಲಿ ಮೊತ್ತವು ಇನ್ನುಮುಂದೆ ₹300 ಕ್ಕಿಂತ ಕಡಿಮೆ ಇರುವಂತಿಲ್ಲ

July 1, 2026
ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

Gruha Jyothi Scheme | ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಜುಲೈ 1ರಿಂದ ಮನೆ-ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ, ದಾಖಲೆಗಳ ಪರಿಶೀಲನೆ ಶುರು

June 30, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group