Monday, October 5, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಹೆಚ್ಚಳ: ಜೇಬಿಲ್ಲದ ಸಮವಸ್ತ್ರ, ಕಠಿಣ ನಿಯಮ!

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    Revenue News | ಕರ್ನಾಟಕದಲ್ಲಿ ಜಮೀನು ಸರ್ವೆ ಶುಲ್ಕ ದಿಢೀರ್ ಹೆಚ್ಚಳ: ಇಲ್ಲಿದೆ ಹೊಸ ದರಗಳ ಮಾಹಿತಿ

    BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

    ಅಕ್ರಮ ಚಿನ್ನ ಸಾಗಾಟ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

    LPG Price Hike | ​ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಶಾಕ್!

    ಅರಬ್ಬೀ ಸಮುದ್ರದಲ್ಲಿ ಭರ್ಜರಿ ಬೇಟೆ: ₹3,000 ಕೋಟಿ ಮೌಲ್ಯದ ಡ್ರಗ್ಸ್ ವಶ, 5 ಪಾಕಿಸ್ತಾನಿ ಪ್ರಜೆಗಳ ಬಂಧನ

    ​ತುಂಗಭದ್ರಾ ಹಿನ್ನೀರಿನಿಂದ ಅಕ್ರಮವಾಗಿ ನೀರು ಕದಿಯುತ್ತಿರುವ ಉಕ್ಕು ಕಾರ್ಖಾನೆ ವೈರಲ್ ವಿಡಿಯೋ: ಅನ್ನದಾತರ ಆಕ್ರೋಶ!

  • Bengaluru Focus

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

    BWSSB News | ನೀರಿಲ್ಲದಿದ್ದರೂ ಸ್ಪೀಡಾಗಿ ಓಡುತ್ತೆ ಮೀಟರ್: ಗಾಳಿಗೂ ಬಿಲ್ ವಸೂಲಿ ಮಾಡುತ್ತಾ ಬೆಂಗಳೂರು ಜಲಮಂಡಳಿ??

    BW SPECIAL | 83 ದಿನ ಕಳೆದ್ರೂ ಮುಚ್ಚದ ಗುಂಡಿ: ಅಧಿಕಾರಿಗಳ ಜಟಾಪಟಿಗೆ ರೋಸಿ ತಾವೇ ರಸ್ತೆ ಸರಿಪಡಿಸಿದ ಬೆಂಗಳೂರಿಗರು

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

ಬೆಂಗಳೂರು: ₹1139 ಕೋಟಿ ವೆಚ್ಚದ ‘ಹೆಬ್ಬಾಳ ಸುರಂಗ ರಸ್ತೆ’ ಕಾಮಗಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ

ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ ಸಿಬ್ಬಂದಿ ಕ್ವಾರ್ಟರ್ಸ್‌ವರೆಗೆ 2.22 ಕಿ.ಮೀ ಉದ್ದದ, 60 ಅಡಿ ಆಳದ 6 ಪಥಗಳ ಸುರಂಗ ಮಾರ್ಗ. ಖಾಸಗಿ ಜಾಗದ ಸ್ವಾಧೀನವಿಲ್ಲದೆ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ

by Bengaluru Wire Desk
June 28, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ಜೂ.28, www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಸಮಸ್ಯೆಯಾಗಿರುವ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಗರದ ಅತಿ ದೊಡ್ಡ ಟ್ರಾಫಿಕ್ ಬಾಟಲ್‌ನೆಕ್ ಎಂದೇ ಕುಖ್ಯಾತಿ ಪಡೆದಿರುವ ಹೆಬ್ಬಾಳ ಜಂಕ್ಷನ್‌ ಸಂಚಾರ ದಟ್ಟಣೆ ನಿವಾರಣೆಗೆ ಹೆಬ್ಬಾಳ ಸುರಂಗ ರಸ್ತೆ ಪರಿಹಾರ ಒದಗಿಸಲಿದೆ.

ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ (UAS) ಸಿಬ್ಬಂದಿ ಕ್ವಾರ್ಟರ್ಸ್‌ವರೆಗಿನ ನೂತನ ಸುರಂಗ ರಸ್ತೆ (Tunnel Road) ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.

​ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್‌ವರೆಗಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿತ್ಯ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು 1139 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ 6-ಪಥದ ಸುರಂಗ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

ಬಿಡಿಎ ವತಿಯಿಂದ ಶನಿವಾರ ಕೆಂಪೇಗೌಡ ಜಯಂತಿಂದು ಏರ್ಪಡಿಸಿದ ಅತಿ ಹೆಚ್ಚು ಸಸಿನೆಟ್ಟು ದಾಖಲೆ ನಿರ್ಮಿಸಿದ್ದಕ್ಕೆ ಗಿನ್ನೀಸ್ ದಾಖಲೆ ಪ್ರಮಾಣಪತ್ರವನ್ನು ಸಂಸ್ಥೆಯವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹ್ಯಾರೀಸ್ ಗೆ ಇಂದು ಹಸ್ತಾಂತರಿಸಿದರು.

​ಯೋಜನೆಯ ಪ್ರಮುಖ ವಿಶೇಷತೆಗಳು:

​ಸುರಂಗ ರಸ್ತೆಯ ಉದ್ದ: 2.228 ಕಿಲೋಮೀಟರ್ (ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ ಸಿಬ್ಬಂದಿ ಕ್ವಾರ್ಟರ್ಸ್‌ವರೆಗೆ).

​ಆಳ ಮತ್ತು ವಿನ್ಯಾಸ: ಭೂಮಿಯ ಒಳಗೆ ಸುಮಾರು 60 ಅಡಿ ಆಳದಲ್ಲಿ ನಿರ್ಮಾಣ.

​ರಸ್ತೆ ಸಾಮರ್ಥ್ಯ: 6 ಪಥದ ರಸ್ತೆ (ತಲಾ ಒಂದು ಮಾರ್ಗದಲ್ಲಿ ತಲಾ 3.5 ಮೀಟರ್ ಅಗಲ).

​ವೆಚ್ಚ ಮತ್ತು ಕಾಲಮಿತಿ: ಒಟ್ಟು ಅಂದಾಜು ವೆಚ್ಚ ₹1139 ಕೋಟಿ. ಕೇವಲ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ.

​ಭೂಸ್ವಾಧೀನ: ಈ ಯೋಜನೆಗಾಗಿ ಯಾವುದೇ ಖಾಸಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ ಎಂಬುದು ವಿಶೇಷ.

​ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಹಾಗೂ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಜೆಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪ್ರಾಧಿಕಾರದ ಆಯುಕ್ತ ಮಣಿವಣ್ಣನ್ ಸೇರಿದಂತೆ ಹಲವು ಬಿಡಿಎ ಅಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

​ಹೆಬ್ಬಾಳ ಜಂಕ್ಷನ್ – ಟ್ರಾಫಿಕ್, ಮೆಟ್ರೋ ಮತ್ತು ಭವಿಷ್ಯದ ಸವಾಲುಗಳು:

​ಹೆಬ್ಬಾಳ ಜಂಕ್ಷನ್ ಬೆಂಗಳೂರಿನ ಉತ್ತರ ಭಾಗದ ಹೆಬ್ಬಾಗಿಲು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (KIA) ಸಂಪರ್ಕಿಸುವ ಅತ್ಯಂತ ಪ್ರಮುಖ ಮಾರ್ಗವಾಗಿದೆ.

​ವಾಹನ ದಟ್ಟಣೆಯ ನೈಜ ಚಿತ್ರಣ:

ಪ್ರಸ್ತುತ ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರತೀ ಗಂಟೆಗೆ ಸರಾಸರಿ 25,000 ದಿಂದ 30,000ಕ್ಕೂ ಹೆಚ್ಚು ವಾಹನಗಳು (ಪೀಕ್ ಅವರ್‌ಗಳಲ್ಲಿ) ಸಂಚರಿಸುತ್ತಿವೆ. ಕೆಲವೊಮ್ಮೆ ಕೇವಲ 3 ಕಿಲೋಮೀಟರ್ ಉದ್ದದ ರಸ್ತೆಯನ್ನು (ಹೆಬ್ಬಾಳದಿಂದ ವಿಂಡ್ಸರ್ ಮ್ಯಾನರ್) ಕ್ರಮಿಸಲು ವಾಹನ ಸವಾರರು 70 ನಿಮಿಷಗಳಿಗೂ ಹೆಚ್ಚು ಕಾಲ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಮುಂಬರುವ 5-10 ವರ್ಷಗಳಲ್ಲಿ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದ್ದು, ಇಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಗಂಟೆಗೆ 45,000-50,000 ಗಡಿ ದಾಟುವ ಆತಂಕವಿದೆ.

​ಸಮನ್ವಯತೆಯ ಸವಾಲು (Multimodal Integration):

ಈ ಜಂಕ್ಷನ್ ಭವಿಷ್ಯದಲ್ಲಿ ಬೃಹತ್ ‘ಮಲ್ಟಿ-ಮೋಡಲ್ ಟ್ರಾನ್ಸಿಟ್ ಹಬ್’ (MMTH) ಆಗಿ ಮಾರ್ಪಾಡಾಗುತ್ತಿದೆ. ಈಗಾಗಲೇ ಹೆಬ್ಬಾಳ ಜಂಕ್ಷನ್‌ನಲ್ಲಿ ಬಹು-ಹಂತದ ಎಲಿವೇಟೆಡ್ ಕಾರಿಡಾರ್ (ಮೇಲ್ಸೇತುವೆ) ಅಸ್ತಿತ್ವದಲ್ಲಿದೆ. ಇದರ ಜೊತೆಗೆ ಪ್ರಸ್ತುತ ನಮ್ಮ ಮೆಟ್ರೋದ 2ನೇ ಹಂತದ (Phase 2B – Blue Line) ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂಬರುವ ಉಪನಗರ ರೈಲು (Suburban Rail) ಕೂಡ ಇದೇ ಜಂಕ್ಷನ್‌ನಲ್ಲಿ ಹಾದುಹೋಗಲಿದೆ.

​ಈ ಎಲ್ಲ ಬೃಹತ್ ಯೋಜನೆಗಳ ಜೊತೆಗೆ 60 ಅಡಿ ಆಳದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸುವುದು ತಾಂತ್ರಿಕವಾಗಿ ದೊಡ್ಡ ಸವಾಲಾಗಿದೆ. ಆದರೆ, ಮೆಟ್ರೋ ಪಿಲ್ಲರ್‌ಗಳು ಮತ್ತು ಅಸ್ತಿತ್ವದಲ್ಲಿರುವ ಮೇಲ್ಸೇತುವೆಗೆ ಯಾವುದೇ ಹಾನಿಯಾಗದಂತೆ, ಕಟ್-ಅಂಡ್-ಕವರ್ (Cut-and-cover) ತಂತ್ರಜ್ಞಾನ ಬಳಸಿ ಸುರಂಗ ರಸ್ತೆ ನಿರ್ಮಿಸಲು ತಜ್ಞರು ನಕ್ಷೆ ರೂಪಿಸಿದ್ದಾರೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡರೆ, ವಿಮಾನ ನಿಲ್ದಾಣದ ಕಡೆಗೆ ತೆರಳುವವರಿಗೆ ಸಿಗ್ನಲ್-ಮುಕ್ತ, ಸುಗಮ ಪ್ರಯಾಣ ಲಭ್ಯವಾಗಲಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಭೂ ಮಾಲೀಕರ ತ್ಯಾಗ ಸ್ಮರಣೆಗೆ ‘ವಾಲ್ ಆಫ್ ಗ್ರಾಟಿಟ್ಯೂಡ್’: ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಘೋಷಣೆ

Next Post

ಬೆಂಗಳೂರು ಪ್ರವಾಸ ಮುಕ್ತಾಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜ್ಯಪಾಲರಿಂದ ಆತ್ಮೀಯ ಬೀಳ್ಕೊಡುಗೆ

Next Post

ಬೆಂಗಳೂರು ಪ್ರವಾಸ ಮುಕ್ತಾಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜ್ಯಪಾಲರಿಂದ ಆತ್ಮೀಯ ಬೀಳ್ಕೊಡುಗೆ

ಹಿರಿಯ ಪತ್ರಕರ್ತ ಎನ್. ಎಸ್. ಶಂಕರ್ ನಿಧನ: ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ತೀವ್ರ ಸಂತಾಪ

Please login to join discussion

Like Us on Facebook

Follow Us on Twitter

Recent News

ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

October 4, 2026

Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

October 3, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

October 4, 2026

Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

October 3, 2026

ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಹೆಚ್ಚಳ: ಜೇಬಿಲ್ಲದ ಸಮವಸ್ತ್ರ, ಕಠಿಣ ನಿಯಮ!

October 3, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d