Saturday, November 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

    ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟ, 15 ದಿನಗಳ ಒಳಗೆ ಆಕ್ಷೇಪಣೆಗೆ ಅವಕಾಶ

    ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಗೂ ಮುನ್ನ ರಾಜಕೀಯ ಜಟಾಪಟಿ: ವೆಚ್ಚದ ಲೆಕ್ಕ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ, ಭಾಷಣ ಕಟ್ ಆಗಿದ್ದಕ್ಕೆ ಕೃಷ್ಣ ಬೈರೇಗೌಡ ಕಿಡಿ

    Vidhana Soudha

    ರಾಜ್ಯ ಸರ್ಕಾರದ 60 ನಿಗಮ-ಮಂಡಳಿಗಳಿಗೆ 428 ಮಂದಿ ನಿರ್ದೇಶಕರು, ಸದಸ್ಯರ ನೇಮಕ: ಇಲ್ಲಿದೆ ಸಂಪೂರ್ಣ ಪಟ್ಟಿ

    ಗುತ್ತಿಗೆ ವೈದ್ಯರ ಎತ್ತಂಗಡಿಗೆ ಬ್ರೇಕ್: ಡಿಎಚ್‌ಒಗಳಿಗೆ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ

    ಎಥನಾಲ್ ಪೆಟ್ರೋಲ್ ವಿವಾದ: ಕರ್ನಾಟಕ ಕಾಂಗ್ರೆಸ್ ಆರೋಪಕ್ಕೆ ಚೆಕ್ ಮೇಟ್ ಇಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    BIG News | ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದ ಬಂಪರ್ ಕೊಡುಗೆ: 1,364 ಔಷಧಗಳ ಬೆಲೆ ಇಂದಿನಿಂದ ಭಾರಿ ಇಳಿಕೆ; ಜಾಸ್ತಿ ಹಣ ಕೇಳಿದ್ರೆ ಹೀಗೆ ಮಾಡಿ

    ಕೋಯಮತ್ತೂರು: 4 ಜ್ಯುವೆಲ್ಲರಿ ಮಳಿಗೆಗಳ ಮೇಲೆ ಬಿಐಎಸ್ ದಾಳಿ, ₹3 ಕೋಟಿ ಮೌಲ್ಯದ ಚಿನ್ನ ಜಪ್ತಿ

    ಎಥೆನಾಲ್ ಗೊಂದಲಕ್ಕೆ ಕೇಂದ್ರವೇ ಹೊಣೆ: ಸಚಿವ ಎಂ.ಬಿ. ಪಾಟೀಲ ಕಿಡಿ

  • Bengaluru Focus

    Environment News | ಹೆಬ್ಬಾಳ ಕೆರೆ ಉಳಿಸಿ: ಕೀಟಗಳ ವೇಷ ಧರಿಸಿ ಮಕ್ಕಳ ವಿನೂತನ ಜಾಗೃತಿ ಅಭಿಯಾನ

    ಬೆಳಕಿನ ಹಬ್ಬದಲ್ಲಿ ಕತ್ತಲಾದ ಸಿಲಿಕಾನ್ ಸಿಟಿ ಶ್ವಾಸಕೋಶ: ದೀಪಾವಳಿ ಅಬ್ಬರಕ್ಕೆ ನಲುಗಿದ ಬೆಂಗಳೂರು

    Technology News | ಬೆಂಗಳೂರಿನಲ್ಲಿ ಕ್ವಾಲ್ಕಾಮ್ ಉದ್ಯೋಗ ಕಡಿತ: 1,000 ಹುದ್ದೆಗಳಿಗೆ ಆತಂಕ

    ರಾಜ್ಯೋತ್ಸವ ಆಚರಣೆ ನಿಲ್ಲಿಸಿ ಕನ್ನಡಿಗರನ್ನು ಕೆಲಸದಿಂದ ತೆಗೆದಿದ್ದ ಆರೋಪ: ಕರವೇ ಪ್ರತಿಭಟನೆಗೆ ಮಣಿದ ನ್ಯಾಕ್ ನಿರ್ದೇಶಕರಿಂದ ಕ್ಷಮೆಯಾಚನೆ

    ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಮೇಖ್ರವೃತ್ತದ ಸಮೀಪ ನೂತನವಾಗಿ ಪ್ರಾರಂಭವಾಗಿರುವ ಸುರಂಗಮಾರ್ಗ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಸೋಮವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ  ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಆಯುಕ್ತರಾದ ಮೇಜರ್ ಮಣಿವಣ್ಣನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಬಿಡಿಎ ಮಹತ್ವದ ಹೆಜ್ಜೆ: ಅಕ್ರಮ-ಸಕ್ರಮ ಶುಲ್ಕ ಇಳಿಕೆ, ಪ್ರೋತ್ಸಾಹದಾಯಕ ನಿವೇಶನ ಘೋಷಣೆ

  • Public interest
  • BW Special
  • Life Style
  • Photo Gallery
  • Video
No Result
View All Result

ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಹೆಬ್ಬಾಳ ಸುರಂಗ ಯೋಜನೆಗಾಗಿ 1,128 ಮರಗಳ ಹನನ ವಿರೋಧಿಸಿ ಮಿಡತೆ, ಜೇಡ, ಚಿಟ್ಟೆ ವೇಷದಲ್ಲಿ ಮಕ್ಕಳ ಪ್ರತಿಭಟನೆ.

by Bengaluru Wire Desk
November 14, 2026
in Bengaluru Focus, Public interest
Reading Time: 1 min read
0

ಬೆಂಗಳೂರು, ನ.14 www.bengaluruwire.com: ಉದ್ಯಾನನಗರಿಯಲ್ಲಿ ದಿನೇ ದಿನೇ ಕಣ್ಮರೆಯಾಗುತ್ತಿರುವ ಕೆರೆಗಳು, ಮರಗಳು ಹಾಗೂ ನೈಸರ್ಗಿಕ ತೆರೆದ ಪ್ರದೇಶಗಳ ರಕ್ಷಣೆಗೆ ಒತ್ತಾಯಿಸಿ ಮಕ್ಕಳೇ ಖುದ್ದು ಕೀಟಗಳ ವೇಷ ಧರಿಸಿ ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ. 

ಮಕ್ಕಳ ದಿನಾಚರಣೆಯ ಮುನ್ನಾದಿನವಾದ ಶುಕ್ರವಾರ, ಉತ್ತರ ಬೆಂಗಳೂರಿನ 8 ರಿಂದ 13 ವರ್ಷದೊಳಗಿನ ಮಕ್ಕಳ ತಂಡವು ಐತಿಹಾಸಿಕ ಹೆಬ್ಬಾಳ ಕೆರೆಯ ದಂಡೆಯಲ್ಲಿ ಸೇರಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿತು.

ಮಿಡತೆ, ಜೇಡ, ಇರುವೆ, ನೊಣ, ಚಿಟ್ಟೆ ಹಾಗೂ ಕೀಟಗಳ ಬೃಹತ್ ಗಾತ್ರದ ವೇಷಭೂಷಣಗಳನ್ನು ಧರಿಸಿದ್ದ ಪುಟಾಣಿಗಳು ನಾಗರಿಕರ ಗಮನ ಸೆಳೆದರು. ನಗರದ ಪರಿಸರ ವ್ಯವಸ್ಥೆಯ ಸಮತೋಲನಕ್ಕೆ ಈ ಸಣ್ಣ ಜೀವಿಗಳು ಎಷ್ಟು ಮುಖ್ಯ ಎಂಬುದನ್ನು ಮಕ್ಕಳು ಸಾರಿದರು. ಪರಾಗಸ್ಪರ್ಶ, ಮಣ್ಣಿನ ಫಲವತ್ತತೆ ಹಾಗೂ ಪಕ್ಷಿಗಳ ಆಹಾರ ಸರಪಳಿಯಲ್ಲಿ ಕೀಟಗಳ ಪಾತ್ರ ಅಪಾರವಾಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ನಗರ ಬೆಳೆದಂತೆ ಮೊದಲು ನೆಲೆ ಕಳೆದುಕೊಳ್ಳುವವು ಈ ಮೂಕ ಜೀವಿಗಳೇ ಎಂಬ ಕಳವಳವನ್ನು ಅಭಿಯಾನದಲ್ಲಿ ವ್ಯಕ್ತಪಡಿಸಲಾಯಿತು.

ಮರ ಕಡಿಯುವ ನಿರ್ಧಾರಕ್ಕೆ ಮಕ್ಕಳ ಆಕ್ರೋಶ: ಹೆಬ್ಬಾಳ ಕೆರೆಗೆ ವಲಸೆ ಬರುವ ಚಳಿಗಾಲದ ಪಕ್ಷಿಗಳನ್ನು ವೀಕ್ಷಿಸಿದ ಮಕ್ಕಳು, ಅಲ್ಲಿನ ಸುರಟ ಹುಣಸೆಕಾಯಿ ಮರಗಳ ಹಣ್ಣುಗಳನ್ನು ಸವಿದರು. ಆದರೆ, ‘ಹೆಬ್ಬಾಳ ಶಾರ್ಟ್ ಟನಲ್’ (ಸುರಂಗ ರಸ್ತೆ) ಯೋಜನೆಗಾಗಿ ತಾವು ಆಟವಾಡುವ ಮತ್ತು ಹಣ್ಣು ತಿನ್ನುವ ಇದೇ ಮರಗಳನ್ನು ಕಡಿಯಲು ಗುರುತು ಮಾಡಿರುವುದನ್ನು ಕಂಡು ಮಕ್ಕಳು ಬೇಸರ ವ್ಯಕ್ತಪಡಿಸಿದರು. ಕೈಯಲ್ಲಿ “ನಾವು ಲೆಕ್ಕವಿಲ್ಲವೇ? (Do You Consider Us?)” ಎಂಬ ಫಲಕಗಳನ್ನು ಹಿಡಿದು, ತಮ್ಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಉಳಿಸುವಂತೆ ದೊಡ್ಡವರಿಗೆ ಮನವಿ ಮಾಡಿದರು.

ಅಪಾಯದಲ್ಲಿ ಐತಿಹಾಸಿಕ ಹೆಬ್ಬಾಳ ಕೆರೆ: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನ ಅತ್ಯಂತ ಹಳೆಯ ಕೆರೆಗಳಲ್ಲಿ ಒಂದಾದ ಹೆಬ್ಬಾಳ ಕೆರೆ ಸುಮಾರು 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿ ಸುಮಾರು 50 ಜಲಪಕ್ಷಿಗಳು ಸೇರಿದಂತೆ ಒಟ್ಟು 183 ಪ್ರಭೇದದ ಪಕ್ಷಿಗಳನ್ನು ದಾಖಲಿಸಲಾಗಿದೆ. ಆದರೆ, ಹೆಬ್ಬಾಳ ಸುರಂಗ ಯೋಜನೆಗಾಗಿ ಬರೋಬ್ಬರಿ 1,128 ಮರಗಳನ್ನು ಕಡಿಯಲು ಮುಂದಾಗಿರುವುದು ಕೆರೆಯ ಬಫರ್ ವಲಯ ಮತ್ತು ಹಸಿರು ಕಾರಿಡಾರ್‌ಗೆ ಕುತ್ತು ತರಲಿದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಹೂಳೆತ್ತುವ ಕಾಮಗಾರಿ ಹಾಗೂ ಸುರಂಗ ಯೋಜನೆಯಿಂದ ಕೆರೆಯ ಬಹುಭಾಗ ಒಣಗಿದ್ದು, ಜಲಚರಗಳು ಹಾಗೂ ವಲಸೆ ಪಕ್ಷಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

ಕಲಾವಿದೆ ಆಶಾ ಎಸ್. ಕಳವಳ: ಈ ವಿನೂತನ ಕೀಟಗಳ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ ಕಲಾವಿದೆ ಮತ್ತು ಶಿಕ್ಷಕಿ ಆಶಾ ಎಸ್. ಮಾತನಾಡಿ, “ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಉಳಿದಿರುವ ನೈಸರ್ಗಿಕ ತಾಣಗಳನ್ನು ನಾಶಪಡಿಸುತ್ತಿರುವುದು ತೀವ್ರ ನೋವು ತಂದಿದೆ. ಮೂಲಸೌಕರ್ಯ ವಿನ್ಯಾಸಗೊಳಿಸುವಾಗ ಮಕ್ಕಳ ಭವಿಷ್ಯದ ಬಗ್ಗೆ ನಾವು ಯೋಚಿಸುತ್ತಿಲ್ಲ. ಕಳೆದ 15 ವರ್ಷಗಳಿಂದ ನಾನು ಹೆಬ್ಬಾಳ ಕೆರೆಯ ಪರಿಸರವನ್ನು ಗಮನಿಸುತ್ತಿದ್ದೇನೆ; ಈಗಾಗುತ್ತಿರುವ ಬದಲಾವಣೆ ಆತಂಕಕಾರಿಯಾಗಿದೆ. ಮಕ್ಕಳು ತಮ್ಮ ಹಕ್ಕಿಗಾಗಿ ತಾವೇ ಧ್ವನಿ ಎತ್ತಲು ಈ ವೇದಿಕೆ ಕಲ್ಪಿಸಲಾಗಿದೆ,” ಎಂದು ತಿಳಿಸಿದರು.

ಪುಟಾಣಿಗಳ ಮನದಾಳದ ನುಡಿಗಳು: ಅಭಿಯಾನದಲ್ಲಿ ಪಾಲ್ಗೊಂಡ ಮಕ್ಕಳು ತಮ್ಮ ಅನಿಸಿಕೆಗಳನ್ನು ಬರಹದ ಮೂಲಕ ಹಂಚಿಕೊಂಡರು:

“ದಿಕ್ಕಾರ ದಿಕ್ಕಾರ ದೊಡ್ಡವರಿಗೆ ದಿಕ್ಕಾರ! ಮರ ಕಡಿಯುವವರಿಗೆ ದಿಕ್ಕಾರ!” – ವರುಣ್ (13 ವರ್ಷ)

“ಕಾಡು ಬೆಳೆಸಿ ನಮ್ಮನ್ನು ಉಳಿಸಿ.” – ನಿಂಗಮ್ಮ (10 ವರ್ಷ)

“ಮರಗಳು ಇಲ್ಲದೆ ನಮಗೆ ತಂಪು ನೆರಳು ಎಲ್ಲಿ? ಕೆರೆ ನೀರು ಇಲ್ಲದೆ ಕಪ್ಪೆ, ಮೀನು, ಪಕ್ಷಿಗಳು ಎಲ್ಲಿ ನೀರು ಕುಡಿಯುವುದು?” – ಶಾಂತಮ್ಮ (8 ವರ್ಷ) ಮತ್ತು ಅನಿತಾ (12 ವರ್ಷ)

“ನೀವು ಮರಗಳನ್ನು ಕಡಿದರೆ ನಾವು ಉಸಿರಾಡುವುದು ಹೇಗೆ? ಕ್ರಿಮಿ ಕೀಟಗಳ ಮನೆ ಉಳಿಸಿ!” – ದೇವಿಕಾ (9 ವರ್ಷ) ಮತ್ತು ಭರತ್ (9 ವರ್ಷ)

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

Please login to join discussion

Like Us on Facebook

Recent News

Environment News | ಹೆಬ್ಬಾಳ ಕೆರೆ ಉಳಿಸಿ: ಕೀಟಗಳ ವೇಷ ಧರಿಸಿ ಮಕ್ಕಳ ವಿನೂತನ ಜಾಗೃತಿ ಅಭಿಯಾನ

November 14, 2026

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

November 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

Environment News | ಹೆಬ್ಬಾಳ ಕೆರೆ ಉಳಿಸಿ: ಕೀಟಗಳ ವೇಷ ಧರಿಸಿ ಮಕ್ಕಳ ವಿನೂತನ ಜಾಗೃತಿ ಅಭಿಯಾನ

November 14, 2026

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

November 13, 2026

ಬೆಂಗಳೂರಿನ ಬಾಲ್ಕನಿಯಲ್ಲಿ ಪುಟ್ಟ ಸಾವಯವ ಕೃಷಿ ಲೋಕ: ಕಡಿಮೆ ಕರ್ಚಿನಲ್ಲಿ, ವಿಷಮುಕ್ತ ತಾಜಾ ತರಕಾರಿ ಹೀಗೆ ಬೆಳೆಯಬಹುದು

November 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d