Saturday, November 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

    ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟ, 15 ದಿನಗಳ ಒಳಗೆ ಆಕ್ಷೇಪಣೆಗೆ ಅವಕಾಶ

    ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಗೂ ಮುನ್ನ ರಾಜಕೀಯ ಜಟಾಪಟಿ: ವೆಚ್ಚದ ಲೆಕ್ಕ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ, ಭಾಷಣ ಕಟ್ ಆಗಿದ್ದಕ್ಕೆ ಕೃಷ್ಣ ಬೈರೇಗೌಡ ಕಿಡಿ

    Vidhana Soudha

    ರಾಜ್ಯ ಸರ್ಕಾರದ 60 ನಿಗಮ-ಮಂಡಳಿಗಳಿಗೆ 428 ಮಂದಿ ನಿರ್ದೇಶಕರು, ಸದಸ್ಯರ ನೇಮಕ: ಇಲ್ಲಿದೆ ಸಂಪೂರ್ಣ ಪಟ್ಟಿ

    ಗುತ್ತಿಗೆ ವೈದ್ಯರ ಎತ್ತಂಗಡಿಗೆ ಬ್ರೇಕ್: ಡಿಎಚ್‌ಒಗಳಿಗೆ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ

    ಎಥನಾಲ್ ಪೆಟ್ರೋಲ್ ವಿವಾದ: ಕರ್ನಾಟಕ ಕಾಂಗ್ರೆಸ್ ಆರೋಪಕ್ಕೆ ಚೆಕ್ ಮೇಟ್ ಇಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

    BIG News | ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದ ಬಂಪರ್ ಕೊಡುಗೆ: 1,364 ಔಷಧಗಳ ಬೆಲೆ ಇಂದಿನಿಂದ ಭಾರಿ ಇಳಿಕೆ; ಜಾಸ್ತಿ ಹಣ ಕೇಳಿದ್ರೆ ಹೀಗೆ ಮಾಡಿ

    ಕೋಯಮತ್ತೂರು: 4 ಜ್ಯುವೆಲ್ಲರಿ ಮಳಿಗೆಗಳ ಮೇಲೆ ಬಿಐಎಸ್ ದಾಳಿ, ₹3 ಕೋಟಿ ಮೌಲ್ಯದ ಚಿನ್ನ ಜಪ್ತಿ

    ಎಥೆನಾಲ್ ಗೊಂದಲಕ್ಕೆ ಕೇಂದ್ರವೇ ಹೊಣೆ: ಸಚಿವ ಎಂ.ಬಿ. ಪಾಟೀಲ ಕಿಡಿ

  • Bengaluru Focus

    ಬೆಳಕಿನ ಹಬ್ಬದಲ್ಲಿ ಕತ್ತಲಾದ ಸಿಲಿಕಾನ್ ಸಿಟಿ ಶ್ವಾಸಕೋಶ: ದೀಪಾವಳಿ ಅಬ್ಬರಕ್ಕೆ ನಲುಗಿದ ಬೆಂಗಳೂರು

    Technology News | ಬೆಂಗಳೂರಿನಲ್ಲಿ ಕ್ವಾಲ್ಕಾಮ್ ಉದ್ಯೋಗ ಕಡಿತ: 1,000 ಹುದ್ದೆಗಳಿಗೆ ಆತಂಕ

    ರಾಜ್ಯೋತ್ಸವ ಆಚರಣೆ ನಿಲ್ಲಿಸಿ ಕನ್ನಡಿಗರನ್ನು ಕೆಲಸದಿಂದ ತೆಗೆದಿದ್ದ ಆರೋಪ: ಕರವೇ ಪ್ರತಿಭಟನೆಗೆ ಮಣಿದ ನ್ಯಾಕ್ ನಿರ್ದೇಶಕರಿಂದ ಕ್ಷಮೆಯಾಚನೆ

    ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಮೇಖ್ರವೃತ್ತದ ಸಮೀಪ ನೂತನವಾಗಿ ಪ್ರಾರಂಭವಾಗಿರುವ ಸುರಂಗಮಾರ್ಗ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಸೋಮವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ  ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಆಯುಕ್ತರಾದ ಮೇಜರ್ ಮಣಿವಣ್ಣನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಬಿಡಿಎ ಮಹತ್ವದ ಹೆಜ್ಜೆ: ಅಕ್ರಮ-ಸಕ್ರಮ ಶುಲ್ಕ ಇಳಿಕೆ, ಪ್ರೋತ್ಸಾಹದಾಯಕ ನಿವೇಶನ ಘೋಷಣೆ

    BDA News | ಹೆಬ್ಬಾಳ ಫ್ಲೈಓವರ್ 18 ತಿಂಗಳು ಬಂದ್ ಇಲ್ಲ: ಬಿಡಿಎ ಸ್ಪಷ್ಟನೆ

  • Public interest
  • BW Special
  • Life Style
  • Photo Gallery
  • Video
No Result
View All Result

ವೈಟೇಜ್ ಅಂಕಗಳ ಲೆಕ್ಕಾಚಾರ, ವರ್ಗಾವಣೆ ಮಿತಿ, ವೈದ್ಯಕೀಯ ಆದ್ಯತೆ ಹಾಗೂ ತಂತ್ರಾಂಶದ ಮೂಲಕ ಕೌನ್ಸೆಲಿಂಗ್‌ಗೆ ಹೊಸ ನಿಯಮ ರೂಪಿಸಿದ ಶಾಲಾ ಶಿಕ್ಷಣ ಇಲಾಖೆ.

by Bengaluru Wire Desk
November 13, 2026
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ನ.13 www.bengaluruwire.com: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ  ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆಯ ನಿಯಂತ್ರಣ  ತಿದ್ದುಪಡಿ ನಿಯಮಗಳ ಕರಡನ್ನು ನ.12ರಂದು ಪ್ರಕಟಿಸಿದೆ. 

ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದ ಶಿಕ್ಷಕರು ಅಥವಾ ಸಾರ್ವಜನಿಕರು ರಾಜ್ಯಪತ್ರ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಕರಡು ತಿದ್ದುಪಡಿ ನಿಯಮಗಳ ಪ್ರಮುಖ ಅಂಶಗಳು:

1. ವೈಟೇಜ್ (Weighted) ಅಂಕಗಳ ಹೊಸ ಲೆಕ್ಕಾಚಾರ: ವರ್ಗಾವಣೆ ಉದ್ದೇಶಕ್ಕಾಗಿ ಶಿಕ್ಷಕರ ವೈಟೇಜ್ ಅಂಕಗಳನ್ನು ನಿಗದಿಪಡಿಸಲು ನಿಯಮ 4ಕ್ಕೆ ತಿದ್ದುಪಡಿ ತರಲಾಗಿದೆ. ಇದರ ಪ್ರಕಾರ:

‘ಸಿ’ ವಲಯದಲ್ಲಿ ಸಲ್ಲಿಸಿದ ಸೇವಾ ವರ್ಷಗಳಿಗೆ x 3 ಅಂಕಗಳು.

‘ಬಿ’ ವಲಯದಲ್ಲಿ ಸಲ್ಲಿಸಿದ ಸೇವಾ ವರ್ಷಗಳಿಗೆ x 2 ಅಂಕಗಳು.

‘ಎ’ ವಲಯದಲ್ಲಿ ಸಲ್ಲಿಸಿದ ಸೇವಾ ವರ್ಷಗಳಿಗೆ x 1 ಅಂಕಗಳು.

ಪ್ರಸ್ತುತ ಶಾಲೆ ಮತ್ತು ವೃಂದದಲ್ಲಿ 3 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದರೆ, ಹೆಚ್ಚುವರಿ ವರ್ಷಗಳಿಗೆ x 1 ಅಂಕ ದೊರೆಯಲಿದೆ.

180 ದಿನಗಳು (6 ತಿಂಗಳು) ಮತ್ತು ಅದಕ್ಕಿಂತ ಹೆಚ್ಚಿನ ಸೇವೆಯನ್ನು ಒಂದು ಪೂರ್ಣ ವರ್ಷವೆಂದು ಹಾಗೂ 180 ದಿನಗಳಿಗಿಂತ ಕಡಿಮೆ ಸೇವೆಯನ್ನು ‘ಶೂನ್ಯ’ ವರ್ಷವೆಂದು ಪರಿಗಣಿಸಲಾಗುತ್ತದೆ.

ನಿರ್ಣಾಯಕ ಹುದ್ದೆಗಳಲ್ಲಿ (Crucial posts) ಪೂರ್ಣಗೊಂಡ ಪ್ರತಿ ವರ್ಷದ ಸೇವೆಗೆ ಎ, ಬಿ ಮತ್ತು ಸಿ ವಲಯಗಳಲ್ಲಿ ಕ್ರಮವಾಗಿ 2, 4 ಮತ್ತು 6 ಅಂಕಗಳನ್ನು ನೀಡಲಾಗುವುದು.

2. ವರ್ಗಾವಣೆ ಮಿತಿ ನಿಗದಿ (Transfer Limit): ನಿಯಮ 5ರ ತಿದ್ದುಪಡಿಯಂತೆ ವಿವಿಧ ವರ್ಗಾವಣೆಗಳಿಗೆ ಶೇಕಡಾವಾರು ಮಿತಿಯನ್ನು ನಿಗದಿಪಡಿಸಲಾಗಿದೆ:

ಕೋರಿಕೆ ವರ್ಗಾವಣೆ (ಜಿಲ್ಲೆಯೊಳಗೆ): 7%

ವಲಯ ವರ್ಗಾವಣೆ (Zonal Transfer): 4%

ಕೋರಿಕೆ ವರ್ಗಾವಣೆ (ವಿಭಾಗದೊಳಗೆ): 2%

ಕೋರಿಕೆ ವರ್ಗಾವಣೆ (ವಿಭಾಗದ ಹೊರಗೆ): 2%

ನಿರ್ಣಾಯಕ ಹುದ್ದೆಗಳಲ್ಲಿ ಶಿಕ್ಷಕರು ಕನಿಷ್ಠ 9 ವರ್ಷಗಳ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.

3. ವೈದ್ಯಕೀಯ ಮತ್ತು ಆದ್ಯತಾ ವರ್ಗಾವಣೆಗೆ ಕಟ್ಟುನಿಟ್ಟಿನ ನಿಯಮ: ಮಾರಣಾಂತಿಕ ಕಾಯಿಲೆ, ಗಂಭೀರ ಆರೋಗ್ಯ ಸಮಸ್ಯೆ ಅಥವಾ ಶೇ. 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ಶಿಕ್ಷಕರು ಅಥವಾ ಅವರ ಪತಿ/ಪತ್ನಿ/ಮಕ್ಕಳ ಪ್ರಕರಣಗಳಲ್ಲಿ ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಕಡ್ಡಾಯವಾಗಿದೆ. ವಿಶೇಷವೆಂದರೆ, ಈ ವೈದ್ಯಕೀಯ ಪ್ರಮಾಣಪತ್ರಗಳ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ತಜ್ಞ ವೈದ್ಯರನ್ನೊಳಗೊಂಡ ‘ವಿಭಾಗೀಯ ವಿಶೇಷ ಸಮಿತಿ’ಯನ್ನು ರಚಿಸಲಾಗುವುದು. ಗರ್ಭಿಣಿ ಶಿಕ್ಷಕಿಯರು ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿಯರು ಸೂಕ್ತ ಪ್ರಮಾಣಪತ್ರ ಸಲ್ಲಿಸಿ ಆದ್ಯತೆ ಪಡೆಯಬಹುದು.

4. ತಂತ್ರಾಂಶದ (Software) ಮೂಲಕವೇ ಕೌನ್ಸೆಲಿಂಗ್: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವೃಂದದ ಶಿಕ್ಷಕರಿಗೆ ನಿಯಮ 2ರಲ್ಲಿ ಉಲ್ಲೇಖಿಸಲಾದ ಸಕ್ಷಮ ಪ್ರಾಧಿಕಾರಿಗಳು ಕಡ್ಡಾಯವಾಗಿ ತಂತ್ರಾಂಶದ (Software) ಮೂಲಕವೇ ಪಾರದರ್ಶಕವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಡೆಸಬೇಕು ಎಂದು ನಿಯಮ 18ರಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಹೆಚ್ಚುವರಿ (Rationalisation) ಶಿಕ್ಷಕರ ಮರು ನಿಯೋಜನೆ ಹಾಗೂ ಬೋಧಕೇತರ ವೃಂದದ (21 ವಿವಿಧ ಹುದ್ದೆಗಳು) ಪಟ್ಟಿಯನ್ನೂ ಕರಡು ನಿಯಮಗಳ ಅನುಸೂಚಿಯಲ್ಲಿ ಸೇರಿಸಲಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಗೂ ಮುನ್ನ ರಾಜಕೀಯ ಜಟಾಪಟಿ: ವೆಚ್ಚದ ಲೆಕ್ಕ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ, ಭಾಷಣ ಕಟ್ ಆಗಿದ್ದಕ್ಕೆ ಕೃಷ್ಣ ಬೈರೇಗೌಡ ಕಿಡಿ

Next Post

ಬೆಂಗಳೂರಿನ ಬಾಲ್ಕನಿಯಲ್ಲಿ ಪುಟ್ಟ ಸಾವಯವ ಕೃಷಿ ಲೋಕ: ಕಡಿಮೆ ಕರ್ಚಿನಲ್ಲಿ, ವಿಷಮುಕ್ತ ತಾಜಾ ತರಕಾರಿ ಹೀಗೆ ಬೆಳೆಯಬಹುದು

Next Post

ಬೆಂಗಳೂರಿನ ಬಾಲ್ಕನಿಯಲ್ಲಿ ಪುಟ್ಟ ಸಾವಯವ ಕೃಷಿ ಲೋಕ: ಕಡಿಮೆ ಕರ್ಚಿನಲ್ಲಿ, ವಿಷಮುಕ್ತ ತಾಜಾ ತರಕಾರಿ ಹೀಗೆ ಬೆಳೆಯಬಹುದು

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

Please login to join discussion

Like Us on Facebook

Recent News

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

November 13, 2026

ಬೆಂಗಳೂರಿನ ಬಾಲ್ಕನಿಯಲ್ಲಿ ಪುಟ್ಟ ಸಾವಯವ ಕೃಷಿ ಲೋಕ: ಕಡಿಮೆ ಕರ್ಚಿನಲ್ಲಿ, ವಿಷಮುಕ್ತ ತಾಜಾ ತರಕಾರಿ ಹೀಗೆ ಬೆಳೆಯಬಹುದು

November 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

November 13, 2026

ಬೆಂಗಳೂರಿನ ಬಾಲ್ಕನಿಯಲ್ಲಿ ಪುಟ್ಟ ಸಾವಯವ ಕೃಷಿ ಲೋಕ: ಕಡಿಮೆ ಕರ್ಚಿನಲ್ಲಿ, ವಿಷಮುಕ್ತ ತಾಜಾ ತರಕಾರಿ ಹೀಗೆ ಬೆಳೆಯಬಹುದು

November 13, 2026

ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟ, 15 ದಿನಗಳ ಒಳಗೆ ಆಕ್ಷೇಪಣೆಗೆ ಅವಕಾಶ

November 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d