ಬೆಂಗಳೂರು, ಜು.20 www.bengaluruwire.com: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ (ಜುಲೈ 22) ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 1ನೇ ಘಟ್ಟದ 1200 ಮಿ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿನ 200 ಮಿ.ಮೀ. ಏರ್ ವಾಲ್ವ್ ಮತ್ತು ಸ್ಲ್ಯೂಯಿಸ್ ವಾಲ್ವ್ (Air Valve/Sluice Valve) ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಕಾರಣದಿಂದಾಗಿ ಜು.22ರ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ (ಒಟ್ಟು 12 ಗಂಟೆಗಳು) 4ನೇ ಹಂತ 1ನೇ ಘಟ್ಟದ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಯಂತ್ರಾಗಾರಗಳ ಸ್ಥಗಿತತೆಯಿಂದಾಗಿ ನಗರದ ಬಹುತೇಕ ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆ ಇರುವುದಿಲ್ಲ.
ಸಾರ್ವಜನಿಕರಿಗೆ ಮನವಿ:

ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿರುವ ಕಾರಣ, ಸಾರ್ವಜನಿಕರು ಮುಂಜಾಗ್ರತೆಯಾಗಿ ತಮಗೆ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಹಾಗೂ ಜಲ ಮಂಡಳಿಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:
ಯೋಜನೆಯ 4ನೇ ಹಂತ 1ನೇ ಘಟ್ಟದ ವ್ಯಾಪ್ತಿಗೆ ಬರುವ ನೂರಾರು ಬಡಾವಣೆಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದ್ದು, ಪಟ್ಟಿಯಲ್ಲಿರುವ ಪ್ರಮುಖ ಪ್ರದೇಶಗಳ ವಿವರ ಇಲ್ಲಿದೆ:
ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇಔಟ್, ಗಾಯತ್ರಿ ನಗರ, ಸುಬ್ರಮಣ್ಯ ನಗರ.
ರಾಜಾಜಿನಗರ (1ನೇ ಬ್ಲಾಕ್‌ನಿಂದ 6ನೇ ಬ್ಲಾಕ್ ವರೆಗೆ), ಪ್ರಕಾಶ್ ನಗರ, ಶಿವನಗರ, ಮಂಜುನಾಥ ನಗರ.
ಯಶವಂತಪುರ (ಎ.ಪಿ.ಎಂ.ಸಿ, ಆರ್.ಎಂ.ಸಿ ಯಾರ್ಡ್), ಗೊರಗುಂಟೆಪಾಳ್ಯ, ಮತ್ತಿಕೆರೆ, ಪೀಣ್ಯ ಕೈಗಾರಿಕಾ ಪ್ರದೇಶ (ವಾರ್ಡ್ ಸಂಖ್ಯೆ 41).
ಬಸವೇಶ್ವರ ನಗರ, ಕಮಲನಗರ, ಕುರುಬರಹಳ್ಳಿ, ಕಾಮಾಕ್ಷಿಪಾಳ್ಯ, ವೃಷಭಾವತಿ ನಗರ.
ನಾಗರಭಾವಿ (1ನೇ, 3ನೇ, 5ನೇ, 7ನೇ, 9ನೇ, 10ನೇ, 11ನೇ, 12ನೇ ಹಾಗೂ 14ನೇ ಬ್ಲಾಕ್‌ಗಳು).
ವಿಜಯನಗರ, ಹಂಪಿ ನಗರ, ಹೊಸಹಳ್ಳಿ, ಆರ್.ಪಿ.ಸಿ ಲೇಔಟ್.
ದಾಸರಹಳ್ಳಿ (ವಾರ್ಡ್ 15), ಲಗ್ಗೆರೆ (ವಾರ್ಡ್ 69), ಹೆಗ್ಗನಹಳ್ಳಿ (ವಾರ್ಡ್ 71), ಬಾಗಲಗುಂಟೆ, ಮಲ್ಲಸಂದ್ರ.
ಮಾಗಡಿ ರೋಡ್ (1 ರಿಂದ 12 ನೇ ಕ್ರಾಸ್), ದೀಪಾಂಜಲಿ ನಗರ, ಕವಿಕಾ ಲೇಔಟ್.
ಹಳೆಯ ಮಡಿವಾಳ ಪ್ರದೇಶ, ಡಾಲರ್ಸ್ ಕಾಲೋನಿ, ಸಿಲ್ಕ್ ಬೋರ್ಡ್ ಕ್ವಾಟರ್ಸ್, ಮತ್ತು ಸುತ್ತಮುತ್ತಲಿನ ಪ್ರದೇಶಗಳು.
(ಸೂಚನೆ: ಮೇಲ್ಕಂಡ ಪ್ರದೇಶಗಳಲ್ಲದೆ ಈ ವಾರ್ಡ್ ಹಾಗೂ ಬ್ಲಾಕ್‌ಗಳಿಗೆ ಹೊಂದಿಕೊಂಡಿರುವ ಇನ್ನಿತರ ಉಪ ಬಡಾವಣೆಗಳಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.)




















