Wednesday, August 19, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

    ಕೌಶಲ್ಯ ಕರ್ನಾಟಕ: ವಿಶ್ವ ಯುವ ಕೌಶಲ್ಯ ದಿನಾಚರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

    Karnataka Housing Board | ಗೃಹ ಮಂಡಳಿ ನೂತನ ಅಧ್ಯಕ್ಷ ಶ್ರೀನಿವಾಸ ಮಾನೆಗೆ ಸಚಿವ ಮಧು ಬಂಗಾರಪ್ಪ ಅಭಿನಂದನೆ

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

  • Bengaluru Focus

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

17th BIFFes |  ‘4 ಬೈ 4’ – ನಾಲ್ಕು ಕಥೆ, ನೂರಾರು ಭಾವನೆ: ಸ್ತ್ರೀ ಶಕ್ತಿಯ ಅನಾವರಣ

ನಟ ಸುಧಾರಾಣಿ, ರಂಜನಿ ರಾಘವನ್ ಅಭಿನಯದ ಆಂಥಾಲಾಜಿ ಚಿತ್ರಕ್ಕೆ ನೋಡುಗರಿಂದ ಭರ್ಜರಿ ಪ್ರತಿಕ್ರಿಯೆ

by Bengaluru Wire Desk
February 3, 2026
in Bengaluru Focus
Reading Time: 1 min read
0

ಬೆಂಗಳೂರು, ಫೆ.03 www.bengaluruwire.com : ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ‘ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಎಂಬ ಅರ್ಥಪೂರ್ಣ ಸಾಲಿನ ಆಶಯದೊಂದಿಗೆ ನಡೆಯುತ್ತಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (BIFFes), ಮಹಿಳಾ ಪಾರಮ್ಯವಿರುವ ವಿಶಿಷ್ಟ ಪ್ರಯೋಗವೊಂದು ಎಲ್ಲರ ಗಮನ ಸೆಳೆದಿದೆ. 

ನಾಲ್ವರು ಮಹಿಳಾ ನಿರ್ದೇಶಕಿಯರು ನಿರ್ದೇಶಿಸಿರುವ, ಮಹಿಳೆಯರೇ ನಿರ್ಮಿಸಿರುವ ಹಾಗೂ ಬಹುತೇಕ ಮಹಿಳಾ ಕಲಾವಿದರೇ ನಟಿಸಿರುವ ‘4 ಬೈ 4’ (4 By 4) ಚಿತ್ರವು ಪ್ರದರ್ಶನಗೊಂಡು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ನಾಲ್ಕು ಕಥೆ, ನೂರಾರು ಭಾವನೆ:

‘4 ಬೈ 4’ ಒಂದು ಆಂಥಾಲಾಜಿ (Anthology) ಮಾದರಿಯ ಚಿತ್ರವಾಗಿದ್ದು, ಇದರಲ್ಲಿ ಪ್ರತ್ಯೇಕ ನಾಲ್ಕು ಕಥೆಗಳಿವೆ. ಪ್ರೀತಿ, ವಿರಹ, ಕನಸು, ಧೈರ್ಯ ಹಾಗೂ ಆತ್ಮ ಪರಿವರ್ತನೆಯ ಎಳೆಗಳನ್ನು ಹೊಂದಿರುವ ಈ ಚಿತ್ರವು, ಮಹಿಳೆಯರ ಆಂತರಿಕ ತುಮುಲ ಮತ್ತು ಸಂಭ್ರಮಗಳನ್ನು ತೆರೆಯ ಮೇಲೆ ತಂದಿದೆ. ತ್ಯಾಗದಿಂದ ಸ್ವ-ಅನ್ವೇಷಣೆಯವರೆಗೆ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹಿಳೆಯರ ದಿಟ್ಟತನವನ್ನು ಈ ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ಈ ವಿಭಿನ್ನ ಪ್ರಯೋಗದ ನಾಲ್ಕು ಕಥೆಗಳಿಗೆ ತೃಪ್ತಿ ಕುಲಕರ್ಣಿ, ಮೇಘನಾ ಜಗನ್ನಾಥ್, ಚಿತ್ರಾ ಪರಮೇಶ್ವರನ್ ಹಾಗೂ ಪೂಜಿತಾ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾದಲ್ಲಿ ತಾರೆಯರ ದಂಡು:

ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿ, ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟಿ ರಂಜನಿ ರಾಘವನ್, ಬಹುಭಾಷಾ ತಾರೆ ಲಕ್ಷ್ಮೀ ಗೋಪಾಲಸ್ವಾಮಿ, ಇತಿ ಆಚಾರ್ಯ, ರಾಜೇಶ್ ನಟರಂಗ ಹಾಗೂ ಗ್ರೀಷ್ಮಾ ಶ್ರೀಧರ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಮನೋಹರ್ ಜೋಶಿ ಅವರ ಛಾಯಾಗ್ರಹಣ ಕಥೆಗಳಿಗೆ ಜೀವ ತುಂಬಿದ್ದರೆ, ವಿದುಷಿ ದೀಪ್ತಿ ನವರತ್ನ ಅವರ ಸಂಗೀತ ನಿರ್ದೇಶನ ಚಿತ್ರದ ತೂಕ ಹೆಚ್ಚಿಸಿದೆ.

ಸುಧಾರಾಣಿ ಸಂತಸ:

ಚಿತ್ರದ ಪ್ರದರ್ಶನದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ಸುಧಾರಾಣಿ, “ನನಗೆ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ನಾಲ್ವರು ಮಹಿಳಾ ನಿರ್ದೇಶಕಿಯರು ಒಗ್ಗೂಡಿ ಸಿನಿಮಾ ಮಾಡಿರುವುದು ಇದೇ ಮೊದಲು. ಈ ಐತಿಹಾಸಿಕ ಪ್ರಯೋಗದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ನಾನು ‘ವಿಭಾ’ ಎಂಬ ಕಥೆಯಲ್ಲಿ ನಟಿಸಿದ್ದು, ನಿರ್ದೇಶನದಿಂದ ನಿರ್ಮಾಣದವರೆಗೆ ಸ್ತ್ರೀ ಶಕ್ತಿಯೇ ಈ ಚಿತ್ರದ ಬೆನ್ನೆಲುಬು,” ಎಂದು ಹರ್ಷ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ದೀಪ್ತಿ ಮೂರ್ತಿ ಅಯ್ಯರ್, ಕಲಾವಿದೆಯರಾದ ರಂಜನಿ ರಾಘವನ್, ಗ್ರೀಷ್ಮಾ ಶ್ರೀಧರ್, ನಮಿತಾ ದೇಸಾಯಿ, ದಿವ್ಯಶ್ರೀ, ಅಂಕಿತಾ ಜಯರಾಮ್, ಸಂಗೀತ ನಿರ್ದೇಶಕಿ ದೀಪ್ತಿ ನವರತ್ನ ಹಾಗೂ ಕಾರ್ಯಕಾರಿ ನಿರ್ಮಾಪಕಿಯರಾದ ಮಾಲತಿ ಮೂರ್ತಿ, ಸುಮನಾ ವಿಶ್ವನಾಥ್ ಮತ್ತು ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು. 

ಒಟ್ಟಿನಲ್ಲಿ, ಬೆಂಗಳೂರು ಚಿತ್ರೋತ್ಸವದಲ್ಲಿ ‘4 ಬೈ 4’ ಚಿತ್ರವು ಗುಣಮಟ್ಟದ ಕಂಟೆಂಟ್ ಮೂಲಕ ಸಿನಿಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

WhatsApp Join our WhatsApp Channel
Previous Post

ಇ-ಸ್ವತ್ತು 2.0 ಫಜೀತಿ: ಇವತ್ತು- ನಾಳೆ, 10-15 ದಿನ…!! ಬಗೆಹರಿಯದ ಸಾಫ್ಟ್‌ವೇರ್ ಸಮಸ್ಯೆ : ತಾಂತ್ರಿಕ ದೋಷದಿಂದ ಕಂಗಾಲಾದ ಗ್ರಾಮೀಣ ಜನತೆ

Next Post

PF Wage Ceiling Hike | ಪಿಎಫ್ ವೇತನ ಮಿತಿ ₹25,000ಕ್ಕೆ ಏರಿಕೆ? ಕೋಟ್ಯಂತರ ನೌಕರರಿಗೆ ಬಂಪರ್ ಸಿಹಿಸುದ್ದಿ

ಬಿಡಿಎ ಕೇಂದ್ರ ಕಚೇರಿ ಚಿತ್ರ

ಬಿಡಿಎಗೆ ಭರ್ಜರಿ ಲಾಭ 2,097 ಕೋಟಿಗೆ ಕೋನದಾಸಪುರ ಜಾಗ ಮಾರಾಟ ; ಇದೀಗ ಮತ್ತೆ ಬೃಹತ್ ವಾಣಿಜ್ಯ ನಿವೇಶನಗಳ ಹರಾಜಿಗೆ ಅಧಿಸೂಚನೆ ಪ್ರಕಟ

Please login to join discussion

Like Us on Facebook

Follow Us on Twitter

Recent News

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

August 19, 2026

ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

August 19, 2026

Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

August 18, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group