Thursday, October 8, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಸ್ಟಿಂಗ್ ಆಪರೇಷನ್ ‘ಪಿತಾಮಹ’ ಯಾರೆಂದು ಗೊತ್ತು: ದೆಹಲಿಯಲ್ಲಿ ಸಿಎಂ ಡಿಕೆಶಿ ಪರೋಕ್ಷ ಎಚ್ಚರಿಕೆ

    IMC 2026: 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

    ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: ಗೋವಾದಲ್ಲಿ ಹೃದಯಾಘಾತದಿಂದ ನಿಧನ

    ಅಕ್ರಮ ಆಸ್ತಿ ಗಳಿಕೆ: ಅರಣ್ಯಾಧಿಕಾರಿ ರವಿಕುಮಾರ್‌ಗೆ 3 ವರ್ಷ ಜೈಲು, ₹1.38 ಕೋಟಿ ದಂಡ

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    Science News | 2026ನೇ ನೊಬೆಲ್ ವೈದ್ಯಕೀಯ ಪ್ರಶಸ್ತಿ: ಮಿದುಳಿನ ನಿಗೂಢ ಶೋಧಕ್ಕೆ ಮೂವರು ವಿಜ್ಞಾನಿಗಳಿಗೆ ಗೌರವ

    ದೆಹಲಿಯಲ್ಲಿ ಪ್ರತಿಭಟನಾಕಾರರ ಬಂಧನ ಭೀತಿ: ಪತ್ರಕರ್ತರ ಮೇಲಿನ ಹಲ್ಲೆಗೆ KUWJ ತೀವ್ರ ಆಕ್ರೋಶ

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    ಅಯೋಧ್ಯೆ ರಾಮ ಮಂದಿರದಲ್ಲಿ ಭದ್ರತೆ ಹೆಚ್ಚಳ: ಜೇಬಿಲ್ಲದ ಸಮವಸ್ತ್ರ, ಕಠಿಣ ನಿಯಮ!

  • Bengaluru Focus

    BDA News | ಬಿಡಿಎ ಅಧ್ಯಕ್ಷ ಪೀಠದಲ್ಲಿ ವಿಶೇಷ ಚೇತನ ಬಾಲಕ: ಕಚೇರಿಯಲ್ಲಿ ಭಾವುಕ ಕ್ಷಣ

    ಅಕ್ರಮ ಆಸ್ತಿ ಗಳಿಕೆ: ಅರಣ್ಯಾಧಿಕಾರಿ ರವಿಕುಮಾರ್‌ಗೆ 3 ವರ್ಷ ಜೈಲು, ₹1.38 ಕೋಟಿ ದಂಡ

    ​ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ: ರಾಜ್ಯಪಾಲರಿಗೆ ಎನ್‌ಡಿಎ ನಿಯೋಗ ದೂರು

    ವೃತ್ತಿ ಬದುಕಿನ ಯಶಸ್ಸಿಗೆ ಪ್ರಾಮಾಣಿಕತೆ, ವಿನಯತೆ ಅನಿವಾರ್ಯ: ನಟ ದೊಡ್ಡಣ್ಣ

    ಅಂತರ್ಜಲ ಮರುಪೂರಣ: ಕರ್ನಾಟಕ ಮುಂಚೂಣಿ

    Bescom News | ಬೆಸ್ಕಾಂಗೆ 2025-26ನೇ ಹಣಕಾಸು ವರ್ಷದಲ್ಲಿ ₹293.62 ಕೋಟಿ ಭರ್ಜರಿ ಲಾಭ

    ರಾಜ್ಯಕ್ಕೆ ₹3705 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಮನವಿ

    ರೇಷನ್ ಕಾರ್ಡ್ ಇ-ಕೆವೈಸಿ: ‘ಅನ್ನ ಸೇವೆ’ ಆ್ಯಪ್ ಬಿಡುಗಡೆ

    BDA News | 100ನೇ ಓಪನ್ ಹೌಸ್ ಪೂರೈಸಿದ ಬಿಡಿಎ: 4,759 ಸಾರ್ವಜನಿಕ ಸಮಸ್ಯೆ ಇತ್ಯರ್ಥ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ಸ್ಟಿಂಗ್ ಆಪರೇಷನ್ ‘ಪಿತಾಮಹ’ ಯಾರೆಂದು ಗೊತ್ತು: ದೆಹಲಿಯಲ್ಲಿ ಸಿಎಂ ಡಿಕೆಶಿ ಪರೋಕ್ಷ ಎಚ್ಚರಿಕೆ

ಖಾಸಗಿ ಏಜೆಂಟರ ನೇಮಕದ ಬಗ್ಗೆ ಪಕ್ಕಾ ಸಾಕ್ಷ್ಯವಿದೆ ಎಂದ ಮುಖ್ಯಮಂತ್ರಿ; ನೈಸ್ ಆಸ್ತಿ ಬಯಲು ಹಾಗೂ ಮತಗಳ್ಳತನದ ವಿರುದ್ಧ ಗುಡುಗು

by Bengaluru Wire Desk
October 8, 2026
in News Wire, Public interest
Reading Time: 1 min read
0

ನವದೆಹಲಿ, ಅ.08 www.bengaluruwire.com: ತಮ್ಮ ಹಾಗೂ ಸಚಿವರ ವಿರುದ್ಧ ಷಡ್ಯಂತ್ರ ರೂಪಿಸಿ ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಲು ಸಂಚು ರೂಪಿಸಿರುವ ‘ಪಿತಾಮಹ’ ಯಾರು ಎಂಬ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. 

ಜತೆಗೆ, ಸಮಯ ಬಂದಾಗ ನೈಸ್ ಯೋಜನಾ ಪ್ರದೇಶದಲ್ಲಿ ನಡೆದಿರುವ ಅಕ್ರಮ ಆಸ್ತಿ ಹಂಚಿಕೆ ಹಾಗೂ ಬಿಜೆಪಿ ನಾಯಕರ ಅಕ್ರಮಗಳನ್ನು ಸದನದಲ್ಲಿ ದಾಖಲೆ ಸಮೇತ ಬಿಚ್ಚಿಡುವುದಾಗಿ ಗುಡುಗಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯ, ಗುಪ್ತ ಕಾರ್ಯಾಚರಣೆ ಸಂಚು, ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಹಾಗೂ ಜಿಎಸ್‌ಟಿ ಕೌನ್ಸಿಲ್ ಸಭೆಯ ಬೆಳವಣಿಗೆಗಳ ಕುರಿತು ವಿಸ್ತಾರವಾಗಿ ಪ್ರತಿಕ್ರಿಯಿಸಿದರು.

ಸ್ಟಿಂಗ್ ಆಪರೇಷನ್‌ಗೆ ಖಾಸಗಿ ಏಜೆಂಟರ ನೇಮಕ:

ತಮ್ಮ ಸರ್ಕಾರದ ಸಚಿವರ ವಿರುದ್ಧ ನಡೆಯುತ್ತಿರುವ ಗುಪ್ತ ಕಾರ್ಯಾಚರಣೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ಮುಖ್ಯಮಂತ್ರಿಯಾದ ಬಳಿಕವೇ ನನ್ನ ಮೇಲಿಂದಲೇ ಇಂತಹ ಮಾರುವೇಷದ ಕಾರ್ಯಾಚರಣೆ ಆರಂಭಿಸಲು ಯತ್ನಿಸಿದ್ದಾರೆ. ഇതിಗೆ ಯಾರಿಂದ ಹಣಕಾಸಿನ ನೆರವು ಬರುತ್ತಿದೆ, ಯಾರು ಇದರ ಪಿತಾಮಹ, ಯಾವ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿ ಹಾಗೂ ಸಾಕ್ಷ್ಯಗಳು ನನ್ನ ಬಳಿ ಇವೆ. ನಾನೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ” ಎಂದರು.

ಕೆಲವು ವ್ಯಕ್ತಿಗಳು ತಮ್ಮ ಬಳಿಗೂ ಬಂದಿದ್ದರು ಎಂದು ತಿಳಿಸಿದ ಅವರು, “ಅನುಮಾನ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅಗತ್ಯವಿಲ್ಲ. ದಾಖಲೆಗಳನ್ನು ಯಾವಾಗ ಬಿಡುಗಡೆ ಮಾಡಬೇಕೋ ಆಗಲೇ ಮಾಡುತ್ತೇನೆ. ಅಧಿಕಾರಿಗಳನ್ನು ಹಾಗೂ ಸಚಿವರನ್ನು ಸಿಲುಕಿಸಲು ಹುನ್ನಾರ ನಡೆಯುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ನೈಸ್ ಹಗರಣ: ಸಮಯ ಬಂದಾಗ ಆಸ್ತಿ ವಿವರ ಬಯಲು:

ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಶಿವಕುಮಾರ್, “ಮಾತೆತ್ತಿದರೆ ನೈಸ್ ಎನ್ನುತ್ತಾರೆ. ಅದೆಲ್ಲವೂ ಅವರದ್ದೇ ಪಾಪದ ಕೂಸು. ರಾಜ್ಯಕ್ಕೊಂದು ಯೋಜನೆ ಎಂಬುದನ್ನು ಬಿಟ್ಟರೆ ನನಗೂ ನೈಸ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಅವರು ಅಧಿಕಾರದಲ್ಲಿದ್ದಾಗ ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ? 

ಇವರ ವ್ಯವಹಾರಗಳು ಕುದುರಲಿಲ್ಲ ಎಂಬ ಕಾರಣಕ್ಕೆ ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇವರ ಕುಟುಂಬದವರು ಎಷ್ಟು ಆಸ್ತಿ ಮಾಡಿದ್ದಾರೆ ಎಂಬ ಜಾತಕ ನನ್ನ ಬಳಿ ಇದೆ. ಸಮಯ ಬಂದಾಗ ಸದನದಲ್ಲೇ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ” ಎಂದರು.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ 12 ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಅದನ್ನು ಮುಚ್ಚಿಹಾಕಲು ವಿಷಯಾಂತರ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಗಡಿ ಕಾಯುವುದು ಕೇಂದ್ರದ ಕೆಲಸವಲ್ಲವೇ?: ಮತಗಳ್ಳತನದ ವಿರುದ್ಧ ವಾಗ್ದಾಳಿ:

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದ ಅವರು, “ಬಾಂಗ್ಲಾದೇಶದವರು ಇಲ್ಲಿದ್ದಾರೆ ಎಂದು ಬಿಜೆಪಿ ಸಂಸದರು ಹೇಳುತ್ತಿದ್ದಾರೆ. ಗಡಿಯಲ್ಲಿ ನುಸುಳುಕೋರರನ್ನು ತಡೆಯುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ನಿಜವಾಗಿಯೂ ಅಕ್ರಮ ವಲಸಿಗರಿದ್ದರೆ ಅವರನ್ನು ದೇಶದಿಂದ ಗಡಿಪಾರು ಮಾಡಲಿ, ಅದನ್ನು ಬಿಟ್ಟು ಭಾರತೀಯರ ಮತದಾನದ ಹಕ್ಕನ್ನು ಕಸಿಯಲು ಯತ್ನಿಸುತ್ತಿರುವುದೇಕೆ?” ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಬಿಜೆಪಿ ಕಚೇರಿಗಳಿಂದಲೇ ನಮೂನೆ-7 (Form-7) ಅರ್ಜಿಗಳನ್ನು ಮುದ್ರಿಸಿ, ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಕ್ರಿಮಿನಲ್ ಸಂಚು ಹೂಡಲಾಗಿತ್ತು ಎಂದು ಆರೋಪಿಸಿದರು. 

“ನಾವು ನಡೆಸಿದ ಕಾನೂನು ಹೋರಾಟದ ಫಲವಾಗಿ ಚುನಾವಣಾ ಆಯೋಗವು ಸೂಕ್ತ ಪರಿಶೀಲನೆ ಇಲ್ಲದೆ ಯಾವುದೇ ಅರ್ಹ ಮತವನ್ನು ತೆಗೆಯಬಾರದು ಎಂದು ಸ್ಪಷ್ಟ ಆದೇಶ ನೀಡಿದೆ. ಚುನಾವಣೆ ಗೆಲ್ಲಲು ಜನರ ಮನಸ್ಸನ್ನು ಗೆಲ್ಲಬೇಕೇ ಹೊರತು, ಚುನಾವಣಾ ಆಯೋಗದ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು” ಎಂದು ಹೇಳಿದರು.

ರಾಜ್ಯಕ್ಕೆ ಜಿಎಸ್‌ಟಿ ಬಾಕಿ ಅನುದಾನದ ಸಿಹಿ ಸುದ್ದಿ:

ಜಿಎಸ್‌ಟಿ ಕೌನ್ಸಿಲ್ ಸಭೆಯ ಕುರಿತು ವಿವರ ನೀಡಿದ ಮುಖ್ಯಮಂತ್ರಿಗಳು, “ರಾಜ್ಯದ ಹಳೆಯ ಬಾಕಿ ಅನುದಾನದ ಕುರಿತು ಕೇಂದ್ರ ಹಣಕಾಸು ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ. ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ” ಎಂದರು.

ಇದೇ ವೇಳೆ, ಜಿಎಸ್‌ಟಿ ಪಾವತಿಸದ ವ್ಯಾಪಾರಸ್ಥರನ್ನು ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವ ಪ್ರಸ್ತಾಪಕ್ಕೆ ಕರ್ನಾಟಕ ಪ್ರಬಲ ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿಸಿದರು. “ಆದಾಯ ತೆರಿಗೆ ನಿಯಮಗಳಂತೆ ಬಾಕಿ ಇರುವ ಹಣವನ್ನು ಕಾನೂನುಬದ್ಧವಾಗಿ ವಸೂಲಿ ಮಾಡಬೇಕೇ ಹೊರತು, ಅಧಿಕಾರಿಗಳು ವ್ಯಾಪಾರಿಗಳನ್ನು ಅನಗತ್ಯವಾಗಿ ಬಂಧಿಸುವುದು ಸರಿಯಲ್ಲ. ಈ ನಿಲುವಿಗೆ ಒಂದು ರಾಜ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ” ಎಂದು ಮಾಹಿತಿ ನೀಡಿದರು.

View this post on Instagram

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

IMC 2026: 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

Please login to join discussion

Like Us on Facebook

Follow Us on Twitter

Recent News

ಸ್ಟಿಂಗ್ ಆಪರೇಷನ್ ‘ಪಿತಾಮಹ’ ಯಾರೆಂದು ಗೊತ್ತು: ದೆಹಲಿಯಲ್ಲಿ ಸಿಎಂ ಡಿಕೆಶಿ ಪರೋಕ್ಷ ಎಚ್ಚರಿಕೆ

October 8, 2026

IMC 2026: 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

October 8, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಸ್ಟಿಂಗ್ ಆಪರೇಷನ್ ‘ಪಿತಾಮಹ’ ಯಾರೆಂದು ಗೊತ್ತು: ದೆಹಲಿಯಲ್ಲಿ ಸಿಎಂ ಡಿಕೆಶಿ ಪರೋಕ್ಷ ಎಚ್ಚರಿಕೆ

October 8, 2026

IMC 2026: 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

October 8, 2026

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: ಗೋವಾದಲ್ಲಿ ಹೃದಯಾಘಾತದಿಂದ ನಿಧನ

October 8, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d