Friday, September 11, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    ಮೈಸೂರು ದಸರಾ 2026: ಈ ಬಾರಿ ‘ನಿಶಾನೆ ಆನೆ’ಯಾಗಿ ಗಜಪಡೆ ಮುನ್ನಡೆಸಲಿದ್ದಾನೆ ಅಭಿಮನ್ಯು

    ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರು ಇಸ್ಕಾನ್ ಸೇರಿ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

  • Bengaluru Focus

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

    ಓಲಾ, ಊಬರ್ ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್: ಮೆಟ್ರೋಗೆ 200 ಮಿನಿ ಎಸಿ ಬಸ್ ಸಂಪರ್ಕ

    ಯಶವಂತಪುರ ಎಪಿಎಂಸಿಗೆ ಸಿಎಂ ದಿಢೀರ್ ಭೇಟಿ: ವಿಮೆ ವಂಚಿಸಿದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಡಿಕೆಶಿ ಸೂಚನೆ

    ಆರೋಗ್ಯ ಸಂದೇಶಕ್ಕೆ ಸಾಹಿತ್ಯದ ಸ್ಪರ್ಶ: ‘ವೈದ್ಯಲೋಕ’ ಕಥೆ-ಕವನ ಸ್ಪರ್ಧೆ ಪ್ರಶಸ್ತಿ ಪ್ರದಾನ

    Railway News | ಶಿವಮೊಗ್ಗ-ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಶೀಘ್ರ?

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ದಾವಣಗೆರೆಯ ‘ಆಧುನಿಕ ಶಿಲ್ಪಿ’ ಶ್ಯಾಮನೂರು ಶಿವಶಂಕರಪ್ಪ ನಿಧನಕ್ಕೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಭಾವುಕ ನುಡಿ

ದಾವಣಗೆರೆಯಲ್ಲಿ ಜವಳಿ ಕ್ಷೇತ್ರ ಅವನತಿ ಕಂಡಾಗ ಊರಿಗೆ ಹೊಸ ಬ್ರಾಂಡ್ ತಂದುಕೊಟ್ಟಿದ್ದು ಶ್ಯಾಮನೂರರು.

by Bengaluru Wire Desk
December 15, 2025
in News Wire, Public interest
Reading Time: 1 min read
0

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.15 www.bengaluruwire.com : ದಾವಣಗೆರೆ ಜಿಲ್ಲೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ, ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ತೀವ್ರ ಸಂತಾಪ ಸೂಚಿಸಿದರು.

ಸದನದಲ್ಲಿ ಮಂಡಿಸಲಾದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, “ದಾವಣಗೆರೆ ಇಂದು ವಿದ್ಯಾಕಾಶಿಯಾಗಿ, ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ತಲೆ ಎತ್ತಿ ನಿಂತಿದೆ ಎಂದರೆ ಅದಕ್ಕೆ ಶ್ಯಾಮನೂರು ಅವರೇ ಪ್ರಮುಖ ಕಾರಣ,” ಎಂದು ಬಣ್ಣಿಸಿದರು.

ರಾಜಕೀಯ ಮತ್ತು ಶೈಕ್ಷಣಿಕ ಕ್ರಾಂತಿ :

ಶ್ಯಾಮನೂರು ಅವರ ರಾಜಕೀಯ ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಅವರು ತಮ್ಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ, ಆರು ಬಾರಿ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿ ಸೇವೆ ಸಲ್ಲಿಸಿದ ದೀರ್ಘಕಾಲೀನ ರಾಜಕಾರಣಿ. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿಯೂ ಅವರು ಜನಸೇವೆ ಮಾಡಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸಮಾಜವನ್ನು ಮುನ್ನಡೆಸಿದ್ದರು,” ಎಂದರು.

ಮುಖ್ಯವಾಗಿ, ದಾವಣಗೆರೆಯಲ್ಲಿ ಜವಳಿ ಕ್ಷೇತ್ರ ಅವನತಿ ಕಂಡಾಗ ಊರಿಗೆ ಹೊಸ ಬ್ರಾಂಡ್ ತಂದುಕೊಟ್ಟಿದ್ದು ಶ್ಯಾಮನೂರರು. ಬಾಪೂಜಿ ವಿದ್ಯಾ ಸಂಸ್ಥೆಯ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ದಾವಣಗೆರೆಯನ್ನು ‘ವಿದ್ಯಾಕಾಶಿ’ಯನ್ನಾಗಿ ರೂಪಿಸಿದರು. ಉದ್ಯಮಿಯಾಗಿ ಮತ್ತು ಶಿಕ್ಷಣ ಪ್ರೇಮಿಯಾಗಿ ಅವರು ಮೂಡಿಸಿದ ಛಾಪು ಅನನ್ಯ ಎಂದು ಸಿಎಂ ಸ್ಮರಿಸಿದರು.

ಅಜಾತಶತ್ರು ಮತ್ತು ಆಪ್ತ ಒಡನಾಟ :

ಶ್ಯಾಮನೂರು ಅವರನ್ನು ‘ಅಜಾತಶತ್ರು’ ಎಂದು ಕರೆದ ಸಿದ್ದರಾಮಯ್ಯ, ಅವರೊಂದಿಗಿನ ವೈಯಕ್ತಿಕ ಒಡನಾಟವನ್ನು ನೆನೆದು ಭಾವುಕರಾದರು. “ನಾನು ದಾವಣಗೆರೆಗೆ ಹೋದಾಗಲೆಲ್ಲಾ ಅವರ ಗೆಸ್ಟ್ ಹೌಸ್‌ನಲ್ಲೇ ವಾಸ್ತವ್ಯ ಹೂಡುತ್ತಿದ್ದೆ. ಅವರ ಪ್ರೀತಿಯ ಒತ್ತಾಯದ ಮೇರೆಗೆ ಅವರ ಮನೆಯಲ್ಲೇ ಊಟ ಮಾಡುತ್ತಿದ್ದೆ. ನನ್ನ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದನ್ನು ಮರೆಯಲು ಸಾಧ್ಯವಿಲ್ಲ,” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಸಂಕಷ್ಟದಲ್ಲಿ ನೆರವಾಗಿದ್ದ ‘ದಾನಿ’ :

ಶ್ಯಾಮನೂರು ಅವರು ಕೇವಲ ಉದ್ಯಮಿಯಾಗಿರದೆ, ಕಷ್ಟಕಾಲದಲ್ಲಿ ಜನರಿಗೆ ನೆರವಾಗುವ ದಾನಿಯಾಗಿದ್ದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಬರೋಬ್ಬರಿ ಆರು ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡುವ ಮೂಲಕ ಸಾವಿರಾರು ಜನರ ಪ್ರಾಣ ಉಳಿಸಲು ನೆರವಾಗಿದ್ದರು ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಶ್ಯಾಮನೂರು ಅವರು ಸಚಿವರಾಗಿದ್ದರು. ಬಳಿಕ 2016ರಲ್ಲಿ ಸಂಪುಟ ಪುನಾರಚನೆ ವೇಳೆ ತಮ್ಮ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಿದ್ದರು. ಇಂದು ಮಲ್ಲಿಕಾರ್ಜುನ್ ಅವರು ನಮ್ಮ ಸಂಪುಟದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

“ಕೇವಲ 15 ದಿನಗಳ ಹಿಂದಷ್ಟೇ ನಾನು ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿದ್ದೆ, ಆಗ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಂತಹ ಹಿರಿಯ ಚೇತನದ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ,” ಎಂದು ಸಿಎಂ ಪ್ರಾರ್ಥಿಸಿದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಜಿಬಿಎ ಚುನಾವಣೆ ಕಹಳೆ: ನಾಳೆಯಿಂದ 369 ವಾರ್ಡ್‌ಗಳಿಗೆ ಅರ್ಜಿ ಆಹ್ವಾನ; ಆಕಾಂಕ್ಷಿಗಳಿಗೆ ಡಿಕೆಶಿ ನೀಡಿದ ಸೂಚನೆಗಳೇನು?

Next Post

Viral Vedio | ಎದೆ ಝಲ್ಲೆನಿಸುವ ದೃಶ್ಯ: ಬೃಹತ್ ಕಟ್ಟಡಕ್ಕೆ ತೀರಾ ಸನಿಹದಲ್ಲಿ ಹಾರಿದ ದೈತ್ಯ ಸೇನಾ ವಿಮಾನ

Next Post

Viral Vedio | ಎದೆ ಝಲ್ಲೆನಿಸುವ ದೃಶ್ಯ: ಬೃಹತ್ ಕಟ್ಟಡಕ್ಕೆ ತೀರಾ ಸನಿಹದಲ್ಲಿ ಹಾರಿದ ದೈತ್ಯ ಸೇನಾ ವಿಮಾನ

Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ 8 'ಬ್ಲ್ಯಾಕ್ ಕ್ಯಾಪ್ಡ್ ಕ್ಯಾಪುಚಿನ್' ಕೋತಿಗಳ ಆಗಮನ

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

September 11, 2026

ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

September 11, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

September 11, 2026

ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

September 11, 2026

BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

September 11, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d