Monday, September 14, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

    ಪಿಡಬ್ಲ್ಯೂಡಿ ಲಂಚದ ಹಣ ಆಫ್ರಿಕಾದ ಚಿನ್ನದ ಗಣಿಗೆ?: ಸತೀಶ್ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

    ದೆಹಲಿಯಲ್ಲಿ ಬ್ರಿಕ್ಸ್‌ ಶೃಂಗಸಭೆ: ಕೊಳಗೇರಿಗೆ ಪರದೆ ಕಟ್ಟಿ ಬಡತನ ಮರೆಮಾಚುವ ಯತ್ನಕ್ಕೆ ಆಕ್ರೋಶ

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BIS Hallmark | ​ಚೆನ್ನೈನಲ್ಲಿ ಹಾಲ್‌ಮಾರ್ಕ್ ಇಲ್ಲದ ಬರೋಬ್ಬರಿ 804 ಗ್ರಾಂ ಚಿನ್ನಾಭರಣ ವಶ: ಬಿಐಎಸ್ ತಂಡದಿಂದ ದಾಳಿ: ಚಿನ್ನಾಭರಣ ಅಸಲಿತನ ಹೇಗೆ ಚೆಕ್ ಮಾಡೋದು ಗೊತ್ತಾ?

    CM DK Shivakumar Open Letter | ಅಧಿಕಾರಕ್ಕಿಂತ ಹೊಣೆಗಾರಿಕೆ ದೊಡ್ಡದು: 100 ದಿನ ಪೂರೈಸಿದ ಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗ ಪತ್ರ

    Free Coaching | ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ: 90,000 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Bengaluru Focus
    CREATOR: gd-jpeg v1.0 (using IJG JPEG v80), quality = 82?

    ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

    Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

    BIG BREAKING | ₹15 ಕೋಟಿ ಸುರಿದ ಬೆನ್ನಲ್ಲೇ ಬಿಡಿಎ ಕೇಂದ್ರ ಕಚೇರಿ ಪಾರಂಪರಿಕ ಕಟ್ಟಡ ಕೆಡವಲು ಸಂಚು: ನೌಕರರ ತೀವ್ರ ಆಕ್ರೋಶ

    GBA News | ಬೆಂಗಳೂರು ರಸ್ತೆ ಗುಂಡಿಗಳಿಗೆ ₹2 ಕೋಟಿಯ ‘ಜೆಟ್ ಪ್ಯಾಚರ್’ ಮುಲಾಮು: ಶಾಶ್ವತ ಪರಿಹಾರವೇ, ಕೇವಲ ಬೂಟಾಟಿಕೆಯೇ?

    ಎಸ್ಐಆರ್: ನೋಟಿಸ್ ಪಡೆದ ಹಿರಿಯರು, ಅಸ್ವಸ್ಥರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಚುನಾವಣಾ ಆಯೋಗ ಅನುಮತಿ

    BWSSB News | ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆಗೆ ಬಿಗಿಯಾದ ಕ್ರಮ: KSPCB, ಜಲಮಂಡಳಿಗೆ ಸಚಿವ ರಾಮಲಿಂಗಾರೆಡ್ಡಿ ಗಡುವು

    KSRTC WhatsApp ಟಿಕೆಟ್ ಬುಕ್ಕಿಂಗ್ ಆರಂಭ: ಮೊಬೈಲ್‌ನಲ್ಲೇ 4 ಸಾರಿಗೆ ನಿಗಮಗಳ ಸೇವೆ ಲಭ್ಯ

    BW SPECIAL | ಬೆಂಗಳೂರಿಗೆ ಆಡಳಿತ ಗ್ರಹಣ: ಮೇಯರ್, ಕಾರ್ಪೊರೇಟರ್‌ಗಳಿಲ್ಲದೆ 6 ವರ್ಷ ಪೂರ್ಣ

    ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: 25ಕ್ಕೂ ಹೆಚ್ಚು ಕಡೆ ದಾಳಿ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

BEML TBM | ಭಾರತದಲ್ಲೇ ಸುರಂಗ ಕೊರೆಯುವ ಯಂತ್ರಗಳ ತಯಾರಿಕೆಗೆ ಮುಂದಡಿ ಇಟ್ಟ ಬಿಇಎಂಎಲ್

'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಟಿಬಿಎಂ ಉತ್ಪಾದನೆ, ವಿದೇಶಿ ಆಮದಿಗೆ ಕಡಿವಾಣ

by Bengaluru Wire Desk
August 29, 2025
in News Wire
Reading Time: 1 min read
0

ಬೆಂಗಳೂರು, ಆ.29 www.bengaluruwire.com : ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತಸೌಕರ್ಯ ಯೋಜನೆಗಳಿಗೆ ಅನುವಾಗುವಂತೆ, ಬೆಂಗಳೂರು ಮೂಲದ ರಕ್ಷಣಾ ಸಾರ್ವಜನಿಕ ಉದ್ದಿಮೆ ಬಿಇಎಂಎಲ್ (BEML), ಭಾರತದಲ್ಲಿ ಸುರಂಗ ಕೊರೆಯುವ ಯಂತ್ರಗಳ (Tunnel Boring Machines – TBMs) ಉತ್ಪಾದನೆಯನ್ನು ಮಾಡಲು ಸಿದ್ಧತೆ ನಡೆಸುತ್ತಿದೆ ಮತ್ತು ವಿನ್ಯಾಸ ಸಲಹೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ.

ಈ ಕ್ರಮವು ಭಾರತದ ಸ್ವಾವಲಂಬಿ ಕನಸನ್ನು ನನಸು ಮಾಡುವ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಯೋಜನೆಗಳಿಗೆ ಪುಷ್ಟಿ ನೀಡಲಿದೆ. ಭಾರತದಲ್ಲಿ ಮೆಟ್ರೋ ರೈಲು, ಸುರಂಗ ರಸ್ತೆಗಳು, ಜಲವಿದ್ಯುತ್, ನೀರಾವರಿ, ಗಣಿಗಾರಿಕೆ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಟಿಬಿಎಂಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಭೂಗರ್ಭದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಲು ಬಳಸಲಾಗುವ ಈ ಟಿಬಿಎಂ ಯಂತ್ರಗಳಿಗಾಗಿ ಭಾರತ ಇದುವರೆಗೂ ವಿದೇಶಿ, ಅದರಲ್ಲೂ ನಿರ್ದಿಷ್ಟವಾಗಿ ಚೀನಾ ದೇಶಗಳ ಮೇಲೆ ಅವಲಂಬಿತವಾಗಿತ್ತು. ಬಿಇಎಂಎಲ್ ಈಗಾಗಲೇ ಆಸ್ಟ್ರಿಯಾ ಮತ್ತು ಜಪಾನ್‌ನಂತಹ ದೇಶಗಳ ಸಂಸ್ಥೆಗಳೊಂದಿಗೆ ಟಿಬಿಎಂ ವಿಷಯವಾಗಿ ಚರ್ಚೆಗಳನ್ನು ಪ್ರಾರಂಭಿಸಿದೆ. “ಈ ಟೆಂಡರ್ ವಿನ್ಯಾಸ ಸಲಹೆಗಾಗಿ, ಮತ್ತು ಜಾಗತಿಕ ಸಂಸ್ಥೆಗಳಿಂದ ನಮಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ. ಉತ್ಪಾದನೆಗೆ ಇನ್ನೂ ಸ್ವಲ್ಪ ಸಮಯವಾಗುತ್ತದೆ ” ಎಂದು ಮೂಲಗಳು ತಿಳಿಸಿದೆ.

ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಬಿಇಎಂಎಲ್, ಟಿಬಿಎಂಗಳ ಸ್ಥಳೀಯ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಜಾಗತಿಕವಾಗಿ ಪ್ರಸಿದ್ಧ ವಿನ್ಯಾಸ ಸಲಹಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಕೋರಿ ಆಸಕ್ತಿ ಅಭಿವ್ಯಕ್ತಿ (ಇಒಐ- EOI)ಯನ್ನು ಪ್ರಾರಂಭಿಸಿದೆ.  ಕಂಪನಿಯು 6 ಮೀಟರ್‌ಗಳಿಂದ 16.5 ಮೀಟರ್ ವ್ಯಾಸದವರೆಗಿನ ಟಿಬಿಎಂಗಳನ್ನು ವಿನ್ಯಾಸಗೊಳಿಸುವಲ್ಲಿ ಸಾಬೀತಾದ ದಾಖಲೆಯನ್ನು ಹೊಂದಿರುವ ಆಸಕ್ತ ಸಂಸ್ಥೆಗಳನ್ನು ಹುಡುಕುತ್ತಿದೆ. 

ಪ್ರಸ್ತುತ, ಭಾರತವು ಮುಖ್ಯವಾಗಿ ಹೆರೆಂಕ್ನೆಕ್ಟ್ (ಜರ್ಮನಿ), ಟೆರಾಟೆಕ್ (ಆಸ್ಟ್ರೇಲಿಯಾ), ಸಿಆರ್ ಸಿಎಚ್ಐ (CRCHI) ಮತ್ತು ಎಸ್ ಟಿಇಸಿ (STEC- ಚೀನಾ) ಮತ್ತು ಕೊಮಾಟ್ಸು (ಜಪಾನ್) ಗಳಿಂದ ಆಮದು ಮಾಡಿಕೊಳ್ಳುವ ಟಿಬಿಎಂ ಗಳನ್ನು ಹೆಚ್ಚು ಅವಲಂಬಿಸಿದೆ. ಇವುಗಳಲ್ಲಿ ಹಲವು ಚೀನಾದಲ್ಲಿ ಜೋಡಿಸಲ್ಪಟ್ಟಿವೆ. ಇತ್ತೀಚಿನ ಭಾರತ-ಚೀನಾ ಗಡಿ ಬಿಕ್ಕಟ್ಟು ಟಿಬಿಎಂ ಆಮದನ್ನು ಅಡ್ಡಿಪಡಿಸಿತು. ಇದು ಮುಂಬೈನ ಭೂಗತ ಮೆಟ್ರೋ ಯೋಜನೆಯಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA)ವು ಸ್ಥಳೀಯವಾಗಿ ಟಿಬಿಎಂ ಯಂತ್ರದ ಉತ್ಪಾದನೆಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೂನ್ 2025 ರಲ್ಲಿ ನವದೆಹಲಿಯಲ್ಲಿ ಬಿಇಎಂಎಲ್‌ನ ಹಿರಿಯ ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಲಾಗಿತ್ತು ಎಂದು ಎಂಒಎಚ್ ಯುಎ ಮೂಲಗಳು ತಿಳಿಸಿವೆ, ಅಲ್ಲಿ ಪಿಎಸ್‌ಯು 6 ಮೀಟರ್ ನಿಂದ 15 ಮೀಟರ್ ವ್ಯಾಸದ ಟಿಬಿಎಂಗಳನ್ನು ತಯಾರಿಸುವ ಪ್ರಸ್ತಾವನೆಯನ್ನು ಮಂಡಿಸಿತ್ತು ಎಂದು ತಿಳಿದುಬಂದಿದೆ.

ಬಿಇಎಂಎಲ್‌ನ ಈ ಮಹತ್ವದ ನಿರ್ಧಾರವು, ಸುರಂಗ ಮಾರ್ಗಗಳ ನಿರ್ಮಾಣದಲ್ಲಿ ಟಿಬಿಎಂ ಮೇಲಿನ ಭಾರತದ ಆಮದು ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡಲಿದೆ. ಬಿಇಎಂಎಲ್ ಈಗಾಗಲೇ ವಂದೇ ಭಾರತ್ ಸ್ಲೀಪರ್ ರೈಲುಗಳು ಮತ್ತು ಇತರ ಬಗೆಯ ರೋಲಿಂಗ್ ಸ್ಟಾಕ್‌ಗಳನ್ನು ತಯಾರಿಸುತ್ತಿದೆ. ಇದೇ ಘಟಕದಲ್ಲಿ ಈಗ ಟಿಬಿಎಂ ಉತ್ಪಾದನಾ ವಿಭಾಗವನ್ನು ಸ್ಥಾಪಿಸಲಾಗುತ್ತಿದೆ.

ದೇಶದ ನಗರೀಕರಣ ಹೆಚ್ಚಿದಂತೆ ಮೆಟ್ರೋ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಸುರಂಗ ಯಂತ್ರಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಸ್ಥಳೀಯವಾಗಿ ಪೂರೈಸುವ ಮೂಲಕ ಬಿಇಎಂಎಲ್ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 

ಈಗ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವಾಗಿರುವ ಭಾರತದ ಮೆಟ್ರೋ ಜಾಲವು 23 ನಗರಗಳಲ್ಲಿ 1,013 ಕಿ.ಮೀ.ಗೂ ಹೆಚ್ಚು ವ್ಯಾಪಿಸಿದೆ. 2025-26ರಲ್ಲಿ ಮೆಟ್ರೋ ಯೋಜನೆಗಳಿಗೆ ಕೇಂದ್ರದ ಬಜೆಟ್ 34,807 ಕೋಟಿ ರೂ.ಗಳಿಗೆ ಏರಿದೆ, ಇದು 2013-14ಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚಾಗಿದೆ.

ಅಲ್ಲದೆ, ರಕ್ಷಣಾ ಉತ್ಪನ್ನಗಳು ಮತ್ತು ರೈಲುಗಳಿಗೆ ಕೋಚ್‌ಗಳನ್ನು ತಯಾರಿಸುವಲ್ಲಿ ಬಿಇಎಂಎಲ್ ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಸುಮಾರು 1,750 ಕ್ಕೂ ಹೆಚ್ಚು ಮೆಟ್ರೋ ಕೋಚ್‌ಗಳನ್ನು ಪೂರೈಸಿದೆ. ಈ ಹೊಸ ಉತ್ಪಾದನಾ ಘಟಕದಿಂದ ಮತ್ತಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 2.19 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ

Next Post

ಪಿತ್ರಪಕ್ಷಕ್ಕೆ ಗಯಾದಲ್ಲಿ ಇ-ಪಿಂಡದಾನ ಯೋಜನೆ; ಬಿಹಾರ ಟೂರಿಸಂ ವ್ಯವಸ್ಥೆ

Next Post

ಪಿತ್ರಪಕ್ಷಕ್ಕೆ ಗಯಾದಲ್ಲಿ ಇ-ಪಿಂಡದಾನ ಯೋಜನೆ; ಬಿಹಾರ ಟೂರಿಸಂ ವ್ಯವಸ್ಥೆ

ಜಿಎಸ್‌ಟಿ ಸರಳೀಕರಣ: ರಾಜ್ಯಗಳ ಆದಾಯಕ್ಕೆ 2.5 ಲಕ್ಷ ಕೋಟಿ ನಷ್ಟ ಸಾಧ್ಯತೆ - ಸಚಿವ ಕೃಷ್ಣ ಬೈರೇಗೌಡ ಕಳವಳ

Please login to join discussion

Like Us on Facebook

Follow Us on Twitter

Recent News

CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
CREATOR: gd-jpeg v1.0 (using IJG JPEG v80), quality = 82?

ಬೆಂಗಳೂರಿನ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮಾಚರಣೆ : 42 ಕೆರೆಯ ಕಲ್ಯಾಣಿಗಳು, 659 ಮೊಬೈಲ್ ಟ್ಯಾಂಕ್‌ಗಳ ಮೂರ್ತಿಗಳ ವಿಸರ್ಜನೆಗೆ ಅವಕಾಶ

September 14, 2026

Bescom News | ​ಸಾರ್ವಜನಿಕ ಗಣೇಶೋತ್ಸವ: ಬೆಸ್ಕಾಂ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟ

September 13, 2026

Technology News | ಈಗ, ಕೂತಲ್ಲೇ ವಿಶ್ವ ಸುತ್ತಿ: Live ಕ್ಯಾಮ್ ಮ್ಯಾಪ್ ಮೂಲಕ ಜಗತ್ತನ್ನು ಕಣ್ತುಂಬಿಕೊಳ್ಳಿ!!

September 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d