Monday, November 2, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಶ್ರೀಗಂಧ ರಕ್ಷಣೆಯ ಬೂಟಾಟಿಕೆ: ಕಳ್ಳಸಾಗಾಣಿಕೆ ಸಿಂಡಿಕೇಟ್‌ಗಳ ಅಟ್ಟಹಾಸಕ್ಕೆ ನಡುಗುತ್ತಿದೆಯೇ ಗಂಧದ ನಾಡು?

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

    ಜನಗಣತಿ 2027: ಕರ್ನಾಟಕದಲ್ಲಿ 2ನೇ ಹಂತದ ಜನಸಂಖ್ಯಾ ಗಣತಿಗೆ ಭರ್ಜರಿ ಸಿದ್ಧತೆ; ವಿಕಾಸ ಸೌಧದಲ್ಲಿ ಉನ್ನತ ಮಟ್ಟದ ಸಭೆ

    ನಂದಿನಿ ಹಾಲು ₹8 ಏರಿಕೆ: ಸಾಮಾನ್ಯರ ಜೇಬಿಗೆ ಕತ್ತರಿ, ಹೋಟೆಲ್ ತಿಂಡಿ ದರವೂ ದುಬಾರಿ

    ಕರ್ನಾಟಕದಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರು ಘಟಕಗಳ ಮೇಲೆ ದಿಢೀರ್ ದಾಳಿ

    ಕಬ್ಬಿಗೆ ₹4,500 ಎಫ್ಆರ್ ಪಿ ನಿಗದಿಗೆ ಪಟ್ಟು: ರಮೇಶ್ ಚಂದ್ರ ಸಮಿತಿಗೆ ರಾಜ್ಯದ ರೈತರ ಮನವಿ

  • Bengaluru Focus

    ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

    ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

    ರಾಜ್ಯದಲ್ಲಿ ನವೆಂಬರ್ 7ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ನಂದಿನಿ ಮೊಸರು ಪ್ರತಿ ಲೀಟರ್‌ಗೆ ₹14 ಏರಿಕೆ: ನವೆಂಬರ್ 1ರಿಂದ ಜಾರಿ

    ವಂದೇ ಭಾರತ್ ಸ್ಲೀಪರ್ ನ.2ರಿಂದ ವಾಣಿಜ್ಯ ಸಂಚಾರ ಆರಂಭ: ವೇಗಕ್ಕಷ್ಟೇ ಜೈ, ಜೇಬಿಗೆ ಕತ್ತರಿ

    ಕೊಮ್ಮಘಟ್ಟ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಸ್ಥಳೀಯರು

    ನಂದಿನಿ ಹಾಲು ₹8 ಏರಿಕೆ: ಸಾಮಾನ್ಯರ ಜೇಬಿಗೆ ಕತ್ತರಿ, ಹೋಟೆಲ್ ತಿಂಡಿ ದರವೂ ದುಬಾರಿ

    ಕಬ್ಬಿಗೆ ₹4,500 ಎಫ್ಆರ್ ಪಿ ನಿಗದಿಗೆ ಪಟ್ಟು: ರಮೇಶ್ ಚಂದ್ರ ಸಮಿತಿಗೆ ರಾಜ್ಯದ ರೈತರ ಮನವಿ

    GBA News | ಸಿಲಿಕಾನ್ ಸಿಟಿಗೆ ಕಾಯಕಲ್ಪ: 33 ಪ್ಯಾಕೇಜ್ ನೂತನ ಕಸದ ಟೆಂಡರ್, ನವೆಂಬರ್ 1ರಿಂದ ‘ವಾರ್ಡ್ ಒನ್’ ಅಭಿಯಾನ

  • Public interest
  • BW Special
  • Life Style
  • Photo Gallery
  • Video
No Result
View All Result

Kundapra Kannada Habba | ಕುಂದಾಪ್ರ ಕನ್ನಡ ಹಬ್ಬಕ್ಕೆ ಸಿದ್ಧವಾಗಿದೆ ಬೆಂಗಳೂರು: ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ, ಗಣ್ಯರಿಗೆ ಸನ್ಮಾನ

ಜುಲೈ 26-27ರಂದು ವೈಭವೋಪೇತ ಆಚರಣೆ, ಪ್ರವೇಶ ಉಚಿತ

by Bengaluru Wire Desk
July 25, 2025
in Bengaluru Focus
Reading Time: 1 min read
0

ಬೆಂಗಳೂರು, ಜು.25 www.bengaluruwire.com : ರಾಜಧಾನಿ ಬೆಂಗಳೂರು ಮತ್ತೊಮ್ಮೆ ಕುಂದಾಪ್ರ ಕನ್ನಡದ ಸೊಬಗನ್ನು ಸವಿಯಲು ಸಜ್ಜಾಗಿದೆ. ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಆಯೋಜಿಸಿರುವ ಆರನೇ ‘ಕುಂದಾಪ್ರ ಕನ್ನಡ ಹಬ್ಬ-2025’ ಜುಲೈ 26 ಮತ್ತು 27ರಂದು ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ.

ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಶನಿವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ದೀರ್ಘಕಾಲದ ಬೇಡಿಕೆಯಾಗಿದ್ದ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಸಿಎಂ, ಸಭಾಪತಿ ಯು.ಟಿ. ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಈ ಪೀಠ ಸ್ಥಾಪನೆಯಾಗಿ ಅನುದಾನವೂ ಬಿಡುಗಡೆಯಾಗಿದೆ.

ವಿಶೇಷ ಸನ್ಮಾನ, ಉಚಿತ ಪ್ರವೇಶ :

ಈ ಬಾರಿ ಮಣಿಪಾಲ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಎಚ್. ಸುದರ್ಶನ ಬಲ್ಲಾಳ್ ಅವರಿಗೆ ಶನಿವಾರ ಸಿಎಂ ಸಮ್ಮುಖದಲ್ಲಿ ‘ಊರ ಗೌರವ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಭಾನುವಾರ, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಇದೇ ಪುರಸ್ಕಾರವನ್ನು ನೀಡಲಾಗುವುದು.

ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ದಿನಗಳ ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು, ಸಮಸ್ತ ಕನ್ನಡಿಗರಿಗೂ ಮುಕ್ತ ಆಹ್ವಾನವಿದೆ.

ಕಲೆ, ತಿಂಡಿ-ತಿನಿಸು, ಸಂಸ್ಕೃತಿಯ ಅನಾವರಣ :

400ಕ್ಕೂ ಹೆಚ್ಚು ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಟ್ಟಣಿಗೆ ಆಟ ಎಂಬ ವಿಶೇಷ ಯಕ್ಷಗಾನ ಪ್ರದರ್ಶನ, ಕುಂದಾಪುರದ ಅಪರೂಪದ ಖಾದ್ಯಗಳ ಆಹಾರ ಮೇಳ ಮತ್ತು ವಿಶೇಷ ವಸ್ತುಗಳ ‘ಕುಂದಾಪುರ ಸಂತೆ’ ಪ್ರಮುಖ ಆಕರ್ಷಣೆಗಳಾಗಿವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ತಿಳಿಸಿದರು.

ಆಟಿ ಅಮಾವಾಸ್ಯೆ, ಅಂದರೆ ಜುಲೈ 24ರ ‘ವಿಶ್ವ ಕುಂದಾಪ್ರ ಕನ್ನಡ ದಿನ’ವನ್ನು ಹಬ್ಬದ ರೂಪದಲ್ಲಿ ಜುಲೈ 26-27ರಂದು ಆಚರಿಸಲಾಗುತ್ತಿದೆ. ಇದು ಕರಾವಳಿ ಸಂಸ್ಕೃತಿಯನ್ನು ಬೆಂಗಳೂರಿಗೆ ಪರಿಚಯಿಸುವ ಸುಂದರ ವೇದಿಕೆಯಾಗಿದೆ.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

BW EXCLUSIVE | ಬಿಡಿಎ ಮಾಸ್ಟರ್‌ಪ್ಲಾನ್: PRR-2 ಭೂಸ್ವಾಧೀನಕ್ಕೆ 40: 60 ಸೂತ್ರ, ರೈತರಿಗೆ ಬಂಪರ್ ಆಫರ್?

Next Post

ಬೆಂಗಳೂರು: ಶ್ರಾವಣ ಮಾಸದ ಹೊಸ್ತಿಲಲ್ಲಿ ಕತ್ತಲಲ್ಲಿ ಮುಳುಗಿದ ಚಿಕ್ಕಪೇಟೆ : ಬಿಬಿಎಂಪಿ- ಬೆಸ್ಕಾಂ ನಿರ್ಲಕ್ಷ್ಯಕ್ಕೆ ವ್ಯಾಪಾರಿಗಳ ಹಿಡಿಶಾಪ

Next Post

ಬೆಂಗಳೂರು: ಶ್ರಾವಣ ಮಾಸದ ಹೊಸ್ತಿಲಲ್ಲಿ ಕತ್ತಲಲ್ಲಿ ಮುಳುಗಿದ ಚಿಕ್ಕಪೇಟೆ : ಬಿಬಿಎಂಪಿ- ಬೆಸ್ಕಾಂ ನಿರ್ಲಕ್ಷ್ಯಕ್ಕೆ ವ್ಯಾಪಾರಿಗಳ ಹಿಡಿಶಾಪ

"ಅಮ್ಮನ‌ ಮಡಿಲು-ಮನುಷ್ಯ ಸಂಬಂಧ ಅಳಿಯಬಾರದು" : ಕೆ.ವಿ.ಪ್ರಭಾಕರ್

Please login to join discussion

Like Us on Facebook

Follow Us on Twitter

Recent News

ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

November 2, 2026

GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

November 2, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಟಿಡಿಆರ್ ಡಿಜಿಟಲೀಕರಣ: ಬೆಂಗಳೂರಿನ ಟ್ರಾಫಿಕ್ ಕಂಟಕಕ್ಕೆ ಮದ್ದು ನೀಡಲಿದೆಯೇ ಆನ್‌ಲೈನ್ ಮಂತ್ರ?

November 2, 2026

GST News | ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ₹2.31 ಲಕ್ಷ ಕೋಟಿ ತೆರಿಗೆ ಸಂಗ್ರಹ

November 2, 2026

ರಾಜ್ಯೋತ್ಸವಕ್ಕೆ ‘HMT ಕನ್ನಡಿಗ’ ವಾಚ್ ಬಿಡುಗಡೆ: ಕನ್ನಡಿಗರಿಗೆ ಹೆಚ್‌ಡಿಕೆ ವಿಶೇಷ ಉಡುಗೊರೆ

November 1, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d